ಹುಳಿಯಾರು: ಪಟ್ಟಣದಲ್ಲಿ ಸಾರ್ವಜನಿಕ ಸೌಲಭ್ಯಗಳ ಕೊರತೆ ಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ, ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡ ಳಿತದ ವತಿಯಿಂದ ಆಯೋಜಿಸಲಾಗಿದ್ದ ಹೋ ಬಳಿ ಮಟ್ಟದ ’ಪ್ರಜಾ ಸೇವಾ ಅಭಿಯಾನ’ ಕಾರ್ಯ ಕ್ರಮದಲ್ಲಿ ವಿವಿಧ ಮನವಿಗಳನ್ನು ಸಲ್ಲಿಸಲಾಯಿತು.
ಹುಳಿಯಾರು ಹೋಬಳಿಯ ಕಾರೆಹಳ್ಳಿಯ ಲಕ್ಷಿ÷್ಮ ರಂಗನಾಥ ಸ್ವಾಮಿ ದೇವಾಲಯದ ಸಮೀಪ ಹಾಗೂ ಯಳನಾಡಿನಲ್ಲಿ ತುರ್ತಾಗಿ ಮೇವು ಬ್ಯಾಂಕ್ ಸ್ಥಾಪಿಸಬೇಕು ಮತ್ತು ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಕೆಡಿಪಿ ಸಮಿತಿ ಸದಸ್ಯರಾದ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ದೇವರಾಜು ಮನವಿ ಸಲ್ಲಿಸಿದರು.
ಹುಳಿಯಾರು ಪಟ್ಟಣದಲ್ಲಿ ಹೊಸದಾಗಿ ಆಸ್ಪತ್ರೆ ನಿರ್ಮಾಣ ಮಾಡುತ್ತಿರುವುದರಿಂದ ಹಾಲಿ ಇದ್ದ ಶವಗಾರ (ಮಾರ್ಚುರಿ) ಸೌಲಭ್ಯ ಇಲ್ಲವಾಗಿರುವುದರಿಂದ ಮೃತರ ಕುಟುಂಬದವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಅಗತ್ಯ ಮೂಲಸೌಕರ್ಯಗಳೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಶವಗಾರ ಸೇವೆಯನ್ನು ಶೀಘ್ರವಾಗಿ ಪುನರಾರಂಭಿಸಬೇಕು ಎಂದು ಇಮ್ರಾಜ್ ಮತ್ತು ಗೆಳೆಯರ ತಂಡ ಮನವಿ ಮಾಡಿದರು.
ಅದೇ ರೀತಿ, ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಸಾರ್ವಜನಿಕ ಗ್ರಂಥಾಲಯವನ್ನು ಪುನರಾರಂಭಿಸಿ, ಸುಸಜ್ಜಿತ ಡಿಜಿಟಲ್ ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸಬೇಕು. ಇದರಿಂದ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಜನರಿಗೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಹುಳಿಯಾರು ನಾಡಕಚೇರಿಯಲ್ಲಿ ಆಧಾರ್ ಕೇಂದ್ರ ಸ್ಥಾಪಿಸಬೇಕು ಹಾಗೂ ಪಟ್ಟಣಕ್ಕೆ ಸಾರ್ವಜನಿಕ ಸ್ಮಶಾನಕ್ಕಾಗಿ ಸೂಕ್ತ ಜಾಗವನ್ನು ಮೀಸಲಿಡಬೇಕು ಎಂದು ಮನವಿ ಮಾಡಿದರು.
ಕೆರೆ ಸೂರಗೊಂಡನಹಳ್ಳಿ ಸರ್ವೆ ನಂ. ೩೨ ರಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿಯಿAದ ಘನ ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಿಸಬಾರದು ಎಂದು ವೈ.ಆರ್. ಮಲ್ಲಿಕಾರ್ಜುನಯ್ಯ ಮತ್ತು ಸ್ಥಳೀಯ ನಿವಾಸಿಗಳು ತಕರಾರು ಅರ್ಜಿ ಸಲ್ಲಿಸಿದರು.
ಪೋಚಕಟ್ಟೆ ಕೆರೆಯಲ್ಲಿ ಇಟ್ಟಿಗೆ ಫ್ಯಾಕ್ಟರಿಯವರಿಂದ ನಡೆಯುತ್ತಿರುವ ಅಕ್ರಮ ಮಣ್ಣು ತುಂಬುವಿಕೆ ತಡೆದು, ಅದನ್ನು ವಿಬಿಜೆ ರಾಂಜೀ ಯೋಜನೆಯಡಿ ಸೇರಿಸಿ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥ ಜಯರಾಮ್ ಕೋರಿದರು. ಗುರುವಾಪುರ ಗ್ರಾಮದ ಬಸವರಾಜು ಎಂಬುವರು ತ್ರಿಚಕ್ರ ವಾಹನ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಒದಗಿಸಲು ಅರ್ಜಿ ಸಲ್ಲಿಸಿದರು.
(Visited 1 times, 1 visits today)



