ತುಮಕೂರು: ಅಷ್ಟೆಶ್ವರ್ಯ ಸಿದ್ಧಿಸುವ ವರಮಹಾಲಕ್ಷಿ ಹಬ್ಬ ಆಚರಣೆಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭರದ ಸಿದ್ದತೆಗಳು ನಡೆದಿದ್ದು, ಈ ಬಾರಿ ವರಮಹಾಲಕ್ಷಿ ಹಬ್ಬ ಬಲು ದುಬಾರಿಯಾಗಿದೆ.
ಮಳೆ ಕೊರತೆ ಹಿನ್ನೆಲೆಯಲ್ಲಿ ಈ ವರ್ಷ ಹೂವು, ಹಣ್ಣುಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಬೆಲೆ ಏರಿಕೆ ನಡುವೆಯೂ ಹಬ್ಬಕ್ಕೆ ಅಗತ್ಯ ಇರುವ ಹೂವು, ಹಣ್ಣು, ಬಾಳೆಕಂದು ಸೇರಿದಂತೆ ಮಾರುಕಟ್ಟೆಗಳಲ್ಲಿ ಇತರೆ ಸಾಮಗ್ರಿಗಳ ಖರೀದಿಗೆ ಜನಸಾಮಾನ್ಯರು ಮುಗಿ ಬಿದ್ದಿದ್ದಾರೆ.
ನಗರದ ಹೊರವಲಯದ ಅಂತರಸನಹಳ್ಳಿಯಲ್ಲಿರುವ ಹೂವು, ಹಣ್ಣು, ತರಕಾರಿ ಮಾರುಕಟ್ಟೆಯಲ್ಲಿ ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು, ವೃದ್ಧರೆನ್ನದೆ ಜನಜಂಗುಳಿಯೇ ನೆರೆದಿದ್ದು, ಹೂವು, ಹಣ್ಣು, ಬಳೆ, ಬಾಳೆಕಂದು, ಮಾವಿನ ಎಲೆ, ತಾವರೆ ಹೂವು, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು ಸೇರಿದಂತೆ ಇತರೆ ಸಾಮಗ್ರಿಗಳ ಖರೀದಿ ಭರಾಟೆ ಬಲು ಜೋರಾಗಿದೆ.
ಹಬ್ಬದ ನೆಪದಲ್ಲಿ ಎಲ್ಲ ವಸ್ತುಗಳು ಬೆಲೆ ಗಗನಕ್ಕೇರಿದ್ದು, ಸೇವಂತಿಗೆ ಹೂವು ಮಾರಿನ ಬೆಲೆ ೨೦೦ ರಿಂದ ೨೫೦ ರೂ., ಕನಕಾಂಬರ ೩೦೦ ರೂ., ಮಲ್ಲಿಗೆ ಹೂವಿನ ದಿಂಡು ೫೦೦ ರೂ., ಮಲ್ಲೆ ಹೂವು ೩೦೦ ರೂ., ಚಂಡುಹೂವು ೧೫೦ ರೂ., ತಾವರೆ ಹೂ ೧ಕ್ಕೆ ೫೦ ರಿಂದ ೮೦ ರೂ., ಬಿಡಿ ಹೂ ಕೆ.ಜಿ.ಗೆ ೪೦೦ ರೂ., ದುಂಡು ಮಲ್ಲಿಗೆ ಒಂದು ಹಾರ ೪೦೦ ರಿಂದ ೮೦೦ ರೂ.ವರೆಗೆ, ಸೇಬು ಕೆ.ಜಿ ಗೆ ೨೦೦ ರಿಂದ ೨೫೦ ರೂ., ದ್ರಾಕ್ಷಿ ೨೦೦ ರೂ., ಬಾಳೆ ಹಣ್ಣು ೧೨೦ ರೂ., ಮೂಸಂಬಿ ೧೫೦ ರೂ., ಕಿತ್ತಳೆ ೧೬೦ ರೂ., ದಾಳಿಂಬೆ ೨೦೦ ರಿಂದ ೨೫೦ ರೂ., ಸೀಬೆಹಣ್ಣು ೧೨೦ ರೂ., ಬಾಳೆಕಂದು ಜೋಡಿಗೆ ೬೦ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಜನಸಾಮಾನ್ಯರು ಸಹ ಬೆಲೆ ಎಷ್ಟೇ ದುಪ್ಪಟಾದರೂ ಲೆಕ್ಕಿಸದೆ ಅಷ್ಟೆöÊಶ್ವರ್ಯ ಸಿದ್ದಿಸುವ ವರಮಹಾಲಕ್ಷಿ÷್ಮ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಲು ಸಿದ್ದತೆಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.
ಮಾರುಕಟ್ಟೆಯಲ್ಲಿ ದುಂಡು ಮಲ್ಲಿಗೆ, ಕನಕಾಂಬರ, ರುದ್ರಾಕ್ಷಿ ಹೂವು, ಚಂಡು ಹೂವು, ಸೇವಂತಿಗೆ (ಹಳದಿ), ಸೇವಂತಿಗೆ ( ಕೆಂಪು) ಬಿಡಿ ಹೂವು ಸೇವಂತಿ ಹಾಗೂ ಗುಲಾಬಿ, ತುಳಸಿ ಹಾರಗಳಿಗೆ ಜನರಿಂದ ಭಾರೀ ಬೇಡಿಕೆ ಇದೆ.
ಅಲ್ಲದೆ ಲಕ್ಷಿ÷್ಮ ವಿಗ್ರಹ, ಮೂರ್ತಿ, ಮುಖವಾಡ, ಹಾರ, ತುರಾಯಿ, ಬಳೆ, ಅರಿಶಿಣ, ಮಾಂಗಲ್ಯಸರ, ಉತ್ತತ್ತಿ, ಕೊಬ್ಬರಿ ಸೇರಿ ಮುತ್ತೆöÊದೆಯರಿಗೆ ಉಡಿ ತುಂಬುವ ವಸ್ತುಗಳನ್ನು ಮಹಿಳೆಯರು ಮುಗಿ ಬಿದ್ದು ಖರೀದಿಸಿದರು.
ವರಮಹಾಲಕ್ಷಿ÷್ಮ ಹಬ್ಬದಂದು ಮನೆಗಳಲ್ಲಿ ಲಕ್ಷಿ÷್ಮ ಮೂರ್ತಿಗಳನ್ನು ಕೂರಿಸಿ, ಪೂಜಿಸುವುದು ವಾಡಿಕೆ. ಈ ವೇಳೆ ಅಲಂಕಾರಕ್ಕಾಗಿ ತರಹೇವಾರಿ ಹೂಗಳು ಮತ್ತು ಹಣ್ಣನ್ನು ಬಳಸುತ್ತಾರೆ. ಹಾಗಾಗಿ, ಪ್ರತಿ ವರ್ಷದಂತೆ ಈ ಬಾರಿಯೂ ಹೂವು ಮತ್ತು ಹಣ್ಣಿನ ದರಗಳಲ್ಲಿ ಭಾರೀ ಏರಿಕೆಯಾಗಿದೆ.
ಹಬ್ಬದಲ್ಲಿ ಲಕ್ಷಿ÷್ಮ ಪೂಜೆಯ ವೇಳೆ ಬಗೆಬಗೆಯ ಹಣ್ಣುಗಳನ್ನು ಜೋಡಿಸುವುದರಿಂದ ಹಣ್ಣುಗಳ ದರವೂ ಏರಿಕೆಯಾಗಿದೆ. ತರಕಾರಿಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ಮಹಾನಗರ ಪಾಲಿಕೆ ವತಿಯಿಂದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ನಗರದಾದ್ಯಂತ ಫುಟ್‌ಪಾತ್‌ಗಳಲ್ಲಿ ನಡೆಯುತ್ತಿದ್ದ ಹೂವು, ಹಣ್ಣುಗಳ ವ್ಯಾಪಾರ ಕಣ್ಮರೆಯಾಗಿರುವುದರಿಂದ ಅಂತರಸನಹಳ್ಳಿ ಮಾರುಕಟ್ಟೆ ಗ್ರಾಹಕರಿಂದ ತುಂಬಿ ತುಳುಕುತ್ತಿದೆ.
ಜನಸಾಮಾನ್ಯರು ಬೆಲೆ ಏರಿಕೆಯನ್ನು ಲೆಕ್ಕಿಸದೇ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲು ಭರದ ಸಿದ್ದತೆಯಲ್ಲಿ ತೊಡಗಿರುವುದು ನಗರ ಮತ್ತು ಗ್ರಾಮೀಣ ಪ್ರದೇಶದಾದ್ಯಂತ ಕಂಡು ಬರುತ್ತಿದೆ.

(Visited 1 times, 1 visits today)