ಚಿಕ್ಕನಾಯಕನಹಳ್ಳಿ:

      ಕಾನೂನು ಎಲ್ಲರ ಸ್ವತ್ತು ಕುಟುಂಬದಲ್ಲಿ ಅತ್ತೆ ಹಾಗೂ ಗಂಡ ಎನೋ ಅಂದರು ಅಂತ ಸಣ್ಣ ಪುಟ್ಟ ವಿಚಾರಗಳಿಗೆ ನ್ಯಾಯಾಲಯದ ಮೆಟ್ಟಿಲನ್ನು ಯಾರೂ ಹತ್ತಬೇಡಿ. ಮಹಿಳೆಯರಿಗೆ ನೀಡಿರುವ ಕಾನೂನು ಸೌಲಭ್ಯಗಳನ್ನು ನ್ಯಾಯೋಚಿತವಾಗಿ ಪಡೆದು ಸದುಪಯೋಗ ಮಾಡಿಕೊಂಡು ಸಾಮರಸ್ಯ ಜೀವನದಲ್ಲಿ ಮಹಿಳೆಯರು ಮುಂದೆ ಹೋಗಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ ಪ್ರಮೀಳಾ ಹೇಳಿದರು.

      ಅವರು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಕಾನೂನು ಸೇವಾ ಪ್ರಾಧಿಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಾ ಮೊದಲು ಬಾಲ್ಯಾವಸ್ಥೆಯಲ್ಲಿ ಮಹಿಳೆಗೆ ಜವಬ್ದಾರಿ ಹೆಚ್ಚಿಸಿ ಶಿಕ್ಷಣ ವಂಚಿತಳಾಗುತ್ತಿದ್ದಳು ಮಹಿಳೆಯ ಶೋಷಣೆ ಹಾಗೂ ಭ್ರೂಣ ಹತ್ಯೆ ಇವುಗಳಲ್ಲೂ ಮಹಿಳೆ ಸಿಲುಕಿ ನಲುಗಿದ್ದಳು ಕಾಲ ಬದಲಾದಂತೆ ನಾಗರೀಕತೆ ಬೆಳೆದಂತೆ ಮಹಿಳೆ ಶಿಕ್ಷಣ ಪಡೆಯುವತ್ತ ಸಾಗಿ ಹಂತ ಹಂತವಾಗಿ ಪುರುಷನಷ್ಠೇ ಮಹಿಳೆ ಸಮಾನಗಳು ಎನ್ನುವತ್ತ ಸಾಗಿದಳು ಮಹಿಳೆಯರ ಶೋಷಣೆ ಈ ಕಲಿಯುಗದಲ್ಲಿ ಮಾತ್ರ ಅನ್ನಿಸುತ್ತಿದೆ ಹಿಂದೂ ಧರ್ಮಗಳಲ್ಲಿನ ಹಿರಿಯರು ನಂಬಿರುವ ದಾರಿಯಲ್ಲಿ ದೇವರ ಮೇಲಿನ ಭಕ್ತಿಯಿಂದ ಹೇಳುತ್ತಿದ್ದೇನೆ ಪರಶಿವ ಕೂಡ ಅರ್ಧನಾರೀಶ್ವರನಾಗಿ ಮಹಿಳೆಯೇ ನನ್ನ ಒಂದು ಭಾಗ ಎಂದು ತೋರಿಸಿದರೆ ಶ್ರೀಮನ್ನಾರಾಯಣ ಕೂಡ ಮಹಿಳೆಗೆ ಹೃದಯದಲ್ಲಿ ಸ್ಥಾನ ಮಾನ ನೀಡಿ ಗೌರವಿಸಿದರು. ಹೀಗಿರುವಾಗ ಆಧುನಿಕ ಜಗತ್ತಿನಲ್ಲಿ ಹೆಣ್ಣಿಗೆ ಹೆಣ್ಣೆ ಶತ್ರವಾಗಬಾರದು ಒಬ್ಬ ತಾಯಿ ತನ್ನ ಮಗಳ ಕ್ಷೇಮ ಆಗ ಮಹಿಳಾ ದಿನಾಚರಣೆಗೊಂದು ಅರ್ಥ ಸಿಗುತ್ತದೆ ಕಾನೂನು ಎಲ್ಲರಿಗೂ ಸಮಾನ ಅದನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಬಾರದು ಸಣ್ಣ ಪುಟ್ಟದಾಗಿ ಅತ್ತೆ ಗಂಡ ಹಾಗಂದರು ಹೀಗಂದರೂ ಅಂತ ನ್ಯಾಯಾಲಯಕ್ಕೆ ಬರಬಾರದು ಇದರಿಂದ ಸಾಮರಸ್ಯ ಹಾಳಾಗುತ್ತದೆ ಎಂದರು.

      ವಕೀಲರಾದ ರತ್ನರಂಜಿನಿ ಸಂಪನ್ಮುಲ ವ್ಯಕ್ತಿಯಾಗಿ ಮಾತನಾಡುತ್ತಾ ಮಹಿಳೆ ಮನೆಗೆ ಮಾತ್ರ ಸೀಮಿತಳಾಗಿ ಮಗಳಾಗಿ ಗೃಹಿಣಿಯಾಗಿ ಸೊಸೆಯಾಗಿ ತಾಯಿಯಾಗಿ ಮನೆಯ ಚೌಕಟ್ಟಿನಲ್ಲಿ ಇದ್ದ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾನಳಾಗಿದ್ದುಕೊಂಡು ಪುರುಷರಷ್ಠೇ ನಾವೂ ಸಮಾನರು ಎಂದು ಸಾಧಿಸಿ ಸಮರ್ಥಳಾಗಿದ್ದಾಳೆ ಕಾನೂನು ಎಲ್ಲರಿಗೂ ರಕ್ಷಣೆ ನೀಡಬೇಕೆಂದು ರಚಿತವಾಗಿದ್ದು, ನಮಗೆ ಸಿಗಬೇಕಾದ ಸವಲತ್ತಿಗಾಗಿ ಕಾನೂನು ಮೊರೆ ಹೋಗಬೇಕೆ ಹೊರತು ಕಾನೂನನ್ನು ದುರುಪಯೋಗ ಪಡಿಸಿಕೊಂಡು ಯಾರೂ ಹೋಗಬಾರದು ಇದರಿಂದ ನಿಜವಾಗಿ ನೊಂದವರಿಗೆ ಕಾನೂನು ರಕ್ಷಣೆ ಸಿಗದೆ ಇರಲುಬಹುದು ಇಂತಹ ಅವಕಾಶಗಳಿಗೆ ಯಾರೂ ಅವಕಾಶ ಮಾಡಿಕೊಡಬೇಡಿ ಎಂದರು.

      ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ಮಾತನಾಡುತ್ತ ಮಹಿಳೆಯರನ್ನು ಹಿಂದೆ ಮುಕ್ತ ವಾತಾವರಣ ಸೃಷ್ಠಿಸಬೇಕೆನ್ನುವುದು ಸಮಾಜದ ಉದ್ದೇಶ ಸಾಧನೆ ಮಾಡಿರುವ ಮಹಿಳೆಯರು ಅವರಲ್ಲಿನ ಶಿಕ್ಷಣ ಅಥವಾ ಅವರು ಇದ್ದ ವಾತಾವರಣದಿಂದ ಮಾತ್ರ ಸಾಧ್ಯವಾಗಿದೆ ಮಹಿಳೆಯರು ಸೀರೆ ಅಡುಗೆ ವಿಚಾರಕ್ಕೆ ರಾಜಕೀಯ ವಿಚಾರಗಳು ಮಕ್ಕಳಿಗಾಗಿ ಶೈಕ್ಷಣೀಕ ಪ್ರಗತಿಗಳ ಬಗ್ಗೆ ಚರ್ಚೆಗೆ ಮುಂದಾದರೆ ದೇಶವೇ ಸಮಗ್ರ ಅಭಿವೃದ್ದಿಯತ್ತ ಸಾಗುವ ಜೊತೆಗೆ ಸಮಾನತೆಯ ಸ್ವಾಭೀಮಾನದ ಮಹಿಳೆಯಾಗುತ್ತಾಳೆ ಎಂದರು.

      ಈ ಸಂದರ್ಭದಲ್ಲಿ ವಿ.ವಿ.ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ಚುನಾವಣೆಯ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ನಾಗರತ್ನಮ್ಮಗೆ ಸನ್ಮಾನಿಸಿ 10 ಸಾವಿರ ಚೆಕ್ ನೀಡಿ ಸನ್ಮಾನಿಸಲಾಯಿತು.

(Visited 20 times, 1 visits today)