ಕೊರಟಗೆರೆ :

      ತಾಲೂಕಿನಲ್ಲಿ ಪುರಾತನ ಇತಿಹಾಸವುಳ್ಳ ಕುಂಚಿಟಿಗರ ಆರಾದ್ಯ ಕುಲದೈವವಾದ ಶ್ರೀವೀರನಾಗಮ್ಮ ದೇವಾಲಯಕ್ಕೆ 2.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ರಾಜಗೂಪುರ ಹಾಗೂ ತಾಯಿಮುದ್ದಮ್ಮ ಮತ್ತು ಸಿದ್ದರಾಮೇಶ್ವರಸ್ವಾಮಿ ದೇವಾಲಯಗಳನ್ನು ರಾಜ್ಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲಕ್ಷಾಂತರ ಭಕ್ತರ ಸಮುಂಖ ದಲ್ಲಿನ.19 ರಂದು ಲೋಕಾರ್ಪಣೆ ಮಾಡಲಿದ್ದಾರೆಂದು ಕುಂಚಿಟಿಗರ ಮಹಾ ಸಂಸ್ಥಾನ ಮಠದ ಡಾ. ಶ್ರೀ ಹನುಮಂತನಾಥ ಮಹಾಸ್ವಾಮೀಜಿಗಳು ತಿಳಿಸಿದರು.

      ತಾಲೂಕಿನ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಸುಮಾರು 800 ವರ್ಷಗಳ ಇತಿಹಾಸವಿರುವ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ನೆಲೆಸಿರುವ ಕುಂಚಿಟಿಗ ಸಮುದಾಯದ 33 ವಂಶಸ್ಥರ ಆರಾದ್ಯ ದೈವ ಶ್ರೀವೀರನಾಗಮ್ಮ ದೇವಾಲಯಕ್ಕೆ ಭಕ್ತಾದಿಗಳ ಕಾಣಿಕೆಯಿಂದ ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ನಿರ್ಮಣವಾಗಿರುವ ರಾಜಗೋಪುರ ಹಾಗೂ ದೇವಾಲಯದ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ತಾಯಿಮುದ್ದಮ್ಮ ಮತ್ತು ಸಿದ್ದರಾಮೇಶ್ವರ ಸ್ವಾಮಿ ದೇವಾಲಯಗಳನ್ನು ನೂತನವಾಗಿ ನಿರ್ಮಾಸಿರುವ ದೇವಾಲಯಗಳನ್ನು ಶಿರಾ ತಾಲೂಕು ಶ್ರೀ ಕ್ಷೇತ್ರ ಪಟ್ಟನಾಯ್ಕನಹಳ್ಳಿಯ ಶ್ರೀ ನಂಜಾವಧೂತ ಮಹಾಸ್ವಾಮೀಜಿ.  ಹೊಸದುರ್ಗ ಕುಂಟಿಟಿಗರ ಮಹಾಸಂಸ್ಥಾನ ಮಠದ ಶ್ರೀ ಡಾ.ಶಾಂತವೀರ ಮಹಾಸ್ವಾಮೀಜಿ ಹಾಗೂ ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನ ಮಠದ ಶ್ರೀ ಡಾ.ಹನುಮಂತನಾಥ ಮಹಾಸ್ವಾಮೀಜಿಗಳ ಮತ್ತು ಕ್ಷೇತ್ರದ ಶಾಸಕರು ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‍ ರವರ ನೇತೃತ್ವದಲ್ಲಿ ರಾಜ್ಯ ಮುಖ್ಯ ಮಂತ್ರಿ ಹೆಚ್ಚ್.ಡಿ.ಕುಮಾರಸ್ವಾಮಿ ರವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

      ಕಾರ್ಯಕ್ರಮದ ಅಂಗವಾಗಿ ಕುಂಚಿಟಿಗ ಬಸಲೇನವರ ಗೋತ್ರದ ವಡ್ಡಗೆರೆ ಗುಡಿಕಟ್ಟು ಮತು ಗಾಡಿಕಟ್ಟುಗೆ ಸೇರಿರುವ ಗುರಮನೆ, ಕಟ್ಟೆಮನೆ, 12 ಅಮಾವಾಸ್ಯೆ ದೇವಸ್ಥಾನ, 33 ಬಂಡಿಗಳನ್ನು ಬರ ಮಾಡಿಕೊಂಡು ವಿಶೇಷ ರೀತಿಯಲ್ಲಿ ಪೂಜೆಯೊಂದಿಗೆ ಸಮಸ್ತ ಭಕ್ತರ ಸಮುಖದಲ್ಲಿ ನೂತನ ದೇವಾಲಯಗಳ ಸ್ಥಿರಬಿಂಬ ಪ್ರತಿಷ್ಠಾಪನೆ ಮತ್ತು ರಾಜಗೋಪುರ ಕಳಶಗಳ ಪ್ರತಿಷ್ಠಾಪನೆ, ನಯೋನೊನ್ಮಿಲ ಹೋಮ, ಪ್ರಾಣ ಪ್ರತಿಷ್ಠಾಪನಾ ಹೋಮ, ಪ್ರದಾನ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ್ತ ಶಾಂತಿ ಹೋಮ, ಮಹಾ ಪೂರ್ಣಾಹುತಿ ಕುಂಬಾಬಿಷೇಕದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ ಬೆಳಿಗ್ಗೆ ದೇವಿಗೆ ಜಲದಿ ಪೂಜೆ, ಹಾಗೂ ಎಡೆ ನೈವೇಧ್ಯ ಮತ್ತು ಶರಣರಿಗೆ ವಿಳ್ಯ ಕೊಡುವುದು ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ಬಂಡಿಗಳ ಪೂಜೆ ಮತ್ತು ಉತ್ಸವ ನಂತರ ಅನ್ನ ಸಂತರ್ಪಣೆ, ಸಂಗೀತಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.

      ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಹಿಸಲಿದ್ದು, ಮುಜರಾಯಿ ಸಚಿವ ರಾಜಶೇಖರ್‍ಬಸವರಾಜು ಪಾಟೀಲ್ ದೇವಾಲಯದ ಲ್ಲಿ ನೂತನವಾಗಿ ನಿರ್ಮಾಸಿರುವ ಪ್ರಾಂಗಣವನ್ನು ಉದ್ಘಾಟಿಸುವರು. ಮುಖ್ಯಅಥಿತಿಗಳಾಗಿ ಸುಂಸದ ಮುದ್ದಹನುಮೇಗೌಡ, ರಾಜ್ಯ ಸಭಾ ಸದಸ್ಯ ಬಿ.ಸಿ.ರಾಜಶೇಖರ್, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ, ವಿಧಾನ ಪರಿಷತ್ ಸದಸ್ಯರಾದ ಬಿ.ಸತ್ಯನಾರಾಯಣ, ಕಾಂತರಾಜು, ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ದಿವ್ಯಗೋಪಿನಾಥ್, ಮಧುಗಿರಿ ಉಪವಿಭಾಧಿಕಾರಿ ಹೆಚ್.ಜಿ.ಚಂದ್ರಶೇಖರಯ್ಯ, ಜಿ.ಪಂ.ಅಧ್ಯಕ್ಷ ಲತಾರವಿಕುಮಾರ್ ಸೇರಿದಂತೆ ತೆಮಿಳುನಾಡು. ಆಂದ್ರಪ್ರದೇಶದ ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷರುಗಳು ಹಾಗೂ ಪ್ರತಿನಿಧಿಗಳು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ತಿಳಿಸಿದರು.

  

(Visited 101 times, 1 visits today)