ನವದೆಹಲಿ: 

     ಅಕ್ಟೋಬರ್​ನಲ್ಲಿ ಒಟ್ಟು 67.45 ಲಕ್ಷ ವ್ಯಾಪಾರಸ್ಥರು ಜಿಎಸ್​ಟಿ ರಿಟರ್ನ್ಸ್ ಸಲ್ಲಿಸಿದ್ದು, 1,00,710 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಹೇಳಿದೆ.

      ತೆರಿಗೆ ವಂಚನೆಗೆ ಅಂಕುಶ, ಹಲವು ವಸ್ತುಗಳ ತೆರಿಗೆ ಇಳಿಕೆ, ದೇಶಾದ್ಯಂತ ಏಕ ತೆರಿಗೆ ಜತೆಗೆ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಲಗಾಮು ಹಾಕಲಾದ ಕಾರಣ ಜಿಎಸ್​ಟಿ ಸಂಗ್ರಹ ಕೋಟಿ ಲಕ್ಷ ದಾಟಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.  

      ಒಟ್ಟಾರೆ ಜಿಎಸ್​ಟಿ ಸಂಗ್ರಹದಲ್ಲಿ ಕೇರಳ ಅಸಾಧಾರಣ ಬೆಳವಣಿಗೆ (ಶೇ. 44) ದಾಖಲಿಸಿದೆ. ರಾಜಸ್ಥಾನದಲ್ಲಿ ಸಂಗ್ರಹ ಶೇ. 14 ಏರಿಕೆ ಕಂಡರೆ, ಉತ್ತರಾಖಂಡದಲ್ಲಿ ಶೇ. 13 ಮತ್ತು ಮಹಾರಾಷ್ಟ್ರದಲ್ಲಿ ಶೇ. 11 ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಲಕ್ಷ ಕೋಟಿ ರೂ. ಜಿಎಸ್​ಟಿಯಲ್ಲಿ ಕೇಂದ್ರ ತೆರಿಗೆ 16,464 ಕೋಟಿ ರೂ., ರಾಜ್ಯ ತೆರಿಗೆ 22,826 ಕೋಟಿ ರೂ., ಐಜಿಎಸ್​ಟಿ 53,419 ಕೋಟಿ ರೂ. ಮತ್ತು 8 ಸಾವಿರ ರೂ. ಸೆಸ್ ಸೇರಿದೆ.

      ಐದು ತಿಂಗಳ ಬಳಿಕ ಮತ್ತೊಮ್ಮೆ ಮಾಸಿಕ ಜಿಎಸ್​ಟಿ ಸಂಗ್ರಹ 1 ಲಕ್ಷ ಕೋಟಿ ರೂ. ಗಡಿ ದಾಟಿದೆ. ಕಳೆದ ಏಪ್ರಿಲ್​ನಲ್ಲಿ 1.03 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು.

(Visited 16 times, 1 visits today)