ತುಮಕೂರು: ನಗರದಲ್ಲಿ ವರ್ಷಗಳಿಂದ ಬೀದಿ ಬದಿ ವ್ಯಾಪಾರ ನಡೆಸುತ್ತಿರುವ ಬಡ ವ್ಯಾಪಾರಿಗಳನ್ನು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸುತ್ತಿರುವ ಕ್ರಮವನ್ನು ತಕ್ಷಣ ನಿಲ್ಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಆಗ್ರಹಿಸಿದರು
ಅವರು ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಹೊಡೆತ ನೀಡುವ ತೆರವು ಕ್ರಮವನ್ನು ತಕ್ಷಣ ನಿಲ್ಲಿಸಬೇಕು ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ತುಮಕೂರು ಮಹಾನಗರ ಪಾಲಿಕೆ ಎದುರು ನಡೆಸಿದ ಹೋರಾಟವನ್ನು ಉದ್ದೇಶಿಸಿ ಮಾತನಾಡಿದರು.ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬೀದಿ ಬದಿ ವ್ಯಾಪಾರವೇ ಪ್ರಮುಖ ಜೀವನೋಪಾಯವಾಗಿದೆ. ತರಕಾರಿ, ಹಣ್ಣು, ಆಹಾರ ಪದಾರ್ಥ, ಬಟ್ಟೆ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಈ ಸಣ್ಣ ವ್ಯಾಪಾರಿಗಳು ನಗರದ ಆರ್ಥಿಕ ಚಟುವಟಿಕೆಯ ಅವಿಭಾಜ್ಯ ಅಂಗವಾಗಿದ್ದಾರೆ. ನಗರದ ಅಭಿವೃದ್ಧಿ ಅಗತ್ಯ; ಆದರೆ ಬಡವರ ಬದುಕನ್ನು ಬಲಿಕೊಟ್ಟು ಅಭಿವೃದ್ಧಿ ಸಾಧಿಸುವುದು ಸಾಮಾಜಿಕ ನ್ಯಾಯವಲ್ಲ ಎಂದರು.
ಆಯುಕ್ತರ ಪರವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮನವಿ ಸ್ವೀಕರಿಸಿ ಮತನಾಡಿದ .ನಿಮ್ಮ ಸಮ್ಯಸೆಗಳ ಸಂಬAದ ಸಭೆ ಯನ್ನು ಕರೆದು ಇಥ್ಯರ್ತ ಪಡಿಸಿಲಾಗುವುದು ಎಂದರು
ಸAಘದ ಮುಖಂಡರಾದ ಲಕ್ಷö್ಮಮ್ಮ ಮಾತನಾಡಿ ಫುಟ್‌ಪಾತ್‌ನಲ್ಲಿ ಸಂಚಾರಕ್ಕೆ ತೊಂದರೆ, ಸ್ವಚ್ಛತೆ ಅಥವಾ ನಗರ ಸೌಂದರ್ಯಕ್ಕೆ ಸಂಬAಧಿಸಿದ ಸಮಸ್ಯೆಗಳಿದ್ದರೆ ಅವುಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು. ತೆರವುಗೊಳಿಸುವುದೇ ಏಕೈಕ ಪರಿಹಾರವಲ್ಲ. ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಗುರುತಿಸಿ, ವ್ಯವಸ್ಥಿತ ವ್ಯಾಪಾರ ವಲಯಗಳನ್ನು ನಿರ್ಮಿಸಿ, ಮೂಲಭೂತ ಸೌಲಭ್ಯ ಕಲ್ಪಿಸುವುದು ಸರ್ಕಾರ ಮತ್ತು ಮಹಾನಗರ ಪಾಲಿಕೆಯ ಜವಾಬ್ದಾರಿಯಾಗಿದೆ.
ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವವರನ್ನು ದೂರದ ಪ್ರದೇಶಗಳಿಗೆ ಸ್ಥಳಾಂತರಿಸಿದರೆ ಗ್ರಾಹಕರು ಕಡಿಮೆಯಾಗುತ್ತಾರೆ, ವ್ಯಾಪಾರ ಕುಸಿಯುತ್ತದೆ ಮತ್ತು ಕುಟುಂಬಗಳ ಜೀವನೋಪಾಯವೇ ನಷ್ಟವಾಗುತ್ತದೆ. ಆದ್ದರಿಂದ ಅದೇ ಪ್ರದೇಶದಲ್ಲಿ ಅಥವಾ ಸಮೀಪದಲ್ಲೇ ಪರ್ಯಾಯ ವ್ಯಾಪಾರ ಸ್ಥಳ ಕಲ್ಪಿಸಬೇಕು ಎಂದು ಸಿಐಟಿಯು ಒತ್ತಾಯಿಸಿದೆ.
೨೦೧೪ರ ಕಾಯ್ದೆ ಜಾರಿಗೊಳಿಸಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಹಕ್ಕುಗಳ ರಕ್ಷಣೆಗೆ ೨೦೧೪ ಕಾನೂನು ಚೌಕಟ್ಟನ್ನು ಒದಗಿಸಿದೆ. ಇದರ ಆಶಯದಂತೆ ಸರ್ವೇ, ಗುರುತಿನ ಚೀಟಿ, ವ್ಯಾಪಾರ ವಲಯಗಳ ಗುರುತಿಸುವಿಕೆ ಮತ್ತು ನಿಯಮಿತ ವ್ಯಾಪಾರ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.
ಸರ್ಕಾರ ಮತ್ತು ತುಮಕೂರು ಮಹಾನಗರ ಪಾಲಿಕೆ ತಕ್ಷಣ ಮಧ್ಯಪ್ರವೇಶಿಸಿ ಸರ್ವೇ ಗುರುತಿನ ಚೀಟಿ, ವ್ಯಾಪಾರ ವಲಯ, ಪರ್ಯಾಯ ಸ್ಥಳ, ಮೂಲಭೂತ ಸೌಲಭ್ಯ ಒಳಗೊಂಡ ಸಮಗ್ರ ಯೋಜನೆಯನ್ನು ಜಾರಿಗೊಳಿಸಬೇಕು.
ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವು ಕ್ರಮ ಮುಂದುವರಿಸಿದರೆ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆಗೆ ಸಿಐಟಿಯು ನೇತೃತ್ವದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತುಮಕೂರು ಜಿಲ್ಲಾ ಫುಟ್‌ಪಾತ್ ವ್ಯಾಪಾರಿಗಳ ಸಂಘ ಸಿಐಟಿಯು ಎಚ್ಚರಿಸಿದೆ. ಪ್ರತಿಭಟನೆಯಲ್ಲಿ ಲಕ್ಷಿö್ಮಕಾಂತ್, ರಂಜಿತ ,ನಜೀಮಾ, ಆನಂದ, ರವಿ, ನಾಗಣ್ಣ, ಕೃಷ್ಣಮೂರ್ತಿ, ಚರ್ಮ ಕುಟಿರ ಮಹದೇವ, ಆನಂದ, ಕೃಷ್ಣ.ದೇವಮ್ಮ, ಸುದೀರ್,ಇಂತಿಯಾಜಪಾಷ್ ಮುಂತಾದವರು ಭಾಗವಹಿಸಿದ್ದರು.
(Visited 1 times, 1 visits today)



