ತುಮಕೂರು:

       ಪ್ರತಿಯೊಬ್ಬ ಮನುಷ್ಯನ ಜೀವನ ಜೀವನದಿ ಇದ್ದಂತೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಆದುದರಿಂದ ಜೀವನ ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ನಿವೃತ್ತರು ಚಿಂತೆ ಮಾಡುವುದನ್ನು ಬಿಟ್ಟು ಸಹಜವಾದ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದರು.

      ಅವರು ತುಮಕೂರಿನ ಎಂ.ಜಿ.ರಸ್ತೆಯಲ್ಲಿರುವ ಬಾಲಭವನದಲ್ಲಿ ನಡೆದ ನಿವೃತ್ತರ ದಿನಾಚರಣೆ ಮತ್ತು ಹಿರಿಯ ಚೇತನಗಳಿಗೆ ಸನ್ಮಾನ ಹಾಗೂ ನಿವೃತ್ತರ ವಾಣಿ ಬಿಡುಗಡೆ ಮತ್ತು ಕುವೆಂಪು ನೆನಪಿನ ದಿನಾಚರಣೆಯ ಕಾರ್ಯಮವನ್ನು ಉದ್ಘಾಟಿಸಿ ಹಿರಿಯ ಚೇತನಗಳಿಗೆ ಹಾಗೂ ಎಂಬತ್ತೈದು ವರ್ಷ ಪೂರೈಸಿದ ಮಹಾಚೇತನಗಳಿಗೆ ಸನ್ಮಾನ ಮಾಡಿ ಮಾತನಾಡಿದರು.

      ನಿವೃತ್ತರಾಗಿ ಹಿರಿಯರಾಗಿರುವ ಪ್ರತಿಯೊಬ್ಬರು ಹೇಳುವುದೇನೆಂದರೆ ಮೊದಲು ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ನಿವೃತ್ತಿ ಎಂಬುದು ನಿಮ್ಮಲ್ಲಿ ನ್ಯೂವೃತ್ತಿಯಾಗಬೇಕು. ಮಹಾತ್ಮರುಗಳಾದ ಅರವಿಂದ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ಗಾಂಧೀಜಿಯಂತಹವರ ಜೀವನ ಚರಿತ್ರೆಯ ಒಳ್ಳೆಯ ಪುಸ್ತಕಗಳನ್ನು ಓದಿ ಒಳ್ಳೆಯ ಸಿನಿಮಾ ಒಳ್ಳೆಯ ಧಾರಾವಾಹಿಗಳನ್ನು ನೋಡಿ ನಗುನಗುತ್ತಾ ಜೀವನವನ್ನು ಸಾಗಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕುವೆಂಪು 115ನೇ ವರ್ಷದ ಸವಿನೆನಪಿಗಾಗಿ ಕುವೆಂಪು ಅವರ ಜನಪ್ರಿಯ ಕವನಗಳಾದ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು….. ಓ ನನ್ನ ಚೇತನ ಆಗು ನೀ ಅನಿಕೇತನ ಎಂದು ಹೇಳುತ್ತಾ ರಾಷ್ಟ್ರಕವಿ ಕುವೆಂಪು ಒಬ್ಬ ಸಾಹಿತ್ಯ ಬ್ರಹ್ಮ ಎಂದು ಹೇಳಿದರು. ಮನುಷ್ಯನಲ್ಲಿ ಪ್ರೀತಿ ಎಂಬುದು ಮುಖ್ಯ ಪ್ರೀತಿ ಇಲ್ಲದ ಮೇಲೆ ಹೂ ಅರಳೀತು ಹೇಗೆ ಎಂಬ ಮಾತನ್ನು ಹೇಳಿದರು.ಎಲ್ಲರು ಪ್ರೀತಿಯಿಂದ ಬದುಕೋಣ ಎಂಬ ಆಶಯ ವ್ಯಕ್ತಪಡಿಸಿದರು.

      ಕನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ನೂತನ ಅಧ್ಯಕ್ಷ ಎಲ್.ಭೈರಪ್ಪ ಮಾತನಾಡಿ, ನಿವೃತ್ತ ನೌಕರರಿಗೆ ಆರೋಗ್ಯ ಯೋಜನೆ ಅಡಿ ಜ್ಯೋತಿ ಸಂಜೀವಿನಿಯನ್ನು ನಿವೃತ್ತರಿಗೂ ಸಹ ಕೊಡಬೇಕು. ಇದರ ಮಹತ್ವವನ್ನು ಸಹ ತಿಳಿಸಿದರು. 5 ಮತ್ತು 6ನೇವೇತನ ಆಯೋಗದಿಂದ ನಿವೃತ್ತರಿಗೆ ಆಗಿರುವ ಅನ್ಯಾಯ ನೀಡದಿರುವ ಸೌಲಭ್ಯಗಳ ಬಗ್ಗೆ ಕೊಡಬೇಕೆಂದು ಒತ್ತಾಯಿಸಿದರು.

      80, 85, 95 ಮತ್ತು 100 ವರ್ಷ ತುಂಬಿದವರಿಗೆ ವಿಶೇಷ ಒತ್ತು ನೀಡಿ ಸೌಲಭ್ಯ ನೀಡುವ ಬಗ್ಗೆ ಅವರಿಗೆ ನ್ಯಾಯ ದೊರಕಿಸಿಕೊಡಲು ಸರ್ಕಾರದ ಜೊತೆ ಗಂಭೀರವಾಗಿ ಹೋರಾಡಲಾಗುವುದು. ಹಿಂದಿನ ಕಾರ್ಯಕಾರಿ ಸಮಿತಿಯ ವಿಫಲತೆ ಬಗ್ಗೆ ಮಾತನಾಡಿ ನೂತನವಾಗಿ ರಚಿಸಿರುವ ಸಮಿತಿ ವತಿಯಿಂದ ಸೌಲಭ್ಯಗಳು ಮತ್ತು ಅನ್ಯಾಯವನ್ನು ಸರಿಪಡಿಸಬೇಕೆಂದು ಹೇಳಿದರು.

       ಲೇಖಕಿ ಪ್ರೇಮಾ ಮಲ್ಲಣ್ಣ ನಿವೃತ್ತರ ವಾಣಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಬೋಬಡೆ ಮಾತನಾಡಿ ಸಂಘ ನಡೆದು ಬಂದ ಹಾದಿಯನ್ನು ವಿವರಿಸಿದರು. 1970ರ ಅವಧಿಯಲ್ಲಿ ನಿವೃತ್ತ ನೌಕರರುಗಳಿಗೆ ಪಿಂಚಣಿ ಅವಕಾಶಗಳನ್ನು ಒದಗಿಸುವ ಬಗ್ಗೆ ನ್ಯಾಯಾಧೀಶರು ಸುಪ್ರೀಂಕೋರ್ಟ ಚಂದ್ರಚೂಡ ಇವರುಗಳನ್ನು ಸ್ಮರಿಸಿದರು. ಜೊತೆಗೆ ನಿವೃತ್ತರ ದಿನಾಚರಣೆಯ ಮಹತ್ವ ತಿಳಿಸಿದರು.

     ಹಿರಿಯ ಚೇತನಗಳಾದ 33 ಜನರಿಗೆ ನಿವೃತ್ತ ಕೆ.ಎ.ಎಸ್ ಅಧಿಕಾರಿ ವಿ.ದೊಡ್ಡಪ್ಪ, ನಿವೃತ್ತರ ವಾಣಿಗೆ ಶ್ರಮಿಸಿದ ಪ್ರೇಮ ಮಲ್ಲಣ್ಣ, ಎನ್.ನಾಗಪ್ಪ, ಪಿ.ಹುಚ್ಚಯ್ಯ ಅವರನ್ನು ಸನ್ಮಾನಿಸಲಾಯಿತು.

      ಇದೇ ಸಂದರ್ಭದಲ್ಲಿ ಮಲ್ಲಪ್ಪ ಮುದಕವಿ ಮತ್ತು ಅಡಿವೆಪ್ಪ ವೈ ಬೆಂಡಿಗೇರಿ, ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘ ಬೆಳಗಾವಿ ಇವರು ಮಾತನಾಡಿದರು. ವೇದಿಕೆಯಲ್ಲಿ ಮಂಜುನಾಥ್, ನಿವೃತ್ತ ಪೋಲೀಸ್ ಅಧಿಕಾರಿ, ರಂಗೇಗೌಡ ಬಿಎಂ. ಪಾಂಡುರಂಗಯ್ಯ, ಎನ್.ರಂಗಪ್ಪ ಉಪಾಧ್ಯಕ್ಷರು ಹಾಗೂ ಎಲ್ಲಾ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

      ಸುಶೀಲಮ್ಮ ಮತ್ತು ಶಿವರಾಮಯ್ಯ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಅನಂತರಾಮಯ್ಯ ಸ್ವಾಗತಿಸಿ, ಉಪಾಧ್ಯಕ್ಷ ಎನ್. ರಂಗಪ್ಪ ವಂದಿಸಿದರು. ಪುಟ್ಟನರಸಯ್ಯ ನಿರೂಪಿಸಿದರು.

 

(Visited 59 times, 1 visits today)