ಹುಳಿಯಾರು: ಗಣಿ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ನಿರ್ಮಾಣವಾಗುತ್ತಿದ್ದ ೯ ಕೋಟಿ ರೂಪಾಯಿ ವೆಚ್ಚದ ಕೆಂಕೆರೆ- ಗೌಡಗೆರೆ- ಕಂಪನಹಳ್ಳಿ ಕಾಂಕ್ರೀಟ್ ರಸ್ತೆಯು ಕಾಮಗಾರಿ ಮುಗಿಯುವ ಮುನ್ನವೇ ಕಿತ್ತು ಹೋಗುತ್ತಿರುವ ಬಗ್ಗೆ ಹಾಗೂ ಜಲ್ಲಿಕಲ್ಲುಗಳು ಹೊರಬಂದು ಸಾರ್ವಜನಿಕರು ಅನುಭವಿಸುತ್ತಿದ್ದ ತೊಂದರೆಗಳ ಬಗ್ಗೆ ಪತ್ರಿಕೆ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಮಾಡಿದೆ.
ಈ ರಸ್ತೆಯು ಕಾಮಗಾರಿ ಮುಗಿಯುವ ಮುನ್ನವೇ ರಸ್ತೆ ಕಿತ್ತು ಹೋಗುತ್ತಿತ್ತು. ಕಾಂಕ್ರೀಟ್ ಹಾಕಿದ ಕೆಲವೇ ದಿನಗಳಲ್ಲಿ ರಸ್ತೆ ಮೇಲ್ಭಾಗ ಕಿತ್ತು ಹೋಗಿ, ಒಳಗಿನ ಜಲ್ಲಿಕಲ್ಲುಗಳು ಸಂಪೂರ್ಣವಾಗಿ ಹೊರಬಂದಿವೆ. ಕೆಲವೆಡೆ ಮೇಲ್ಬದರದ ಕಾಂಕ್ರಿಟ್ ಎದ್ದು ಜಲ್ಲಿಕಲ್ಲುಗಳು ಕಾಣಿಸುತಿತ್ತು. ಹೊಸದಾಗಿ ನಿರ್ಮಿಸಿದ ರಸ್ತೆ ಹೀಗೆ ಕಿತ್ತು ಹೋಗುತ್ತಿರುವುದು ಕಳಪೆ ಗುಣಮಟ್ಟದ ಕಾಂಕ್ರೀಟ್ ಬಳಕೆಯಾಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿತ್ತು. ಬಹುಮುಖ್ಯವಾಗಿ ರಸ್ತೆಯ ಏಳೆಂಟುಕಡೆ ಏರ್ ಕ್ರಾಕ್ ಬಂದಿದೆ.
ಕಾಂಕ್ರೀಟ್ ಮೇಲ್ಪದರ ಕಿತ್ತು ಹೋಗಿ ಜಲ್ಲಿಕಲ್ಲುಗಳು ಸಡಿಲವಾಗಿ ರಸ್ತೆಯಲ್ಲೇ ಹರಡಿಕೊಂಡಿರುವುದರಿAದ, ಬ್ರೇಕ್ ಹಾಕಿದ ತಕ್ಷಣ ಬೈಕ್ ಹಾಗೂ ಸ್ಕೂಟರ್‌ಗಳು ಸ್ಕಿಡ್ ಆಗಿ ಸವಾರರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದರು. ಪೈಪ್‌ಲೈನ್‌ಗಾಗಿ ರಸ್ತೆ ಬಗೆದು ಹಾಗೆಯೇ ಬಿಟ್ಟಿರುವ ಹಾಗೂ ಏರ್ ಕ್ರಾಕ್ ಬಂದಿರುವ ಕಡೆಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಅಥವಾ ಸೂಚನಾ ಫಲಕಗಳಿರಲಿಲ್ಲ. ರಾತ್ರಿ ವೇಳೆಯಲ್ಲಿ ಈ ತಗ್ಗುಗಳು ಕಣ್ಣಿಗೆ ಕಾಣದೆ ವಾಹನಗಳು ಸೀದಾ ತಗ್ಗಿಗೆ ಬಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆ ಇತ್ತು. ಹರಿತವಾದ ಕಾಂಕ್ರೀಟ್ ಚೂರುಗಳು ಮತ್ತು ಎದ್ದಿರುವ ಕಲ್ಲುಗಳಿಂದಾಗಿ ದ್ವಿಚಕ್ರ ವಾಹನಗಳ ಟೈರ್‌ಗಳು ಕಟ್ ಆಗುವುದು, ಪಂಚರ್ ಆಗುವುದು ಮತ್ತು ವೀಲ್ ರಿಮ್‌ಗಳು ಬೆಂಡ್ ಆಗುವ ಸಮಸ್ಯೆ ಎದುರಾಗಿತ್ತು.
ಈ ಬಗ್ಗೆ ಪತ್ರಿಕೆ ಮಾಡಿದ್ದ ವರದಿಗೆ ತಕ್ಷಣವೇ ಸ್ಪಂದಿಸಿರುವ ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆಯ ಇಂಜಿನಿಯರ್ ಮೋಹನ್ ಅವರು, ಖುದ್ದಾಗಿ ಸ್ಥಳಕ್ಕೆ ೨ ರಿಂದ ೩ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ವರದಿಯಲ್ಲಿ ಉಲ್ಲೇಖಿಸಲಾಗಿದ್ದ ಪ್ರತಿಯೊಂದು ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಿದ ಅವರು, ರಸ್ತೆಯಲ್ಲಿ ಬಿದ್ದಿದ್ದ ತಗ್ಗು-ಗುಂಡಿಗಳನ್ನು ಮತ್ತು ಜಲ್ಲಿಕಲ್ಲುಗಳು ಹೊರಬಂದಿದ್ದ ಕಳಪೆ ಭಾಗಗಳನ್ನು ಖುದ್ದಾಗಿ ವೀಕ್ಷಿಸಿದರು. ಬಳಿಕ ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಸ್ಥಳಕ್ಕೆ ಕರೆಸಿ, ಕಿತ್ತು ಹೋಗಿದ್ದ ಪ್ರತಿಯೊಂದು ಭಾಗದಲ್ಲೂ ಪುನಃ ಗುಣಮಟ್ಟದ ಕಾಂಕ್ರೀಟ್ ಹಾಕಿಸಿದರು.
ಉಳಿದ ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಇಇ ಇಂಜಿನಿಯರ್, ಮುಂದೆ ಯಾವುದೇ ರೀತಿಯ ಕಳಪೆ ಕಾಮಗಾರಿಗೆ ಆಸ್ಪದ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಈ ತಕ್ಷಣದ ಕ್ರಮದಿಂದಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಸ್ಥಳೀಯ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
(Visited 1 times, 1 visits today)



