ತುಮಕೂರು: ನಗರದ ಕನ್ನಡ ಭವನದಲ್ಲಿ ನಾಟಕಮನೆ ತುಮಕೂರು ಪ್ರಯೋಗಾತ್ಮಕ ರಂಗಕೇAದ್ರ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಹಾಗೂ ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮೂಡಲಪಾಯ ಬಯಲಾಟ ಕರಿ ಬಂಟನ ಕಾಳಗ ಉದ್ದಂಡಿಯ ಗರ್ವಭಂಗ ರಂಗಪ್ರದರ್ಶನವು ವಿಜೃಂಭಣೆಯಿAದ ನಡೆಯಿತು.
ಸುಮಾರು ಐದು ನೂರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮೂಡಲಪಾಯ ಬಯಲಾಟದ ಜನಪದ ಪರಂಪರೆಯ ಪ್ರಸಂಗವನ್ನು ಕೆಂಪಣ್ಣಗೌಡರ ರಚನೆಯ ಆಧಾರದಲ್ಲಿ ಪ್ರಸ್ತುತಪಡಿಸಲಾಯಿತು. ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ನಾಗರಾಜ ಡಿ. ವೀರ್ಲಗೊಂದಿ ಅವರ ನೇತೃತ್ವದ ಕಲಾತಂಡವು ಪ್ರಸಂಗವನ್ನು ಪರಿಣಾಮಕಾರಿಯಾಗಿ ರಂಗದ ಮೇಲೆ ಕಟ್ಟಿಕೊಟ್ಟು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ನಾಟಕೋತ್ಸವದ ಉದ್ಘಾಟನೆಯನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಬಾಲ ಗುರುಮೂರ್ತಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಿದ್ದರಾಜು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕೆ. ಮಿರ್ಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ಕರ್ನಾಟಕ ರಾಜ್ಯ ಜಾನಪದ ಸಂಗೀತ ಮತ್ತು ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ಡಾ. ಸಣ್ಣ ಹೊನ್ನಯ್ಯ ಕಂಡಲಗೆರೆ, ನವೋದಯ ಐಎಎಸ್ ಅಕಾಡೆಮಿಯ ಚೇರ್ಮನ್ ನಾಗರಾಜ್ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ನಾಗರಾಜ ಡಿ. ವೀರ್ಲಗೊಂದಿ ಉಪಸ್ಥಿತರಿದ್ದರು.
ರೋಚಕ ಕಥಾಹಂದರಕ್ಕೆ ರಂಗರೂಪ: ಧಾರಾಪುರದ ರಾಜ ಮಾರಭೂಪಾಲ ಮತ್ತು ಬನವಂತ ದೇವಿಯ ಪುತ್ರ ಕರಿರಾಯ, ತಂದೆ-ತಾಯಿ ನಿಶ್ಚಯಿಸಿದ್ದ ಹಳೇಬೀಡಿನ ಅರಸ ಬಲ್ಲಾಳ ರಾಯನ ಪುತ್ರಿ ಧರಣಿಮೋಹಿನಿಯನ್ನು ವಿವಾಹವಾಗದೆ ಹಳೇಬೀಡಿನ ಮಾರ್ಗವಾಗಿ ಪ್ರಯಾಣಿಸುವ ಕಥಾಹಂದರ ಪ್ರೇಕ್ಷಕರ ಗಮನ ಸೆಳೆಯಿತು.
ಹಾದಿಯಲ್ಲಿ ಚೋರ ಶಿಖಾಮಣಿ ಉರಿಸಿಂಗನೊAದಿಗೆ ವೀರಾವೇಶದಿಂದ ಸೆಣಸಾಡಿ, ಆತನಿಂದ ಕಪ್ಪ-ಕಾಣಿಕೆ ಪಡೆದು ತೊಂಡನೂರು ಎಂಬ ರಕ್ಕಸರ ಪಟ್ಟಣ ಪ್ರವೇಶಿಸುವ ಸನ್ನಿವೇಶಗಳು ರೋಚಕವಾಗಿ ಮೂಡಿಬಂದವು.
ತೊAಡನೂರಿನಲ್ಲಿ ಉದ್ದಂಡಿಯ ಸಾಕುಮಗಳು ಪುಂಡರಿಕಾಕ್ಷಿಯನ್ನು ಕರಿರಾಯ ಪ್ರೀತಿಸಿ ವಿವಾಹವಾಗುವುದು, ಬಳಿಕ ರಕ್ಕಸರಾದ ಉದ್ದಂಡಿ ಮತ್ತು ಬೊಮ್ಮರಕ್ಕಸರ ಗರ್ವಭಂಗಕ್ಕಾಗಿ ನಡೆಯುವ ಹೋರಾಟ ಸೇರಿದಂತೆ ಹಲವು ರೋಚಕ ಸನ್ನಿವೇಶಗಳನ್ನು ಕಲಾವಿದರು ಮನೋಜ್ಞವಾಗಿ ಅಭಿನಯಿಸಿದರು.
ಪಾತ್ರವರ್ಗದ ಮನೋಜ್ಞ ಅಭಿನಯ: ಪ್ರದರ್ಶನದ ಪ್ರತಿಯೊಂದು ಪಾತ್ರದಲ್ಲೂ ಕಲಾವಿದರು ತನ್ಮಯತೆಯಿಂದ ಅಭಿನಯಿಸಿದರು. ದ್ಯಾವರಪ್ಪ ಕರಿರಾಯನಾಗಿ, ರಾಮಮೂರ್ತಿ ಉದ್ದಂಡಿಯಾಗಿ, ಡಿ. ನಾಗರಾಜು ಬೊಮ್ಮಕಾಸುರನಾಗಿ, ಡಾ. ನರಸೇಗೌಡ ಪುಂಡರಿಕಾಕ್ಷಿಯಾಗಿ, ಕೃಷ್ಣಗೌಡ ಬಾಲಕೃಷ್ಣನಾಗಿ, ಶ್ರೀರಾಮಪ್ಪ ಬನವಂತಾದೇವಿಯಾಗಿ, ಎನ್. ಮರಿಸ್ವಾಮಿ ಉರಿಸಿಂಗನಾಗಿ, ಈರಣ್ಣ ಕಟಕಿ ಪಾತ್ರದಲ್ಲಿ ಹಾಗೂ ಸತ್ಯಲೋಕೇಶ್ ಸಾರಥಿಯಾಗಿ ತಮ್ಮ ಅಭಿನಯದ ಮೂಲಕ ಗಮನ ಸೆಳೆದರು.
ಸಂಗೀತ-ವೇಷಭೂಷಣಕ್ಕೆ ಮೆರುಗು: ಭಾಗವತರಾಗಿ ಹೊಟ್ಟೆಬೊಮ್ಮನಹಳ್ಳಿಯ ಹನುಮಂತರಾಯಪ್ಪ ತಮ್ಮ ಪ್ರೌಢ ಧ್ವನಿಯಲ್ಲಿ ಪ್ರಸಂಗವನ್ನು ಮುನ್ನಡೆಸಿದರು. ಶಿವಗಂಗಪ್ಪ ಮೃದಂಗ ಹಾಗೂ ರಂಗನಾಥ್ ಮುಖವೀಣೆಯಲ್ಲಿ ನೀಡಿದ ಜುಗಲ್‌ಬಂದಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಹನುಮಂತರಾಯಪ್ಪ ಮತ್ತು ನರಸಪ್ಪ ಚಿತ್ತಣ್ಣ ಹಿನ್ನೆಲೆ ಧ್ವನಿಗೂಡಿಸಿದರು.
ಶಿವಣ್ಣ ಅವರ ಸಾಂಪ್ರದಾಯಿಕ ವೇಷಭೂಷಣ ವಿನ್ಯಾಸವು ಪಾತ್ರಗಳ ವೈಶಿಷ್ಟ÷್ಯವನ್ನು ಹೆಚ್ಚಿಸಿ, ಮೂಡಲಪಾಯ ಬಯಲಾಟದ ಸಾಂಪ್ರದಾಯಿಕ ಸೊಗಡಿಗೆ ಮತ್ತಷ್ಟು ಮೆರುಗು ನೀಡಿತು.
ಜನಪದ ಕಥಾಹಂದರ, ಸಾಂಪ್ರದಾಯಿಕ ಸಂಗೀತ, ವೈವಿಧ್ಯಮಯ ವೇಷಭೂಷಣ ಹಾಗೂ ಕಲಾವಿದರ ಮನೋಜ್ಞ ಅಭಿನಯದ ಸಮನ್ವಯದಿಂದ ಕರಿ ಬಂಟನ ಕಾಳಗ ಉದ್ದಂಡಿಯ ಗರ್ವಭಂಗ ಪ್ರದರ್ಶನವು ಪ್ರೇಕ್ಷಕರನ್ನು ಕೊನೆಯವರೆಗೂ ರಂಜಿಸಿತು.

(Visited 1 times, 1 visits today)