ಹುಳಿಯಾರು: ಜನಸಾಮಾನ್ಯರ ಹಾಗೂ ಬಡವರ ಹಸಿವು ನೀಗಿಸಬೇಕಿದ್ದ ಇಲ್ಲಿನ ಇಂದಿರಾ ಕ್ಯಾಂಟೀನ್ ಸೂಕ್ತ ನಿರ್ವಹಣೆ ಮತ್ತು ನಿರ್ಲಕ್ಷ÷್ಯದಿಂದಾಗಿ ಕಳೆದ ಒಂದು ತಿಂಗಳಿAದ ಸಂಪೂರ್ಣವಾಗಿ ಬಾಗಿಲು ಹಾಕಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೊಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕಳೆಗುಂದಿದ್ದು, ಸಾರ್ವಜನಿಕರು ಹಾಗೂ ನಿರ್ಗತಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಕಳೆದ ನಾಲ್ಕು ತಿಂಗಳಿAದ ಇಲ್ಲಿನ ಸಿಬ್ಬಂದಿಗಳಿಗೆ ಯಾವುದೇ ವೇತನ ನೀಡಿಲ್ಲ. ಆದರೂ ಎಂದಾದರೂ ಒಂದು ದಿನ ಸಂಬಳ ಕೊಟ್ಟೆಕೊಡುತ್ತಾರೆ ಎಂಬ ನಂಬಿಕೆಯಿAದ ಕ್ಯಾಂಟಿನ್ ನಡೆಸಿಕೊಂಡು ಬರುತ್ತಿದ್ದರು. ಆದರೆ ಕ್ಯಾಂಟಿನ್ ನಡೆಸಲು ಅಗತ್ಯವಾಗಿ ಬೇಕಿದ್ದ ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ದಿನಸಿ ಪದಾರ್ಥಗಳನ್ನೇ ಕೊಡಿಸದೆ ಗುತ್ತಿಗೆದಾರರು ನಿರ್ಲಕ್ಷಿö್ಯಸಿದ್ದಾರೆ. ಪರಿಣಾಮ ದಿನನಿತ್ಯ ಮಾರಾಟದಿಂದ ಸಂಗ್ರಹವಾಗುವ ಹಣದಲ್ಲೇ ರೇಷನ್ ತಂದು ಇಷ್ಟು ದಿನ ಕ್ಯಾಂಟೀನ್ ನಿರ್ವಹಣೆ ಮಾಡಿಕೊಂಡು ಬರಲಾಗಿದೆ. ಅಲ್ಲದೆ ವಿದ್ಯುತ್ ಸಂಪರ್ಕ ಸರಿಪಡಿಸುವುದು, ಬಲ್ಬ್ಗಳನ್ನು ಹಾಕುವುದು, ಪೈಪ್‌ಲೈನ್ ಹಾಗೂ ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಸಿಬ್ಬಂದಿಯೇ ತಮ್ಮ ಸ್ವಂತ ದುಡ್ಡಿನಲ್ಲಿ ಮಾಡಿಸಿ ಸೋತು ಈಗ ಬಾಗಿಲು ಜಡಿದಿದ್ದಾರೆ.
ಕಳೆದ ಒಂದು ತಿಂಗಳಿAದ ಕ್ಯಾಂಟೀನ್ ಸಂಪೂರ್ಣವಾಗಿ ಮುಚ್ಚಿರುವುದರಿಂದ ಈ ಕಟ್ಟಡವು ಈಗ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಕ್ಯಾಂಟೀನ್ ಸುತ್ತಮುತ್ತ ಮದ್ಯದ ಪಾಕೀಟ್‌ಗಳು ಹಾಗೂ ಇತರೆ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಅಲ್ಲದೆ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳೂ ಸಹ ನಡೆಯುತ್ತಿದ್ದು ಸಾರ್ವಜನಿಕರು ಮತ್ತು ಹೆಣ್ಣುಮಕ್ಕಳು ಈ ಕಡೆ ತಲೆಹಾಕಲೂ ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಜನರ ಸೇವೆಗಾಗಿ ಅಳವಡಿಸಿದ್ದ ಮೂಲಭೂತ ಸೌಕರ್ಯಗಳು ಈಗ ಕಣ್ಮರೆಯಾಗುತ್ತಿವೆ. ಶೌಚಾಲಯದ ನೀರಿನ ನಲ್ಲಿಗಳು ಹಾಗೂ ಕಟ್ಟಡದಲ್ಲಿದ್ದ ವಿದ್ಯುತ್ ಬಲ್ಬ್ಗಳನ್ನು ಕಿಡಿಗೇಡಿಗಳು ಬಿಚ್ಚಿಕೊಂಡು ಹೋಗಿದ್ದಾರೆ. ಕಾವಲು ಇಲ್ಲದೆ ಪಾಳುಬಿದ್ದಿರುವ ಈ ಕಟ್ಟಡದ ಸೌಲಭ್ಯಗಳು ಒಂದೊAದಾಗಿ ನಾಶವಾಗುತ್ತಿದ್ದು, ಸರ್ಕಾರದ ಲಕ್ಷಾಂತರ ರೂಪಾಯಿ ಹಣ ಪೋಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳು, ದೂರದ ಹಳ್ಳಿಗಳಿಂದ ಬರುವ ಅವರ ಸಂಬAಧಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ಅನಾಥರು ಹಾಗೂ ಅಲೆಮಾರಿಗಳಿಗೆ ಹೊಟ್ಟೆತುಂಬ ಊಟ ನೀಡುತ್ತಿದ್ದ ಈ ಕ್ಯಾಂಟೀನ್ ಮುಚ್ಚಿರುವುದರಿಂದ ಇವರ ಪಾಲಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಹಣವಿಲ್ಲದೆ ಪರದಾಡುವ ನಿರ್ಗತಿಕರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ.
ಬರಗಾಲದಲ್ಲಿ ಈಗ ಹಿಂದೆAದಿಗಿAತಲೂ ಬಡವರಿಗೆ ಇಂದಿರಾ ಕ್ಯಾಂಟಿನ್ ಆಗತ್ಯವಿದೆ. ಕೂಡಲೇ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು, ಸಾರ್ವಜನಿಕರ ಹಿತದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಅನ್ನು ಕೂಡಲೇ ಪುನಾರಂಭಿಸಬೇಕು, ಕಟ್ಟಡಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಅಡುಗೆ ಸಿಬ್ಬಂದಿಯ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕು ಎಂಬುದು ಎಲ್ಲರ ಕಳಕಳಿಯ ಒತ್ತಾಯವಾಗಿದೆ.

(Visited 1 times, 1 visits today)