BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ
  • ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ
  • ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 
  • KUWJ ಅಧ್ಯಕ್ಷ ಯೋಗೇಶ್ ವಿರುದ್ಧ ಎಫ್‌ಐಆರ್
  • ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ
  • ಕ್ವಾರಿ, ಸ್ಟೋನ್ ಕ್ರಷರ್ ಉತ್ಪಾದನೆ, ಪೂರೈಕೆ ಸ್ಥಗಿತ
  • ಜಿಲ್ಲಾ ನಿವೃತ್ತ ನೌಕರರ ಸಂಘದಿAದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಯಶಸ್ವಿ
  • ಪೆರಿಯಾರ್ ಇ.ವಿ ರಾಮಸ್ವಾಮಿ ಅವರ ಜನ್ಮ ದಿನ ಆಚರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಅಟಲ್ ಭೂಜಲ್ ಯೋಜನೆ ಜಾರಿಗಾಗಿ ದೇಶದಲ್ಲಿಯೇ ಪ್ರಥಮಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆ ಆಯ್ಕೆ
Trending

ಅಟಲ್ ಭೂಜಲ್ ಯೋಜನೆ ಜಾರಿಗಾಗಿ ದೇಶದಲ್ಲಿಯೇ ಪ್ರಥಮಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆ ಆಯ್ಕೆ

By News Desk BenkiyabaleUpdated:January 23, 2020 7:10 pm

ಚಿಕ್ಕನಾಯಕನಹಳ್ಳಿ :

      ಅಂತರ್ಜಲ ಅಭಿವೃದ್ದಿಗಾಗಿ ದೇಶದ ಮಹತ್ವದ ಯೋಜನೆಯೆನಿಸಿದ ಅಟಲ್ ಭೂಜಲ್ ಯೋಜನೆ ಜಾರಿಗಾಗಿ ದೇಶದಲ್ಲಿಯೇ ಪ್ರಥಮಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆಯನ್ನು ಆಯ್ಕೆಮಾಡಿಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

       ಈ ಯೋಜನೆಯ ಅನುಷ್ಠಾನಕ್ಕಾಗಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದರು.

    ಈ ಯೋಜನೆಯ ಕುರಿತಾಗಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ದಿಇಲಾಖೆಯ ರಾಜ್ಯ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ದೆಹಲಿಯ ಭಾರತೀಯ ವಿಜ್ಞಾನ ಭವನದಲ್ಲಿ ಆರು ಸಾವಿರ ಕೋಟಿರೂ.ಗಳ ಈ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಇದರಲ್ಲಿ ರಾಜ್ಯಕ್ಕೆ 1200ಕೋಟಿರೂ. ನಿಗಧಿ ಮಾಡಲಾಗಿದೆ. ಯೋಜನೆ ಪೂರ್ಣಗೊಳ್ಳಲು ಐದುವರ್ಷ ನಿಗಧಿ ಮಾಡಲಾಗಿದೆ. ರಾಜ್ಯದ 14 ಜಿಲ್ಲೆಗಳ 41 ತಾಲ್ಲೂಕು 1199 ಗ್ರಾಮಪಂಚಾಯಿತಿ,39703 ಚದರ ಕಿಲೋಮೀಟರ್‍ಗಳಲ್ಲಿ ಅಂತರ್ಜಲ ಅಭಿವೃದ್ದಿಗೊಳಿಸುವ ಮೂಲಕ 82,47186 ಜನರಿಗೆ ಇದರಿಂದ ಲಾಭವಾಗಲಿದೆ.

      ಜಿಲ್ಲೆಯಲ್ಲಿ ಚಿ.ನಾ.ಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ, ಸಿರಾ, ತುಮಕೂರು ತಾಲ್ಲೂಕುಗಳು ಯೋಜನೆಯಲ್ಲಿ ಸೇರಿದೆ. ಈಗಾಗಲೇ ಜಿಲ್ಲೆಯಾದ್ಯಂತ ಅಬ್ಸರ್ವೇಟೀವ್ ಬೋರ್‍ಗಳನ್ನು ಸಣ್ಣ ನೀರಾವರಿ ಇಲಾಖೆಯಡಿ ಕೊರೆಯಲಾಗಿದೆ. ತಾಲ್ಲೂಕಿನಲ್ಲೂಸಹ ಇಂತಹ 7 ಬೋರ್ ಕೊರೆಯಲಾಗಿದೆ. ತಾಲ್ಲೂಕಿನಲ್ಲಿ 2010ರಲ್ಲಿ 9.8 ಮೀಟರ್‍ನಲ್ಲಿದ್ದ ಅಂತರ್ಜಲ 2018ಕ್ಕೆ 48 ಮೀಟರ್ ಕೆಳಗಿಳಿದಿದೆ. ಇದೊಂದು ಗಣನೀಯ ಕುಸಿತವಾಗಿದ್ದು ಮುಂದಿನ ಅಪಾಯ ತಪ್ಪಿಸುವ ಉದ್ದೇಶದಿಂದ ಅಂತರ್ಜಲವನ್ನು ವ್ಯಾಪಕವಾಗಿ ಪುನಶ್ವೇತನಗೊಳಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ ಈ ಯೋಜನೆಯ ಮೊದಲ ಹಂತವಾಗಿ ತಾಲ್ಲೂಕಿನ ಎಲ್ಲಾ ಗ್ರಾಮಗಳ ಕುಡಿಯುವ ನೀರಿನ ಬೋರ್‍ವೆಲ್‍ಗಳ ಸ್ಥಿತಿಗತಿಗಳ ಬಗ್ಗೆ ಗ್ರಾಮ ಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳು ಇನ್ನೈದು ದಿನದಲ್ಲಿ ಮಾಹಿತಿ ನೀಡಬೇಕು. ನಮಗೆ ಅಂತರ್ಜಲದ ಸಮಗ್ರ ಚಿತ್ರಣ ನೀಡಿದರೆ ಈ ಯೋಜನೆಯ ಕಾರ್ಯಗತಕ್ಕೆ ಮುಂದಾಗಬಹುದು. ಇದಕ್ಕಾಗಿಯೇ ಕೊರೆಯಲಾಗಿರುವ ಅಬ್ಸರ್ವೇಟೀವ್ ಬೋರ್‍ಗಳನ್ನು ಮಾತ್ರ ಲೆಖ್ಖಕ್ಕೆ ಪರಿಗಣಿಸದೆ ಗ್ರಾಮಗಳಲ್ಲಿ ಕೊರೆದಿರುವ ಇತರೆ ಬೋರ್‍ಗಳ ಮಾಹಿತಿಯನ್ನು ಪಡೆದು ವರದಿ ನೀಡಿರೆಂದರು. ಜಿಯಾಲಿಜಿಸ್ಟ್‍ಗಳೂ ಸಹ ಇದಕ್ಕೆ ಭಾಗಿದಾರರಾಗಿದ್ದು ಸರ್ವೆ ಮೂಲಕ ಅಂತರ್‍ರ್ಜಲÀದ ವರದಿ ನೀಡಬೇಕಿದೆ ಎಂದರು.
ಇದರ ಜೊತೆಯಲ್ಲಿ ಕಂದಾಯ, ಸಣ್ಣ ನೀರಾವರಿ ಇಲಾಖೆಯವರು ಒಂದಾಗಿ ತಾಲ್ಲೂಕಿನ ಕೆರೆಗಳ ಸ್ಥಿತಿಗತಿಗಳ ಮಾಹಿತಿ ಪಡೆಯಬೇಕು, ಕೆರೆ ಹೂಳು ತುಂಬಿರುವುದು, ಒತ್ತುವರಿ ತೆರವುಗೊಳಿಸುವುದು, ಹೂಳೆತ್ತುವ ಅಗತ್ಯವಿರುವ ಕೆರೆಗಳಾವವು, ಹೂಳೆತ್ತಲು ಅವಶ್ಯಕತೆ ಇಲ್ಲದರಿರುವ ಕೆರೆಗಳನ್ನು ಪಟ್ಟಿಮಾಡಿ, ಹಾಗೂ ಸಂಬಂಧಿಸಿದ ಹಳ್ಳಗಳ ಸ್ಥಿತಿ, ಅದರಲ್ಲಿ ತುಂಬಿರುವ ಹೂಳು, ಒತ್ತುವರಿ ಮತ್ತು ಜಂಗಲ್ ನಿವಾರಣೆಯ ಬಗ್ಗೆ ಮಾಹಿತಿ ಕೊಡಬೇಕು. ನಮ್ಮಲ್ಲಿ ಈಗಾಗಲೇ ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆ ಕಾರ್ಯ ನಡೆದಿದೆ. ಇದರ ಅನುಷ್ಠಾನದೊಳಗೆ ನಾವು ತಾಲ್ಲೂಕಿನಲ್ಲಿ ಹುದುಗಿರುವ ಎಲ್ಲಾ ಹಳ್ಳಗಳ ಸಮಗ್ರ ಅಧ್ಯಯನ ಹಾಗೂ ಎಲ್ಲಾ ಹಳ್ಳಗಳನ್ನು ಸುಸ್ಥಿತಿಗೊಳಿಸಲೇ ಬೇಕು. ಕೆರೆತುಂಬಿ ಕೋಡಿ ಹರಿದರೆ ಮಾತ್ರ ಅಂತರ್ಜಲ ಅಭಿವೃದ್ದಿ ಕಾಣಲಿದೆ.
ಜಲಸಂರಕ್ಷಣೆ ಹಾಗೂ ಅಂತರ್ಜಲ ಪುನಶ್ವೇತನಕ್ಕಾಗಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯವರು ರೈತರು ಬಳಸುವ ಹನಿನೀರಾವರಿ, ತುಂತುರು ನೀರಾವರಿ ಹಾಗೂ ಇತರೆ ನೀರಾವರಿ ವಿಧಾನಗಳ ಸಮಗ್ರ ಅಧ್ಯಯನ ನಡೆಸಿ ಎಲ್ಲಿ ಅಗತ್ಯಕ್ಕಿಂತ ನೀರು ಪೋಲಾಗುತ್ತಿದೆ ಹಾಗೂ ಅದರ ಸದ್ಬಳಕೆಯ ವಿವರ ನೀಡಬೇಕು. ಇದರ ಜೊತೆಗೆ ಇಲಾಖೆಯಿಂದ ನಿರ್ಮಿಸಿರುವ ಚೆಕ್‍ಡ್ಯಾಂ, ಮತ್ತು ಹಳ್ಳಗಳಲ್ಲಿ ಮತ್ತು ನೆಲದಡಿ ಡಕ್ ನಿರ್ಮಾಣ, ಅರಣ್ಯಗಳಲ್ಲಿ ಹರಿದು ಹೋಗುವ ನೀರನ್ನು ತಡೆಯಲು ಒಂದು ಮೀಟರ್ ಆಳದ ಗುಂಡಿಗಳನ್ನು ನಿರ್ಮಿಸುವ ಮೂಲಕ ನೀರಿಂಗಿಸುವುದು. ಈ ಯೋಜನೆಯ ಅನುಷ್ಠಾನಕ್ಕಾಗಿ ಇಲಾಖೆ ಎಲ್ಲರೀತಿಯ ಖರ್ಚನ್ನು ಭರಿಸಲಿದೆ. ತಾಲ್ಲೂಕಿಗೆ ಅಗತ್ಯವಿದ್ದರೆ ಇನ್ನೂ ನಾಲ್ಕು ಚೆಕ್‍ಡ್ಯಾಂಗಳನ್ನು ನೀಡಲಾಗುವುದು. ಈ ಪ್ರಾಯೋಗಿಕ ಯೋಜನೆ ಫಲಪ್ರಧವೆನಿಸಿದರೆ ಸಮಗ್ರ ಯೋಜನೆಯ ಕಾರ್ಯಗತಕ್ಕೆ ಮೂರು ವರ್ಷದಲ್ಲಿ 300ರಿಂದ 400 ಕೋಟಿರೂ. ವಿನಿಯೋಗಿಸಬಹುದಾಗಿದೆ ಇದಕ್ಕಾಗಿ ಸಮಯವನ್ನು ಧೀರ್ಘವಾಗಿ ಎಳೆಯದೆ ಒಂದು ವಾರದಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಯಿಂದ ವರದಿ ಸಿದ್ದಪಡಿಸಿರೆಂದರು. ಈ ಸಂದರ್ಭದಲ್ಲಿ ಎಂ. ಶಿವಸ್ವಾಮಿ, ಕೆರೆ ಅಭಿವೃದ್ದಿ ಇಲಾಖೆಯ ಅಧೀಕ್ಷಕ ನಾಗರಾಜು, ಜಿಯಾಲಜಿಸ್ಟ್ ಜಗದೀಶ್ವರಿ, ತಹಸೀಲ್ದಾರ್ ತೇಜಸ್ವಿನಿ, ಇಓ ನಾರಾಐಣಸ್ವಾಮಿ ಮುಂತಾದವರಿದ್ದರು.

(Visited 66 times, 1 visits today)
Previous Articleತುಮಕೂರು ವಿವಿಯಲ್ಲಿ ಉದ್ಯೋಗಾಧಾರಿತ ಕೋರ್ಸುಗಳ ಆರಂಭಿಸಲು ಡಿಸಿಎಂ ಸೂಚನೆ
Next Article ಹಿರೇಮಠ್ ಮೇಲೆ ಹಲ್ಲೆ : ಕ್ರಮಕ್ಕೆ ಒತ್ತಾಯ
News Desk Benkiyabale

Related Posts

ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ

September 19, 2026 6:07 pm news

ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ

September 19, 2026 6:06 pm news

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 

September 19, 2026 6:04 pm news
ತಾಜಾ ಸುದ್ಧಿಗಳು
news

ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ

September 19, 2026 6:07 pm
news

ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ

September 19, 2026 6:06 pm
news

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 

September 19, 2026 6:04 pm
news

KUWJ ಅಧ್ಯಕ್ಷ ಯೋಗೇಶ್ ವಿರುದ್ಧ ಎಫ್‌ಐಆರ್

September 19, 2026 5:39 pm
news

ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ

September 18, 2026 5:39 pm
news

ಕ್ವಾರಿ, ಸ್ಟೋನ್ ಕ್ರಷರ್ ಉತ್ಪಾದನೆ, ಪೂರೈಕೆ ಸ್ಥಗಿತ

September 18, 2026 5:37 pm
Our Youtube Channel
Our Picks

ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ

September 19, 2026 6:07 pm

ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ

September 19, 2026 6:06 pm

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 

September 19, 2026 6:04 pm

KUWJ ಅಧ್ಯಕ್ಷ ಯೋಗೇಶ್ ವಿರುದ್ಧ ಎಫ್‌ಐಆರ್

September 19, 2026 5:39 pm

ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ

September 18, 2026 5:39 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ

By News Desk BenkiyabaleSeptember 19, 2026 6:07 pm

ತುಮಕೂರು: ರಾಜ್ಯ ಹೈಕೋರ್ಟ್ ನೈಸ್ ಭೂಮಿಯನ್ನುರೈತರಿಗೆ ವಾಪಸು ನೀಡಬೇಕೆಂದು ಮತ್ತುಅಕ್ರಮವಾಗಿ ಸಂಗ್ರಹಿಸುತ್ತಿರುವಟೋಲ್ ಸಂಗ್ರಹ ನಿಲ್ಲಿಸಬೇಕೆಂದು ತೀರ್ಪು ನೀಡಿದ್ದರೂ ಅದನ್ನು ಜಾರಿಗೆ…

ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ

September 19, 2026 6:06 pm

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 

September 19, 2026 6:04 pm

KUWJ ಅಧ್ಯಕ್ಷ ಯೋಗೇಶ್ ವಿರುದ್ಧ ಎಫ್‌ಐಆರ್

September 19, 2026 5:39 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.