BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್
  • ತುಮಕೂರು ವಿವಿಯ ಜೈನ ಅಧ್ಯಯನ ವಿಭಾಗದ ಉಳಿವಿಗೆ ಸಹಕಾರ ಅಗತ್ಯ
  • ಹಾಲಿನ ಡೇರಿ ಪಿಲ್ಲರ್ ಕುಸಿದು ವಿದ್ಯಾರ್ಥಿ ಧನುಷ್ ಸಾವು: ಗ್ರಾಮದಲ್ಲಿ ಶೋಕಸಾಗರ
  • ಬಸ್ ತಡೆದಿದ್ದಕ್ಕೆ ವಿದ್ಯಾರ್ಥಿಗಳು ಪೊಲೀಸರ ನಡುವೆ ವಾಗ್ವಾದ
  • ಎಸ್‌ಐಆರ್: ಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
  • ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್
  • ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು
  • ಕನಿಷ್ಠ ವೇತನ, ಸೇವಾ ಭದ್ರತೆ ಒದಗಿಸುವಂತೆ ಹೊರಗುತ್ತಿಗೆ ನೌಕರರ ಪ್ರತಿಭಟನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೈಕೊಟ್ಟ ಮಳೆ : ಒಣಗುತ್ತಿರುವ ರಾಗಿ ಪೈರು : ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿರುವ ರೈತರ ಬದುಕು
ತುಮಕೂರು ಜಿಲ್ಲಾ ಸುದ್ಧಿಗಳು

ಕೈಕೊಟ್ಟ ಮಳೆ : ಒಣಗುತ್ತಿರುವ ರಾಗಿ ಪೈರು : ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿರುವ ರೈತರ ಬದುಕು

By News Desk BenkiyabaleUpdated:November 22, 2018 4:31 pm

ತಿಪಟೂರು :

      ಕಲ್ಪತರು ನಾಡಿನ ರೈತರು ಮಳೆ ಇಲ್ಲದೆ ದಿನವೂ ಬೆಂಕಿಯಂತಹ ಉರಿಬಿಸಿಲು ಕಾರುತ್ತಿರುವ ಆಕಾಶದೆಡೆಗೆ ಹತಾಶಾಭಾವದಿಂದ ನೋಡುತ್ತಾ ಮಳೆರಾಯ ಕೃಪೆ ತೋರುವನೋ ಇಲ್ಲವೋ ಎಂಬ ಚಿಂತೆಯ ಚಿತೆಗೆ ಬಿದ್ದು ಕಾಲ ಕಳೆಯುವಂತಾಗಿದೆ.

      ಇತ್ತೀಚಿನ ಹಲವಾರು ವರ್ಷಗಳಲ್ಲಿ ತಾಲ್ಲೂಕಿಗೆ ಸುರಿದಿರುವ ಮಳೆ ಪ್ರಮಾಣ ಲೆಕ್ಕ ಹಾಕಿ ನೋಡಿದರೆ ವರ್ಷ ವರ್ಷವೂ ಇಳಿಕೆಯಾಗುವ ಮೂಲಕ ನಿರಂತರವಾಗಿ ಭೀಕರ ಬರಗಾಲ ಎದುರಾಗುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ತಾಲ್ಲೂಕಿನಾದ್ಯಂತ ಭಯಾನಕ ಬರಗಾಲ ಸೃಷ್ಠಿಯಾಗಿದೆ. ಈ ವರ್ಷ ಮೇ, ಜೂನ್ ತಿಂಗಳಲ್ಲಿ ಬಂದ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ರೈತರ ಪಾಲಿಗೆ ನಿರಾಶಾದಾಯಕವಾಗಿತ್ತು. ನಂತರ ಈ ಹಿಂಗಾರಿನವರೆಗೂ ಮಳೆರಾಯ ಸಂಪೂರ್ಣ ಮುನಿಸಿಕೊಂಡಿದ್ದು, ಮಳೆಯನ್ನೇ ನೆಚ್ಚಿ ಬದುಕುತ್ತಿರುವ ತಾಲ್ಲೂಕಿನ ರೈತರು ಕಂಗಾಲಾಗುವಂತೆ ಮಾಡಿದೆ. ಅಲ್ಪಸ್ವಲ್ಪ ಬಿದ್ದಿದ್ದ ಮಳೆಗೆ ರೈತರು ಸಾಲಶೂಲ ಮಾಡಿಕೊಂಡು ರಾಗಿ ಮತ್ತಿತರೆ ಬೆಳೆಗಳನ್ನು ಬಿತ್ತಿದ್ದರು. ಆದರೆ ಮಳೆರಾಯ ಸಂಪೂರ್ಣ ಕೈಕೊಟ್ಟ ಪರಿಣಾಮ ಪೂರ್ವಮುಂಗಾರು, ಮುಂಗಾರು ಜೊತೆಗೆ ಹಿಂಗಾರು ಬೆಳೆಗಳು ಇಲ್ಲದಂತಾಗಿ ಹೇಳಲಾರದಂತಹ ಸಂಕಷ್ಠಕ್ಕೆ ರೈತರು ಸಿಲುಕಿದ್ದಾರೆ.

ಕೇವಲ ಅಸೆ :

      ಕಳೆದ ವಾರದಿಂದ ತಾಲ್ಲೂಕಿನಾದ್ಯಂತ ಸೆಖೆ ತೀವ್ರವಾಗಿದ್ದು, ಗುಡುಗು ಸಹಿತ ಮಳೆ ಮೋಡ ಕಾಣಿಸಿಕೊಂಡು ಇನ್ನೇನು ಭಾರಿ ಮಳೆ ಬೀಳುವ ಲಕ್ಷಣಗಳನ್ನು ತೋರುತ್ತಿರುವುದು ಬಿಟ್ಟರೆ ಭೂಮಿಗಂತೂ ಮಳೆರಾಯ ಕೃಪೆ ತೋರುತ್ತಿಲ್ಲ. ಇಲ್ಲಿನ ರೈತರಿಗೆ ಬರೀ ಗುಡುಗು-ಮಿಂಚಿನ ಆಸೆಯನ್ನೇ ಮಳೆರಾಯ ತೋರುತ್ತಿರುವುದು ತಾಲ್ಲೂಕಿನ ಜನತೆಗೆ ತೀವ್ರ ನಿರಾಸೆ ತಂದೊಡ್ಡಿದೆ.

ಬಿಸಿಲ ಬೇಗೆಗೆ ಒಣಗಿದ ರಾಗಿ :

      ಬಂದ ಅಷ್ಟಿಷ್ಟು ಮಳೆಗೆ ರೈತರು ರಾಗಿ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆಯ ನಂತರ ಈವರೆಗೂ ಮಳೆರಾಯ ಕೃಪೆ ತೋರುತ್ತಿಲ್ಲವಾದ್ದರಿಂದ ರಾಗಿ ಬೆಳೆ ಸಂಪೂರ್ಣ ಒಣಗಲಾರಂಬಿಸಿದೆ. ಇದರಿಂದ ಕಂಗಾಲಾಗಿರುವ ರೈತರು ಮುಂದೇನು? ಎಂಬ ಚಿಂತೆಗೆ ಬಿದ್ದಿದ್ದಾರೆ. ಅತ್ಯಂತ ಕಡಿಮೆ ಮಳೆಗೂ ಬೆಳೆಯುವ ರಾಗಿಪೈರು ಒಂದನಿಯೂ ಮಳೆ ಇಲ್ಲದೆ ಒಣಗಲಾರಂಬಿಸಿದೆ. ಕಾಳು ಕಟ್ಟುವ ಈ ಹಂತದಲ್ಲಿ ರಾಗಿ ಸಂಪೂರ್ಣ ಒಣಗಿ ಹೋಗುತ್ತಿರುವುದರಿಂದ ರೈತರು ತಮ್ಮ ದನಕರುಗಳನ್ನು ಕಟ್ಟಿ ಮೇಯಿಸುತ್ತಿದ್ದಾರೆ. ಕೃಷಿ ಯಾವತ್ತೂ ಲಾಭದಾಯಕವಾಗಲಾರದು ಎಂಬುದನ್ನ ರಾಗಿ ಬೆಳೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವುದು ನೋಡಿದರೆ ಈಗಾಗಲೆ ಅಳಿವಿನಂಚಿನಲ್ಲಿರುವ ಕೃಷಿಕಾಯಕಕ್ಕೆ ಮತ್ತಷ್ಟು ಹೊಡೆತ ಬೀಳಬಹುದೇನೊ. ಸಾವಿರಾರು ರೂಪಾಯಿ ಸಾಲ ತಂದು ದುಬಾರಿ ಕೃಷಿ ವೆಚ್ಚದೊಂದಿಗೆ ಉಳುಮೆ ಮಾಡಿ ಬೀಜ-ಗೊಬ್ಬರ ಖರೀದಿಸಿ ಹಗಲಿರುಳು ಜೋಪಾನ ಮಾಡಿದ್ದ ತಾಲ್ಲೂಕಿನ ಜನ-ಜಾನುವಾರುಗಳ ಪ್ರಮುಖ ರಾಗಿ ಬೆಳೆ ಈ ವರ್ಷವೂ ಕೈಕೊಟ್ಟಿರುವುದು ರೈತನ ಭವಿಷ್ಯಕ್ಕೆ ಕೃಷಿ ಯಾವತ್ತೂ ಲಾಭದಾಯಕವಲ್ಲ ಅನ್ನುವುದನ್ನು ಸಾಬೀತುಪಡಿಸಿದೆ.

      ಈ ವರ್ಷವೂ ಮಳೆರಾಯ ಕೈಕೊಟ್ಟಿದ್ದು, ರಾಗಿ ಕಾಳುಕಟ್ಟುವ ಹಂತದಲ್ಲಿಯೇ ಮಳೆ ಇಲ್ಲದ ಪರಿಣಾಮ ಇತ್ತ ರಾಗಿಯೂ ಇಲ್ಲ ಅತ್ತ ರಾಗಿ ದನಕರುಗಳಿಗೆ ಮೇವೂ ಇಲ್ಲ ಎಂಬಂತಾಗಿದೆ. ರೈತರಿಗೆ ಮೇವು ಮತ್ತು ರಾಗಿ ಎರಡೂ ಮುಖ್ಯವಾಗಿದ್ದು, ಮಳೆ ಬಾರದೆ ಬರಗಾಲದ ಛಾಯೆ ಆವರಿಸಿದ್ದು, ರೈತರು ಜೀವನ ನಡೆಸುವುದು ದುಸ್ತರವಾಗಿದೆ. ಸರ್ಕಾರ ಕೂಡಲೆ ನೆರವಿಗೆ ಧಾವಿಸಬೇಕಿದೆ.

– ವಾಗೀಶ್, ರೈತ

      ಸಾವಿರಾರು ಎಕರೆಗೆ ರೈತರು ರಾಗಿ ಮತ್ತಿತರೆ ಬೆಳೆಗಳನ್ನು ಬಿತ್ತಿದ್ದು ಕಾಳು ಅಗತ್ಯಕ್ಕೆ ತಕ್ಕಂತೆ ಬೆಳೆ ದು ಕಾಳು ಕಟ್ಟುವ ಈ ಸಮಯದಲ್ಲಿ ಮಳೆ ಕೈಕೊಟ್ಟಿರುವುದು ರಾಗಿ ಇಳುವರಿ ಮೇಲೆ ತೀವ್ರ ಹೊಡೆತ ತಂದಿದೆ. ಈಗ ಮಳೆಯಾದರೂ ದನಕರುಗಳಿಗೆ ಮೇವಾದರೂ ಆಗಬಹುದು.

– ಜಯಪ್ಪ, ಸಹಾಯಕ ಕೃಷಿ ನಿರ್ದೇಶಕರು, ತಿಪಟೂರು.

(Visited 64 times, 1 visits today)
Previous Articleರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ : ಆಹ್ವಾನ ಪತ್ರಿಕೆಯಲ್ಲಿನ ಮುಖ್ಯಸ್ಥರೆಲ್ಲಾ ಗೈರುಹಾಜರ್
Next Article ತಿಪಟೂರು-ಹುಳಿಯಾರು ರಸ್ತೆ ದುರಸ್ಥಿಗೆ ಒತ್ತಾಯ
News Desk Benkiyabale

Related Posts

ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್

August 19, 2026 5:40 pm news

ತುಮಕೂರು ವಿವಿಯ ಜೈನ ಅಧ್ಯಯನ ವಿಭಾಗದ ಉಳಿವಿಗೆ ಸಹಕಾರ ಅಗತ್ಯ

August 19, 2026 5:39 pm news

ಹಾಲಿನ ಡೇರಿ ಪಿಲ್ಲರ್ ಕುಸಿದು ವಿದ್ಯಾರ್ಥಿ ಧನುಷ್ ಸಾವು: ಗ್ರಾಮದಲ್ಲಿ ಶೋಕಸಾಗರ

August 19, 2026 5:37 pm news
ತಾಜಾ ಸುದ್ಧಿಗಳು
news

ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್

August 19, 2026 5:40 pm
news

ತುಮಕೂರು ವಿವಿಯ ಜೈನ ಅಧ್ಯಯನ ವಿಭಾಗದ ಉಳಿವಿಗೆ ಸಹಕಾರ ಅಗತ್ಯ

August 19, 2026 5:39 pm
news

ಹಾಲಿನ ಡೇರಿ ಪಿಲ್ಲರ್ ಕುಸಿದು ವಿದ್ಯಾರ್ಥಿ ಧನುಷ್ ಸಾವು: ಗ್ರಾಮದಲ್ಲಿ ಶೋಕಸಾಗರ

August 19, 2026 5:37 pm
news

ಬಸ್ ತಡೆದಿದ್ದಕ್ಕೆ ವಿದ್ಯಾರ್ಥಿಗಳು ಪೊಲೀಸರ ನಡುವೆ ವಾಗ್ವಾದ

August 19, 2026 5:36 pm
news

ಎಸ್‌ಐಆರ್: ಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

August 19, 2026 5:34 pm
news

ಕ್ಷೇತ್ರ ಬಿಡುವ ಮಾತೇ ಇಲ್ಲ: ಪಿ.ಆರ್.ಸುಧಾಕರ್ ಲಾಲ್

August 18, 2026 5:00 pm
Our Youtube Channel
Our Picks

ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್

August 19, 2026 5:40 pm

ತುಮಕೂರು ವಿವಿಯ ಜೈನ ಅಧ್ಯಯನ ವಿಭಾಗದ ಉಳಿವಿಗೆ ಸಹಕಾರ ಅಗತ್ಯ

August 19, 2026 5:39 pm

ಹಾಲಿನ ಡೇರಿ ಪಿಲ್ಲರ್ ಕುಸಿದು ವಿದ್ಯಾರ್ಥಿ ಧನುಷ್ ಸಾವು: ಗ್ರಾಮದಲ್ಲಿ ಶೋಕಸಾಗರ

August 19, 2026 5:37 pm

ಬಸ್ ತಡೆದಿದ್ದಕ್ಕೆ ವಿದ್ಯಾರ್ಥಿಗಳು ಪೊಲೀಸರ ನಡುವೆ ವಾಗ್ವಾದ

August 19, 2026 5:36 pm

ಎಸ್‌ಐಆರ್: ಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

August 19, 2026 5:34 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಮಕ್ಕಳ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸಂತೋಷ್ ಕುಮಾರ್

By News Desk BenkiyabaleAugust 19, 2026 5:40 pm

ತುಮಕೂರು: ಮಕ್ಕಳಿಗೆ ಗುಣಮಟ್ಟದ ಆರೋಗ್ಯ, ಶಿಕ್ಷಣ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು…

ತುಮಕೂರು ವಿವಿಯ ಜೈನ ಅಧ್ಯಯನ ವಿಭಾಗದ ಉಳಿವಿಗೆ ಸಹಕಾರ ಅಗತ್ಯ

August 19, 2026 5:39 pm

ಹಾಲಿನ ಡೇರಿ ಪಿಲ್ಲರ್ ಕುಸಿದು ವಿದ್ಯಾರ್ಥಿ ಧನುಷ್ ಸಾವು: ಗ್ರಾಮದಲ್ಲಿ ಶೋಕಸಾಗರ

August 19, 2026 5:37 pm

ಬಸ್ ತಡೆದಿದ್ದಕ್ಕೆ ವಿದ್ಯಾರ್ಥಿಗಳು ಪೊಲೀಸರ ನಡುವೆ ವಾಗ್ವಾದ

August 19, 2026 5:36 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.