ಗುಬ್ಬಿ :

      ಖಾಸಗಿ ಒಡೆತನದ ಆರ್.ಸಿ.ಸಿ ಪೋಲ್‍ಗಳನ್ನು ತಯಾರಿಸುವ ಸಿಮೆಂಟ್ ಕಾರ್ಖಾನೆಯ ಹಳ್ಳಕ್ಕೆ ಲಾರಿ ಬಿದ್ದು ಯಾದಗಿರಿ ಮೂಲದ ಕೂಲಿ ಕಾರ್ಮಿಕ ಶಾಂತಪ್ಪ ಅಸುನೀಗಿರುವ ಘಟನೆ ನಡೆದಿದೆ.

      ತಾಲ್ಲೂಕಿನ ಎನ್.ಹೆಚ್. 206 ರಸ್ತೆಯ ಬದಿಯಲ್ಲಿರುವ ನಂದಿ ಕಾಂಕ್ರಿಟ್ ಪ್ರಾಡಕ್ಟ್‍ನಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಅನುನಾಳದ ಗ್ರಾಮದ ಶಾಂತಪ್ಪ ಮತ್ತು ಕುಟುಂಬದವರು ಸುಮಾರು ಒಂದೂವರೆ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು ಇಂದು ಬೆಳಗಿನ ಸಮಯದಲ್ಲಿ ಟಿಪ್ಪರ್ ಲಾರಿಯಲ್ಲಿ ಬಂದಂತಹ ಸರಕನ್ನು ಇಳಿಸಲು ಗುಂಡಿಯ ಒಳಗೆ ಇಳಿದಿದ್ದ ಕಾರ್ಮಿಕನಿಗೆ ಮೇಲಿದ್ದ ಲಾರಿಯು ಗುಂಡಿಯು ಕುಸಿದ ಕಾರಣ ಲಾರಿ ಸಮೇತ ಗುಂಡಿಯೊಳಗೆ ಜಾರಿದ ಕಾರಣ ವ್ಯಕ್ತಿಯು ಮೃತಪಟ್ಟಿದ್ದಾನೆ.

      ಮೂಕನಹಳ್ಳಿ ಪಟ್ಟಣ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಈ ಕಾರ್ಖಾನೆಗೆ ದಿನಾಂಕ : 12-04-2018ರಂದು ಪರವಾನಗಿ ಪಡೆದಿದ್ದು ಮೂರು ಜನ ಒಡೆತನದ ಈ ಕಾರ್ಖಾನೆಗೆ ಕಾರ್ಮಿಕ ಇಲಾಖೆಯಿಂದ ಯಾವುದೇ ಕಾರ್ಮಿಕರನ್ನು ನೊಂದಾಯಿಸದೆ ಇರುವುದು ಒಂದೆಡೆಯಾದರೆ 7 ತಿಂಗಳಾದರೂ ಅಲ್ಲಿಯ ಕಾರ್ಮಿಕರನ್ನು ಕಾರ್ಮಿಕ ಇಲಾಖೆಗೆ ಹೆಸರನ್ನು ನೊಂದಾಯಿಸದೆ ಇರಲು ಕಾರಣವೇನು ಎಂದು ಸತ್ತಂತಹ ವ್ಯಕ್ತಿಯು ಬೇರೆ ಜಿಲ್ಲೆಯವನಾಗಿದ್ದು ಈತನಿಗೆ ಒಂದು ವರ್ಷದ ಹಸುಗೂಸಿದ್ದು ಈತನ ಸಂಸಾರಕ್ಕೆ ಯಾರು ಹೊಣೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

      ಸ್ಥಳಕ್ಕೆ ಗುಬ್ಬಿ ಪೋಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ದೀಪಕ್, ಸಬ್‍ಇನ್ಸ್‍ಪೆಕ್ಟರ್ ಗಂಗಾಧರ್‍ಗೌಡ ಆಗಮಿಸಿ ಸ್ಥಳ ತನಿಖೆ ನಡೆಸಿ ದೂರನ್ನು ದಾಖಲಿಸಿದ್ದಾರೆ.

(Visited 18 times, 1 visits today)