ಬೆಂಗಳೂರು:

     ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರಿಗೆ ನಗರದ 1ನೇ ಎಸಿಎಂಎಂ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.

      ಆ್ಯಂಬಿಡೆಂಟ್ ಕಂಪನಿಯ ಮಾಲೀಕ ಸೈಯದ್ ಅಹಮದ್ ಫರೀದ್ ನಿಂದ 57 ಕೆಜಿ ಚಿನ್ನದ ಗಟ್ಟಿ ಪಡೆದುಕೊಂಡ ಆರೋಪದ ಪ್ರಕರಣದಲ್ಲಿ ಜೈಲು ಸೇರಿದ್ದ ಗಾಲಿ ಜನಾರ್ದನ ರೆಡ್ಡಿಗೆ  ಬಿಗ್ ರಿಲೀಫ್ ಸಿಕ್ಕಂತಾಗಿದೆ.

      ಇನ್ನು ಪ್ರಕರಣ ಸಂಬಂಧ ಸಿಸಿಬಿ ಪೋಲಿಸರು ನ್ಯಾಯಾಲಯದ ಮುಂದೆ ಒಂದು ವೇಳೆ ಜಾಮೀನು ನೀಡಿದರೆ ರೆಡ್ಡಿಯವರು ಸಾಕ್ಷಿಗಳನ್ನು ನಾಶಪಡಿಸಬಹುದು ಹೀಗಾಗಿ ಜಾಮೀನು ನೀಡಬೇಡಿ ಅಂತ ಮನವಿ ಮಾಡಿದ್ದರು, ಆದರೆ ನ್ಯಾಯಾಲಯದ ಸಿಸಿಬಿಯ ಮನವಿಯನ್ನು ತಿರಸ್ಕರಿಸಿ ಜನಾರ್ಧನ ರೆಡ್ಡಿ ಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. 

      ಇಬ್ಬರ ಶೂರಿಟಿ ಮತ್ತು ಒಂದು ಲಕ್ಷ ರೂ. ಬಾಂಡ್​ನೊಂದಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ನಾಲ್ಕು ದಿನಗಳ ಕಾರಾಗೃಹ ವಾಸದಿಂದ ರೆಡ್ಡಿ ಹೊರಬಂದಿದ್ದಾರೆ.

 

 

(Visited 7 times, 1 visits today)