BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ
  • ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ
  • ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ
  • ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ
  • ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ
  • ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ
  • ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು
  • ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ, 3 ಮಕ್ಕಳು ಸೇರಿ ದಂಪತಿ ಸಾವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಇಂದು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ
Trending

ಇಂದು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ

By News Desk BenkiyabaleUpdated:November 09, 2020 6:51 pm

ತುಮಕೂರು: 

      ಶಿರಾ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆಯು ನಾಳೆ((ನ.10) ನಡೆಯಲಿದ್ದು, ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಚುನಾವಣಾಧಿಕಾರಿ ಡಾ:ಕೆ.ನಂದಿನಿ ದೇವಿ ತಿಳಿಸಿದ್ದಾರೆ.

      ನಗರದ ಪಾಲಿಟೆಕ್ನಿಕ್ ಕಾಲೇಜಿನ ಚುನಾವಣಾ ಮತ ಎಣಿಕೆ ನಡೆಸಲು ಆಗುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ನವೆಂಬರ್ 10ರಂದು ಬೆಳಿಗ್ಗೆ 8 ಗಂಟೆಗೆ ಚುನಾವಣಾ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಮತ ಎಣಿಕೆ ಯಂತ್ರಗಳ ಮತ ಎಣಿಕೆಗೆ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‍ಗೆ ಒಬ್ಬ ಎಣಿಕೆ ಸೂಪರ್‍ವೈಸರ್, ಒಬ್ಬ ಎಣಿಕೆ ಸಹಾಯಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್‍ನ್ನು ನೇಮಕ ಮಾಡಲಾಗಿದೆ. ಅಂಚೆ ಮತಯಂತ್ರ ಹಾಗೂ ಸರ್ವೀಸ್ ವೋಟ್‍ಗಳ ಎಣಿಕೆಯು 4 ಟೇಬಲ್‍ಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

      ಸುಮಾರು 24 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಟೇಬಲ್‍ಗೆ ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟ್‍ನಂತೆ ಹಾಜರಿರಲು ಅವಕಾಶ ನೀಡಲಾಗುವುದು. ಈಗಾಗಲೇ ಮತ ಎಣಿಕೆ ಏಜೆಂಟರುಗಳಿಗೆ ಪಾಸ್ ವಿತರಿಸಲಾಗಿದೆ. ಪಾಸ್‍ಗಳನ್ನು ತಂದವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳಿಗೆ ಎಣಿಕಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳ ಅನುಕೂಲಕ್ಕಾಗಿ ಎಣಿಕಾ ಕೇಂದ್ರದ ಆವರಣದಲ್ಲಿ ಅಭ್ಯರ್ಥಿಗಳ ಕೊಠಡಿಯನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

     ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್, ಕ್ಯಾಮೆರಾ, ಮತ್ತಿತರೆ ವಸ್ತುಗಳನ್ನು ತರಲು ಅವಕಾಶವಿರುವುದಿಲ್ಲ. ಮಾಧ್ಯಮ ಕೇಂದ್ರಕ್ಕೆ ಆಗಮಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಮೊಬೈಲ್ ತರಲು ವಿನಾಯತಿ ನೀಡಲಾಗಿದೆ ಎಂದ ಅವರು, ಮತ ಎಣಿಕಾ ಫಲಿತಾಂಶವನ್ನು ವೀಕ್ಷಿಸಲು ಮಾಧ್ಯಮ ಪ್ರತಿನಿಧಿಗಳ ಅನುಕೂಲಕ್ಕೆ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ. ಪ್ರತಿ ಸುತ್ತಿನ ಮತ ಎಣಿಕೆ ಮಾಹಿತಿಯನ್ನು ಪ್ರದರ್ಶಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

     ಮತ ಎಣಿಕಾ ಕೇಂದ್ರಕ್ಕೆ ಮತ ಎಣಿಕೆಗೂ ಮುನ್ನ ಮತ್ತು ಮತ ಎಣಿಕೆಯ ನಂತರ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುವುದು. ಮತ ಎಣಿಕಾ ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಅವರು ತಿಳಿಸಿದರು.

     ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಶಿರಾ ತಹಶೀಲ್ದಾರ್ ಮಮತ, ಎಣಿಕಾ ಕೇಂದ್ರದ ನೋಡಲ್ ಅಧಿಕಾರಿ ಡಾ: ನಾಗೇಶ್ ಕುಮಾರ್, ನಿರ್ಮಿತಿ ಕೇಂದ್ರದ ರಾಜಶೇಖರ್ ಮತ್ತಿತರರು ಹಾಜರಿದ್ದರು. 

(Visited 11 times, 1 visits today)
Previous Articleಭೋವಿ ಪರಿಷತ್ ಜಿಲ್ಲಾ ಕಛೇರಿ ಉದ್ಘಾಟಿಸಿದ ಅರವಿಂದ ಲಿಂಬಾವಳಿ
Next Article ಕೊಟ್ಟಿಗೆಗೆ ಬೆಂಕಿ ಬಿದ್ದು ಜಾನುವಾರು ಸಾವು : ನಷ್ಟದಿಂದ ರೈತ ಕಂಗಾಲು!!
News Desk Benkiyabale

Related Posts

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm news

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm news

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm news
ತಾಜಾ ಸುದ್ಧಿಗಳು
news

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm
news

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm
news

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm
news

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm
news

ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ

August 03, 2026 4:48 pm
news

ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ

August 01, 2026 2:41 pm
Our Youtube Channel
Our Picks

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm

ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ

August 03, 2026 4:48 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

By News Desk BenkiyabaleAugust 03, 2026 4:58 pm

ತುಮಕೂರು: ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ ೨ಎ ಮೀಸಲಾತಿ ದೊರೆಯುತ್ತಿದ್ದು, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ೨ಎ ಮೀಸಲಾತಿ ದೊರೆಯು ಬೇಕೆಂಬುದು…

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.