BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ
  • ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ
  • ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ
  • ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ
  • ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್
  • ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕೊರತೆಗಳಿಲ್ಲ
  • ನಗರದಲ್ಲಿ ಅ. ೧೧ ರಿಂದ ೨೧ರವರೆಗೆ ದಸರಾ ಉತ್ಸವ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕೊರಟಗೆರೆ : 47 ಕೋಟಿ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಡಿಸಿಎಂ ಶಂಕುಸ್ಥಾಪನೆ
ತುಮಕೂರು ಜಿಲ್ಲಾ ಸುದ್ಧಿಗಳು

ಕೊರಟಗೆರೆ : 47 ಕೋಟಿ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಡಿಸಿಎಂ ಶಂಕುಸ್ಥಾಪನೆ

By News Desk BenkiyabaleUpdated:February 23, 2019 4:55 pm

 ತುಮಕೂರು :

      ಕೊರಟಗೆರೆ ಪಟ್ಟಣದ ಊರ್ಡಿಗೆರೆ ಕ್ರಾಸ್ ಬಳಿ 47.49ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ.ಪರಮೇಶ್ವರ್ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

      ಕೊರಟಗೆರೆ ಪಟ್ಟಣ ಪರಿಮಿತಿಯಲ್ಲಿ 15ಕೋಟಿ ರೂ.ಗಳ ವೆಚ್ಚದ ಹುಣಸನಹಳ್ಳಿ-ಚಿಕ್ಕಹಳ್ಳಿ(ಎಸ್.ಹೆಚ್-3) 2.40 ಕಿ.ಮೀ. ರಸ್ತೆಗೆ ವೈಟ್-ಟಾಪಿಂಗ್, ತಾಲೂಕಿನ ವ್ಯಾಪ್ತಿಯಲ್ಲಿ 18.36ಕೋಟಿ ರೂ.ಗಳ ವೆಚ್ಚದಲ್ಲಿ ಬಾಗೇಪಲ್ಲಿ-ಹಲಗೂರು (ರಾಜ್ಯ ಹೆದ್ದಾರಿ-94ರ ಸರಪಳಿ 80.57 ಕಿ.ಮೀ ರಿಂದ 103.87 ಕಿ.ಮೀ.ವರೆಗೆ) ರಸ್ತೆ ಅಭಿವೃದ್ಧಿ ಕಾಮಗಾರಿ 10.51ಕೋಟಿ ರೂ.ಗಳ ವೆಚ್ಚದಲ್ಲಿ ಕೊರಟಗೆರೆ ತಾಲೂಕಿನ ತುಂಬಾಡಿ-ಜೋನಿಗರಹಳ್ಳಿ ಸೇರುವ(ಸರಪಳಿ 13.10 ಕಿ.ಮೀ.ವರೆಗೆ) ರಸ್ತೆ ಹಾಗೂ 18.62ಕೋಟಿ ರೂ.ಗಳ ವೆಚ್ಚದಲ್ಲಿ ಮಧುಗಿರಿ ತಾಲೂಕು ವ್ಯಾಪ್ತಿ ಕೊರಟಗೆರೆ–ಆಂಧ್ರಪ್ರದೇಶ ಗಡಿಯ ಕೊಡಗದಾಲ-ಐ.ಡಿ ಹಳ್ಳಿ ಮಾರ್ಗವಾಗಿ (ರಾಜ್ಯ ಹೆದ್ದಾರಿ-160 ಸರಪಳಿ 13 ಕಿ.ಮೀ. ರಿಂದ 41 ಕಿ.ಮೀ. ವರೆಗೆ) ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.

       ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕೊರಟಗೆರೆ ಪಟ್ಟಣದಲ್ಲಿ ಹಾದು ಹೋಗುವ ಹುಣಸನಹಳ್ಳಿ-ಚಿಕ್ಕಹಳ್ಳಿ 2.5 ಕಿ.ಮೀ ಸಿಮೆಂಟ್ ರಸ್ತೆಯನ್ನು ಪಾದಾಚಾರಿ ಮಾರ್ಗ, ಚರಂಡಿಯನ್ನೊಳಗೊಂಡಂತೆ ಆಧುನಿಕ ಮಾದರಿಯಲ್ಲಿ ವಿಶೇಷ ಪ್ಯಾಕೇಜ್‍ನಡಿ ನಿರ್ಮಾಣ ಮಾಡಲಾಗುವುದು. ಕೊರಟಗೆರೆ ಪಟ್ಟಣದ ರಸ್ತೆಯನ್ನು ಈಗಾಗಲೇ ಅಗಲೀಕರಣ ಮಾಡಲಾಗಿದ್ದು, ಮತ್ತೊಂದು ಬಾರಿ ಅಗಲೀಕರಣ ಮಾಡಲಾಗುವುದೆಂದು ಜನರಲ್ಲಿ ತಪ್ಪು ಕಲ್ಪನೆಯಿದೆ. ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ಮಾಡುವುದಿಲ್ಲ. ಜನರು ಆತಂಕಕ್ಕೊಳಗಬಾರದು ಎಂದು ಸ್ಪಷ್ಟಪಡಿಸಿದರು.

      ಕೊರಟಗೆರೆ ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ 200 ಕೋಟಿ ರೂ.ಗಳನ್ನು ಈಗಾಗಲೇ ಮಂಜೂರು ಮಾಡಲಾಗಿದ್ದು, ಕೆಲವೆಡೆ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಿ ಪ್ರಗತಿಯಲ್ಲಿವೆ. ಉಳಿದ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಲು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ಗಳಿಗೆ ಸೂಚನೆ ನೀಡಲಾಗಿದೆ ಎಂದರು.

      ಕೊರಟಗೆರೆ ಪಟ್ಟಣದಲ್ಲಿ ಸುಮಾರು 1500 ಆಸನವುಳ್ಳ ಕಲಾಭವನ ನಿರ್ಮಾಣಕ್ಕೆ ಅನುದಾನ ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಕಲಾ ಭವನ ನಿರ್ಮಾಣಕ್ಕೆ 20 ಕೋಟಿ ರೂ.ಗಳ ಅಂದಾಜುಪಟ್ಟಿ ತಯಾರಿಸಲಾಗಿದ್ದು, ಶೀಘ್ರದಲ್ಲೇ ಮಂಜೂರು ಮಾಡಲಾಗುವುದು. ಅಲ್ಲದೆ ಪಟ್ಟಣದಲ್ಲಿರುವ ಗೋಕುಲ ಕೆರೆಯನ್ನು ಸರ್ವೇ ಮಾಡಿ ತಂತಿಬೇಲಿ ಹಾಕಲು ಚಿಂತನೆ ನಡೆಸಲಾಗಿದೆ. ಕೆರೆ ಸುತ್ತ ವಾಕಿಂಗ್ ಪಾತ್ ವೇ ನಿರ್ಮಿಸಿ ಸುಂದರೀಕರಣಗೊಳಿಸಲು ಅಂದಾಜು ಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಪಟ್ಟಿ ಸಿದ್ದಗೊಳಿಸಿದ ನಂತರ ಹಣ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

     ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರಟಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.83ಕ್ಕಿಂತ ಹೆಚ್ಚು ಜನರು ಕೃಷಿಯೇತರ ಚಟುವಟಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಹೊಂದಿದ್ದು, ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವುದರಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರಟಗೆರೆ ಪಟ್ಟಣವನ್ನು ಮೇಲ್ದರ್ಜೆಗೇರಿಸಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ದೊರೆಯುತ್ತದೆ. ಇದರಿಂದ ಕೊರಟಗೆರೆ ಮತ್ತಷ್ಟು ಅಭಿವೃದ್ದಿ ಕಾಣಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭ ಕಲ್ಯಾಣ್, ಡಿವೈಎಸ್ಪಿ ಶೋಭಾರಾಣಿ, ಜಿಲ್ಲಾ ಪಂಚಾಯತ್ ಸದಸ್ಯೆ ಪ್ರೇಮಾ ಮಹಾಲಿಂಗಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಲೋಕೋಪಯೋಗಿ ಇಲಾಖೆ ಎಇಇ ಜಗಧೀಶ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

(Visited 25 times, 1 visits today)
Previous Articleಸಮರ್ಪಕ ಬರ ನಿರ್ವಹಣೆಗೆ ಡಿಸಿಎಂ ಸೂಚನೆ
Next Article 3ಡಿ ಚಿತ್ರಗಳಿಂದ ತುಮಕೂರು ನಗರಕ್ಕೆ ಹೊಸ ಮೆರಗು
News Desk Benkiyabale

Related Posts

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm news

ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ

October 09, 2026 5:41 pm news

ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ

October 09, 2026 5:39 pm news
ತಾಜಾ ಸುದ್ಧಿಗಳು
news

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm
news

ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ

October 09, 2026 5:41 pm
news

ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ

October 09, 2026 5:39 pm
news

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

October 08, 2026 6:05 pm
news

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm
news

ಮಹಿಳೆಯರಿಗೆ ಶೇ. ೫೦ ರಷ್ಟು ಪ್ರಾತಿನಿಧ್ಯ

October 08, 2026 6:02 pm
Our Youtube Channel
Our Picks

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

October 09, 2026 5:43 pm

ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ

October 09, 2026 5:41 pm

ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ

October 09, 2026 5:39 pm

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

October 08, 2026 6:05 pm

ಕ್ರೀಡೆಯಿ0ದ ಶಿಸ್ತು, ಛಲ, ಸಮರ್ಪಣೆ ಬೆಳೆಸಿಕೊಳ್ಳಿ: ತಹಶೀಲ್ದಾರ್

October 08, 2026 6:03 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಪತ್ರಿಕೆಯ ವರದಿಯ ಫಲವಾಗಿ ಬಡವರ ಹಸಿವು ನೀಗಿಸಲು ಮುಂದಾದ ಆಡಳಿತ

By News Desk BenkiyabaleOctober 09, 2026 5:43 pm

ಹುಳಿಯಾರು: ಜನಸಾಮಾನ್ಯರ ಹಾಗೂ ಬಡವರ ಹಸಿವು ನೀಗಿಸಬೇಕಿದ್ದ ಹುಳಿಯಾರಿನ ಇಂದಿರಾ ಕ್ಯಾಂಟೀನ್ ಸೂಕ್ತ ನಿರ್ವಹಣೆ ಮತ್ತು ನಿರ್ಲಕ್ಷ÷್ಯದಿಂದಾಗಿ ಕಳೆದ ಒಂದು…

ಧರ್ಮಸ್ಥಳ ಸಂಸ್ಥೆ ವ್ಯಸನಮುಕ್ತಗೊಳಿಸಿ ಮನೆಯ ದೀಪ ಬೆಳಗುತ್ತಿದೆ

October 09, 2026 5:41 pm

ಕನ್ನಡ ರಾಜ್ಯೋತ್ಸವ: ಕನ್ನಡಾಂಬೆ ಭುವನೇಶ್ವರಿ ದೇವಿಯ ಮೆರವಣಿಗೆಗೆ ಡಿಸಿ ಸೂಚನೆ

October 09, 2026 5:39 pm

ಕಲಬೆರಕೆ ಆಹಾರ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ

October 08, 2026 6:05 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.