ತುಮಕೂರು:

      ಕನ್ನಡ ಸೇರಿದಂತೆ ದೇಶದ ಹಲವು ಪ್ರಾದೇಶಿಕ ಭಾಷೆಗಳು ಸಮಸ್ಯೆಯನ್ನು ಎದುರಿಸುತ್ತಿದ್ದು, ಇವುಗಳ ಉಳಿವಿಗೆ ಮನೆಯಿಂದಲೇ ಮಕ್ಕಳಿಗೆ ಅಯಾಯ ಸ್ಥಳೀಯ ಭಾಷೆಗಳನ್ನು ಕಲಿಸುವ ಮತ್ತು ಬಳಸುವ ಕೆಲಸ ಆಗಬೇಕಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

      ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಕನ್ನಡ ಕ್ರಿಯಾ ಸಮಿತಿ ಆಯೋಜಿಸಿದ್ದ ಕನ್ನಡ ನುಡಿ ಸಿರಿ-2018ಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ತಾಯಂದಿರುವ ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮಾತನಾಡು ವುದನ್ನು ಆರಂಭಿಸಿದರೆ ತಾನಾಗಿಯೇ ಕನ್ನಡ ಬೆಳೆಯಲು ಕಾರಣವಾಗುತ್ತದೆ ಎಂದರು.

      ಇಂದು ಒಂದು ಮಗು ಕನ್ನಡ ಭಾಷೆಯಿಂದ ಶಿಕ್ಷಣ ಪಡೆದಾಗ, ಅದರ ಮನಸ್ಸು ವಿಕಾಸಗೊಳ್ಳುವುದರ ಜೊತೆಗೆ, ಭಾಷೆಯ ಜೊತೆಯಲ್ಲಿಯೇ ಅಂಟಿಕೊಂಡಿರುವ ಸಂಸ್ಕøತಿ, ಸಾಂಸ್ಕøತಿಕ ಹಿರಿಮೆ, ಗರಿಮೆಗಳ ಪರಿಚಯವಾಗುತ್ತದೆ. ಆಡಳಿತ ಭಾಷೆ ಯಾವುದೇ ಇದ್ದರೂ ಮನೆಯಲ್ಲಿ ಕನ್ನಡ ಮಾತನಾಡುವುದನ್ನು ರೂಢಿಸಿಕೊಂಡರೆ, ಅದನ್ನು ನಿರಂತರವಾಗಿ ಬಳಸಿದರೆ ಭಾಷೆಯ ಮೇಲಿನ ಹಿಡಿತ ಹೆಚ್ಚಾಗುವುದಲ್ಲದೆ, ಎಂತಹ ವಿಚಾರಗಳನ್ನು ತನ್ನ ಮಾತೃಭಾಷೆಯ ಮೂಲಕ ವ್ಯಕ್ತಪಡಿಸಬಹುದು. ಇಂದು ರಾಜಕಾರಣದಲ್ಲಿ ಹಲವಾರು ಗಣ್ಯರು ತಮ್ಮ ನಿರ್ಗಳವಾದ ಭಾಷಣದ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ.ಆದಕ್ಕೆ ಕಾರಣ ಭಾಷೆಯ ಮೇಲಿನ ಹಿಡಿತ. ಅದು ಅಯಾಯ ಪ್ರಾದೇಶಿಕ ಭಾಷೆಯಿಂದ ಮಾತ್ರ ಸಾಧ್ಯವೆಂದರು ಜೋತಿಗಣೇಶ್ ನುಡಿದರು.

    ತುಮಕೂರು ನಗರದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾನ ಅತ್ಯಂತ ಕಿರಿದಾಗಿದ್ದು, ಬಸ್ಸುಗಳ ಒತ್ತಡ ಹೆಚ್ಚಾಗಿದ್ದು, ಇದೇ ಜಾಗದಲ್ಲಿ ಸ್ಮಾರ್ಟ್‍ಸಿಟಿ ಅನುದಾನ 192 ಕೋಟಿ ರೂ ಬಳಸಿಕೊಂಡು ಹೊಸ, ನಾಲ್ಕು ಮಹಡಿಯ ಬಸ್‍ನಿಲ್ದಾಣ, ಮಾರಾಟ ಮಳಿಗೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳು ಆರಂಭವಾಗಲಿವೆ ಎಂದು ಶಾಸಕರು ನುಡಿದರು.

      ಸಾಹಿತಿ ಬಿ.ಸಿ.ಶೈಲಾ ನಾಗರಾಜು ಮಾತನಾಡಿ,ಕೆ.ಎಸ್.ಆರ್.ಟಿ.ಸಿ.ಯ ಕನ್ನಡ ಕ್ರಿಯಾ ಸಮಿತಿ ಜನರ ಮದ್ಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಭಾಷೆಯ ಉಳಿವಿಗೆ ವಿನೂತನ ಪ್ರಯತ್ನ ನಡೆಸಿದೆ.ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಜನ ಮಾನಸದಲ್ಲಿ ಉಳಿಯಬೇಕಾದರೆ ಅದು ಪ್ರತಿಯೊಬ್ಬರ ಮನೆಯ,ಮನದ ಭಾಷೆಯಾಗ ಬೇಕು.ವ್ಯವಹಾರಿಕ ಭಾಷೆ ಯಾವುದೇ ಇದ್ದರೂ ಮನೆಯಲ್ಲಿ, ಕುಟುಂಬದ ಸದಸ್ಯರೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡುವ ಮೂಲಕ ಅದನ್ನು ಸುರಕ್ಷಿತವಾಗಿ ಮುಂದಿನ ಪಿಳೀಗೆಗೆ ವರ್ಗಾಯಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

      ಕೆ.ಎಸ್.ಆರ್.ಟಿ.ಸಿ. ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ ವ.ಚ.ಚನ್ನೇಗೌಡ ಮಾತನಾಡಿ, ಕನ್ನಡ ಕ್ರಿಯಾಸಮಿತಿ ಕಳೆದ 20 ವರ್ಷಗಳಿಂದ ಭಾಷೆಯ ಉಳಿವಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಅಲ್ಲದೆ ಹೆಸರು ಮಾಡಿದ ಸಾಹಿತಿಗಳಿಗೆ ನೃಪತುಂಗ ಹೆಸರಿನಲ್ಲಿ ಅತ್ಯುತ್ತಮ ಪ್ರಶಸ್ತಿ ನೀಡುವ ಮೂಲಕ ಭಾಷೆಯನ್ನು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಸಲು ಪ್ರಯತ್ನಿಸಿದೆ.ಕ್ರಿಸ್ತಶಕ 03ರಲ್ಲಿ ದೊರೆತ ಅಶೋಕನ ಶಾಸನದಲ್ಲಿ ಕೋಟೆ ಎಂಬ ಕನ್ನಡ ಪದ ಪತ್ತೆಯಾ ದರೆ, 890ರಲ್ಲಿ ಕವಿರಾಜಮಾರ್ಗದಲ್ಲಿ ಇದ್ದ ಕನ್ನಡ ನಾಡಿನ ಪರಿಕಲ್ಪನೆ ಅದ್ಬುತವಾಗಿದೆ. ಫಡಿನಾಂಟ್ ಕಿಟಲ್ ಬರೆದ ಕನ್ನಡದ ನಿಘಂಟು,ಪುರಂದರದಾಸ ಕೀರ್ತನೆಗಳು ಈ ಅಂಶಗಳನ್ನು ಖಚಿತ ಪಡಿಸಿವೆ ಎಂದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಆರ್.ಟಿ.ಸಿ.ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್.ಗಜೇಂದ್ರಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಅಧಿಕಾರಿಗಳಾ ಪ್ರಕೃದ್ದೀನ್,ಹಂಸವೀಣಾ, ಪಾಲಿಕೆ ಸದಸ್ಯ ಸಿ.ಎನ್.ರಮೇಶ್,ರಫಲ್ ರಾಜ್, ಕೆ.ಎಸ್.ಪ್ರಭುಸ್ವಾಮಿ, ಹುಸೇನ್ ಕೆ.ಎಸ್.ಎಂ., ಘಟಕ ಒಂದರ ವ್ಯವಸ್ಥಾಪಕ ಎಸ್.ಲಕ್ಷ್ಮೀಪತಿ ಮತ್ತಿತರರು ಉಪಸ್ಥಿತರಿದ್ದರು.

(Visited 30 times, 1 visits today)