60 ವರ್ಷದ ವ್ಯಕ್ತಿಗೆ ಸೊಂಟದ ಕೀಲು ಮರುಜೋಡಣೆ ಯಶಸ್ವಿ
ತುಮಕೂರು: ತುಮಕೂರಿನ ಶ್ರೀದೇವಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಕೀಲು ಮತ್ತು ಮೂಳೆ ವಿಭಾಗ ವೈದ್ಯರು 60 ವರ್ಷದ ವ್ಯಕ್ತಿಗೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸ್ವಾವಲಂಬಿಯಾಗಿ ನಡೆದಾಡುವಂತೆ ಮಾಡಿ ದ್ದಾರೆ. ಕೊರಟಗೆರೆ ತಾಲ್ಲೂಕಿನ ಸಿಂಗಲಿಕಾಪುರ ಗ್ರಾಮದ ಅರಸಪ್ಪ (60) ವರ್ಷ ಎಂಬುವವರು ಸೊಂಟದ ಕಾಲುನೋವಿನಿಂದ ಬಳಲುತ್ತಿದ್ದರು. ಇವರ ಜೀವನ ತುಂಬ ದುಸ್ತರವಾಗಿತ್ತು. ದಿನನಿತ್ಯದ ಕೆಲಸಗಳಿಗೆ ಬೇರೆಯವರ ಸಹಾಯಯಾಚಿಸುವಂತಾಗಿತ್ತು....