ಕೊರಟಗೆರೆ:

      ನಮ್ಮದೇಶದ ಶಿಕ್ಷಣ ಕ್ಷೇತ್ರದ ನೀತಿಗಳು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಅಪಾಯದಅಂಚಿಗೆತಲುಪುವಂತೆ ಮಾಡಿದೆಎಂದು ಮಾಜಿಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ವಿಷಾದ ವ್ಯಕ್ತಪಡಿಸಿದರು.

      ಪಟ್ಟಣದ ಮಾರುತಿಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದಡಾ.ಎಸ್.ರಾಧಕೃಷ್ಣನ್‍ರವರ 132ನೇ ಜಯಂತಿಯ ಪ್ರಯುಕ್ತ ಗುರುವಾರ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ಸರಕಾರ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದೇ ಸರಕಾರಿ ಶಾಲೆಗಳ ಅವನತಿಗೆ ಮೂಲ ಕಾರಣವಾಗಿದೆ. ಖಾಸಗಿ ಶಾಲೆಗಳ ವಾಹನಗಳು ಮನೆಯ ಬಾಗಿಲಿಗೆ ಬಂದು ಸರಕಾರಿ ಶಾಲೆಗಳು ಮುಚ್ಚುತ್ತೀವೆ. ಸರಕಾರಿ ಶಾಲೆಗಳಲ್ಲಿ ಉತ್ತಮಗುಣಮಟ್ಟದ ಶಿಕ್ಷಣ ಕಲ್ಪಿಸಿದರೇ ಖಾಸಗಿ ಶಾಲೆಗಳ ಅವಶ್ಯಕತೆಯೇ ಬರುವುದಿಲ್ಲ ಎಂದು ತಿಳಿಸಿದರು.

      ತಂತ್ರಜ್ಞಾನದಲ್ಲಿಇಡೀ ವಿಶ್ವಕ್ಕೆ ಭಾರತಕೊಡುಗೆಅಪಾರವಾಗಿದೆ. ನಮ್ಮರಾಜಧಾನಿ ಬೆಂಗಳೂರಿನಲ್ಲಿ ದೇಶದ ಶೇ.60ರಷ್ಟು ಸಾಪ್ಟ್‍ವೇರ್ ಕಂಪನಿಗಳೇ ತಂತ್ರಾಂಶತಯಾರು ಮಾಡುತ್ತೀವೆ. ಇದರಿಂದದೇಶ ಮತ್ತುರಾಜ್ಯಕ್ಕೆ ನೂರಾರುಕೋಟಿ ಲಾಭ ಬರುತ್ತೀದೆ. ಶಿಕ್ಷಣ ಎಂಬುದು ಮುಂದಿನ ಪೀಳಿಗೆಯನ್ನು ಮಾಡಲಿದೆ. ಇದರ ಗುರುತ್ತರ ಜವಾಬ್ದಾರಿ ಮತ್ತುಕರ್ತವ್ಯ ಶಿಕ್ಷಕರದಾಗಿದೆ ಎಂದು ಹೇಳಿದರು.

      ಶಿಕ್ಷಣ ಇಲಾಖೆಯಿಂದ ನಿವೃತ್ತಿಯಾದ ಶಿಕ್ಷಕರಿಗೆ ಮತ್ತುಉತ್ತಮ ಶಾಲೆಯ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿಅತಿಹೆಚ್ಚುಅಂಕಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟ್ಯಾಪ್ ವಿತರಣೆ ಮಾಡಲಾಯಿತು. ಐಎಎಸ್ ಮತ್ತುಐಪಿಎಸ್ ಪರೀಕ್ಷೆಯಲ್ಲಿ ಪಾಸಾಗುವ ಪ್ರಥಮದರ್ಜೆಕಾಲೇಜಿನ ಅಭ್ಯರ್ಥಿಗಳಿಗೆ 1ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು.

      ನಂತರ ತೀತಾ ಗ್ರಾಮದ ನೂತನ ಡೈರಿಗೆ ಶಂಕುಸ್ಥಾಪನೆ ಮತ್ತು ನೂತನ ಪದವಿಪೂರ್ವ ಕಾಲೇಜು ಕಟ್ಟಡದ ಉದ್ಘಾಟನೆ ಕಾರ್ಯಕ್ರಮವನ್ನು ನೇರವೇರಿಸಿದರು. ಪುರವಾರಗ್ರಾಮದ ಸಮೀಪದ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟುತ್ತೀರುವ ಚೇಕ್‍ಡ್ಯಾಂ ಕಂ ಬ್ರೀಡ್ಜ್‍ ಕಾಮಗಾರಿಯ ವಿಕ್ಷಣೆ ಮಾಡಿ ಮುಂಬಯಿಯಲ್ಲಿ ಮೃತಪಟ್ಟ ಸೈನಿಕನ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸ್ವಾಂತನ ಹೇಳಿದರು.

      ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಪ್ರೇಮಾ, ಶಿವರಾಮಯ್ಯ, ತಾಪಂ ಅಧ್ಯಕ್ಷೆ ನಾಜೀಮಾಭೀ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯರಾದ ಕೆಂಪರಾಮಯ್ಯ, ತಹಶೀಲ್ದಾರ್ ಗೋವಿಂದರಾಜು, ಪ್ರಾಂಶುಪಾಲ ಡಾ.ಬಾಲಪ್ಪ, ಇಓ ಶಿವಪ್ರಕಾಶ್, ಬಿಇಓ ಗಂಗಾಧರ್, ಅರಣ್ಯ ಇಲಾಖೆ ಸತೀಶಚಂದ್ರ, ಕೃಷಿ ಇಲಾಖೆ ನಾಗರಾಜು, ಬೆಸ್ಕಾಂ ಇಲಾಖೆ ನಾಗರಾಜು, ಸಿಪಿಐ ನದಾಪ್ ಸೇರಿದಂತೆ ಇತರರು ಇದ್ದರು.

(Visited 23 times, 1 visits today)