ತುಮಕೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಗೋ ಮೂತ್ರ ಮತ್ತು ಗಂಗಾಜಲದಿAದ ಸ್ವಚ್ಚಗೊಳಿಸಿದ ವ್ಯಕ್ತಿಗಳ ವಿರುದ್ದ ಕೇಸು ದಾಖಲಿಸುವಂತೆ ಒತ್ತಾಯಿಸಿದ ರಾಹುಲ್‌ಗಾಂಧಿ ಅವರ ವಿರುದ್ದವೇ ಎಫ್.ಐ.ಆರ್.ದಾಖಲಿಸಿರುವುದನ್ನು ಖಂಡಿಸಿ, ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕರಾದ ಡಾ.ರಫೀಕ್ ಅಹಮದ್ ರವರು,ನ್ಯಾಯ ಕೇಳಿದ ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರ ಮೇಲೆಯೇ ಎಫ್.ಐ.ಆರ್. ಹಾಕಿರುವುದು ಹಾಸ್ಯಾಸ್ಪದವಾಗಿದೆ.ದೇಶದಲ್ಲಿ ಅಸ್ಪöÈಷ್ಯತೆ ಜೀವಂತ ಇದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಸ್ವಾತಂತ್ರ ಬಂದು ಏಳು ದಶಕಗಳು ಕಳೆದಿದ್ದರೂ, ಇಂದಿಗೂ ಜನರ ಮನಸ್ಥಿತಿ ಬದಲಾಗದಿರುವುದು ನಿಜಕ್ಕೂ ವಿಷಾದನೀಯ. ಸರಕಾರ ಈ ಕೂಡಲೇ ಎಐಸಿಸಿ ಅಧ್ಯಕ್ಷರು ಭಾಷಣ ಮಾಡಿದ ಜಾಗವನ್ನು ಸ್ವಚ್ಚಗೊಳಿಸಿದ ವ್ಯಕ್ತಿಗಳ ವಿರುದ್ದ ಕೇಸು ದಾಖಲಿಸಬೇಕು. ಹಾಗೆಯೇ ನಮ್ಮ ನಾಯಕರಾದ ರಾಹುಲ್‌ಗಾಂಧಿ ಅವರ ಮೇಲೆ ದಾಖಲಿಸಿರುವ ಎಫ್.ಐ.ಆರ್ ರದ್ದು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು, ಹೊಬಳಿ ಮಟ್ಟದಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಬಿ.ಎA.ಟಿ.ಸಿ ಉಪಾಧ್ಯಕ್ಷ ನಿಖೇತರಾಜ್ ಮೌರ್ಯ ಮಾತನಾಡಿ, ಅಸ್ಪöÈಷ್ಯತೆ ಎಂಬುದು ಕಾನೂನು ಬಾಹಿರವಾಗಿದ್ದರೂ ಬಿಜೆಪಿ, ಆರ್.ಎಸ್.ಎಸ್ ಹಾಗೂ ಅದರ ಅಂಗ ಸಂಸ್ಥೆಗಳು ಇಂದಿಗೂ ಅದನ್ನು ಮುಂದುವರೆಸಿಕೊAಡು ಬಂದಿವೆ.ಬಾಬು ಜಗಜೀವನ್‌ರಾಂ ಅವರು ಉಪಪ್ರದಾನಿಯಾಗಿದ್ದಾಗ ಪುರಿ ಜಗನ್ನಾಥ ದೇವಾಲಯದಲ್ಲಿ ಇದೇ ರೀತಿ ಅವಮಾನಿಸಲಾಯಿತು. ರಾಮಮಂದಿರದ ಗುದ್ದಲಿ ಪೂಜೆಗೆ ದಲಿತರೆಂಬ ಕಾರಣಕ್ಕೆ ಅಂದಿನ ರಾಷ್ಟçಪತಿ ರಾಮ್ ಕೋವಿಂದ ಅವರನ್ನು ಕರೆಯಲಿಲ್ಲ.ರಾಮಮಂದಿರ ಮತ್ತು ಹೊಸ ಸಂಸತ್ ಭವನ ಉದ್ಘಾಟನೆಗೆ ದಲಿತರು, ವಿಧವೆ ಎಂಬ ಕಾರಣಕ್ಕೆ ಇಂದಿನ ರಾಷ್ಟçಪತಿ ದೌಪಧಿ ಮುರ್ಮು ಅವರನ್ನು ಕೆರೆಯದ ಅಸ್ಪöÈಷ್ಯತೆ ಆಚರಿಸಲಾಯಿತು. ಅದರ ಮುಂದುವರೆದ ಭಾಗವಾಗಿ ಇಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಜಾಗವನ್ನು ಸ್ವಚ್ಚಗೊಳಿಸಿದ್ದಾರೆ. ಈ ಹಿಂದೆ ನಾರಾಯಣಗುರುಗಳ ಓಡಾಡಿದ ಜಾಗವನ್ನು ಇದೇ ರೀತಿ ಗೋ ಮೂತ್ರದಿಂದ ಸ್ವಚ್ಚಗೊಳಿಸಿದ್ದರ ವಿರುದ್ದ ನಿರಂತರವಾಗಿ ವೈಕಂ ಹೋರಾಟ ನಡೆದಿತ್ತು. ಅದೇ ರೀತಿಯ ಹೋರಾಟವನ್ನು ಕಾಂಗ್ರೆಸ್ ರೂಪಿಸಲಿದೆ.ಮನುವಾದಿ ಆಚರಣೆ ಮಾಡಿದವರ ವಿರುದ್ದ ದೂರು ದಾಖಲಾಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಆರ್.ರಾಮಕೃಷ್ಣ ಮತ್ತು ಕೆಂಚಮಾರಯ್ಯ ಅವರುಗಳು ಪ್ರಕರಣವನ್ನು ಖಂಡಿಸಿದರಲ್ಲದೆ, ರಾಹುಲ್‌ಗಾಂಧಿ ಅವರ ಮೇಲೆ ಹಾಕಿರುವ ಎಫ್.ಐ.ಆರ್.ರದ್ದುಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಷಣ್ಮುಗಪ್ಪ, ಸಿಮೆಂಟ ಮಂಜುನಾಥ್, ಹೆಚ್.ಸಿ.ಹನುಮಂತಯ್ಯ, ಸಿದ್ದಲಿಂಗೇಗೌಡ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷರಾದ ಫಯಾಜ್, ಮಹೇಶ್, ಕೆಂಪಣ್ಣ,ಸAಜೀವಕುಮಾರ್,ಒಬಿಸಿ ಘಟಕದ ಅನಿಲ್,ಯುವ ಕಾಂಗ್ರೆಸ್‌ನ ಇಲಾಹಿ ಸಿಕಂದರ್, ಕಾರ್ಮಿಕ ಘಟಕದ ದಾದಾಪೀರ್, ಆದಿಲ್, ಅಲ್ಪಸಂಖ್ಯಾತರ ಘಟಕದ ಇರ್ಫಾನ್ ಅಹಮದ್, ನ್ಯಾತೇಗೌಡ,ಮುಬೀನಾ, ಸುಜಾತ, ಪಾವರ್ತಮ್ಮ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(Visited 1 times, 1 visits today)