Author: News Desk Benkiyabale

ತುಮಕೂರು: ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಓದುವುದರಿಂದ ಜ್ಞಾನ ಬೆಳೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಾಧನೆ ಮಾಡಿದವರೆಲ್ಲಾ ಪುಸ್ತಕ ಓದಿ ಉನ್ನತ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ಅಲ್ಲದೆ, ಓದುವ ಸಂಸ್ಕೃತಿಯನ್ನು ಪ್ರತಿಪಾದಿಸಿದ್ದಾರೆ ಎಂದು ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಶಿವಶಂಕರ ಕಾಡದೇವರಮಠ ಹೇಳಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ-ಜಿಲ್ಲಾ ಕೇಂದ್ರ ಗ್ರಂಥಾಲಯ, ಇನ್ನರ್ ವ್ಹೀಲ್ ಸಂಸ್ಥೆ, ಗ್ರಂಥಾಲಯ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ: ಉತ್ತಮ ಓದುಗರಿಗೆ ಗೌರವಾರ್ಪಣೆ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸೋಮವಾರ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಸಮಾರಂಭ ಉದ್ಘಾಟಿಸಿದ ಅವರು, ಈಗ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಮಾತು ಸುಳ್ಳು, ಓದುಗರ ಸಂಖ್ಯೆ, ಓದುವ ಹವ್ಯಾಸ ಬೆಳೆಯುತ್ತಲೇ ಇದೆ. ಪುಸ್ತಕ ಓದುವ ಹವ್ಯಾಸದಿಂದ ಜ್ಞಾನ, ಏಕಾಗ್ರತೆ, ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದು ಸಲಹೆ ಮಾಡಿದರು. ತಮ್ಮ ರೀಡ್ ಬುಕ್ ಫೌಂಡೇಶನ್‌ನಿ0ದ ೪೨…

Read More

ತುಮಕೂರು:  ಪ್ರ‍್ರಕೃತಿಕ ವಿಕೋಪಗಳಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು,ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯುವುದು ಸೇರಿದಂತೆ ರೈತರ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಇಂದು ಅಖಿಲ ಭಾರತ ಕಿಸಾನ್ ಸಭಾ ತುಮಕೂರು ಜಿಲ್ಲಾ ಘಟಕದವತಿಯಿಂದ ರಾಜ್ಯ ಉಪಾಕ್ಷರಾದ ಕಂಬೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಖಿಲ ಭಾರತ ಕಿಸಾನ ಸಭಾದ ಕಾರ್ಯಕರ್ತರು ಸರಕಾರ ಕೂಡಲೇ ಸಂತ್ರಸ್ಥ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿ,ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ  ಎಐಕೆಎಸ್‌ನ ರಾಜ್ಯ ಉಪಾಧ್ಯಕ್ಷ ಕಂಬೇಗೌಡ, ರಾಜ್ಯದ ಹಲವೆಡೆ ಅಕಾಲಿಕ ಮಳೆಯ ಅತಿವೃಷ್ಟಿಯಿಂದ ಬಹುತೇಕ ವಾಣಿಜ್ಯ ಹಾಗೂ ಆಹಾರ ಬೆಳೆಗಳು ನಾಶವಾಗಿ ರೈತರು ನಷ್ಟ ಅನುಭವಿಸುತ್ತಿದ್ದು, ಇಂತಹ ಹಾನಿಗೊಳಗಾದ ಎಲ್ಲಾ ರೈತರ ಬೆಳೆಗಳನ್ನು ಸರಕಾರ ಸಮೀಕ್ಷೆ ನಡೆಸಿ. ರೈತರಿಗೆ ಆದ ನಿಜವಾದ ನಷ್ಟಕ್ಕೆ ಪರಿಹಾರ ನೀಡಲು ರಾಜ್ಯ ಸರಕಾರ ಏಳಂಬ ಮತ್ತು ನಿರ್ಲಕ್ಷ್ಯವನ್ನು ಕೈ ಬಿಟ್ಟು…

Read More

ತುಮಕೂರು: ಕ್ರೀಡೆ ಮನುಷ್ಯನಿಗೆ ಶಿಸ್ತು, ಆರೋಗ್ಯದ ಜತೆಗೆ ಜೀವನದಲ್ಲಿ ಪಾಠ ಕಲಿಸುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಬಲೂನ್ ಹಾಗೂ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆ ಮನುಷ್ಯನ ಜೀವನದಲ್ಲಿ ಬಹಳ ಉಪಯುಕ್ತವಾಗಿದ್ದು, ಶಿಸ್ತು ಕಲಿಸುವುದು ಮಾತ್ರಲ್ಲ ಜೀವನದಲ್ಲಿ ಅನೇಕ ಪಾಠವನ್ನು ಕಲಿಸುತ್ತದೆ ಎಂದು ಅವರು ಹೇಳಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಗೆಲುವನ್ನು ಎಷ್ಟು ಸಂತೋಷದಿAದ ಸ್ವೀಕರಿಸುತ್ತೇವೋ, ಅಷ್ಟೇ ಸಂತೋಷದಿAದ ಸೋಲನ್ನು ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಸೋಲು ಗೆಲುವಿನ ದಾರಿ ಎಂಬುದನ್ನು ಯಾರೂ ಮರೆಯಬಾರದು. ಕ್ರೀಡೆಯಂತೆಯೇ ಜೀವನದಲ್ಲೂ ಅನೇಕ ಬಾರಿ ಸೋಲುಗಳನ್ನು ಅನುಭವಿಸುತ್ತೇವೆ ಎಂದರು. ಕ್ರೀಡೆಯಲ್ಲಿ ಸೋಲು ಅನುಭವಿಸಿದಾಗ ನಿರಾಶರಾಗದೆ ಮತ್ತೊಮ್ಮೆ ಗೆಲ್ಲಬೇಕು ಎಂಬ ಹುಮ್ಮಸ್ಸಿನಿಂದ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಇದೆ. ಇದನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು,.…

Read More

ತುಮಕೂರು: ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದಲ್ಲಿ ಇರುವುದನ್ನು ಯಥಾವತ್ತಾಗಿ ತಿಳಿಸುವುದಷ್ಟೇ ಅಲ್ಲ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿ ಆ ಮಗುವನ್ನು ಸಮಾಜದ ಆಸ್ತಿಯನ್ನಾಗಿ ಮಾಡುವುದೇ ಆಗಿದೆ ಎಂದು ಶ್ರೀ ಅಯ್ಯ ಆಂಜನೇಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರಂಗನಾಥ್ ಜೆ ರವರು ತಿಳಿಸಿದರು. ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಹುಯಿಲ್ ದೊರೆ ಶ್ರೀ ಶಾರದಾ ಇಂಟರ್ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ಕೇವಲ ಪಠ್ಯಪುಸ್ತಕದಲ್ಲಿ ಇರುವ ಪಠ್ಯ ವಸ್ತುವನ್ನು ಯಥಾವತ್ತಾಗಿ ತಿಳಿಸಿ ಕೇವಲ ಅಂಕ ಗಳಿಕೆಗೆ ಮಾತ್ರ ಶಿಕ್ಷಣ ಸೀಮಿತವಲ್ಲ ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತಂದು ಅವುಗಳಿಗೆ ಪ್ರೋತ್ಸಾಹ ನೀಡಿ ಅದಕ್ಕೊಂದು ವೇದಿಕೆ ನೀಡಿ ಆ ಮಗುವಿನ ಯಶಸ್ಸಿಗೆ ಪರಿಶ್ರಮ ನೀಡುವುದು ಆಗಿದೆ ಆ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ಸಹ ಕೈಜೋಡಿಸಬೇಕು ಯಾವ ಮಕ್ಕಳು ಸಹ ದಡ್ಡರಲ್ಲ ಎಲ್ಲರೂ…

Read More

ತುಮಕೂರು: ನಗರದ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕಸದ ರಾಶಿಯನ್ನು ಕಂಡ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕೂಡಲೆ ಕಸದ ರಾಶಿಯನ್ನು ತೆರವುಗೊಳಿಸಬೇಕೆಂದು ಸ್ಥಳದಲ್ಲಿದ್ದ ಪಾಲಿಕೆ ಇಂಜಿನಿಯರ್ ಪೂರ್ಣಿಮಾ ಅವರಿಗೆ ಸೂಚನೆ ನೀಡಿದರು. ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದಾಗ ವಾಹನ ನಿಲುಗಡೆ ಮಾಡುವ ಸ್ಥಳದಲ್ಲಿ ಕಸದ ರಾಶಿಯನ್ನು ಕಂಡು ಈ ಸೂಚನೆ ನೀಡಿದರು. ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಲು ಅವಕಾಶ ಮಾಡಿಕೊಡಬೇಕೇ ಹೊರತು ಕಸ ಹಾಕಲು ಬಳಸಬಾರದು. ಇದರಿಂದ ವಾಹನ ದಟ್ಟಣೆ ಉಂಟಾಗಿ ಸಂಚಾರ ಅಸ್ತವ್ಯಸ್ತ ವಾಗುತ್ತದೆ. ಹೂವು-ಹಣ್ಣು-ತರಕಾರಿ ತ್ಯಾಜ್ಯ ಕೊಳೆತು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮಾರುಕಟ್ಟೆ ಆವರಣದಲ್ಲಿ ಸಮರ್ಪಕವಾಗಿ ಸ್ವಚ್ಛತೆ ನಿರ್ವ ಹಣೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಸ್ ನಿಲ್ದಾಣದ ಅಂಗಡಿ ಮಳಿಗೆಗಳಲ್ಲಿ ಅವಧಿ ಮೀರಿದ ತಿಂಡಿ-ತಿನಿಸುಗಳನ್ನು ಜನರಿಗೆ ಮಾರಾಟ ಮಾಡುತ್ತಿ ದ್ದರೂ ಕೆಎಸ್‌ಆರ್‌ಟಿಸಿ ಹಾಗೂ…

Read More

ಚಿಕ್ಕನಾಯಕನಹಳ್ಳಿ: ಮಕ್ಕಳು ಉತ್ತಮ ಅಂಕಗಳನ್ನುಗಳಿಸಿದರೇ ಸಾಲದು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಅವರಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸುವಲ್ಲಿ ಪೋಷಕರ ಪಾತ್ರ ಮುಖ್ಯವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಪಟ್ಟಣದ ತೀ.ನಂ.ಶ್ರೀ ಭವನದಲ್ಲಿ ಸರ್ಕಾರಿ ಪ್ರೌಢಶಾಲೆಯ ಪೋಷಕರು ಹಾಗೂ ಶಿಕ್ಷಕರ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಯಬೇಕು ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವಂತೆ ಪರೀಕ್ಷೆಯ ಕಾಲದಲ್ಲಿ ಓದುವುದನ್ನು ಬಿಟ್ಟು ಈಗಿನಿಂದಲೇ ಅದ್ಯಯನದ ಕಡೆ ಗಮನ ಹರಿಸಬೇಕು ಇದರಿಂದ ಪರೀಕ್ಷೆ ಎಂಬ ಜ್ವರ ಬರುವುದಿಲ್ಲ ಎಂದ ಅವರು ಪೋಷಕರು ಮಕ್ಕಳ ಮೇಲೆ ಒತ್ತಡವನ್ನು ಹಾಕದೇ ಅವರಿಗೆ ಉತ್ತಮ ರೀತಿಯಲ್ಲಿ ಮನವರಿಕೆ ಮಾಡುವ ಮೂಲಕ ಮಕ್ಕಳ ಮನಸ್ಸಲ್ಲಿ ಅವರಿಗೆ ಅರಿವು ಮೂಡುವಂತೆ ಮಾಡಬೇಕಿದೆ ಎಂದ ಅವರು ವಿದ್ಯಾಬ್ಯಾಸದೊಂದಿಗೆ ಕ್ರೀಡೆ, ಸಂಸ್ಕೃತಿಕ ಚಟುವಟಿಕೆಗಳತ್ತ ಗಮನ ಹರಿಸಬೇಕು. ಕಳೆದೆರಡು ವರ್ಷದಿಂದ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು ಇದು ಜಿಲ್ಲಾ ಕೆಡಿಪಿ ಸಭೆಯಲ್ಲಿ ಜಿಲ್ಲಾ ಮಂತ್ರಿಗಳು ಚರ್ಚೆ…

Read More

ತುಮಕೂರು: ಭಾರತ ಸರ್ಕಾರದಲ್ಲಿ ಮಕ್ಕಳ ರಕ್ಷಣೆಗೆ ಪ್ರತ್ಯೇಕವಾದ ಕಾಯ್ದೆ ಜಾರಿಯಾಗಿದ್ದು ಅದರ ಕುರಿತಾದ ಜಾಗೃತಿ ಮತ್ತು ಅರಿವು ಅವಶ್ಯಕ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ ಟಿ ತಿಪ್ಪೇಸ್ವಾಮಿ ತಿಳಿಸಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜು ರಾಷ್ಟಿçà ಯ ಸೇವಾ ಯೋಜನಾ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾ ಡಿದ ಅವರು ಮಕ್ಕಳ ಹಕ್ಕುಗಳ ಕುರಿತಾಗಿ ಮೊದಲು ಮಕ್ಕಳಿಗೆ ಅರಿವು ಮೂಡಿಸಬೇಕು. ಹಕ್ಕುಗಳ ಉಲ್ಲಂಘನೆಯಾಗದ0ತೆ ಪೋಷಕರಿಗೆ ಮತ್ತು ಸಮಾಜದ ನಾಗರಿಕರಿಗೆ ಜಾಗೃತಿ ಮೂಡಿಸಬೇಕು ಎಂದರು. ತಕ್ಷಣದ ತಪ್ಪಿನಿಂದ ಮಕ್ಕಳು ಶಾಶ್ವತ ದೂಷ ಣೆಗೆ ಒಳಗಾಗುತ್ತಾರೆ. ಅದರಿಂದ ಸಮಾಜದಲ್ಲಿ ಮಕ್ಕಳ ಏಳ್ಗೆ ಸಾಧ್ಯವಾಗುತ್ತಿಲ್ಲ. ನಮ್ಮ ದೇಶದ ಶೇಕಡಾ ನೂರರಷ್ಟು ಜನರಲ್ಲಿ ೪೦ ರಷ್ಟು ಮಕ್ಕಳೇ ಇದ್ದಾರೆ. ಪ್ರತಿ ವರ್ಷ ರಾಜ್ಯದಲ್ಲಿ ೫೦ ಸಾವಿರ ಕುಟುಂಬಗಳು ಪೋಕ್ಸೋ ಪ್ರಕರಣದಿಂದ ನಲುಗುತ್ತಿವೆ. ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ…

Read More

ತುಮಕೂರು: ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಯು ಹಾಗೂ ಮಿತ್ರ ಪಕ್ಷಗಳು ಭಾರಿ ವಿಜಯದತ್ತ ದಾಪುಗಾಲು ಹಾಕಿರುವುದಕ್ಕೆ ತುಮಕೂರಿನ ವಿವೇಕಾನಂದ ರಸ್ತೆಯ ವರ್ತಕರ ಸಂಘದ ವತಿಯಿಂದ ಸಂಭ್ರಮಾಚರಣೆ ಯನ್ನು ಸಿಹಿ ಅಂಚಿ ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಲಾಯಿತು. ವಿವೇಕಾನಂದ ರಸ್ತೆಯ ವರ್ತಕರು ಸಾರ್ವಜನಿಕರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಶಿವಶಕ್ತಿ ಎಲೆಕ್ಟ್ರಿಕಲ್ ಮಾಲೀಕರಾದ ಬಿ.ಎಸ್ ಪಣಿಂದ್ರ ಮಾತನಾಡಿ ಬಿಹಾರದಲ್ಲಿ ಎನ್ ಡಿ ಎ ಬಾರಿ ಮತ ಗಳಿಕೆ ಮಾಡಿ ಮೂರನೇ ಎರಡರಷ್ಟು ಶಾಸಕರನ್ನು ಆಯ್ಕೆ ಮಾಡಿದ ಮತದಾರರನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೆ.ಪಿ ಮಹೇಶ್ ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮತ್ತು ಮಿತ್ರ ಪಕ್ಷಗಳ ಅಭೂತಪೂರ್ವ ಬಹುಮತಕ್ಕೆ ಅಭಿನಂದಿಸಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯ ಮಂತ್ರಿ ನಿತೀಶ್ ಕುಮಾರ್ ರವರುಗಳ ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಜನಾಹಿತ ಕಾರ್ಯಕ್ರಮಗಳನ್ನು ಮೆಚ್ಚಿ ಮತ ನೀಡಿದ ಬಿಹಾರದ ಮತದಾರರು…

Read More

ಪಾವಗಡ:ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಆಲದ ಮರದಂತೆ ರಾಜ್ಯದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದು ಇಂದು ನಮ್ಮನ್ನು ಅಗಲಿರುವುದು ದುಃಖದ ಸಂಗತಿ ಎಂದು ಪಾವಗಡ ಬಿ.ಇ.ಓ. ರೇಣುಕಮ್ಮ ವಿಷಾದ ವ್ಯಕ್ತಪಡಿಸಿದರು. ಶನಿವಾರ ಶಮಿ ವೃಕ್ಷ ಅಭಿವೃದ್ಧಿ ಸಮಿತಿ ವತಿಯಿಂದ ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಪಾಠಶಾಲಾ ಮೈದಾನದಲ್ಲಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದಂದು ಕೇಕ್ ಕಟ್ ಮಾಡುವ ಬದಲು ಸಸಿಗಳನ್ನು ನೆಟ್ಟು ಪೋಷಿಸಿ, ಬೆಳೆಸಿದರೆ, ಮುಂದೊAದು ದಿನ ಆ ಸಸಿಗಳು ದೊಡ್ಡ ಹೆಮ್ಮೆರವಾಗಿ ಬೆಳೆದು ಪರಿಸರವನ್ನ ಸಂರಕ್ಷಿಸಿ ದಂತಾಗುತ್ತದೆ ಎಂದರು. ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಜಿ.ವಿ .ವೆಂಕಟೇಶ್ ಮಾತನಾಡಿ, ಸಾಲುಮರದ ತಿಮ್ಮಕ್ಕ ಮರಣದಿಂದ ರಾಜ್ಯಕ್ಕೆ ದೊಡ್ಡ ಅಘಾತ ವಾಗಿದೆ, ಮಾಗಡಿ ಯಿಂದ ಕುದೂರು ರಸ್ತೆಯ ಪಕ್ಕದಲ್ಲಿ ಸುಮಾರು ನಾಲ್ಕು ಕಿಲೋಮೀಟರ್ ವರೆಗೂ ೪೦೦ ಆಲದ ಮರಗಳನ್ನ ಕಾಲ್ನಡಿಗೆಯಲ್ಲಿ ಸಾಗಿ ನೀರನ್ನು ಹಾಕಿ ಬೆಳೆಸಿದ ಸಾಲುಮರದ ತಿಮ್ಮಕ್ಕ, ವೃಕ್ಷ ಮಾತೆ ಯಾಗಿದ್ದಾಳೆ,…

Read More

ತುಮಕೂರು: ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು,.ಮೊದಲಿಗೆ ಕಾಲೇಜಿನ ಆವರಣದಲ್ಲಿ ಧ್ವಜಾರೋಹಣ ಹಾಗೂ ನಾಡಗೀತೆ ಹಾಡುವುದರ ಮೂಲಕ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಹಂಪಿ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಖ್ಯಾತ ಕಥೆಗಾರರಾದ ಡಾ. ಕರಿಗೌಡ ಬೀಚನಹಳ್ಳಿ ಹಾಗೂ ವೇದಿಕೆಯ ಗಣ್ಯರಿಂದ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು, ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಕವಿಗಳು ಹಾಗೂ ಮುಖ್ಯ ಅತಿಥಿಗಳನ್ನು ಪ್ರೊ.ರಮೇಶ್ ಮಣ್ಣೇ ರವರು ಪ್ರಾಸ್ತಾವಿಕ ನುಡಿಗಳ ಮೂಲಕ ಅವರನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಡಾ.ಕರಿಗೌಡ ಬೀಚನಹಳ್ಳಿ ಇವರು ಕನ್ನಡ ಭಾಷಾ ಚಳುವಳಿ , ಕನ್ನಡದ ಏಕೀಕರಣ, ಹಾಗೂ ರಾಜ್ಯೋತ್ಸವದ ಹಿನ್ನೆಲೆ ,ಪ್ರಾಮುಖ್ಯತೆ ,ಗ್ರಾಮೀಣ ಬದುಕು ,ಗ್ರಾಮೀಣ ಮಕ್ಕಳಿಂದ ಕನ್ನಡ ಉಳಿದಿದೆ ,”ಕನ್ನಡ ಜೀವಂತ ಭಾಷೆ “ಎಂದು ಭಾಷೆಯ ಒಲವನ್ನು ಹಾಗೂ ಅಖಂಡ ಕರ್ನಾಟಕವನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಅರ್ಥಪೂರ್ಣವಾಗಿ ಹೇಳಿದರು . ತದನಂತರ ನಾನು ದಿಗ್ಗಜ ಅಲ್ಲ ಕೇವಲ ಗಜ ಎಂಬ…

Read More