ಕೊರಟಗೆರೆ: ಕೊರಟಗೆರೆ ತಾಲೂಕು ಆಡಳಿತದಿಂದ ನ.1 ರಂದು ನಡೆಯುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ 20 ಮಂದಿಯನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸಿ ಅನಂತರಾಮುರವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 20 ಗಣ್ಯರನ್ನು ಆಯ್ಕೆ ಮಾಡಲಾಗಿದೆ.
ಆ.30 ರಂದು ತಾಪಂ ಸಭಾಂಗಣದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ತಾಲೂಕು ಆಡಳಿತ ವತಿಯಿಂದ ನ.1 ರಂದು ಪಟ್ಟಣದ ಕ್ರೀಡಾಂಗಣದಲ್ಲಿ ನಡೆಯುವ 71 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ಅಯ್ಕೆ ಸಮಿತಿ ಸದಸ್ಯರ ಸಭೆಯಲ್ಲಿ ಚರ್ಚಿಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 20 ಮಂದಿ ಗಣ್ಯರನ್ನು ಆಯ್ಕೆ ಮಾಡಲಾಗಿದೆ.
ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ: ಸಮಗ್ರ ಕೃಷಿ ಕ್ಷೇತ್ರದಲ್ಲಿ ಸೋಮಶೇಖರಯ್ಯ ಜೋನಿಗರಹಳ್ಳಿ, ರಂಗಭೂಮಿ ಕ್ಷೇತ್ರದಲ್ಲಿ ಲಕ್ಷ್ಮೀಪತಿ ಹನುಮಂತಪುರ, ಹೋಟೆಲ್ ನಾಗರಾಜು ಕೊರಟಗೆರೆ, ವೈ.ಆರ್.ನರಸಪ್ಪ ಯಾದಗೆರೆ, ಜಿ.ಎಂ.ವೆಂಕಟೇಶ್ ಎಂ.ಗೊಲ್ಲಹಳ್ಳಿ, ಸಿದ್ದಗಂಗಪ್ಪ ಗಡ್ದೋಬನಹಳ್ಳಿ, ಶಿವಣ್ಣ ಹೊಸಕೋಟೆ, ಗಂಗರಾಜು ಬುಕ್ಕಾಪಟ್ಟಣ, ಎ.ಆರ್.ಗಿರಿರಾಜು ಚಿಕ್ಕಪಾಳ್ಯ, ಆಡಳಿತ ಕ್ಷೇತ್ರದಲ್ಲಿ ಕೃಷ್ಣನಾಯ್ಕ ನಿವೃತ್ತ ಸೈನಿಕ ಪಕ್ಕೀರಪ್ಪನಪಾಳ್ಯ, ಕನ್ನಡ ಪರ ಹೋರಾಟಗಾರರ ಕ್ಷೇತ್ರದಲ್ಲಿ ಶ್ರೀನಿವಾಸ್ ಕರ್ನಾಟಕ ರಕ್ಷಣಾ ವೇದಿಕೆ ಮಧ್ಯವೆಂಕಟಾಪುರ, ವರದರಾಜು ಜಯ ಕರ್ನಾಟಕ ಸಂಘಟನೆ, ಏಂ.ಜಿ.ವೀರಭದ್ರಯ್ಯ ಕರವೇ ಗೌಜಗಲ್ಲು, ಸಾಹಿತ್ಯ. ಸಂಶೋಧನೆ ಕ್ಷೇತ್ರದಲ್ಲಿ ಎಲ್.ಎನ್.ರಾಜರಾವ್ ಕೊರಟಗೆರೆ, ಪತ್ರಿಕಾ ರಂಗ ಕ್ಷೇತ್ರದಲ್ಲಿ ಪಿ.ಎಂ.ಮಂಜುನಾಥ್, ಜಾನಪದ ಕ್ಷೇತ್ರದಲ್ಲಿ ದೊಡ್ಡಕ್ಕ ಬುಕ್ಕಪಟ್ಟಣ, ಸಮಾಜ ಸೇವೆ ಕ್ಷೇತ್ರದಲ್ಲಿ ವಿ.ಕೆ.ನರಸಿಂಹಮೂರ್ತಿ ವಮಚೇನಹಳ್ಳಿ, ಶಿಕ್ಷಣ ಮತ್ತು ಸೇವಾ ಕ್ಷೇತ್ರದಲ್ಲಿ ಕೆ.ಎಸ್.ಜಗದೀಶಯ್ಯ ನಿವೃತ್ತ ಪ್ರಾಂಶುಪಾಲರು, ಕೋಳಾಲ, ಕ್ರೀಡೆ ಮತ್ತು ಯೋಗ ಕ್ಷೇತ್ರದಲ್ಲಿ ಜಿ.ಪಿ.ಮಂಜುನಾಥ್ ಗುಂಡಿನಪಾಳ್ಯ ಪೌರ ಕಾರ್ಮಿಕ ಕ್ಷೇತ್ರದಲ್ಲಿ ತುಂಬಾಡಿ ಗ್ರಾ.ಪಂ. ಶ್ರೀ ಮಂಜುನಾಥ ಮಹಿಳಾ ಸ್ವಸಹಾಯ ಸಂಘ.ರವರನ್ನು ಆಯ್ಕೆ ಮಾಡಲಾಯಿತು.
ಆಯ್ಕೆ ಸಮಿತಿ ಸಭೆಯಲ್ಲಿ ತಾ.ಪಂ.ಕಾರ್ಯನಿರ್ವಹಣಾದಿಕಾರಿ ಅಪೂರ್ವ ಸಿ.ಅನಂತರಾಮು, ಮಧುಸೂದನ್, ಪವಿತ್ರಾ, ಕೃಷಿ ಸಹಾಯಕ ನಿರ್ದೇಶಕ ಕಲ್ಲೇಶ್, ಸದಸ್ಯರುಗಳಾದ ಕಸಾಪ ಅಧ್ಯಕ್ಷ ಈರಣ್ಣ, ರಂಗಭೂಮಿ ಸಂಘದ ಅಧ್ಯಕ್ಷ ಪುಟ್ಟಣ್ಣ, ಪ.ಪಂ.ಮಾಜಿ ಸದಸ್ಯ ಕೆ.ಆರ್.ಓಬಳರಾಜು, ದಾಡಿ ವೆಂಕಟೇಶ್ ಪತ್ರಕರ್ತ ಎನ್.ಪದ್ಮನಾಭ್, ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಹೆಚ್.ಎನ್.ನಾಗರಾಜು, ಜಯ ಕರ್ನಾಟಕ ಸಂಘದ ಗೋಪಿ ಹಾಜರಿದ್ದರು.
(Visited 1 times, 1 visits today)



