ತುಮಕೂರು: ವಿಶ್ವದಲ್ಲೇ ಶ್ರೇಷ್ಠವಾದ ಭಾರತ ಸಂವಿಧಾನದ ಮೂಲಕ ಬಲಿಷ್ಠ ರಾಷ್ಟç ನಿರ್ಮಾಣ ಮಾಡಬೇಕಾಗಿದೆ. ಡಾ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಮಹತ್ವವನ್ನು ಯುವಜನರು ತಿಳಿದು ಅನುಸರಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ನಿರ್ಮಾಣದ ಕನಸನ್ನು ಸಾಕಾರಗೊಳಿಸಬೇಕು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮನವಿ ಮಾಡಿದರು.
ಜಿಲ್ಲಾ ಬಿಜೆಪಿಯಿಂದ ಶನಿವಾರ ನಗರದ ಶ್ರೀದೇವಿ ಕಾಲೇಜು ಸಭಾಂಗಣದಲ್ಲಿ ನಡೆದ ಸಂವಿಧಾನ ಗೌರವ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ, ಸಂವಿಧಾನದ ಮಹತ್ವ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ಹಾಗೂ ಯುವಕರ ಜವಾಬ್ದಾರಿ ಬಗ್ಗೆ ಮಾತನಾಡಿ, ಧ್ವನಿ ಇಲ್ಲದ, ಆಸರೆ ಇಲ್ಲದ ಎಲ್ಲ ವರ್ಗದವರಿಗೂ ಕೂಡ ಸಮಾನತೆಯನ್ನು ನೀಡಬೇಕು ಎಂದು ತೀರ್ಮಾನವನ್ನು ಮಾಡಿ, ರಾಷ್ಟ್ರಕ್ಕೆ ತನ್ನದೇ ಆದಂತ ಕೊಡುಗೆಯನ್ನು ಕೊಡುವುದರ ಮುಖೇನ ವಿಶ್ವದ ಭೂಪಟದಲ್ಲಿ ಭಾರತೀಯರ ಸಾರ್ವಭೌಮತೆಗೆ ಅಡಿಗಲ್ಲನ್ನು ಹಾಕಿದಂತವರು ಅಂಬೇಡ್ಕರ್ ಅವರು ಎಂದು ಹೇಳಿದರು.
ಸಂವಿಧಾನದ ಅಡಿಯಲ್ಲಿ ಈ ದೇಶದ ವ್ಯವಸ್ಥೆಯನ್ನು ಬಲಾಢ್ಯವಾಗಿ ಕಟ್ಟುವಂತಹ ಕೆಲಸ ಆಗಬೇಕಾಗಿದೆ. ಭಾರತದಲ್ಲಿ ನೂರಾರು ಜಾತಿಗಳು, ಹತ್ತಾರು ಭಾಷೆಗಳು. ಎಲ್ಲರಿಗಿಂತ ಹೆಚ್ಚಾಗಿ ಬಡತನ ಇರುವ ಪರಿಸ್ಥಿತಿಯಲ್ಲಿ ಎಲ್ಲವುದಕ್ಕೂ ಪರಿಹಾರ ನಮ್ಮ ಸಂವಿಧಾನದಲ್ಲಿದೆ. ಈ ಸಂವಿಧಾನ ನಮಗೆ ಭಗವದ್ಗೀತೆಗಿಂತ ಹೆಚ್ಚಾಗಿದ್ದು ದೇಶದ ವ್ಯವಸ್ಥೆಯನ್ನು ಬಲಾಢÀ್ಯ ಮಾಡಲು ಸಹಾಯವಾಗಿದೆ. ಇಂತಹ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನು ಆದರ್ಶಗಳನ್ನು ಎತ್ತಿ ಹಿಡಿಯುವಂತಹ ಅವರಿಗೆ ಸಂಬAಧಿಸಿದ ಪಂಚತೀರ್ಥ ಸ್ಥಳಗಳನ್ನು ಮಾಡಿದ ನಮ್ಮ ಪ್ರಧಾನಿ ಮೋದಿಯವರು ಅಭಿವೃದ್ಧಿಪಡಿಸಿ ಅಂಬೇಡ್ಕರ್ ಕೊಡುಗೆ ಗೌರವಿಸುವ, ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನ ಸಂಸತ್ತಿನಲ್ಲಿ ಅಂಗೀಕಾರವಾದ ದಿನ ನಮ್ಮೆಲ್ಲರಿಗೂ ಒಂದು ಐತಿಹಾಸಿಕ ದಿನ. ಇಷ್ಟು ವರ್ಷ ನಾವು ಸಂವಿಧಾನ ದಿನ ಆಚರಿಸುತ್ತಿರಲಿಲ್ಲ. ೨೦೧೫ರಿಂದ ಈ ದಿನವನ್ನು ಸಂವಿಧಾನ ದಿನ ಅಂತ ಆಚರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿ ಆಚರಣೆಗೆ ತಂದಿದ್ದಾರೆ ಎಂದು ಹೇಳಿದರು.
ಇನ್ನೂ ಎಷ್ಟು ದಿನ ನಾವು ಭಾರತವನ್ನು ಡೆವಲಪಿಂಗ್ ಕಂಟ್ರಿ ಎಂದು ಕರೆಯಬೇಕು? ಇದಕ್ಕೆ ಒಂದು ಉತ್ತರವಾಗಿ ನರೇಂದ್ರ ಮೋದಿ ಅವರು ನಮಗೆ ಸಂಕಲ್ಪ ಕೊಟ್ಟಿದ್ದಾರೆ. ೨೦೪೭ಕ್ಕೆ ನಮ್ಮ ಭಾರತ ವಿಕಸಿತ ಭಾರತ ಆಗಬೇಕು, ಅದಕ್ಕಾಗಿ ನಾವು ಸಂಪೂರ್ಣವಾಗಿ ದುಡಿಯಬೇಕು ಎಂದು ಮಾರ್ಗದರ್ಶನ ನೀಡುತ್ತಿದ್ದಾರೆ. ಆ ದಾರಿಯಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು
ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ನವರು ಸುಳ್ಳು ಹೇಳುತ್ತಿದ್ದಾರೆ. ಸಂವಿಧಾನದ ಜೊತೆ ನಿಂತಿರುವುದು ಬಿಜೆಪಿಯೇ ಎಂದ ಅಂಬಿಕಾ ಹುಲಿನಾಯ್ಕರ್, ಇಟಲಿಯ ಪ್ರತಿನಿಧಿ ಭಾರತದ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾಗ ಅದೇ ವೇದಿಕೆಯಲ್ಲಿದ್ದ ರಾಹುಲ್ ಗಾಂಧಿ ನಗುತ್ತಿದ್ದರು ಎಂದರೆ ಅವರ ಮನಸ್ಥಿತಿ ಏನೇಂದು ದೇಶದ ಜನರಿಗೆ ತಿಳಿದಿದೆ ಎಂದು ಹೇಳಿದರು.
ಹಿರಿಯ ವಕೀಲರು, ಬಿಜೆಪಿ ಕಾನೂನು ಪ್ರಕೋಷ್ಟ ಮುಖಂಡರಾದ ಡಿ.ಸಿ. ಹಿಮಾನಂದ್ ಮಾತನಾಡಿ, ನಮ್ಮ ಶ್ರೇಷ್ಠ ಸಂವಿಧಾನವನ್ನು ಎಲ್ಲರೂ ಓದಿ ಅದರ ಮೌಲ್ಯ ತಿಳಿದು ಅನುಸರಿಸಬೇಕು. ಸಂವಿಧಾನ ಓದಿದರೆ ದೇಶಾಭಿಮಾನ, ಸುರಕ್ಷಿತವಾಗಿದ್ದೇನೆ ಭಾವನೆ ಬೆಳೆಯುತ್ತದೆ ಎಂದು ಹೇಳಿದರು.
ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಭಾಗವಹಿಸಿದ್ದರು.
ಸಂವಿಧಾನದ ಮಹತ್ವ, ಅದರ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು. ಕ್ರೀಡೆ ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ವೇಳೆ ಸಚಿವ ಸೋಮಣ್ಣ ಸನ್ಮಾನಿಸಿದರು.
(Visited 1 times, 1 visits today)



