ಕೊರಟಗೆರೆ: ಕನ್ನಡ ಶ್ರೀಮಂತ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡ ನಾಡಿನ ಏಕೀಕರಣಕ್ಕಾಗಿ ನಡೆದ ಹೋರಾಟದ ಮಹತ್ವವನ್ನು ಪ್ರತಿಯೊಬ್ಬರು ತಿಳಿಯಬೇಕಿದೆ ಎಂದು ತಹಸೀಲ್ದಾರ್ ಶರತ್ ಕುಮಾರ್ ತಿಳಿಸಿದರು
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ 71ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಮ್ಮರಾಜ್ಯ ಕಲೆ, ಸಾಹಿತ್ಯ, ಸಂಸ್ಕøತಿ, ನಾಡು ನುಡಿಗೆ ಹೆಸರುವಾಸಿಯಾದ ರಾಜ್ಯ. ಸಾಮ್ರಾಜ್ಯ ಕಟ್ಟಿದ ಮಹಾರಾಜರು ಹುಟ್ಟಿದಂತ ನಾಡು ನಮ್ಮದು, ಇಲ್ಲಿ ಕನ್ನಡ ಭಾμÉಯ ಶ್ರೀಮಂತ ಇತಿಹಾಸ ಹೊಂದಿದ್ದು, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡ ನಾಡಿನ ಏಕೀಕರಣಕ್ಕಾಗಿ ನಡೆದ ಹೋರಾಟದ ಮಹತ್ವವನ್ನು ಅರಿಯಬೇಕಿದ್ದು, ಕನ್ನಡ ಭಾμÉಯನ್ನು ಕೇವಲ ಸಂವಹನದ ಮಾಧ್ಯಮವಾಗಿ ನೋಡದೆ, ನಮ್ಮ ಬದುಕಿನ ಅಸ್ಮಿತೆಯಾಗಿ ಗೌರವಿಸಬೇಕು. ಮುಂದಿನ ಪೀಳಿಗೆಗೂ ಕನ್ನಡದ ಮಹತ್ವವನ್ನು ತಿಳಿಸುವ ಜವಾ ಬ್ದಾರಿ ಪ್ರತಿಯೊಬ್ಬರ ಮೇಲಿದೆಎಂದು ತಿಳಿಸಿದರು.
ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನವನ್ನ ಏರ್ಪಡಿಲಾಗಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಹಾಡುಗಳಿಗೆ ಅಕರ್ಷಕ ನೃತ್ಯ ಪ್ರದರ್ಶಿಸಿ ನೆರೆದಿದ್ದವರ ಗಮನ ಸೆಳೆದರು. ಮಕ್ಕಳ ಪ್ರತಿಭೆಯನ್ನು ಕಂಡು ಅಧಿಕಾರಿಗಳು ಗಣ್ಯರು ಹಾಗೂ ಸಾರ್ವಜನಿಕರು ಸಂಭ್ರಮದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 20 ಜನಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು.ಇದರ ಜೊತೆಗೆ ನೃತ್ಯದಲ್ಲಿ ಪ್ರಥಮ ಬಹುಮಾನ ಸರ್ಕಾರಿ ಬಾಲಕಿಯರ ಶಾಲೆಯ ಲಿಖಿತ, ಚೈತ್ರ, ಲಹರಿ ಹಾಗೂ ಗೌತಮಿಗೆ ಪ್ರಥಮ ಸ್ಥಾನ, ದ್ವಿತೀಯ ಬಹುಮಾನ ತೆರೆಸಾ ಶಾಲೆಯ ವಿದ್ಯಾರ್ಥಿಗಳು, ತೃತೀಯ ಸ್ಥಾನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಉಳಿದ ಶಾಲೆಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನ. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಹಾಡುಗಳಿಗೆ ಅತ್ಯಾಕರ್ಷಕ ನೃತ್ಯ ಪ್ರದರ್ಶಿಸಿ ನೆರೆದಿದ್ದವರ ಗಮನ ಸೆಳೆದರು. ಮಕ್ಕಳ ಪ್ರತಿಭೆಯನ್ನು ಕಂಡು ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಂಭ್ರಮದಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನೃತ್ಯದಲ್ಲಿ ಮಿಂಚಿದ ಪುಟ್ಟ ಪ್ರತಿಭೆಗಳು; ಸರ್ಕಾರಿ ಬಾಲಕಿಯರ ಶಾಲೆಗೆ ಪ್ರಥಮ ಬಹುಮಾನ!: ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿಎಲ್ಲರ ಗಮನ ಸೆಳೆದ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯ ವಿದ್ಯಾರ್ಥಿನಿಯರಾದ ಲಿಖಿತ, ಚೈತ್ರ, ಲಹರಿ ಹಾಗೂ ಗೌತಮಿ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು.
ಹಿರಿಯರು ಲಯಬದ್ದ ಕೋಲಾಟ ಪ್ರೇಕ್ಷರರ ಮನಸೋತರು ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಯಮುನಾ ಹಾಗೂ ಕಸಾಪ ಅಧ್ಯಕ್ಷ ಈರಣ್ಣ ಈ ಕೋಲಾಟಕ್ಕೆ ಹೆಜ್ಜೆ ಹಾಕಿ ಎಲ್ಲರನ್ನ ಸಂಭ್ರಮಿಸುವಂತೆ ಮಾಡಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಕನ್ನಡಾಭಿಮಾನ ಮೆರೆದ ಆಟೋಚಾಲಕರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಮತ್ತೊಂದೆಡೆ, ಪಟ್ಟಣದ ಆಟೋ ಚಾಲಕರು ತಮ್ಮ ವಾಹನಗಳಿಗೆ ಕೆಂಪು-ಹಳದಿ ಕನ್ನಡ ಬಾವುಟಗಳನ್ನು ಕಟ್ಟಿ ರಾಜ್ಯೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಅಪೂರ್ವ ಅನಂತರಾಮು, ಎಡಿಎ ಗುರುಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಉಮೇಶ್, ಪಿಎಸ್ಐ ತೀರ್ಥೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಮುನಾ, ಬಿಇಒ ಫೈರೋಜ್ ಬೇಗಂ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ನಿವೃತ್ತ ಸೈನಿಕ ಕೃಷ್ಣ ನಾಯಕ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಅಧ್ಯಕ್ಷ ಓಬಳರಾಜು, ಕಸಾಪ ಅಧ್ಯಕ್ಷ ಈರಣ್ಣ ಮುಖಂಡರಾದ ಡಾಡಿ ವೆಂಕಟೇಶ್, ಪುಟ್ಟಣ್ಣ, ಗಂಗರಾಜು, ಸೇರಿದಂತೆ ಇತರರು ಇದ್ದರು.
(Visited 1 times, 1 visits today)



