ತುಮಕೂರು: ರೈತ ಮುಖಂಡ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ೧೩ ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬAಧಿಸಿದAತೆ ಸದರನ್ ರೈಲ್ವೆ ವಲಯದ ಪೊಲೀಸರು ಸೆಪ್ಟಂಬರ್ ೨೮ ರಂದು ಶಿರಸಿಯಲ್ಲಿ ಬಂಧಿಸಿರುವುದನ್ನು ಖಂಡಿಸಿ, ಇಂದು ರೈತ ಸಂಘದ ಕಾರ್ಯಕರ್ತರು ತೋಳಿಗೆ ಕಪುö್ಪಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಆನಂದ ಪಟೇಲ್ ಮತ್ತು ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ಅವರ ನೇತೃತ್ವದಲ್ಲಿ ಹತ್ತಾರು ರೈತ ಮುಖಂಡರು ತೋಳಿಗೆ ಕಪುö್ಪಪಟ್ಟಿ ಧರಿಸಿ, ತಮ್ಮ ನಾಯಕರ ಬಿಡುಗಡೆಗೆ ಒತ್ತಾಯಿಸಿ ಹಾಗೂ ರಾಜ್ಯದಲ್ಲಿ ರೈತ ಹೋರಾಟಗಾರರ ಮೇಲಿರುವ ಕೇಸುಗಳನ್ನು ಹಿಂಪಡೆಯುವAತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿ ರಾಜ್ಯ ಸಂಚಾಲಕ ಆನಂದ ಪಟೇಲ್, ನಮ್ಮ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ೨೦೧೩ ರಲ್ಲಿ ಮಹಾದಾಯಿ ಮತ್ತು ಕಳಸ ಬಂಡೂರಿ ಯೋಜನೆ ಆರಂಭಿಸುವAತೆ ಒತ್ತಾಯಿಸಿ, ಹಲವು ಹೋರಾಟಗಳ ನಂತರ ರೈಲ್ವೆ ತಡೆ ಕಾರ್ಯಕ್ರಮ ನಡೆಸಿದ್ದರು.ಆದರೆ ಅಂದಿನಿAದ ಯಾವ ಕ್ರಮ ಕೈಗೊಳ್ಳದ ರೈಲ್ವೆ ಪೊಲೀಸರು, ಸೆಪ್ಟಂಬರ್ ೨೮ರಂದು ಸಿರಸಿಯ ಐಬಿಯಲ್ಲಿರುವ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆದು,ವಿಚಾರಣೆ ನೆಪದಲ್ಲಿ ಜೈಲಿಗೆ ಕಳುಹಿಸಿದ್ದಾರೆ. ಇದು ನಿಜಕ್ಕೂ ಖಂಡನೀಯ. ರೈತರ ಹೋರಾಟ ಸ್ವಾರ್ಥಕ್ಕಾಗಿ ಅಲ್ಲ.ಈ ದೇಶದ ಭವಿಷ್ಯ ಸರಿಪಡಿಸಲು ನಡೆಸುವ ಹೋರಾಟ ವಾಗಿದೆ.ರೈಲ್ವೆ ಪೊಲೀಸರು ದಾಖಲಿಸಿರುವ ಕೇಸು ವಾಪಸ್ ಪಡೆಯುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ರೈತನಾಯಕರ ಬಂಧನದ ಮೂಲಕ ಅವರ ದ್ವನಿ ಅಡಗಿಸಬಹುದು ಎಂಬ ಭ್ರಮೆಯಲ್ಲಿ ಸರಕಾರವಿದೆ. ಆದು ಸಾಧ್ಯವಿಲ್ಲ. ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ.ಸರಕಾರ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಹಾಗೆಯೇ ರೈತ ಮುಖಂಡರ ಮೇಲೆ ಹಾಕಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯಬೇಕೆAದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ಮಾತನಾಡಿ, ಕರ್ನಾಟಕದ ರೈತರು ತಮ್ಮ ಜೀವನಾಧಾರವಾದ ನೀರು, ಕೃಷಿ ಬೆಳೆಗಳಿಗೆ ನ್ಯಾಯಯುತವಾಗಿ ಬೆಲೆ ಹಾಗೂ ರೈತರ ಹಕ್ಕುಗಳಿಗಾಗಿ ೪೬ ವರ್ಷಗಳಿಂದ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.೨೦೧೩ರಲ್ಲಿ ಉತ್ತರ ಕರ್ನಾಟಕದ ರೈತರ ಬಹುದಿನಗಳ ಬೇಡಿಕೆಯಾಗಿರುವ ಮಹದಾಯಿ ನೀರಾವರಿ ಯೋಜನೆ ಹಾಗೂ ಕಳಸ ಬಂಡೂರಿ ನೀರಿನ ವಿಚಾರವಾಗಿ ನಡೆದ ರೈತ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದ ಚಳುವಳಿಗೆ ಸಂಬAಧಿಸಿದAತೆ,ಹಳೆಯ ಪ್ರಕರಣದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ರವರವನ್ನು ಬಂಧಿಸಿರುವುದು ರೈತ ಸಮುದಾಯದಲ್ಲಿ ಆತಂಕ ಹಾಗೂ ಅಸಮಧಾನಕ್ಕೆ ಕಾರಣವಾಗಿದೆ ಎಂದರು.
ಹಲವು ವರ್ಷಗಳ ಹಿಂದೆ ನಡೆದ ಚಳುವಳಿಗೆ ಸಂಬAಧಿಸಿದ ಪ್ರಕರಣದಲ್ಲಿ ಬಂಧನವಾಗಿರುವುದು ರೈತ ಹೋರಾಟಗಾರರಲ್ಲಿ ಆತಂಕ ಮೂಡಿಸಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ರೈತರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಸರಕಾರದ ಗಮನಕ್ಕೆ ತರುವ ಹಕ್ಕುಗಳನ್ನು ಹೊಂದಿದ್ದಾರೆ. ರೈತಪರ ಹೋರಾಡಿದ ಹೋರಾಟಗಾರರ ಮೇಲೆ ದಾಖಲಾಗಿರುವ ಹಳೆಯ ಪ್ರಕರಣ, ಮಾನವೀಯ ಹಾಗೂ ರೈತರ ದೃಷ್ಟಿಕೋನದಿಂದ ಪರಿಶೀಲಿಸುವ ಅಗತ್ಯವಿದೆ.ಕರ್ನಾಟಕದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ ಬಂಧಿತರಾಗಿರುವ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ರವರವನ್ನು ಬಿಡುಗಡೆ ಮಾಡಬೇಕು ಹಾಗೂ ಹಳೆಯ ರೈತರ ಹೋರಾಟದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಧನಂಜಯ್ ಆರಾಧ್ಯ ತಿಳಿಸಿದರು.
ಈ ಸಂಬAಧ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಅಧೀಕ್ಷಕರಿಗೆ ನೀಡಲಾಯಿತು.ಮುಖಂಡರಾದ ರಾಮಕೃಷ್ಣಪ್ಪ, ಸಿದ್ದರಾಜು, ಭರತ್ ಡಿ. ಬೆಲ್ಲದಮಡು ಮತ್ತಿತರರು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ವಿವಿಧ ತಾಲೂಕುಗಳ ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಬಿ.ಎಸ್.ರಾಜಣ್ಣ, ಅನಿಲ್‌ಕುಮಾರ್, ಬಾಳೇಗೌಡ, ಗಂಗಾಧರಯ್ಯ, ಕಲ್ಪನ, ತೋಟರಾಧ್ಯ, ಭೀಮರಾಜು, ಯೋಗಾನಂದ ಸ್ವಾಮಿ, ಸಿ.ವಿ.ನಾಗರಾಜಪ್ಪ, ಹನುಮಂತರಾಯಪ್ಪ, ಶಾಂತಕುಮಾರ್, ನಾಗರಾಜಯ್ಯ, ಚನ್ನಿಗರಾಯಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(Visited 1 times, 1 visits today)