ತುಮಕೂರು:

    ಮಹಿಳೆಯರು ಕೇವಲ ಮನೆಕೆಲಸಕ್ಕೆ ಸೀಮಿತವಾಗಿರದೆ ಹೊರಗಿನ ಪ್ರಪಂಚದಲ್ಲಿ ಹೇಗೆ ಜೀವನವನ್ನು ಎದುರಿಸಬೇಕು. ಮತ್ತು ಮಹಿಳೆಯರಿಗೆ ತಾವು ಬೆಳೆಯಲು ತಾವೇ ಮನಸ್ಸು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲತಾ ರವಿಕುಮಾರ್ ರವರು ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.  

     ಇಂದು ತುಮಕೂರು ನಗರದ ಸಮರ್ಥ್ ಫೌಂಡೇಷನ್ ಕೌಶಲ್ಯಾಭಿವೃದ್ದಿ ಮತ್ತು ತರಬೇತಿ ಕೇಂದ್ರದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಚಿತ ಟೈಲರಿಂಗ್ ತರಬೇತಿಯ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

      ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಾರದ ನರಸಿಂಹಮೂರ್ತಿಯವರು ಮಾತನಾಡುತ್ತಾ ನೀವು ತರಬೇತಿಗಷ್ಟೇ ಸೀಮಿತವಾಗದೆ ನೀವು ಕೂಡ ಉದ್ಯಮ ಶೀಲರಾಗಿ ಬೆಳೆಯಬಹುದು ಈ ತರಬೇತಿಯು ನಿಮಗೆ ಒಂದು ಪ್ರಾರಂಭ ಅಷ್ಟೇ ನೀವು ಆರ್ಥಿಕವಾಗಿ ಸಬಲರಾಗಲು ನಿಮಗೆ ಹೊಸ ಹೊಸ ದಾರಿಯನ್ನು ಇದರಿಂದ ಕಂಡುಕೊಳ್ಳಬಹುದು.ಎಂದು ಹೇಳಿದರು.

      ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿನಿರ್ದೇಶಕರಾದ ಶ್ರೀ ಯೋಗಿಶ್ ಮಾತನಾಡುತ್ತ ಮಹಿಳೆಯರನ್ನು ಉದ್ಯಮ ಶೀಲರನ್ನಾಗಿ ಮಾಡುವ ಗುರಿಯೊಂದಿಗೆ ನಮ್ಮ ಇಲಾಖೆಯ ವತಿಯಿಂದ ಸೀವಿಂಗ್ ಮಿಷನ್ ಆಪರೇಟರ್ ತರಬೇತಿಯನ್ನು ನೀಡಿ ಸಿದ್ದ ಉಡುಪು ಘಟಕಗಳಿಗೆ ತರಬೇತು ಮಾಡಲಾಗುತ್ತದೆ. ನಂತರ ಅವರು ತಮ್ಮದೇ ಆದ ಘಟಕಗಳನ್ನು ಪ್ರಾರಂಭಿಸುವುದರ ಮೂಲಕ ಉದ್ದಿಮೆದಾರರಾಗಬಹುದು ಎಂದು ತಮ್ಮ ಇಲಾಖೆಯ ಯೋಜನೆಗಳನ್ನು ಸವಿವರವಾಗಿ ವಿವರಿಸಿದರು.

      ಮಾಜಿ ತಾಲ್ಲೋಕು ಪಂಚಾಯಿತಿ ಅಧ್ಯಕ್ಷರಾದ ಶ್ರೀ ನರಸಿಂಹಮೂರ್ತಿಯವರು ಮಾತನಾಡುತ್ತಾ ಮಹಿಳೆಯರು ನಲವತ್ತೈದು ದಿನ ಜವಳಿ ಇಲಾಖೆಯಿಂದ ನಡೆಸುವ ತರಬೇತಿಯಲ್ಲಿ ಕಲಿತದ್ದನ್ನು ಅಲ್ಲಿಗೆ ಬಿಡದೆ ಮುಂದುವರೆಸಬೇಕು. ನಮ್ಮ ಕ್ಷೇತ್ರದಲ್ಲಿರುವಂತಹ ಆಸಕ್ತ ಮಹಿಳೆಯರನ್ನು ಇಲ್ಲಿ ತರಬೇತಿಗೆ ಕಳುಹಿಸುವಂತಹ ಕೆಲಸ ಮಾಡಿ ಅವರ ಆರ್ಥಿಕ ಜೀವನಕ್ಕೆ ಸಹಕರಿಸುವುದಾಗಿ ಹೇಳಿದರು.

      ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ವಿರುಪಾಕ್ಷಪ್ಪನವರು ಮಾತನಾಡುತ್ತಾ ತುಮಕೂರಿನಲ್ಲಿ ಅನೇಕ ಸಿದ್ದ ಉಡುಪುಗಳ ಘಟಕಗಳು ಇದ್ದು ನೀವು ತರಬೇತಿ ಪಡೆದು ಅಲ್ಲಿ ಸುಲಭವಾಗಿ ಕೆಲಸವನ್ನು ಪಡೆಯಬಹುದು ಇಂದಿನ ಕಾಲಘಟ್ಟದಲ್ಲಿ ಮನೆಯಲ್ಲಿ ಗಂಡ ಹೆಂಡತಿ ದುಡಿದರೆ ಜೀವನ ಸುಖವಾಗಿರುತ್ತದೆ ಹಾಗಾಗಿ ಕಡಿಮೆ ಓದಿದವರೂ ಕೂಡ ಗಾಮೆಂಟ್ಸ್ ಗಳಲ್ಲಿ ಅನುಭವದ ಮೇಲೆ ಹೆಚ್ಚಿನ ವೇತನ ಪಡೆಯಬಹುದು ಎಂದರು.
ಸಮರ್ಥ್ ಫೌಂಡೇಷನ್ನಿನ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಸಮರ್ಥ್ ಫೌಂಡೇಷನ್‍ನ್ನಿನ ಕಾರ್ಯದರ್ಶಿ ರಾಣಿಚಂದ್ರಶೇಖರ್ ಮಾತನಾಡಿದರು ಶಿಬಿರಾರ್ಥಿಗಳು ಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂಧಿವರ್ಗದವರು ಹಾಜರಿದ್ದರು.

(Visited 19 times, 1 visits today)