ತುಮಕೂರು: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ೮೪ನೇ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ೧೧೧ನೇ ಜನ್ಮ ದಿನಾಚರಣೆಯನ್ನು ಸದ್ಭಾವನಾ ದಿನವನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರುಗಳು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ, ಸಿಹಿ, ಸದ್ಭಾವನಾ ದಿನದ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಇರ್ವರು ನಾಯಕರ ಹುಟ್ಟು ಹಬ್ಬವನ್ನು ಆಚರಿಸಿದರು.
ಓಬಿಸಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಹೆಚ್.ಸಿ.ಹನುಮಂತಯ್ಯ ಮಾತನಾಡಿ,ದೇವರಾಜ ಅರಸು ಅವರ ಕಾಲ ಬಡವರು, ದಲಿತರು, ಹಿಂದುಳಿದ ವರ್ಗಗಳ ಪಾಲಿಗೆ ಸುವರ್ಣಕಾಲ, ರಾಜೀವ್‌ಗಾಂಧಿ ಅವರ ಆಡಳಿತ ಯುವಜನರ ಕನಸುಗಳಿಗೆ ರೆಕ್ಕೆ ಕಟ್ಟಿದ ಕಾಲ. ಈರ್ವರ ಕಾಲದಲ್ಲಿ ದ್ವನಿಯಿಲ್ಲದ ಸಮುದಾಯಗಳಿಗೆ ಶಕ್ತಿ ತುಂಬಿದವರು. ಇಂದು ಕೆಪಿಸಿಸಿ ಆಗಿರುಬಹುದು, ಡಿಸಿಸಿ ಆಗಿಬಹುದು, ಹೊಸದಾಗಿ ಹುದ್ದೆಗೆ ನೇಮಕವಾಗುವ ಮುಖಂಡರು ಮುಕ್ತವಾಗಿ ಕೆಲಸ ಮಾಡಲು ಅನುವು ಮಾಡಿಕೊಡಬೇಕೆಂದರು.
ಡಿಸಿಸಿ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ,ಬಡವರು ಭೂಮಿಯ ಒಡೆಯರಾಗಬೇಕೆಂಬ ಕಾಂಗ್ರೆಸ್ ಕನಸಿಗೆ ಪೂರಕವಾಗಿ ತಮ್ಮ ಜಮೀನಿನನ್ನು ಗೇಣಿ ಮಾಡುತಿದ್ದ ಚಲುವಯ್ಯ ಎಂಬ ವ್ಯಕ್ತಿಗೆ ಬರೆದುಕೊಡುವ ಮೂಲಕ ನುಡಿದಂತೆ ನಡೆದವರು ದೇವರಾಜ ಅರಸು,ನಾನು ಹುಣಸೂರು ತಾಲೂಕಿನ ಬಿಇಓ ಆಗಿ ಕೆಲಸ ಮಾಡುವ ಸಂದರ್ಭದಲ್ಲಿ ದೇವರಾಜ ಅರಸು ಅವರ ಊರಾದ ಕಲ್ಲಹಳ್ಳಿಗೆ ಸಾಕಷ್ಟು ಬಾರಿ ಭೇಟಿ ನೀಡಿ, ಹಲವರಿಂದ ಮಾಹಿತಿ ಪಡೆದಿದ್ದೇನೆ.ಅನ್ಯಾಯದ ವಿರುದ್ದ ಪ್ರತಿಭಟಿಸುವ ಆತ್ಮಸ್ತೆöÊರ್ಯವನ್ನು ತಂದುಕೊಟ್ಟವರು ದೇವರಾಜ ಅರಸು.ಹಾಗೆಯೇ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶವನ್ನು ಅಭಿವೃದ್ದಿ ಪಥದತ್ತ ತೆಗೆದುಕೊಂಡು ಹೋಗಲು ಅಡಿಪಾಯ ಹಾಕಿದವರು ರಾಜೀವ್‌ಗಾಂಧಿ, ಕಾಂಗ್ರೆಸ್‌ನ ಕೊಡುಗೆ ಏನು ಎಂದು ಕೇಳುವ ಬಿಜೆಪಿಯ ಪ್ರಧಾನ ಮಂತ್ರಿ ಭಾಷಣ ಮಾಡಲು ಉಪಯೋಗಿಸುವ ಟೆಲಿ ಟ್ಯಾಂಪರ್ ಯಂತ್ರದ ಅನ್ವೇಷಣೆ ಸಹ ರಾಜೀವ್‌ಗಾಂಧಿ ಅವರಿಗೆ ಸಲ್ಲುತ್ತದೆ. ನೆಹರು, ಇಂದಿರಾಗಾAಧಿ,ರಾಜೀವ್‌ಗಾAಧಿ, ಮನಮೋಹನ್ ಸಿಂಗ್ ರಂತಹ ನಾಯಕರು ಮಾಡಿದ ಕಾರ್ಯಕ್ರಮಗಳ ಹೆಸರು ಬದಲಾಯಿಸಿದ್ದಷ್ಟೇ ಬಿಜೆಪಿಯ ಸಾಧನೆ ಎಂದರು.
ಮುಖAಡರಾದ ಸಂಜೀವಕುಮಾರ್ ಮಾತನಾಡಿ, ೪೦ನೇ ವಯಸ್ಸಿನಲ್ಲಿ ಪ್ರಧಾನಿಯಂತಹ ದೊಡ್ಡ ಹುದ್ದೆಯ ಜವಾಬ್ದಾರಿ ಹೊತ್ತು, ಅದಕ್ಕೆ ಘನತೆ ಬರುವಂತೆ ನಡೆದಕೊಂಡವರು ರಾಜೀವ್‌ಗಾಂಧಿ, ಟಿವಿ, ಇಂಟರನೆಟ್ ನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದವರು.ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಮೂಲಕ ಶ್ರೀಮಂತರ ಬಳಿ ಇದ್ದ ೨೫ ಲಕ್ಷ ಹೆಕ್ಟೇರ್ ಭೂಮಿಯನ್ನು ೭೫ ಲಕ್ಷ ಬಡವರಿಗೆ ಹಂಚಿದವರು ದೇವರಾಜ ಅರಸು, ತುಮಕೂರು ಜಿಲ್ಲೆಯ ಜನತೆ ಇಂದು ಹೇಮಾವತಿ ನೀರು ಕುಡಿಯುತ್ತಿದ್ದರೆ ಅದಕ್ಕೆ ಕಾರಣ ದೇವರಾಜ ಅರಸು, ಅಂತಹ ನಾಯಕರ ಆದರ್ಶಗಳನ್ನು ನಾವುಗಳು ಪಾಲಿಸಬೇಕಾಗಿದೆ ಎಂದರು.
ಮುಖAಡರಾದ ಷಣ್ಮಗಪ್ಪ ಹಾಗು ಸಿಮೆಂಟ್ ಮಂಜುನಾಥ್ ಮಾತನಾಡಿ,ಎಲ್.ಜಿ. ಹಾವನೂರು ವರದಿಯ ಮೂಲಕ ಹಿಂದುಳಿದ ವರ್ಗಗಳಿಗೆ ರಾಜಕೀಯ ಅಧಿಕಾರ ದೊರೆಯುವಂತೆ ಮಾಡಿದ ದೇವರಾಜ ಅರಸು ಮತ್ತು ವೈಜ್ಞಾನಿಕವಾಗಿ ದೇಶವನ್ನು ಪ್ರಪಂಚದಲ್ಲಿ ಮುನ್ನೆಡೆಯುವಂತೆ ಮಾಡಿದ ರಾಜೀವ್‌ಗಾಂಧಿ ಅವರು ಭಾರತೀಯರ ಪಾಲಿಗೆ ಪ್ರಾಥಃ ಸ್ಮರ ಣಿಯರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಮತ್ತು ದೇವರಾಜ ಅರಸು ಅವರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ,ಬಡವರು,ದೀನ ದಲಿತರು, ಆಶಕ್ತರ ಬಗ್ಗೆ ಆಲೋಚಿಸಿ, ಅವರ ಏಳಿಗೆಗೆ ದುಡಿದ ಮಹನೀಯರು. ಬಂಗಾರಪ್ಪ, ಖರ್ಗೆ, ಧರ್ಮಸಿಂಗ್, ನಿಜಲಿಂಗಪ್ಪ ರಂತಹ ಹಿರಿಯ ನಾಯಕರು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವರು ಅರಸು, ದಮನಿತ ಸಮುದಾಯಗಳ ಏಳಿಗೆಗೆ ದುಡಿದವರನ್ನು ಇಂದು ಸಮಾಜ ಮತ್ತು ಸರಕಾರಗಳು ಮರೆತಿವೆ.ಇದು ವಿಪರ್ಯಾಸ. ತಂತ್ರಜ್ಞಾನದಿAದ ದೇಶದ ಅಭಿವೃದ್ದಿ ಬಯಸಿದ್ದ ರಾಜೀವ್‌ಗಾಂಧಿ, ತಂತ್ರಜ್ಞಾನದ ಹೊಸ ಅವಿಷ್ಕಾರವಾದ ಮಾನವ ಬಾಂಬ್‌ಗೆ ಬಲಿಯಾಗಿದ್ದು ದುರಂತವೇ ಸರಿ.ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಈ ಇರ್ವರು ನಾಯಕರನ್ನು ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ನರಸೀಯಪ್ಪ, ತರುಣೇಶ್,ನಿಂಗರಾಜು,ಮುರುಳೀಧರ ಹಾಲಪ್ಪ, ಫರ್ಹಾನ ಬೇಗಂ, ರಂಗಸ್ವಾಮಯ್ಯ ಸಿದ್ದಾಪುರ, ಅತೀಕ್ ಅಹಮದ್, ಸಿದ್ದಲಿಂಗೇಗೌಡ, ರೇವಣ್ಣ ಸಿದ್ದಯ್ಯ, ಸಂಜೀವಕುಮಾರ್, ಸುರೇಶ್, ಇರ್ಫಾನ್, ಶಿವಾಜಿ,ಸುಜಾತ, ಮೆಹಬೂಬ್ ಪಾಷ, ಕೈದಾಳ ರಮೇಶ್, ಹೆಬ್ಬೂರು ಶ್ರೀನಿವಾಸಮೂರ್ತಿ, ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
(Visited 1 times, 1 visits today)



