BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ
  • ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ
  • ಬೃಹತ್ ಮೂರ್ತಿಯ ಮೆರವಣಿಗೆ, ಆಕರ್ಷಕ ಕಲಾ ಪ್ರದರ್ಶನ
  • ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ
  • ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್
  • ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ
  • ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಅಸ್ಮಿತೆ
  • ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕೆ, ಮಿಟಮಿನ್ ಹನಿ ಇಲ್ಲದೆ ಪರದಾಟ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಾಲ ಮನ್ನಾಕ್ಕೆ ರೈತರ ಸ್ವಯಂಘೋಷಣೆ ಜ.10 ಕಡೆಯ ದಿನ: ರಾಕೇಶ್ ಕುಮಾರ್
Trending

ಸಾಲ ಮನ್ನಾಕ್ಕೆ ರೈತರ ಸ್ವಯಂಘೋಷಣೆ ಜ.10 ಕಡೆಯ ದಿನ: ರಾಕೇಶ್ ಕುಮಾರ್

By News Desk BenkiyabaleUpdated:December 17, 2018 4:18 pm

 ತುಮಕೂರು:

      ವಾಣಿಜ್ಯ ಬ್ಯಾಂಕ್‍ಗಳಲ್ಲಿನ ರೈತರ ಬೆಳೆ ಸಾಲ ಮನ್ನಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಅರ್ಹ ಫಲಾನುಭವಿ ರೈತರು ಸ್ವಯಂ ಘೋಷಣೆಯನ್ನು ನೋಂದಾಯಿಸಿಕೊಳ್ಳಲು ಬರುವ 2019ರ ಜನವರಿ 10 ಕಡೆ ದಿನಾಂಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 226 ವಾಣಿಜ್ಯ ಬ್ಯಾಂಕ್‍ಗಳ ಶಾಖೆಗಳಲ್ಲಿನ ಸುಮಾರು 85 ಸಾವಿರ ರೈತರ ಅರ್ಹತೆಯನ್ನು ಪಡೆದಿರುತ್ತಾರೆ. ಅದೇ ರೀತಿ 1.22ಲಕ್ಷ ರೈತರು ಸಹಕಾರ ಸಂಘ/ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಪಡೆದಿದ್ದು, ಸಾಲ ಮನ್ನಾ ಯೋಜನೆಯಡಿ ಅರ್ಹತೆ ಪಡೆದಿರುತ್ತಾರೆ ಎಂದು ತಿಳಿಸಿದರು.

      ಜಿಲ್ಲೆಯ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಸಾಲ ಪಡೆದ ರೈತರ ಸಂಖ್ಯೆಯನ್ನು ಆಧರಿಸಿ ಜನವರಿ 10 ಕಡೆಯ ದಿನಾಂಕ ಎಂದು ನಿಗಧಿಪಡಿಸಲಾಗಿದೆ. ಆದರೆ ಇದೇ ಕೊನೆಯ ದಿನ ಆಗಿರುವುದಿಲ್ಲ. ಪರಿಸ್ಥಿತಿ ಅವಲೋಕಿಸಿ ದಿನಾಂಕವನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

      ರೈತರು ಸಾಲ ಪಡೆದ ಬ್ಯಾಂಕ್ ಶಾಖೆಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿಯ ನಕಲು ಪ್ರತಿ, ಮೊಬೈಲ್ ಸಂಖ್ಯೆ, ತಾವು ಸಾಲ ಪಡೆದ ಸರ್ವೇ ನಂಬರ್‍ನ ಮಾಹಿತಿ (ಪಹಣಿ ಪತ್ರಿಕೆ ಸಲ್ಲಿಸುವ ಅವಶ್ಯಕತೆ ಇಲ್ಲ)ಯನ್ನು ತಪ್ಪದೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

      ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ತದನಂತರದ ರೈತರಿಗೆ ಕ್ರಮಬದ್ಧವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್‍ಗಳನ್ನು ನೀಡಲಾಗುವುದು. ಟೋಕನ್‍ನಲ್ಲಿ ನಮೂದಿಸಲಾದ ದಿನಾಂಕದಂದು ರೈತರು ಸ್ವಯಂ ದೃಢೀಕರಣ ಪತ್ರದೊಂದಿಗೆ ಅಗತ್ಯ ದಾಖಲೆಗಳ ವಿವರಗಳನ್ನು ಬ್ಯಾಂಕ್ ಶಾಖೆಗೆ ಒದಗಿಸಬೇಕು ಎಂದು ಅವರು ಹೇಳಿದರು.

      ಈ ಬೆಳೆ ಸಾಲ ಮನ್ನಾ ಯೋಜನೆಯಡಿ ಕೇವಲ ವೈಯಕ್ತಿಕ ಬೆಳೆ ಸಾಲ ಪಡೆದ ರೈತರು ಮಾತ್ರ ಸೌಲಭ್ಯ ಪಡೆಯಬಹುದಾಗಿದ್ದು, ದಿನಾಂಕ:1-4-2009ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆ ಸಾಲಗಳು ಹಾಗೂ ದಿನಾಂಕ:31-12-2017ರವರೆಗೆ ಬಾಕಿ ಇರುವ ಬೆಳೆ ಸಾಲಗಳು ಅಂದರೆ ಸುಸ್ತಿ ಸಾಲ, ಪುನರಾವರ್ತಿ ಸಾಲ, ಎನ್‍ಪಿಎ (Non Performing Asset) ಸಾಲಗಳು ಅರ್ಹವಾಗಿರುತ್ತವೆ. ಒಂದು ಕುಟುಂಬವು (ಗಂಡ+ಹೆಂಡತಿ+ಅವಲಂಬಿತ ಮಕ್ಕಳು) ಗರಿಷ್ಠ 2ಲಕ್ಷ ರೂ.ಗಳ ವರೆಗೆ ಮಾತ್ರ ಬೆಳೆ ಸಾಲ ಮನ್ನಾ ಸೌಲಭ್ಯ ಪಡೆಯಬಹುದಾಗಿದೆ. ಈ ಸೌಲಭ್ಯಕ್ಕಾಗಿ 2018ರ ಜುಲೈ 5ಕ್ಕಿಂತ ಮುಂಚಿತವಾಗಿ ಪಡೆದ ಪಡಿತರ ಚೀಟಿಯನ್ನು ಮಾತ್ರ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದರು.

      ಸಹಕಾರ ಸಂಘ/ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಸೌಲಭ್ಯ ಪಡೆದ ಫಲಾನುಭವಿಗಳು/ ವಾರ್ಷಿಕ ಆದಾಯ ತೆರಿಗೆ ಪಾವತಿಸುವ ರೈತರು/ ರಾಜ್ಯ, ಕೇಂದ್ರ, ಸರ್ಕಾರಿ, ಅರೆಸರ್ಕಾರಿ, ಸರ್ಕಾರದಿಂದ ಅನುದಾನಕ್ಕೊಳಪಡುವ ಸಂಸ್ಥೆ, ಸಾರ್ವಜನಿಕ ಸ್ವಾಮ್ಯ(PSU-Public Sector Undertaking)ದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು/ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ಮಾಹೆ 15ಸಾವಿರ ರೂ.ಗಳಿಗಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಬೆಳೆ ಸಾಲ ಮನ್ನಾ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ (ಈ ಮಿತಿಯು ಮಾಜಿ ಸೈನಿಕರಿಗೆ ಅನ್ವಯಿಸುವುದಿಲ್ಲ) ಎಂದು ಅವರು ತಿಳಿಸಿದರು.

      ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೆ ಶಾಂತ ರೀತಿಯಿಂದ ಸರದಿ ಸಾಲಿನಲ್ಲಿ ನಿಂತು ತಮ್ಮ ಬ್ಯಾಂಕ್ ಶಾಖೆಗಳಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸಿ ಯೋಜನೆಯ ಲಾಭ ಪಡೆಯಬೇಕು. ಯಾವುದೇ ಗೊಂದಲ/ ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಹಾಯವಾಣಿ ಸಂಖ್ಯೆ 0816-2278718ನ್ನು ಸಂಪರ್ಕಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ಜಿಲ್ಲೆಯ ರೈತರು ಈ ಸುವರ್ಣಾವಕಾಶವನ್ನು ಬಳಸಿಕೊಂಡು ಸಾಲ ಮನ್ನಾ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

      ರೈತರ ಸ್ವಯಂ ದೃಢೀಕರಣದ ನಂತರ ಹೆಸರು ಹೊಂದಾಣಿಕೆ ಡಿಕ್ಲರೇಷನ್‍ನ್ನು ಸಾಫ್ಟ್‍ವೇರ್ ಮೂಲಕ ಮಾಡಲಾಗುವುದು. ಈ ಬಗ್ಗೆ ಏನಾದರೂ ಅನರ್ಹತೆ/ ತಕರಾರುಗಳು ಇದ್ದರೆ, ತಾಲ್ಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದಲ್ಲಿ ರಚನೆಯಾಗಿರುವ ಸಮಿತಿಗಳಲ್ಲಿ ಅಪೀಲು ಮಾಡಬಹುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಲೀಡ್‍ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಜ್ಯೋತಿ ಗಣೇಶ್ ಮತ್ತಿತರರು ಹಾಜರಿದ್ದರು.

(Visited 38 times, 1 visits today)
Previous Articleರಸ್ತೆ ನಿರ್ಮಾಣ : ನಾಗರಕಟ್ಟೆ, ದರ್ಗಾಗಳಿಗೆ ಪಾಲಿಕೆ ನೋಟೀಸ್ – ಜಿಲ್ಲಾಧಿಕಾರಿ
Next Article ಉತ್ತಮ ‘ಮಾನವ ಹಕ್ಕುಗಳ ಕಾರ್ಯಕರ್ತ’ ಪುರಸ್ಕಾರ
News Desk Benkiyabale

Related Posts

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

October 03, 2026 5:36 pm news

ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ

October 03, 2026 5:35 pm news

ಬೃಹತ್ ಮೂರ್ತಿಯ ಮೆರವಣಿಗೆ, ಆಕರ್ಷಕ ಕಲಾ ಪ್ರದರ್ಶನ

October 03, 2026 5:32 pm news
ತಾಜಾ ಸುದ್ಧಿಗಳು
news

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

October 03, 2026 5:36 pm
news

ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ

October 03, 2026 5:35 pm
news

ಬೃಹತ್ ಮೂರ್ತಿಯ ಮೆರವಣಿಗೆ, ಆಕರ್ಷಕ ಕಲಾ ಪ್ರದರ್ಶನ

October 03, 2026 5:32 pm
news

ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ

October 02, 2026 6:41 pm
news

ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್

October 02, 2026 6:39 pm
news

ಸೀರತ್ ಅಭಿಯಾನದ ಭಾಗವಾಗಿ ನವೆಂಬರ್‌ನಲ್ಲಿ ಪ್ರಭಂಧ ಸ್ಪರ್ಧೆ

October 01, 2026 5:34 pm
Our Youtube Channel
Our Picks

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

October 03, 2026 5:36 pm

ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ

October 03, 2026 5:35 pm

ಬೃಹತ್ ಮೂರ್ತಿಯ ಮೆರವಣಿಗೆ, ಆಕರ್ಷಕ ಕಲಾ ಪ್ರದರ್ಶನ

October 03, 2026 5:32 pm

ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ

October 02, 2026 6:41 pm

ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ : ಇಡೀ ವಿಶ್ವಕ್ಕೇ ಮಾದರಿ -ಶುಭ ಕಲ್ಯಾಣ್

October 02, 2026 6:39 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬೋರ್ ವೆಲ್ ಹೆಚ್ವು ಆಳಕ್ಕೆ ಕೊರೆಯಬೇಕೆಂದು ಗ್ರಾಮಸ್ಥರ ಒತ್ತಾಯ

By News Desk BenkiyabaleOctober 03, 2026 5:36 pm

ತುರುವೇಕೆರೆ: ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಕೊರೆಯುತ್ತಿದ್ದ ಹೊಸ ಬೋರ್ ವೆಲ್ ನ್ನು ಹೆಚ್ವು ಆಳಕ್ಕೆ ಕೊರೆಯಬೇಕು ಎಂದು ಒತ್ತಾಯಿಸಿ ತಾಲೂಕಿನ…

ಜಿಲ್ಲೆಯಲ್ಲಿ ೧೫೯ ಕೋಟಿ ಬೆಳೆ ನಷ್ಟ: ಕೇಂದ್ರ ತಂಡಕ್ಕೆ ಮನವರಿಕೆ

October 03, 2026 5:35 pm

ಬೃಹತ್ ಮೂರ್ತಿಯ ಮೆರವಣಿಗೆ, ಆಕರ್ಷಕ ಕಲಾ ಪ್ರದರ್ಶನ

October 03, 2026 5:32 pm

ಮದ್ಯಪ್ರಿಯರ ಅಡ್ಡೆಯಾದ ಸಾರ್ವಜನಿಕ ಆಸ್ತಿ

October 02, 2026 6:41 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.