BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ
  • ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ
  • ಆರು ತಿಂಗಳ ಇಂಧನ ಬವಣೆಗೆ ಮುಕ್ತಿ
  • ಹುಳಿಯಾರಿನ ಐತಿಹಾಸಿಕ ಕೆಪಿಎಸ್ ಶಾಲಾ ಮೈದಾನ ಉಳಿಸಿ
  • ಮೌಲ್ಯ ಪ್ರಸಾರಕ್ಕೆ ಯಕ್ಷಗಾನ ತಾಳಮದ್ದಳೆ ಸಶಕ್ತ ಮಾಧ್ಯಮ
  • ಸರ್ಕಾರಿ ಕಟ್ಟಡಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಿ
  • ತುಮಕೂರು ಏರ್ ಪೋರ್ಟ್: ಬಿ.ಎಸ್.ವಿಜಯೇಂದ್ರರವರ ನಿಲುವಿಗೆ ಸ್ವಾಗತ
  • ಬಾಗಿಲು ತೆರೆದರೂ ಓಡದ ಶಿಬಿರಾರ್ಥಿಗಳು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ತುಮಕೂರಿನಲ್ಲಿ ಮೊದಲ ಬಾರಿಗೆ ಓಪನ್ ಹಾರ್ಟ್ ಸರ್ಜರಿ
Trending

ತುಮಕೂರಿನಲ್ಲಿ ಮೊದಲ ಬಾರಿಗೆ ಓಪನ್ ಹಾರ್ಟ್ ಸರ್ಜರಿ

By News Desk BenkiyabaleUpdated:January 19, 2021 7:04 pm

ತುಮಕೂರು : 

      ಜಾಗತಿಕ ಮಟ್ಟಕ್ಕೆ ಸರಿಸಮಾನವಾದ ರೀತಿಯಲ್ಲಿ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನಲ್ಲಿ ಯಶಸ್ವಿಯಾಗಿ ಓಪನ್ ಹಾರ್ಟ್ ಸರ್ಜರಿಯನ್ನು ಉಚಿತವಾಗಿ ನಡೆಸಲಾಗಿದೆ. ಇದು ಇತಿಹಾಸದಲ್ಲಿ ಹೊಸ ಅಧ್ಯಾಯವನ್ನ ಸೃಷ್ಟಿಸಿದೆ ಎಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. 

      ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರ ಮತ್ತು ಕಾಲೇಜಿನಲ್ಲಿಂದು (ಜನವರಿ 19) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುಮಕೂರಿನಂತಹ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಓಪನ್ ಹಾರ್ಟ್ ಸರ್ಜರಿಯನ್ನು ನಡೆಸಿ ಯಶಸ್ವಿಯಾಗಿರುವುದು ದಾಖಲಾರ್ಹ. ಶಸ್ತ್ರಚಿಕಿತ್ಸೆಯಾದ ಅರ್ಧ ತಾಸಿನಲ್ಲೇ ರೋಗಿ ಚೇತರಿಸಿಕೊಂಡು, ವೈದ್ಯರೊಂದಿಗೆ ಮಾತನಾಡಿದ್ದು, ಗಮನಾರ್ಹ ಸಂಗತಿ ಎಂದರು.

      ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಯುಜಿಸಿಯಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದಿದ್ದು ಸ್ವಾಯತ್ತ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಿದೆ. ತಂದೆ ಶಿಕ್ಷಣ ಭೀಷ್ಮ ಡಾ.ಎಚ್.ಎಂ ಗಂಗಾಧರಯ್ಯನವರ ಆಶಯ ಮತ್ತು ಸಹೋದರರಾದ ಡಾ.ಜಿ ಶಿವಪ್ರಸಾದ್ ಅವರ ಕನಸಿನ ಕೂಸಾಗಿರುವ ನೂತನ ಹೃದಯರೋಗ ತಪಾಸಣೆ ಕೇಂದ್ರ ಗ್ರಾಮಾಂತರ ಪ್ರದೇಶದ ಬಡಜನತೆ ಮತ್ತು ಸಮುದಾಯದತ್ತ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶವನ್ನಿಟ್ಟುಕೊಂಡು ಮುನ್ನಡೆಯಲ್ಲಿದೆ ಎಂದರು.

      1988ರಲ್ಲಿ ಆರಂಭವಾದ ವೈದ್ಯಕೀಯ ಕಾಲೇಜಿನಿಂದ 5500 ವಿದ್ಯಾರ್ಥಿಗಳು ವೃತ್ತಿಪರರಾಗಿದ್ದು ದೇಶ-ವಿದೇಶದ ಹೆಸರಾಂತ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಆರೋಗ್ಯ ಸೇವೆಗೆ ಒತ್ತು ನೀಡಲು ಹಾಗೂ ಸಮಾಜದ ಜನರಿಗೆ ಸೇವೆ ಒದಗಿಸಲು ಅಡ್ವಾನ್ಸ್ ಕಾರ್ಡಿಯಾಕ್ ಹಾರ್ಟ್ ಸೆಂಟರ್ ಆರಂಭಿಸಿದ್ದೆವೆ. ಪರಿಣಿತ ಯುವ ವೈದ್ಯರ ತಂಡ ಕಾರ್ಯೋನ್ಮುಖವಾಗಿದೆ ಎಂದು ಅವರು ವಿವರಿಸಿದರು.

       ದೇಶದ ಪ್ರತಿಷ್ಠಿತ ಹೃದಯರೋಗ ಸಂಬಂಧಿ ಆಸ್ಪತ್ರೆಗಳ ವೈದ್ಯರು ಮತ್ತು ಮಾಲೀಕರೊಂದಿಗೆ ಸಮಾಲೋಚಿಸಿ ಅವರ ಸಲಹೆಗಳ ಆಧಾರದ ಮೇಲೆ ಬೆಂಗಳೂರಿನ ಕಾರ್ಡಿಯಾಕ್ ಪ್ರಾಂಟಿಡ ನಿರ್ದೇಶಕ ಡಾ.ತಮಿಮ್ ಅಹಮದ್ ನೇತೃತ್ವದ ತಂಡದೊಂದಿಗೆ ಪರಸ್ಪರ ಸಹಕಾರದಿಂದ ಆಸ್ಪತ್ರೆಯಲ್ಲಿ ಹಾರ್ಟ್ ಸೆಂಟರ್ ಆರಂಭಿಸಲಾಯಿತು. ವಿದೇಶಿ ಗುಣಮಟ್ಟದ ಸಲಕರಣೆಗಳನ್ನು ಒಳಗೊಂಡಂತೆ ಸುಮಾರು 16 ಕೋಟಿ ವೆಚ್ಚದಲ್ಲಿ ಸಂಸ್ಥೆ ಪ್ರಾರಂಭ ಮಾಡಿದ್ದು, ಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ ಎಂದು ಡಾ. ಜಿ ಪರಮೇಶ್ವರ್ ವಿವರಿಸಿದರು.

      ಸರ್ಕಾರದ ಸೇವೆಗಳಿಗೂ ಒತ್ತು: ಗ್ರಾಮಾಂತರ ಪ್ರದೇಶದ ಬಡವರ್ಗವನ್ನು ಪರಿಗಣಿಸಿ ಸರ್ಕಾರದ ಆರೋಗ್ಯ ಸೇವೆಗಳನ್ನು ಆಸ್ಪತ್ರೆಯಲ್ಲಿ ನೀಡಲು ನಿರ್ಧರಿಸಲಾಗಿದೆ. ಬಿ.ಪಿ.ಎಲ್, ಆಯುಷ್ಮನ್‍ಕಾರ್ಡ್ ಹೊಂದಿರುವ ಸಾವಿರಾರು ರೋಗಿಗಳಿಗೆ ಉಚಿತವಾಗಿ ಸೇವೆ ನೀಡಲಾಗಿದೆ. ಮುಂದೆ ಖಾಸಗಿ ಸಂಸ್ಥೆಗಳ ನೌಕರರು ಹಾಗೂ ಆರೋಗ್ಯ ವಿಮೆ ಹೊಂದಿರುವವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಚಿಂತಿಸಲಾಗುತ್ತಿದೆ. ಸಂಸ್ಥೆಯಲ್ಲಿ ಬಡಜನರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸಬ್ಸಿಡಿ ದರದಲ್ಲಿ ಸೇವೆಗಳನ್ನು ನೀಡಲಾಗುವುದು ಎಂದು ತಮ್ಮ ಸಂಸ್ಥೆಯ ಗ್ರಾಮಾಂತರ ಆರೋಗ್ಯ ಸೇವೆಯ ಗುರಿಯನ್ನು ಅವರು ತೆರೆದಿಟ್ಟರು.

       ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ‘ಕಾರ್ಡಿಯಾಕ್ ಫ್ರಾಂಟಿ¬ಡಾ’ ಸಂಸ್ಥೆಯ ನಿರ್ದೇಶಕ ಡಾ.ತಮಿಮ್ ಅಹಮದ್ ಮಾತನಾಡಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ರೈತ ರಂಗಸ್ವಾಮಿ (56ವರ್ಷ) ಅವರ ಚಿಕಿತ್ಸೆಯ ವಿವರಗಳನ್ನು ಪ್ರಕಟಿಸಿದರು.
ತುಮಕೂರು ತಾಲ್ಲೂಕಿನ ಮರಳೇನಹಳ್ಳಿ ಗ್ರಾಮದ ಕೃಷಿಕರಾದ ರಂಗಸ್ವಾಮಿಗೆ ಮೂವರು ಮಕ್ಕಳು. ಒರ್ವ ಗಂಡು ಮಗು ಸಾವನ್ನಪ್ಪಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಬಡ ರೈತಾಪಿ ಕುಟುಂಬದ ರಂಗಸ್ವಾಮಿ ಎದೆನೋವಿನಿಂದ ಇದೇ ತಿಂಗಳ 14ರಂದು ಆಸ್ಪತ್ರೆಗೆ ದಾಖಲಾಗುತ್ತಾರೆ. ಆರಂಭದಲ್ಲಿ ರೋಗಿಯ ತಪಾಸಣೆ, ಇಸಿಜಿ ನಡೆಸಿದಾಗ ಲಘು ಹೃದಯಾಘಾತವಾಗಿರುವುದು ಖಚಿತವಾಯಿತು. ಮೂರು ಮುಖ್ಯ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾದ ತೊಂದರೆಯನ್ನು ಸರಿಪಡಿಸಲು ರೋಗಿಯ ಆಪೇಕ್ಷೆಯಂತೆ ಇದೇ ತಿಂಗಳ 16ರಂದು ಹಾರ್ಟ್ ಕೀಮೋ ಪ್ರೊಸೆಸ್ ಮೂಲಕ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದೀಗ ರೋಗಿಯು ಸಂಪೂರ್ಣ ಆರೋಗ್ಯದಿಂದಿದ್ದು ವಾರ್ಡ್‍ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

    ಹಾರ್ಟ್ ಕೀಮೋ ಪ್ರೊಸೆಸ್: ಹಾರ್ಟ್ ಕೀಮೋ ಪ್ರೊಸೆಸ್ ಮೂಲಕ ಓಪನ್ ಹಾರ್ಟ್ ಸರ್ಜರಿ ನಡೆಸಿರುವುದು ಭಾರತದಲ್ಲೇ ಪ್ರಪ್ರಥಮ ಎಂದು ವಿವರಿಸಿದ ಡಾ. ತಮೀಮ್ ಅಹಮದ್ ಸುಮಾರು ನಾಲ್ಕು ತಾಸುಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ರಂಗಸ್ವಾಮಿ ಈಗ ಗುಣಮುಖರಾಗುತ್ತಿದ್ದಾರೆ ಎಂದರು.
ತುಮಕೂರಿನಿಂದ ಹಾಸನ, ಶಿವಮೊಗ್ಗದಿಂದ ಬೆಂಗಳೂರು ನಡುವೆ ಹೃದಯಕ್ಕೆ ಸಂಬಂಧಿಸಿದ ಯಾವುದೇ ಆಸ್ಪತ್ರೆ ಇಲ್ಲದಿರುವುದನ್ನು ಮನಗಂಡು ಸಿದ್ಧಾರ್ಥ ಸಂಸ್ಥೆ ಪ್ರಥಮವಾಗಿ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಆರಂಭಿಸಿದ್ದು ಸಾರ್ವಜನಿಕರಿಗೆ ಬಹಳ ಉಪಯುಕ್ತ ಸೇವೆ ನೀಡುತ್ತಿದೆ.

    ವೈದ್ಯರ ತಂಡ: ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ‘ಕಾರ್ಡಿಯಾಕ್ ಫ್ರಾಂಟಿ¬ಡಾ’ ಸಂಸ್ಥೆಯ ನಿರ್ದೇಶಕ ಡಾ.ತಮಿಮ್ ಅಹಮದ್, ಹಾಗೂ ಡಾ. ನವೀನ್, ಡಾ. ಸುರೇಶ್, ಡಾ. ಒರಿಟ ಕಾಮತ್, ಡಾ. ನಾಗಾರ್ಜುನ, ಡಾ. ಪ್ರತಿಮಾ, ವಿವೇಕ್, ಜಾನ್ ಅವರನ್ನೊಳಗೊಂಡ ತಂಡ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಶ್ರಮಿಸಿದೆ.

     ಹೃದಯ ರೋಗಿಗಳಿಗೆ ಔಷಧಿಗಳ ಮೂಲಕ ಗುಣಪಡಿಸುವುದಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿದೇಶಿ ಗುಣಮಟ್ಟದ ಆಧುನಿಕ ಸಲಕರಣೆಗಳನ್ನು ಅಳವಡಿಕೆಯಿಂದಾಗಿ ಸಕಾಲದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯ ನೀಡುವುದಕ್ಕೆ ಅವಕಾಶವಿದೆ. ಬೆಂಗಳೂರಿನಿಂದ-ಶಿವಮೊಗ್ಗ, ತುಮಕೂರಿನಿಂದ-ಮೈಸೂರು, ತುಮಕೂರಿನಿಂದ ದಾವಣಗೆರೆ, ಬಳ್ಳಾರಿ ಮಾರ್ಗ ಮಧ್ಯೆ ಕೇಂದ್ರಿಕೃತ ಸ್ಥಳವಾಗಿದ್ದು ಸಕಾಲದಲ್ಲಿ ಈ ಭಾಗದ ಜನಕ್ಕೆ ಹೃದಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ ಎಂದು ಡಾ.ತಮಿಮ್ ಅಹಮದ್ ವಿವರಿಸಿದರು.

      ಸಿದ್ಧಾರ್ಥ ಆಸ್ಪತ್ರೆ ಮತ್ತು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ದೇವದಾಸ್, ಪ್ರಾಂಶುಪಾಲರಾದ ಡಾ.ಶ್ರೀನಿವಾಸ್ ಮೂರ್ತಿ, ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ನ ಮುಖ್ಯ ಕಾರ್ಯನಿರ್ವಾಹಕ ವೈದ್ಯಾಧಿಕಾರಿ ಡಾ. ಪ್ರಭಾಕರ್ ಹಾಗೂ ವೈದ್ಯರ ತಂಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

(Visited 19 times, 1 visits today)
Previous Articleವೈಯಕ್ತಿಕ ದ್ವೇಷಕ್ಕೆ ಅಡಿಕೆ ಸಸಿಗಳು ಬಲಿ
Next Article ಭೂ ಮಾಫಿಯಾಗಳಿಗೆ ಜಮೀನು ನೀಡುತ್ತಿರುವುದ ಖಂಡಿಸಿ ತಾಲೂಕು ಕಚೇರಿಗೆ ಮುತ್ತಿಗೆ
News Desk Benkiyabale

Related Posts

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm news

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ

July 20, 2026 5:23 pm news

ಆರು ತಿಂಗಳ ಇಂಧನ ಬವಣೆಗೆ ಮುಕ್ತಿ

July 20, 2026 5:21 pm news
ತಾಜಾ ಸುದ್ಧಿಗಳು
news

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm
news

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ

July 20, 2026 5:23 pm
news

ಆರು ತಿಂಗಳ ಇಂಧನ ಬವಣೆಗೆ ಮುಕ್ತಿ

July 20, 2026 5:21 pm
news

ಹುಳಿಯಾರಿನ ಐತಿಹಾಸಿಕ ಕೆಪಿಎಸ್ ಶಾಲಾ ಮೈದಾನ ಉಳಿಸಿ

July 20, 2026 5:11 pm
news

ಮೌಲ್ಯ ಪ್ರಸಾರಕ್ಕೆ ಯಕ್ಷಗಾನ ತಾಳಮದ್ದಳೆ ಸಶಕ್ತ ಮಾಧ್ಯಮ

July 20, 2026 5:09 pm
news

ಸರ್ಕಾರಿ ಕಟ್ಟಡಗಳಲ್ಲಿ ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಿ

July 20, 2026 5:13 pm
Our Youtube Channel
Our Picks

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ

July 20, 2026 5:23 pm

ಆರು ತಿಂಗಳ ಇಂಧನ ಬವಣೆಗೆ ಮುಕ್ತಿ

July 20, 2026 5:21 pm

ಹುಳಿಯಾರಿನ ಐತಿಹಾಸಿಕ ಕೆಪಿಎಸ್ ಶಾಲಾ ಮೈದಾನ ಉಳಿಸಿ

July 20, 2026 5:11 pm

ಮೌಲ್ಯ ಪ್ರಸಾರಕ್ಕೆ ಯಕ್ಷಗಾನ ತಾಳಮದ್ದಳೆ ಸಶಕ್ತ ಮಾಧ್ಯಮ

July 20, 2026 5:09 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

By News Desk BenkiyabaleJuly 20, 2026 5:26 pm

ಹುಳಿಯಾರು: ಸಮಾಜಮುಖಿ ಕಾರ್ಯಗಳಿಗೆ ಹಣಕ್ಕಿಂಥ ದೊಡ್ಡ ಮನಸ್ಸು ಬೇಕು ಎಂಬುದನ್ನು ಹುಳಿಯಾರಿನ ಸವಿತಾ ಸಮಾಜದ ತಂದೆ ಮತ್ತು ಇಬ್ಬರು ಮಕ್ಕಳು…

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ

July 20, 2026 5:23 pm

ಆರು ತಿಂಗಳ ಇಂಧನ ಬವಣೆಗೆ ಮುಕ್ತಿ

July 20, 2026 5:21 pm

ಹುಳಿಯಾರಿನ ಐತಿಹಾಸಿಕ ಕೆಪಿಎಸ್ ಶಾಲಾ ಮೈದಾನ ಉಳಿಸಿ

July 20, 2026 5:11 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.