ಹುಳಿಯಾರು: ಚಿಕ್ಕನಾಯಕನಹಳ್ಳಿಯ ಸಾಹಿತ್ಯಿಕ ಕೊಡುಗೆ: ಚಿಕ್ಕನಾಯಕನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಂಪರೆಗೆ ತನ್ನದೇ ಆದ ಉನ್ನತವಾದ ಕೊಡುಗೆಯನ್ನು ನೀಡಿದೆ. ಕನ್ನಡದ ಮೇರು ವಿದ್ವಾಂಸಕರಾದ ತೀ.ನಂ.ಶ್ರೀಕAಠಯ್ಯ, ಸಾ.ಶಿ.ಮರುಳಯ್ಯ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಡಾ.ನಟರಾಜ್ ಹುಳಿಯಾರು, ಕವಿ ವೀ.ಚಿಕ್ಕವೀರಯ್ಯ, ಕತೆಗಾರ ಎಸ್.ಗಂಗಾಧರಯ್ಯ, ಷಡಾಕ್ಷರಿ, ಡಾ.ಕೆ.ಬಿ.ಶಿವತಾರಕ್ ಹೀಗೆ ಅನೇಕರ ಕೊಡುಗೆ ಇದೆ ಎಂದು ಉದಯವಾಣಿ ಉಪಸಂಪಾದಕ ಯೋಗೀಶ್ ತೀರ್ಥಪುರ ತಿಳಿಸಿದರು.
ಹುಳಿಯಾರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೧೨ ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯುವ ಕವಿ ಗೋಷ್ಠಿಯಲ್ಲಿ ಅವರು ಮಾತನಾಡಿ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಲಾಗಿರುವ ಈ ಸಮ್ಮೇಳನವು ವಿದ್ಯಾರ್ಥಿಗಳಲ್ಲಿ ಅಡಗಿರುವ ನಾಟಕ, ಯೋಗ, ಕಾವ್ಯ ವಾಚನ ಮತ್ತು ಸಾಹಿತ್ಯಾಸಕ್ತಿಯಂತಹ ವಿವಿಧ ಪ್ರತಿಭೆಗಳನ್ನು ಹೊರತರಲು ಒಂದು ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಯುವ ಕವಿಗಳು ತಮ್ಮ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಪರಿಸರ, ರೈತರ ಜನಜೀವನ, ಬದುಕಿನ ರೀತಿ, ಶಿಕ್ಷಣ ಹಾಗೂ ಸಂಸ್ಕöÈತಿಯ ನೆಲೆಯನ್ನು ಅತ್ಯುತ್ತಮವಾಗಿ ಕವನಗಳಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಪ್ರಶಂಸಿಸಿದರಲ್ಲದೆ ಕವನ ಎಂದರೆ ಕೇವಲ ಪದಗಳ ಜೋಡಣೆಯಲ್ಲ. ಕಾವ್ಯ ಮೀಮಾಂಸೆಯನ್ನು ಅಧ್ಯಯನ ಮಾಡಿದವರಿಗೆ ಮಾತ್ರ ಅದರ ಸ್ವರೂಪ ಹಾಗೂ ವ್ಯಾಖ್ಯಾನಗಳ ಆಳ ತಿಳಿಯುತ್ತದೆ ಎಂದರು.
ಖ್ಯಾತ ವಿಮರ್ಶಕ ಶಶಿಧರ ಶರ್ಮಾ ಅವರು, `ಯುವ ಸಮುದಾಯ ಮತ್ತು ಸಾಮಾಜಿಕ ಬದ್ಧತೆ’ಯ ಕುರಿತು ಮಾತನಾಡಿ ಭಗವಂತ ನಮಗೆ ಕಣ್ಣು, ಮೂಗು, ಬಾಯಿ ಒಂದನ್ನೇ ನೀಡಿದ್ದರೂ ಕಿವಿಗಳನ್ನು ಮಾತ್ರ ಎರಡು ಕೊಟ್ಟಿದ್ದಾನೆ. ಇದರ ಉದ್ದೇಶ ನಾವು ಹೆಚ್ಚು ಕೇಳಿಸಿಕೊಳ್ಳಬೇಕು ಮತ್ತು ಆಳವಾಗಿ ಗ್ರಹಿಸಬೇಕು ಎಂಬುದಾಗಿದೆ ಎಂದು ತಿಳಿಸಿದರು. ಇಂದಿನ ಯುವ ಸಮುದಾಯದಲ್ಲಿ ಕೇಳಿಸಿಕೊಳ್ಳುವ ಸಂಯಮ ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳು ಮೊದಲು ಹಿರಿಯರ ಮಾತುಗಳನ್ನು ತಾಳ್ಮೆಯಿಂದ ಆಲಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಯುವ ಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ದಾಸರಾಗುತ್ತಿರುವುದನ್ನು ತೀವ್ರವಾಗಿ ಕಳವಳ ವ್ಯಕ್ತಪಡಿಸಿದರು. ಕೆಲ ರಾಜ್ಯಗಳ ಬಜೆಟ್‌ಗಿಂತಲೂ ಅಮೆರಿಕದ ಸಾಮಾಜಿಕ ಜಾಲತಾಣಗಳ ಒಡೆಯರ ಸಂಪತ್ತು ಹೆಚ್ಚಿದೆ ಎಂದು ತಿಳಿಸುತ್ತಾ, ಯುವಕರು ತಮ್ಮ ಅಮೂಲ್ಯ ಸಮಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕಳೆದುಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು.
ಸಿನಿಮಾ ನಿರ್ದೇಶಕ ವಿನಯ್‌ಕುಮಾರ್ ಅವರು ಯುವ ಸಮುದಾಯ ಸಾಮಾಜಿಕ ಜಾಲತಾಣದ ಬಗ್ಗೆ ಮಾತನಾಡಿ ಸಾಹಿತ್ಯ, ಅನುಭವ, ನೋಡುವುದು ಮತ್ತು ಕೇಳುವುದರಿಂದ ಕಥೆಗಳು ಹುಟ್ಟಿಕೊಳ್ಳುತ್ತವೆ. “ನಾವು ಕಥೆ ಬರೆಯುವುದನ್ನು ಕಲಿಬೇಕು, ಮಾಧ್ಯಮದಲ್ಲಿ ಬದುಕಬೇಕು ಅಂದ್ರೆ ಮೊದಲು ಸಾಹಿತ್ಯವನ್ನು ಅಳವಡಿಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಉದಾಹರಣೆ ನೀಡುತ್ತಾ, ಬರೆಯಬೇಕು ಎಂಬ ಆಸೆ ಇದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಘಟನೆಗಳನ್ನು ಸೂಕ್ಷ÷್ಮವಾಗಿ ಗಮನಿಸಿ ಬರೆಯುವ ಹವ್ಯಾಸವಿದ್ದರೆ ಮಾತ್ರ ಒಳ್ಳೆಯ ಕಥೆಗಾರರಾಗಲು ಸಾಧ್ಯ ಎಂದರು.
ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಎಷ್ಟೇ ಮುಂದುವರಿದಿದ್ದರೂ, ಯಾರ ಮನಸ್ಸಿಗೂ ನೋವುಂಟು ಮಾಡಬಾರದು ಎಂಬುದು ನಮ್ಮೆಲ್ಲರ ಕಾಮನ್ ಸೆನ್ಸ್ ಆಗಿರಬೇಕು. ಯಾವುದೇ ಸಮುದಾಯಕ್ಕೆ, ವ್ಯಕ್ತಿಗೆ ಅಥವಾ ವರ್ಗಕ್ಕೆ ನೋವುಂಟು ಮಾಡುವಂತಹ ವಿಚಾರಗಳನ್ನು ಹಾಕಬಾರದು ಎಂದು ಎಚ್ಚರಿಸಿದ ಅವರು, ಕಾನೂನಿನ ಚೌಕಟ್ಟಿನಲ್ಲಿ ನಿಯಮಗಳು ಕಟ್ಟುನಿಟ್ಟಾಗಿವೆ. ಪ್ರಸ್ತುತ ಡಿಜಿಟಲ್ ಕಾಲದಲ್ಲಿ ಪ್ರತಿಯೊಬ್ಬರೂ ಕಂಟೆAಟ್ ಕ್ರಿಯೇಟರ್ ಆಗಲು ಹೊರಟಿದ್ದಾರೆ. ಆದರೆ ಕಂಟೆAಟ್ ರಚಿಸುವಾಗ ಅದರ ಸಾಮಾಜಿಕ ಪರಿಣಾಮ ಮತ್ತು ಜವಾಬ್ದಾರಿಯನ್ನು ಅರಿಯುವುದು ಅತ್ಯಂತ ಮುಖ್ಯ ಎಂದು ಕಿವಿ ಮಾತು ಹೇಳಿದರು.
ಕನ್ನಡ ಉಪನ್ಯಾಸಕ ಸೋಮಶೇಖರ್ ಕದಿರೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ತಾ.ಕಸಾಪ ಸಂಚಾಲಕ ಎಂ.ದಯಾನAದ್, ಮತ್ತಿತರರು ಉಪಸ್ಥಿತರಿದ್ದರು. ಪದವಿ, ಪದವಿ ಪೂರ್ವ ಕಾಲೇಜಿನ ಇಪ್ಪತ್ತಕ್ಕೂ ಹೆಚ್ಚು ಯುವ ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು.

(Visited 1 times, 1 visits today)