ತುಮಕೂರು: ಬಹುತ್ವದ ನಾಡಿನಲ್ಲಿ ಶಾಂತಿಯುತ ಬದುಕಿಗೆ ನಮ್ಮ ಪಾತ್ರವೇನು ಎಂಬುದನ್ನು ಪ್ರತಿಯೊಬ್ಬ ಪ್ರಜೆಯೂ ಅರ್ಥ ಮಾಡಿಕೊಂಡು, ಪ್ರವಾದಿ ಮುಹಮ್ಮದ್(ಸ) ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ನಮ್ಮದಾಗಲಿದೆ ಎಂದು ಅನುಪಮ ಮಹಿಳಾ ಮಾಸಿಕದ ಸಹ ಸಂಪಾದಕಿ ಶ್ರೀಮತಿ ಕುಲ್ಸೂಮ್ ಅಬೂಬಕ್ಕರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಜಮಾಆತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಮಹಿಳೆಯರಿಗಾಗಿ ವಿಶೇಷ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಕ್ರಾಂತಿಯ ಜ್ಯೋತಿ-ಪ್ರವಾದಿ ಮುಹಮ್ಮದ್(ಸ)ಎಂಬ ವಿಷಯ ಕುರಿತು ಪ್ರವಚನ ನೀಡಿದ ಅವರು, ಸಮಾಜದ ನೆಮ್ಮದಿಯ ಬದುಕಿನಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ.ಹಕ್ಕುಗಳ ಬಗ್ಗೆ ಮಾತ್ರ ಜಾಗೃತರಾಗುವ ನಾವು, ಕರ್ತವ್ಯಗಳ ಕಡೆಗೂ ಗಮನಹರಿಸಬೇಕಿದೆ ಎಂದರು.
ಕರುಣೆ ಇಲ್ಲದ ಸಮಾಜದಲ್ಲಿ, ಹೆಣ್ಣನ್ನು ಜೀವಂತವಾಗಿ ಹೂಳುತಿದ್ದ ಸಮಯದಲ್ಲಿ ಪ್ರವಾದಿಗಳ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ಸರಿದಾರಿ ತೋರಿಸಿದರು.ಆದರೆ ಇಂದು ನಾವು ನಮ್ಮ ಮಕ್ಕಳನ್ನು ಅಂಕಗಳ ಹಿಂದೆ ಓಡಿಸುತ್ತಿದ್ದೇವೆ. ಮಾನವೀಯ ಮೌಲ್ಯಗಳ ಜೊತೆ, ನೈತಿಕ ಮೌಲ್ಯಗಳು ಕುಸಿದಿವೆ.ಸಮಾಜದ ನೆಮ್ಮದಿಯಲ್ಲಿ ನಮ್ಮ ಪಾತ್ರವೇನು ಎಂಬುದನು ಪ್ರತಿಯೊಬ್ಬ ಅರ್ಥ ಮಾಡಿಕೊಂಡರೆ, ದ್ವೇಷ, ಅಸೂಯೆಯ ವಾತಾವರಣದಿಂದ ಹೊರಬರಲು ಸಾಧ್ಯ.ನನ್ನ ಬದುಕು,ನನ್ನ ಇಷ್ಟ ಎನ್ನುವ ಸಂಸ್ಕöÈತಿ ತೊಲಗಬೇಕಿದೆ.ಪರಸ್ವರ ಗೌರವದಿಂದ ಬದುಕುವ ವಾತಾವರಣ ನಿರ್ಮಾಣವಾಗುವ ಅಗತ್ಯವಿದೆ.ಮನುಷ್ಯ ಕಪ್ಪೆಯಂತೆ ಜೀವಿಸುವುದರಿಂದ ಯಾರಿಗು ಪ್ರಯೋಜನವಿಲ್ಲ ಎಂದು ಶ್ರೀಮತಿ ಕುಲ್ಸೂಮ ಅಬೂಬಕ್ಕರ್ ತಿಳಿಸಿದರು.
ನಿವೃತ್ತ ಪ್ರಾಂಶುಪಾಲರಾದ ಇಂದಿರಾ ಮಾತನಾಡಿ,ಮಹಿಳೆಯರಿಗಾಗಿ ಸೀರತ್ ಅಭಿಯಾನ ಒಂದು ವಿಶೇಷ ಕಾರ್ಯಕ್ರಮ.ಧರ್ಮವೆಂದರೆ ಒಳ್ಳೆಯದು ಎಂದರ್ಥ, ಆದರೆ ಅದನ್ನು ತಪ್ಪಾಗಿ ಅರ್ಥೆÊಸಿರುವುದೇ ಇಂದಿನ ದ್ವೇಷಮಯ ವಾತಾವರಣಕ್ಕೆ ಕಾರಣವಾಗಿದೆ.ಒಳ್ಳೆಯದು ಎಲ್ಲಿಯೇ ಇದ್ದರನ್ನು ಅದನ್ನು ನಾವು ಸ್ವೀಕರಿಸಬೇಕು.ಈ ಸಮಾಜವನ್ನು ಒಳ್ಳೆಯ ದಾರಿಯಲ್ಲಿ ನಡೆಸಲು ಮಹಿಳೆಯರಿಂದಲೂ ಸಾಧ್ಯ. ಒಟ್ಟು ಜನಸಂಖ್ಯೆಯ ಶೇ೫೦ರಷ್ಟಿರುವ ಮಹಿಳೆಯರು ಒಳ್ಳೆಯದರೆಡೆಗೆ ಆಲೋಚಿಸಿದರೆ ಇಂದಿನ ಪ್ರಕ್ಷÄಬ್ದ ವಾತಾವರಣದಿಂದ ಮುಕ್ತಿ ಪಡೆಯಬಹುದೆಂದರು.
ನಗರಪಾಲಿಕೆ ಮಾಜಿ ಮಹಾಪೌರರಾದ ಶ್ರೀಮತಿ ಫರೀಧಾ ಬೇಗಂ ಮಾತನಾಡಿ,ದ್ವೇಷ ಹಂಚುವವರ ನಡುವೆ ಪ್ರೀತಿ ಹಂಚುವ ಕೆಲಸ ಇಂದು ನಡೆಯುತ್ತಿದೆ.ಈ ಸೀರತ್ ಪ್ರವಚನದಲ್ಲಿ ಮುಸ್ಲಿಂ ಮಹಿಳೆಯರಲ್ಲದೆ, ಬೇರೆ ಧರ್ಮಗಳ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿರುವುದು ಬದಲಾವಣೆಯ ಗಾಳಿ ಬೀಸುತ್ತಿದೆ ಎಂದೆನಿಸುತ್ತದೆ.ಹೆಣ್ಣು ಹುಟ್ಟುವುದೇ ಬೇಡ ಎಂಬ ಸಂದರ್ಭದಲ್ಲಿ ಹೆಣ್ಣಿಗೆ ಘನತೆಯ ಬದುಕು ಕೊಟ್ಟವರು ಪ್ರವಾದಿಗಳು, ಇದನ್ನು ನಾವೆಲ್ಲರೂ ಅರಿಯಬೇಕಿದೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ,ಬಹುತ್ವದ ಭಾರತದಲ್ಲಿ ಹುಟ್ಟಿದ ಸಂತರು,ಸೂಫಿಗಳAತಹ ಮಾರ್ಗದರ್ಶಕರು ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ.ಆದರೆ ರಾಜಕಾರಣ ಎಲ್ಲದರಲ್ಲಿಯೂ ಮೂಗು ತೂರಿಸಿ, ನಮ್ಮ ನಡುವೆ ದೊಡ್ಡ ಗೋಡೆ ಕಟ್ಟಿದೆ. ಇದನ್ನು ಒಡೆದು, ಮನಸ್ಸು ಮನಸ್ಸುಗಳ ಬೆಸುಗೆಗೆ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು.ಬಸಣ್ಣ, ಬುದ್ದ,ಗಾಂಧಿ,ಪ್ರವಾದಿಗಳು ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯುವ ಮೂಲಕ ಸಕಲ ಜೀವಿಗಳಿಗೂ ಲೇಸು ಬಯಸುವ ಮಾನವ ಧರ್ಮವನ್ನು ಎತ್ತಿ ಹಿಡಿಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಮಾಆತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಜಿಲ್ಲಾ ಸಂಚಾಲಕರಾದ ಹಾಜೀರಾ ಬೀ, ಸ್ಥಾನಿಯ ಅಧ್ಯಕ್ಷರಾದ ಶಬಿನಾ ಭಾನು, ಸ್ಥಾನೀಯ ಪ್ರಮುಖರಾದ ಮಲ್ಲಿಕಾ ಉಲ್ಪತ್, ಆಸ್ಮಾ ಫಿರ್ದೋಸ್ ಮತ್ತಿತರರು ಭಾಗವಹಿಸಿದ್ದರು.
(Visited 1 times, 1 visits today)



