ತುಮಕೂರು: ಜ್ಞಾನವೆಂಬುದು ಕೇವಲ ಅಂಕಗಳಿಗೆ ಸೀಮಿತವಾಗಬಾರದು, ಅದು ಬದುಕಿನ ದೃಷ್ಟಿಕೋನವನ್ನು ರೂಪಿಸುವ ಶಕ್ತಿಯಾಗಬೇಕು. ಪುಸ್ತಕಗಳು ಮನುಷ್ಯನ ಆಲೋಚನೆಗೆ ಹೊಸ ಆಯಾಮ ನೀಡಿದರೆ, ಗ್ರಂಥಾಲಯಗಳು ಆ ಆಲೋಚನೆಗಳಿಗೆ ರೆಕ್ಕೆ ನೀಡುವ ಜ್ಞಾನದ ದೇಗುಲಗಳಾಗಿವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಹೆಚ್. ಎಸ್. ಮೋಹನ ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟಿçÃಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ರಾಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗ, ವಿಶ್ವವಿದ್ಯಾಲಯ ಗ್ರಂಥಾಲಯದ ಎಸ್.ಸಿ.ಎಸ್.ಪಿ. / ಟಿ.ಎಸ್.ಪಿ. ಕೋಶ ಹಾಗೂ ವಿಶ್ವವಿದ್ಯಾಲಯ ಕಲಾ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಯುಕ್ತಶ್ರಯದಲ್ಲಿ ನ. ೧೮ ಬುಧವಾರದಂದು ಆಯೋಜಿಸಿದ್ದ ಗ್ರಂಥಾಲಯ ಜಾಗೃತಿ ನಡಿಗೆ ಜಾಥಗೆ ಚಾಲನೆ ನೀಡಿದರು.
ಇಂದಿನ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ವೇಗದ ಜಗತ್ತಿನಲ್ಲಿ ಓದುವ ಹವ್ಯಾಸ ನಿಧಾನವಾಗಿ ಮರೆಯಾಗುತ್ತಿರುವುದು ಆತಂಕದ ಸಂಗತಿ. ಬೆರಳ ತುದಿಯಲ್ಲಿ ಸಾವಿರಾರು ಮಾಹಿತಿಗಳು ಲಭ್ಯವಿದ್ದರೂ, ಅವುಗಳಲ್ಲಿ ಯಾವುದು ಸತ್ಯ, ಯಾವುದು ವಿಶ್ವಾಸಾರ್ಹ ಎಂಬುದನ್ನು ಗುರುತಿಸುವ ವಿವೇಚನೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳು ಜ್ಞಾನಾರ್ಜನೆಯ ಜೊತೆಗೆ ವೈಚಾರಿಕತೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಂಶೋಧನಾ ಮನೋಭಾವ ಬೆಳೆಸುವ ಪ್ರಮುಖ ಕೇಂದ್ರಗಳಾಗಿವೆ ಎಂದರು.
ತುಮಕೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ.ರೂಪೇಶ್ ಕುಮಾರ್ ಎ., ತುಮಕೂರು ಕಲಾ ನಿಕಾಯ ಡೀನರು ಪ್ರೊ. ಪರಶುರಾಮ ಕೆ. ಜಿ., ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದಾಕ್ಷಾಯಿಣಿ ಜಿ., ರಾಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಪ್ರೊ.ಜಿ. ಬಸವರಾಜ, ಗ್ರಂಥಪಾಲಕರಾದ ಡಾ. ಕುಮಾರ ಬಿ., ಡಾ. ಸುಮಾದೇವಿ ಎಸ್., ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಸುದೀಪ್ ಕುಮಾರ್ ಆರ್., ಹಿರಿಯ ಪ್ರಾಧ್ಯಾಪಕರಾದ ಪ್ರೊ. ಪಿ. ಪರಮಶಿವಯ್ಯ, ಡಾ. ಕೇಶವ, ಸಹ ಪ್ರಾಧ್ಯಾಪಕರಾದ ಡಾ. ಹೇಮಾವತಿ ಬಿ. ಎನ್., ಇದ್ದರು.
(Visited 1 times, 1 visits today)



