BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
  • ಗೋವನ್ನು ರಾಷ್ಟಿಯ ಪ್ರಾಣಿಯನ್ನಾಗಿ ಘೋಷಿಸಿ
  • ಆರ್ಥಿಕ ಬೆಳವಣಿಗೆಗೆ ಸಹಕಾರಿ ಸಂಸ್ಥೆಗಳು ಸಹಕಾರಿ
  • ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ
  • ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿ ಇಲ್ಲ: ಸ್ಪಷ್ಟನೆ
  • ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವ್ಯಾಪಕ ವಿರೋಧ
  • ೧೧ ಕೆ.ವಿ ಮಾರ್ಗಗಳ ಸಮಗ್ರ ನಿರ್ವಹಣೆ
  • ಗ್ರಾಮಗಳ ಅಭಿವೃದ್ಧಿಗಾಗಿ ೧೭ಕೋಟಿ ೮೪ಲಕ್ಷ ವೆಚ್ಚ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪಿಡಿಓ ವಿರುದ್ಧ ನಿವೃತ್ತ ಶಿಕ್ಷಕನ ಆರೋಪ
ತುಮಕೂರು ಜಿಲ್ಲಾ ಸುದ್ಧಿಗಳು

ಪಿಡಿಓ ವಿರುದ್ಧ ನಿವೃತ್ತ ಶಿಕ್ಷಕನ ಆರೋಪ

By News Desk BenkiyabaleUpdated:March 08, 2019 4:27 pm

ತುರುವೇಕೆರೆ:

      ತಾಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಡಿ.ಹೊಸಹಳ್ಳಿ ಗ್ರಾಮದಲ್ಲಿರುವ ಲಕ್ಷ್ಮೀದೇವರ ದೇವಾಲಯ ನಮ್ಮ ಪೂರ್ವಜರ ಸ್ವತ್ತಾಗಿದ್ದು ಆದರೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಮ್ಮ ಸಹೋದರರೊಡಗೂಡಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು ಮಾಹಿತಿ ಹಕ್ಕು ಅಧಿನಿಯಮದಡಿ ದೇವಾಲಯದ ಖಾತೆ ನಕಲು ಕೇಳಿದರೆ ದಾಖಲೆ ನೀಡುತ್ತಿಲ್ಲವೆಂದು ಸಾಮಾಜಿಕ ಹೋರಾಟಗಾರ ಹಾಗೂ ನಿವೃತ್ತ ಶಿಕ್ಷಕ ಹೆಚ್.ಎಲ್.ಕೃಷ್ಣಮೂರ್ತಿ ಆರೋಪಿಸಿದರು.

      ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮೀದೇವರ ದೇವಾಲಯ ನಮ್ಮ ಪೂರ್ವಜರ ಸ್ವತ್ತು ಈ ದೇವಾಲಯದ ನಿರ್ಮಾಣವನ್ನು ನಮ್ಮ ತಂದೆಯವರು ತಮ್ಮ ಸ್ವಂತ ಜಾಗದಲ್ಲಿ ಸ್ವಂತ ಕರ್ಚಿನಲ್ಲಿ ನಿರ್ಮಿಸಿದ್ದರು. ನಾವು ಮೂವರು ಸಹೋದರರು ಆದರೆ ನನ್ನನ್ನು ಹೊರತುಪಡಿಸಿ ದೇವಾಲಯದ ಜಾಗವನ್ನು ನನ್ನ ಸಹೋದರರು ಖಾತೆ ಮಾಡಿಸಿಕೊಂಡಿರುವ ಸಂಶಯ ನನ್ನಲಿದೆ. ದೇವಾಲಯದ ಪೂಜಾಕೈಂಕರ್ಯಗಳಿಂದ ನನ್ನನ್ನು ಹೊರಗಿಟ್ಟಿರುವುದು ಒಂದೆಡೆಯಾದರೆ ದೇವಾಲಯದ ಖಾತೆ ನಕಲನ್ನು ಮಾಹಿತಿ ಹಕ್ಕಿನ ಅಧಿನಿಯಮದಡಿ ಸ್ಥಳೀಯ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಮಾಹಿತಿ ಹಕ್ಕು ನಿಯಮದ ಪ್ರಕಾರ 30ದಿನಗೊಳೊಳಗಾಗಿ ದಾಖಲೆ ನೀಡಬೇಕು ಆದರೆ ಪಿ.ಡಿ.ಒ. 30ದಿನಗಳ ನಂತರ ನಾನು ಕೇಳಿರುವ ದಾಖಲೆ ನೀಡದೆ ಬೇರ್ಯಾವುದೋ ದಾಖಲೆ ನೀಡಿ ಮಾಹಿತಿ ಹಕ್ಕು ಅಧಿನಿಯಮಕ್ಕೆ ಅಗೌರವ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

      ಈ ಕುರಿತು ತಾಲೂಕು ಕಾರ್ಯನಿರ್ವಾಹಾಣಾಧಿಕಾರಿಗಳ ಬಳಿ ಮೇಲ್ಮನವಿ ಸಲ್ಲಿಸಿದಾಗ ಕೇವಲ ಪಿ.ಡಿ.ಒ.ಗೆ ಮಾಹಿತಿ ನೀಡುವಂತೆ ನಿರ್ದೇಶನದ ಪತ್ರವೊಂದನ್ನು ಹೊರತು ಪಡಿಸಿದರೆ ಮತ್ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ತದನಂತರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೂ ಮೇಲ್ಮನವಿ ಸಲ್ಲಿಸಿದಾಗ ಅವರು ಮಾಹಿತಿ ಹಕ್ಕಿನಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳನ್ನು ವಿಚಾರಣೆ ಮಾಡುವ ಅಧಿಕಾರ ನಮಗಿಲ್ಲ. ನೀವು ಮಾಹಿತಿ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿ ಎಂದು ತಿಳಿಸಿರುತ್ತಾರೆ.  ಒಂದು ದೇವಾಲಯದ ಖಾತ ನಕಲು ಪಡೆಯಲು 2018 ನವೆಂಬರ್ ತಿಂಗಳಿಂದಲೂ ಪ್ರಯತ್ನ ಪಡುತ್ತಿದ್ದರೂ ಇಲ್ಲಿಯವರೆಗೂ ಪಡೆಯಲು ಸಾಧ್ಯವಾಗಿಲ್ಲ ಬೇಸರದಿಂದು ಖುದ್ದು ಪಂಚಾಯಿತಿ ಕಚೇರಿಗೆ ತೆರಳಿ ಮಾಹಿತಿ ಕೇಳಲು ಹೋದಾಗ ನನ್ನನ್ನು ಪಿ.ಡಿ.ಒ. ಕಚೇರಿ ಸಿಬ್ಬಂದಿಯೊಟ್ಟಿಗೆ ಅಪಹಾಸ್ಯ ಮಾಡಿದರು. ಮಾಹಿತಿ ಹಕ್ಕು ಅಧಿನಿಯಮಕ್ಕೆ ಬೆಲೆ ಕೊಡದ ಪಿ.ಡಿ.ಒ. ವಿರುದ್ದ ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.

(Visited 24 times, 1 visits today)
Previous Articleಜನರ ಸೇವೆಗಾಗಿ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಿ – ಶಾಸಕ ಎಂ.ವಿ.ವೀರಭದ್ರಯ್ಯ
Next Article ಪತ್ರಕರ್ತರು ತಮ್ಮ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು -ಸಂಸದ ಮುದ್ದಹನುಮೇಗೌಡ
News Desk Benkiyabale

Related Posts

ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

June 13, 2026 5:26 pm news

ಗೋವನ್ನು ರಾಷ್ಟಿಯ ಪ್ರಾಣಿಯನ್ನಾಗಿ ಘೋಷಿಸಿ

June 13, 2026 5:23 pm ಇತರೆ ಸುದ್ಧಿಗಳು

ಆರ್ಥಿಕ ಬೆಳವಣಿಗೆಗೆ ಸಹಕಾರಿ ಸಂಸ್ಥೆಗಳು ಸಹಕಾರಿ

June 13, 2026 5:19 pm ಇತರೆ ಸುದ್ಧಿಗಳು
ತಾಜಾ ಸುದ್ಧಿಗಳು

ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

June 13, 2026 5:26 pm

ಗೋವನ್ನು ರಾಷ್ಟಿಯ ಪ್ರಾಣಿಯನ್ನಾಗಿ ಘೋಷಿಸಿ

June 13, 2026 5:23 pm

ಆರ್ಥಿಕ ಬೆಳವಣಿಗೆಗೆ ಸಹಕಾರಿ ಸಂಸ್ಥೆಗಳು ಸಹಕಾರಿ

June 13, 2026 5:19 pm

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ

June 11, 2026 5:15 pm

ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿ ಇಲ್ಲ: ಸ್ಪಷ್ಟನೆ

June 11, 2026 5:05 pm

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ವ್ಯಾಪಕ ವಿರೋಧ

June 11, 2026 4:50 pm
Our Youtube Channel
Our Picks

ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

June 13, 2026 5:26 pm

ಗೋವನ್ನು ರಾಷ್ಟಿಯ ಪ್ರಾಣಿಯನ್ನಾಗಿ ಘೋಷಿಸಿ

June 13, 2026 5:23 pm

ಆರ್ಥಿಕ ಬೆಳವಣಿಗೆಗೆ ಸಹಕಾರಿ ಸಂಸ್ಥೆಗಳು ಸಹಕಾರಿ

June 13, 2026 5:19 pm

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ

June 11, 2026 5:15 pm

ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧಿ ಇಲ್ಲ: ಸ್ಪಷ್ಟನೆ

June 11, 2026 5:05 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss

ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

By News Desk BenkiyabaleJune 13, 2026 5:26 pm

ತುರುವೇಕೆರೆ: ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಪಟ್ಟಣದ ಬೆಸ್ಕಾಂ ಇಲಾಕೆ ಸಿಬ್ಬಂದಿಗಳು, ಗುತ್ತಿಗೆದಾರ, ಜಿವಿ.ಪಿ ಸಿಬ್ಬಂದಿಗಳು ಬೆಸ್ಕಾಂ ಮುಂಭಾಗದಲ್ಲಿ ಶುಕ್ರವಾರ…

ಗೋವನ್ನು ರಾಷ್ಟಿಯ ಪ್ರಾಣಿಯನ್ನಾಗಿ ಘೋಷಿಸಿ

June 13, 2026 5:23 pm

ಆರ್ಥಿಕ ಬೆಳವಣಿಗೆಗೆ ಸಹಕಾರಿ ಸಂಸ್ಥೆಗಳು ಸಹಕಾರಿ

June 13, 2026 5:19 pm

ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ

June 11, 2026 5:15 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.