ತುಮಕೂರು:

      ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 36 ಮಂದಿ ಸಾಧಕರನ್ನು ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಪ್ರಶಸ್ತಿಯನ್ನು ನವೆಂಬರ್ 1ರಂದು ಸಂಜೆ 4 ಗಂಟೆಗೆ ಗಾಜಿನಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.

ರಂಗಭೂಮಿ:-

      ಕ್ಷೇತ್ರದ ಸಾಧನೆಗಾಗಿ ತುಮಕೂರಿನ ಕುಂಭಿ ನರಸಯ್ಯ, ಜಿ.ನಂಜಪ್ಪ ಹಾಗೂ ಜಿ. ಮುರಳಿಧರ (ಮೇಕಪ್), ಕೊರಟಗೆರೆಯ ಹೆಚ್. ನಾಗರಾಜಯ್ಯ ಹಾಗೂ ಎ.ಎನ್.ಚಂದ್ರಶೇಖರ್, ಗುಬ್ಬಿ ತಾಲ್ಲೂಕಿನ ರಂಗನಾಥಪ್ಪ, ತುರುವೇಕೆರೆಯ ರಂಗರಾಜು

ಪತ್ರಿಕಾರಂಗ :-

ಪ್ರಜಾಪ್ರಗತಿ ದಿನಪತ್ರಿಕೆಯ ಹಿರಿಯ ವರದಿಗಾರ ಆರ್.ಎಸ್.ಐಯ್ಯರ್, ವಿಶಾಲಪ್ರಭ ದಿನ ಪತ್ರಿಕೆ ಸಂಪಾದಕ ವಿ.ವೆಂಕಟೇಶ್ ಸೊಗಡು, ಮಧುಗಿರಿಯ ಬಂಡಿಚೌಡಯ್ಯ, ಚಿಕ್ಕನಾಯಕನಹಳ್ಳಿ ಕನ್ನಡಪ್ರಭ ವರದಿಗಾರ ಹೆಚ್. ಸಿದ್ಧರಾಮಯ್ಯ

ಸಾಹಿತ್ಯ ಕ್ಷೇತ್ರ :-

ತುಮಕೂರಿನ ನಾಗರತ್ನ ಚಂದ್ರಪ್ಪ, ಕೆ.ಡಬ್ಲ್ಯೂ. ಅಬ್ದುಲ್ ಹಫೀಝ್ (ಅಮರ್ ಹಫೀಝ್), ಡಾ. ಬೂದಾಳ್ ನಟರಾಜ್, ಡಾ. ಜಿ.ವಿ.ಆನಂದಮೂರ್ತಿ

ಸಮಾಜ ಸೇವೆ ಕ್ಷೇತ್ರ :-

ತುಮಕೂರಿನ ಎಂ.ಬಿ. ಜೀವರತ್ನ, ಎನ್.ಎನ್.ಶ್ರೀಧರ್ ಹಾಗೂ ಶಿವಲಿಂಗಮ್ಮ, ತುರುವೇಕೆರೆಯ ಮಾಚೇನಹಳ್ಳಿ ಡಿ. ಕರಿಯಪ್ಪ

ಸಂಗೀತ ಕ್ಷೇತ್ರ:

      ತುಮಕೂರಿನ ಎಂ.ಬಿ.ರಾಜಶೇಖರ ಶಾಸ್ತ್ರಿ, ಸುಧಾರಾಣಿ ಎನ್.ಎಸ್ (ಸುಧಾಪ್ರಸಾದ್), ಶಿರಾ ನಗರದ ಜಿ.ರಾಮಚಂದ್ರಯ್ಯ, ತುರುವೇಕೆರೆಯ ಕುಮಾರಸ್ವಾಮಿ ಕೆ.ಹೆಚ್

ಜಾನಪದ ಕ್ಷೇತ್ರ :

      ಮಧುಗಿರಿಯ ರಾಮಕೃಷ್ಣಪ್ಪ, ಗುಬ್ಬಿಯ ರಾಜಣ್ಣ ಎನ್, ತುರುವೇಕೆರೆಯ ಶಾರದಮ್ಮ, ತಿಪಟೂರಿನ ರಂಗಸ್ವಾಮಿ ಕೆ.ಎನ್. ಹಾಗೂ ಕುಣಿಗಲ್ ತಾಲ್ಲೂಕಿನ ಎಸ್.ಕೆ.ರಾಮಯ್ಯ

ಕೃಷಿ ಕ್ಷೇತ್ರ :-

      ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶಿವನಂಜಯ್ಯ ಬಾಳೆಕಾಯಿ; ಕ್ರೀಡಾ ಕ್ಷೇತ್ರದಲ್ಲಿ ತುಮಕೂರಿನ ಡಿ.ಮಹೇಶ್; ಪಾರಂಪರಿಕ ವೈದ್ಯ ಕ್ಷೇತ್ರದಲ್ಲಿ ಮಧುಗಿರಿ ತಾಲ್ಲೂಕಿನ ರಂಗಪ್ಪ; ಶಿಕ್ಷಣ ಕ್ಷೇತ್ರದಲ್ಲಿ ಮಧುಗಿರಿ ತಾಲ್ಲೂಕಿನ ಎಲ್. ನರಸಿಂಹಯ್ಯ

 ಸಂಘ-ಸಂಸ್ಥೆ ಕ್ಷೇತ್ರಕ್ಕಾಗಿ :-

      ತುಮಕೂರಿನ ಜ್ಞಾನಬುತ್ತಿ ಸಂಸ್ಥೆ ಹಾಗೂ ಕನ್ನಡ ಸೇವೆಗಾಗಿ ತುಮಕೂರಿನ ಸೋಮಶೇಖರ್, ಪಿ.ಆರ್.ರಂಗಸ್ವಾಮಿ, ರಂಜನ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

(Visited 30 times, 1 visits today)