ತುಮಕೂರು:

      ನಗರದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ದಳದ ವತಿಯಿಂದ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ರೈಲ್ವೆ ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರಯಾಣಿಕರ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಯಿತು.

      ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ರೈಲ್ವೆ ರಕ್ಷಣಾ ದಳದ ಉಪನಿರೀಕ್ಷಕ ಕುಬೇರಪ್ಪ ಅವರು, ರೈಲ್ವೆ ರಕ್ಷಣಾ ದಳದ ಮುಖ್ಯ ಸುರಕ್ಷಾ ಆಯುಕ್ತರ ಆದೇಶದ ಮೇರೆಗೆ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ರೈಲ್ವೆ ಪ್ರಯಾಣಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ವಿಶೇಷವಾಗಿ ಮಹಿಳೆಯರು, ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

      ತಾವು ಪ್ರಯಾಣಿಸುವ ಸ್ಥಳದಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ತುರ್ತಾಗಿ ಆರ್‌ಪಿಎಫ್  ಟಾಲ್ ಫ್ರೀ ನಂ. 182ಗೆ ಕರೆ ಮಾಡುವಂತೆ ಅವರು ಮನವಿ ಮಾಡಿದರು.

      ರೈಲಿನಲ್ಲಿ ಪ್ರಯಾಣಿಸುವಾಗ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಅಪರಿಚಿತರಿಂದ ಯಾವುದೇ ರೀತಿಯ ತಿಂಡಿ, ತಿನಿಸುಗಳನ್ನು ಪಡೆಯಬಾರದು. ಒಂದು ವೇಳೆ ಅಂತಹವರಿಂದ ಏನನ್ನಾದರೂ ಪಡೆದರೆ ತಮ್ಮ ಬೆಲೆ ಬಾಳುವ ಒಡವೆ, ವಸ್ತ್ರಗಳನ್ನು ಕಳೆದುಕೊಳ್ಳುವ ಸಂಭವವಿರುತ್ತದೆ ಎಂದು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಿದ ಅವರು, ರೈಲಿನಲ್ಲಿ ಪ್ರಯಾಣಿಸುವಾಗ ತಮ್ಮ ಲಗೇಜುಗಳ ಸುರಕ್ಷತೆಗಾಗಿ ಸೇಫ್ಟಿ ಚೈನ್ ಹಾಕುವುದನ್ನು ಮರೆಯಬಾರದು ಎಂದು ತಿಳಿಸಿದರು.

      ರೈಲ್ವೆ ನಿಲ್ದಾಣದಲ್ಲಿ ಹಳ್ಳಿಗಳನ್ನು ದಾಟುವುದು ಅಪರಾಧ. ಒಂದು ವೇಳೆ ಹಳಿಗಳನ್ನು ದಾಟಿದರೆ ಅಂಥವರಿಗೆ 500 ರೂ. ದಂಡ ವಿಧಿಸಲಾಗುವುದು. ಹಾಗೆಯೇ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಚತೆ ಕಾಪಾಡದೆ ಅನೈರ್ಮಲ್ಯಕ್ಕೆ ಕಾರಣರಾಗುವವರಿಗೆ 200 ರೂ. ದಂಡ ವಿಧಿಸಲಾಗುವುದು. ಈ ಬಗ್ಗೆಯೂ ಸಪ್ತಾಹದಲ್ಲಿ ಅರಿವು ಮೂಡಿಸಲಾಯಿತು.

      ಇದೇ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರಿಗೆ ಸುರಕ್ಷತಾ ಕ್ರಮದ ಅಂಶಗಳುಳ್ಳ ಕರಪತ್ರಗಳನ್ನು ಹಂಚಲಾಯಿತು. ರೈಲ್ವೆ ಪೊಲೀಸ್ ಸಹಾಯಕ ನಿರೀಕ್ಷಕ ವೆಂಕಟೇಶ್, ಸ್ಟೇಷನ್ ಮಾಸ್ಟರ್ ಕೆ.ಸಿ. ರಮೇಶ್‌ಬಾಬು. 

(Visited 15 times, 1 visits today)