ತುಮಕೂರು: ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ಅಂಗ ಸಂಸ್ಥೆಯ ಶ್ರೀ ಸಿದ್ಧಾರ್ಥ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ ಎಸ್ಎಸ್ಐಟಿ ಕ್ಯಾಂಪಸ್ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
“ಸಿರಿಪರ್ವ” ಕಾರ್ಯಕ್ರಮವು ಕಲಾ ತಂಡದೊಂದಿಗೆ ಅದ್ದೂರಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮವನ್ನು ಮೈಸೂರಿನ ಖ್ಯಾತ ವಾಗ್ಮಿಗಳು ಮತ್ತು ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಂ.ಕೃಷ್ಣೇಗೌಡ ದೀಪ ಬೆಳಗಿಸುವ ಮೂಲಕ “ಸಿರಿಪರ್ವ” ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಭಾμÉಯನ್ನು ಕೇವಲ ಮಾತನಾಡೋದಲ್ಲ ಅದನ್ನ ಆಸ್ವಾದಿಸಬೇಕು. ಶ್ರೀ ಸಿದ್ಧಾರ್ಥ ಕಾಲೇಜಿಗೆ ಬಂದು ನನಗೆ ತುಂಬಾ ಸಂತೋಷವಾಗಿದೆ. ತುಂಬಾ ದೂರದೃಷ್ಟಿ ಇಟ್ಟುಕೊಂಡು ಕಾಲೇಜನ್ನು ನಿರ್ಮಾಣ ಮಾಡಿರುವ ಶಿಕ್ಷಣ ಭೀಷ್ಮ ದಿವಂಗತ ಡಾ. ಎಚ್ ಎಂ ಗಂಗಾಧರಯ್ಯ ಅವರಿಗೆ ನಾನು ಭಕ್ತಿಪೂರ್ವಕವಾಗಿ ನಮಿಸುತ್ತೇನೆ. ಹೇಗೆ ಬದುಕಬೇಕು ಅಂದುಕೊಂಡಿದ್ದಿರೋ ಹಾಗೆ ಬದುಕಿ. ನಾವು ಅಂದುಕೊಂಡಂತೆ ಬದುಕಿದರೆ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ನಮ್ಮ ಕನ್ನಡ ನಾಡು ನಿರಂತರವಾಗಿ ಉದಯವಾಗಬೇಕು, ಆದರಿಂದಲೇ ನಾವು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತೇವೆ.
ಯುವಕರು ದೇಶವನ್ನು ಆಳುವ ಕನಸ್ಸನ್ನ ಹೊಂದಿದ್ದಾರೆ. ಹೊಸ ಹೊಸ ಚಿಂತನೆಗಳ ಮೂಲಕ ಹೊಸದಾಗಿ ತಮ್ಮ ಯೋಜನೆಗಳನ್ನು ಸೃಷ್ಟಿಸಬೇಕು. “ಬರೆದಂತೆ ಓದುವುದು ಮತ್ತು ಓದಿದಂತೆ ಬರೆಯುವ ಭಾμÉ ನಮ್ಮ ಕನ್ನಡ. ಕನ್ನಡ ಅತ್ಯಂತ ಶ್ರೀಮಂತ ಭಾμÉ ಅದನ್ನ ಅರಿತುಕೊಳ್ಳಲು ನಾವು ಸಿದ್ಧರಿಲ್ಲ ಅದರ ಬದಲು ಬೇರೆ ಬೇರೆ ಭಾμÉಗಳಿಗೆ ಮಾರು ಹೋಗ್ತಾ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ನಾಡು ನುಡಿ ಭಾμÉಯನ್ನು ನಾವು ಉಳಿಸಿ ಬೆಳೆಸಬೇಕು, ಯುವಕರು ನಮ್ಮ ಭಾμÉ ಮತ್ತು ನಾಡನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.
ಸಾಹೇ ವಿವಿ ಕುಲಪತಿಗಳಾದ ಡಾ.ಕೆ.ಬಿ. ಲಿಂಗೇಗೌಡ ಅವರು ಮಾತನಾಡಿ ವಿದ್ಯಾರ್ಥಿಗಳು ಕಲೆಗಳಲ್ಲಿ ತೋರುವ ಪ್ರೋತ್ಸಾಹ ನೋಡಿ ತುಂಬಾ ಸಂತೋಷವಾಯಿತು. ವಿದ್ಯಾರ್ಥಿಗಳು ನಿಮ್ಮ ಆಸಕ್ತಿಯನ್ನು ಓದು ಮತ್ತು ಸಂಶೋಧನೆಯನ್ನು ತೊಡಗಿಸಿಕೊಂಡು ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹೇ ವಿವಿಯ ಕುಲಸಚಿವರಾದ ಡಾ. ಅಶೋಕ್ ಮೆಹ್ತಾ, ಸಾಹೇ ವಿಶ್ವ ವಿದ್ಯಾಲಯದ ಪರೀಕ್ಷಾಂಗ ನಿಯಂತ್ರಕರಾದ ಡಾ ಕೆ ಸುನೀ¯, ಡೀನ್ (ಶೈಕ್ಷಣಿಕ) ಡಾ.ರೇಣುಕಾಲತಾ ಎಸ್, ಡೀನ್ (ವಿದ್ಯಾರ್ಥಿ ಕ್ಷೇಮಾಭಿವೃದ್ಧಿ) ಡಾ.ದಿವ್ಯಪ್ರಭಾ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಂ.ನಡಕಟ್ಟಿ, ನಿವೃತ್ತ ಪ್ರಾಂಶುಪಾಲರಾದ ಡಾ.ವೀರಯ್ಯ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಸಹನಾ ಟಿ.ಎಸ್ ಮತ್ತು ಸಹ ಸಂಚಾಲಕರಾಗಿ ಸಹ ಪ್ರಾಧ್ಯಾಪಕರಾದ ಡಾ.ಶಿವರಾಜು ಜಿ.ಡಿ., ಎಸ್ಎಸ್ಐಟಿ ಕಾಲೇಜಿನ ಲೆಕ್ಕಧಿಕಾರಿ ಸತೀಶ್ ಚಂದ್ರಬಾಬು, ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಮೂಹಿಕ ನೃತ್ಯ, ಏಕವ್ಯಕ್ತಿ ಗಾಯನ, ಏಕಪಾತ್ರಾಭಿನಯ, ರಂಗೋಲಿ, ಬೀದಿ ನಾಟಕ, ಕವನ ವಾಚನ, ಮುಖ ಚಿತ್ರಕಲೆ, ಗುಂಪು ಗಾಯನ, ಪ್ರಬಂಧ ಚರ್ಚಾ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
(Visited 1 times, 1 visits today)



