ತುಮಕೂರು: ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ ೧೧ ರಿಂದ ೨೧ರವರೆಗೆ ಹಮ್ಮಿಕೊಳ್ಳಲಾಗುವ ದಸರಾ ಉತ್ಸವದಲ್ಲಿ ದೇವಿಯ ಆರಾಧನೆ, ತಾರಾ ಮನರಂಜನೆ, ಸಂಗೀತ, ನೃತ್ಯ, ನಾಟಕ, ಸಾಹಿತ್ಯಿಕ ಕಾರ್ಯಕ್ರಮ, ಫಲ-ಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ, ಹೆಲಿ ರೈಡ್, ವಿವಿಧ ಸ್ಪರ್ಧೆಗಳು ಸೇರಿದಂತೆ ಜನಾಕರ್ಷಿಸುವಂತಹ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ತಮ್ಮ ಕಚೇರಿಯಲ್ಲಿಂದು ಮಾಧ್ಯಮದವರಿಗೆ ದಸರಾ ಉತ್ಸವದ ಪ್ರತೀ ದಿನದ ಕಾರ್ಯಕ್ರಮಗಳ ಮಾಹಿತಿಯನ್ನು ನೀಡುತ್ತಾ ಮಾತನಾಡಿದ ಅವರು, ಅಕ್ಟೋಬರ್ ೧೧ ರಿಂದ ೨೧ರವರೆಗೆ ೧೧ ದಿನಗಳ ಕಾಲ ನಡೆಯಲಿರುವ ಜಿಲ್ಲಾ ದಸರಾ ಉತ್ಸವಕ್ಕೆ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ೧೧ರಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು. ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯನ್ನು ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪ್ರತೀ ದಿನ ವಿವಿಧ ಅಲಂಕಾರದಲ್ಲಿ ಪೂಜಿಸಿ ಶಾಸ್ತೊçÃಕ್ತವಾಗಿ ಹೋಮ-ಹವನಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಕಳೆದೆರಡು ವರ್ಷಗಳಲ್ಲಿ ಆಚರಿಸಿದ ಜಿಲ್ಲಾ ದಸರಾ ಉತ್ಸವದ ಯಶಸ್ಸು ಯಾವುದೇ ಬೇಧ-ಭಾವವಿಲ್ಲದೆ ಎಲ್ಲರನ್ನೊಳಗೊಂಡAತೆ ಆಚರಿಸಿದ ತುಮಕೂರು ದಸರಾ ಉತ್ಸವವೆಂದು ಮನೆ ಮಾತಾಗಿದೆ. ಕಳೆದೆರಡು ವರ್ಷಗಳಂತೆ ಈ ಬಾರಿಯೂ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಉತ್ಸವದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಹೆಲಿಕಾಪ್ಟರ್ ಪ್ರವಾಸ(ಹೆಲಿ ರೈಡ್), ಕಾಲೇಜು ವಿದ್ಯಾರ್ಥಿಗಳಿಂದ ಪಂಜಿನ ಕವಾಯತು, ಮಹಿಳಾ ಬೈಕ್ ರೈಡ್, ರಂಗೋಲಿ ಸ್ಪರ್ಧೆ, ದೀಪಾಲಂಕಾರ, ಬಾಣ-ಬಿರುಸುಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರಲ್ಲದೆ, ಮಹಿಳಾ ಮತ್ತು ಮಕ್ಕಳ ದಸರಾ, ಯುವ ದಸರಾ, ಕವಿಗೋಷ್ಠಿ ಹಾಗೂ ದಸರಾ ಕ್ರೀಡೆಯಲ್ಲಿ ನಾಡಕುಸ್ತಿ, ಕಬಡ್ಡಿ, ವಾಲಿಬಾಲ್, ಶೂಟಿಂಗ್, ಟೆನ್ನಿಸ್, ಜಿಮ್ನಾಸ್ಟಿಕ್, ಚೆಸ್ ಇತರೆ ಪಂದ್ಯಗಳು ನಡೆಯಲಿವೆ. ಕಡೆಯ ದಿನ ಅಕ್ಟೋಬರ್ ೨೧ರಂದು ಸುತ್ತ-ಮುತ್ತಲಿನ ಗ್ರಾಮ ದೇವತೆಗಳ ಅದ್ದೂರಿ ಮೆರವಣಿಗೆ, ಜಂಬೂ ಸವಾರಿ ಜರುಗಲಿದೆ. ಜಂಬೂ ಸವಾರಿಯಲ್ಲಿ ೩ ಆನೆಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಅಕ್ಟೋಬರ್ ೧೧ರ ಭಾನುವಾರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ ೮.೩೦ ಗಂಟೆಗೆ ದಸರಾ ಉತ್ಸವದ ಧ್ವಜಾರೋಹಣ, ಬೆಳಗ್ಗೆ ೧೦.೩೦ ಗಂಟೆಗೆ ದಸರಾ ಕಲಾ ಮತ್ತು ಜ್ಞಾನ ವೈಭವ ಪ್ರದರ್ಶನ ಹಾಗೂ ಫಲ-ಪುಷ್ಪ ಪ್ರದರ್ಶನಕ್ಕೆ ಚಾಲನೆ, ೧೧ ಗಂಟೆಗೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹೆಲಿ ರೈಡ್‌ಗೆ ಚಾಲನೆ, ೧೧.೩೦ ಗಂಟೆಗೆ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗ ದಸರಾಗೆ ಚಾಲನೆ, ಸಂಜೆ ೪.೩೦ ಗಂಟೆಗೆ ದಸರಾ ಸಾಂಸ್ಕೃತಿಕ ವೈಭವ, ಬಿ.ಜಿ.ಎಸ್. ವೃತ್ತದಲ್ಲಿ ಸಂಜೆ ೭ ಗಂಟೆಗೆ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ವಿಶೇಷ ದೀಪಾಲಂಕಾರವನ್ನು ವೀಕ್ಷಿಸಲು ಆಯೋಜಿಸಿರುವ ಅಂಬಾರಿ ಬಸ್ ಪ್ರಯಾಣಕ್ಕೆ ಚಾಲನೆ, ಸಂಜೆ ೭.೩೦ ಗಂಟೆಗೆ ಅಮಾನಿಕೆರೆಯಲ್ಲಿ ತುಮಕೂರು ಕಾರಂಜಿ ಹಾಗೂ ಸಂಜೆ ೮ ಗಂಟೆಗೆ ಎಸ್.ಎಸ್. ವೃತ್ತದಲ್ಲಿ ತುಮಕೂರು ಸ್ಕೆ÷್ವÃರ್ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಜೂನಿಯರ್ ಕಾಲೇಜು ಮೈದಾನದಲ್ಲಿ ಅಕ್ಟೋಬರ್ ೧೫ರಂದು ಸಂಜೆ ೬.೩೦ ರಿಂದ ಮಕ್ಕಳ ದಸರಾ; ಅ.೧೭ರಂದು ಬೆಳಗ್ಗೆ ೭.೩೦ ಗಂಟೆಗೆ ರಾಧಾಕೃಷ್ಣ ರಸ್ತೆಯಿಂದ ಫ್ಲೆöÊ-ಓವರ್ ರಸ್ತೆಯವರೆಗೆ ಆಯೋಜಿಸುವ ರಂಗೋಲಿ ಸ್ಪರ್ಧೆ, ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ ೧೦.೩೦ ಗಂಟೆಗೆ ಆಹಾರ ಮೇಳ ಹಾಗೂ ಸಂಜೆ ೭ ಗಂಟೆಗೆ ದಾಂಡಿಯಾ ನೃತ್ಯ, ೧೧ ಗಂಟೆಗೆ ಕವಿಗೋಷ್ಠಿ, ಮಧ್ಯಾಹ್ನ ೩ ಗಂಟೆಗೆ ಬಿ.ಜಿ.ಎಸ್. ವೃತ್ತದಿಂದ ಮಹಿಳಾ ಬೈಕ್ ರೈಡಿಂಗ್‌ಗೆ ಚಾಲನೆ ನೀಡಲಾಗುವುದು. ಸಂಜೆ ೬ ಗಂಟೆಗೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಹಿಳಾ ದಸರಾ; ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಕ್ಟೋಬರ್ ೧೮ರ ಬೆಳಗ್ಗೆ ೭ ಗಂಟೆಗೆ ಮ್ಯಾರಥಾನ್ ಓಟ ಹಾಗೂ ಸಂಜೆ ೭ ಗಂಟೆಗೆ ಪಂಜಿನ ಕವಾಯತು, ಸಿಡಿಮದ್ದು ಪ್ರದರ್ಶನ ಹಾಗೂ ಅನುಶ್ರೀ ಮತ್ತು ತಂಡದ ಒಂದು ಸಾವಿರ ಮಕ್ಕಳಿಂದ ನೃತ್ಯವೈಭವ; ಕಾಲೇಜು ಮೈದಾನದಲ್ಲಿ ಬೆಳಗ್ಗೆ ೧೦ ಗಂಟೆಗೆ ಕಾರ್ ರ‍್ಯಾಲಿ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಉತ್ಸವದ ದಿನಗಳಂದು ಪ್ರತಿ ದಿನ ಬೆಳಗ್ಗೆ ೮ ರಿಂದ ಸಂಜೆ ೫ ಗಂಟೆಯವರೆಗೆ ತುಮಕೂರು ವಿಶ್ವವಿದ್ಯಾನಿಲಯದ ಹೆಲಿಪ್ಯಾಡ್‌ನಲ್ಲಿ ಹೆಲಿರೈಡ್ ಅನ್ನು ಏರ್ಪಡಿಸಲಾಗುವುದು. ಕಳೆದ ವರ್ಷ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿರುವ ಕಾರಣ ಈ ವರ್ಷವೂ ಹೆಲಿ ರೈಡ್ ಅನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಲಿ ರೈಡ್‌ಗಾಗಿ ೪೧೦೦ ರೂ.ಗಳ ಶುಲ್ಕ ಪಾವತಿಸಿ ತಿತಿತಿ.heಟiಣಚಿxii.ಛಿom ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ದಸರಾ ಅಂಗವಾಗಿ ಏರ್ಪಡಿಸಲಾಗುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ೩೦೦೦ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುವುದು. ಅಲ್ಲದೆ, ಪ್ರತಿ ದಿನ ರಾತ್ರಿ ೮.೩೦ ಗಂಟೆಗೆ ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದು, ಅಕ್ಟೋಬರ್ ೧೨ರಂದು ಟು ಐಡ್ ವಿಜರ್ಡ್ ಫೀಚರಿಂಗ್ ಕನ್ನಡ ರ‍್ಯಾಪರ್, ಅ.೧೩ರಂದು ಪಂಚA ಜೀವ, ಅ.೧೪ರಂದು ಆಲ್ ಓಕೆ, ಅ.೧೬ರಂದು ಸೌತ್ ಮೀಲ್ ಬ್ಯಾಂಡ್, ಅ.೧೮ರಂದು ಸೌತ್ ಗ್ಯಾರೇಜ್ ಮ್ಯೂಜಿ಼ಕ್ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಈ ಬಾರಿ ಅ.೧೯ರಂದು ಸಂಜೆ ೬ ಗಂಟೆಗೆ ವೀಣಾ ವಿದ್ಯಾಮೂರ್ತಿ ಮತ್ತು ತಂಡದವರಿAದ ದೇವಿಶಕ್ತಿ ಪ್ರದರ್ಶನ, ಚಂದನ್‌ಶೆಟ್ಟಿ ಮತ್ತು ತಂಡದವರಿAದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಖ್ಯಾತ ಚಲನಚಿತ್ರ ನಟಿ ರಚಿತಾ ರಾಮ್ ಆಗಮಿಸಲಿದ್ದಾರೆ.
ಅಕ್ಟೋಬರ್ ೨೦ರಂದು ಸಂಜೆ ೫ ಗಂಟೆಗೆ ಪ್ರಭಾತ್ ಕಲಾವಿದರಿಂದ ನೃತ್ಯ ಪ್ರದರ್ಶನ ಇರಲಿದ್ದು, ಖ್ಯಾತ ಕನ್ನಡದ ಸುಪ್ರಸಿದ್ಧ ಚಲನಚಿತ್ರ ನಟ ರಮೇಶ್ ಅರವಿಂದ್ ಆಗಮಿಸಲಿದ್ದಾರೆ. ನಂತರ ಸಂಜೆ ೬ ಗಂಟೆಗೆ ಸಂಜಿತ್ ಹೆಗ್ಡೆ ಮತ್ತು ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ ೨೧ರಂದು ಮಧ್ಯಾಹ್ನ ೧೨ ಗಂಟೆಗೆ ನಗರದ ಬಿ.ಜಿ.ಎಸ್. ವೃತ್ತದಿಂದ ಡೀಸಿ ಕಚೇರಿ, ಅಮಾನಿಕೆರೆ ರಸ್ತೆ, ಎಸ್.ಎಸ್. ಸರ್ಕಲ್ ಮಾರ್ಗವಾಗಿ ಜೂನಿಯರ್ ಕಾಲೇಜು ಮೈದಾನದವರೆಗೂ ಜಂಬೂ ಸವಾರಿ ಮೆರವಣಿಗೆ, ಸಂಜೆ ೪ ಗಂಟೆಗೆ ಕಾಲೇಜು ಮೈದಾನದಲ್ಲಿ ಶಮೀ ಪೂಜೆ ಹಾಗೂ ಧಾರ್ಮಿಕ ದಸರಾ ಮಹೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ. ನಂತರ ಸಂಜೆ ೬ ಗಂಟೆಗೆ ೩ಡಿ ಪ್ರೊಜೆಕ್ಟರ್ ಷೋ ಹಾಗೂ ವಿ. ಹರಿಕೃಷ್ಣ ಮತ್ತು ತಂಡದವರಿAದ ಸಂಗೀತ ರಸಸಂಜೆ ಕಾರ್ಯಕ್ರಮ, ಹಸಿರು ಸಿಡಿ ಮದ್ದುಗಳಿಂದ ಬಾಣ-ಬಿರುಸು ಪ್ರದರ್ಶನಗಳು ಜರುಗಲಿವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ ಮಾತನಾಡಿ, ಈ ವರ್ಷದ ಉತ್ಸವದಲ್ಲಿ ಬೃಹತ್ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಇದರ ಜೊತೆಗೆ ಏರ್ಪಡಿಸಲಾಗುವ ಫಲ-ಪುಷ್ಪ ಪ್ರದರ್ಶನ, ತುಮಕೂರು ವಿಷ಼ನ್ ೨೦-೪೦, ಪ್ರತಿಷ್ಠಿತ ಹೆಚ್‌ಎಎಲ್ ವತಿಯಿಂದ ಹೆಲಿಕಾಪ್ಟರ್, ಇಸ್ರೋ, ವನ್ಯಜೀವಿ ಛಾಯಾಗ್ರಹಣ, ಪಾರಂಪರಿಕ ಕೃಷಿ ಸಾಧನ, ನವರಾತ್ರಿ ಗೊಂಬೆಗಳ ಪ್ರದರ್ಶನ, ಫ್ಲೆöÊ-ಓವರ್ ತುಮಕೂರು, ವಿಶೇಷ ಮಾನವ ರೋಬೋ ಹಾಗೂ ಡಾಗ್ ರೋಬೋ, ಇತರೆ ಇಲಾಖೆಗಳನ್ನೊಳಗೊಂಡ ವಸ್ತು ಪ್ರದರ್ಶನಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಲಿವೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ೧೧ ದಿನಗಳ ಕಾಲ ಜರುಗಲಿರುವ ನಾಡಹಬ್ಬ ದಸರಾ ಉತ್ಸವವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸುವ ನಿಟ್ಟಿನಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ೨೪*೭ ಔಟ್-ಪೋಸ್ಟ್ ಪೊಲೀಸ್ ಠಾಣೆ ತೆರೆಯಲಾಗುವುದು. ಹೆಚ್ಚಿನ ಜನ ಸೇರಲಿರುವ ಅಕ್ಟೋಬರ್ ೧೯, ೨೦, ೨೧ರಂದು ಪ್ರತ್ಯೇಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಶಾಂತಿ ಸುವ್ಯವಸ್ಥೆಯನ್ನು ಕದಡುವ ಘಟನೆಗಳು ನಡೆಯದಂತೆ ನಿಗಾವಹಿಸಲು ಮುಖ್ಯ ವೇದಿಕೆ ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಉತ್ಸವದ ಕೊನೆಯ ದಿನದಂದು ಜಂಬೂ ಸವಾರಿ ಮೆರವಣಿಗೆಯನ್ನು ಹೆಚ್ಚಿನ ಜನರು ವೀಕ್ಷಿಸಲು ಅನುವಾಗುವಂತೆ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗುವುದು. ವಾಹನ ದಟ್ಟಣೆಯನ್ನು ನಿಯಂತ್ರಿಸಲು ಜೂನಿಯರ್ ಕಾಲೇಜು ಮೈದಾನದ ಮುಂದಿನ ಬಿ.ಹೆಚ್. ರಸ್ತೆ ಹಾಗೂ ರಾಧಾಕೃಷ್ಣ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ನೀಡುವುದಿಲ್ಲ ಎಂದು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಮಾತನಾಡಿ, ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗುವ ಭವ್ಯ ಧಾರ್ಮಿಕ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಅಕ್ಟೋಬರ್ ೧೧ ರಿಂದ ೨೧ರವರೆಗೆ ಪ್ರತೀ ದಿನ ವಿವಿಧ ಅಲಂಕಾರವನ್ನು ಮಾಡಲಾಗುವುದು. ಪ್ರತಿ ದಿನ ವಿಶೇಷ ಪೂಜೆ, ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ಲಘು ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಉತ್ಸವದ ಅಂಗವಾಗಿ ಪ್ರತಿ ದಿನ ಸಂಜೆ ಚಂಡಿಕಾ ಪಾರಾಯಣ ಮಾಡಲಾಗುವುದು. ಭಕ್ತಾದಿಗಳ ಅನುಕೂಲಕ್ಕಾಗಿ ದೇವಿ ದರ್ಶನಕ್ಕೆ ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರದ ವ್ಯವಸ್ಥೆ ಮಾಡಲಾಗುವುದು ಎಂದು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

(Visited 1 times, 1 visits today)