BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ
  • ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್
  • ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ
  • ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ
  • ಕನ್ನಡ ನಾಡಿನ ಗತವೈಭವ ದರ್ಶನ
  • ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ
  • ನಗರದ ಮೆರುಗು ಹೆಚ್ಚಿಸಿದ ತುಮಕೂರು ದಸರಾ ಜಂಬು ಸವಾರಿ
  • ತುಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ: ಆರೋಪ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗ್ರಾಮ ವಾಸ್ತವ್ಯ : ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ
Trending

ಗ್ರಾಮ ವಾಸ್ತವ್ಯ : ಜನರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

By News Desk BenkiyabaleUpdated:March 22, 2021 7:54 pm

ತುಮಕೂರು : 

       ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಕಾಡಶೆಟ್ಟಿಹಳ್ಳಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಗ್ರಾಮ ವಾಸ್ತವ್ಯ ಮಾಡಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಗಿಡ ನೆಟ್ಟು, ನಂತರ ಗ್ರಾಮದಲ್ಲಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಗಳಿಂದ ಆಯೋಜಿಸಲಾಗಿದ್ದ ಪ್ರಾತ್ಯಕ್ಷತೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ನಂತರ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಆಗಮಿಸಿ ಗ್ರಾಮದ ಜನರ ಸಮಸ್ಯೆ ಆಲಿಸಿದರು.

      ಅನಂತರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಎಲ್ಲಾ ತಾಲೂಕುಗಳಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಮಾನ್ಯ ಜನರ ಸಮಸ್ಯೆ ಆಲಿಸಿ, ಸಮಸ್ಯೆ ಬಗೆಹರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ನ್ಯಾಯಾಲಯಕ್ಕೆ ಮತ್ತು ವೈಯಕ್ತಿಕ ಸಮಸ್ಯೆ ಹೊರತುಪಡಿಸಿ, ಸ್ಥಳದಲ್ಲೇ ಇತ್ಯರ್ಥಪಡಿಸುವ ಸಮಸ್ಯೆಗಳನ್ನು ಬಗೆಹರಿಸಿ ಉಳಿದ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಅರ್ಹರಿಗೆ ಸೌಲಭ್ಯ ಸಿಗಬೇಕು. ಅನರ್ಹರು ಸೌಲಭ್ಯ ಪಡೆದಿದ್ದ ಮಾಹಿತಿ ಕೊಟ್ಟರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

      ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಇಂದು ಒಟ್ಟು 52 ಅರ್ಜಿಗಳು ಬಂದಿವೆ. ಅದರಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಆಗಿದ್ದು, ಬಗೆಹರಿಸುವ ಅರ್ಜಿಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ. ಉಳಿದವುಗಳಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, 7 ಸಾಮಾಜಿಕ ಭದ್ರತಾ ಯೋಜನೆಯಡಿಯ ಸೌಲಭ್ಯ, 2 ಸಾಗುವಳಿ ಚೀಟಿ, ಕಣ್ಣಿನ ತಪಾಸಣೆ ನಡೆಸಿ 25 ಕನ್ನಡಕಗಳನ್ನು ನೀಡಲಾಗಿದೆ. 16 ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗಿದೆ. 9 ಪಹಣಿ ತಿದ್ದುಪಡಿ, 84 ಪೆÇೀಡಿ ಸಮಸ್ಯೆ , 7 ಪೌತಿ ಖಾತೆ ಸರಿಪಡಿಸಲಾಗಿದೆ. ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ಘನತ್ಯಾಜ್ಯ ನಿರ್ವಹಣೆಗಾಗಿ ಜಾಗ ನೀಡಲಾಗಿದೆ. ಗ್ರಾಮಕ್ಕೆ ಸ್ಮಶಾನ ಜಾಗ ಮೀಸಲಿಡಲಾಗಿದೆ ಎಂದು ಹೇಳಿದರು.

      ಸರಕಾರಿ ಜಾಗ ಒತ್ತುವರಿ ಮಾಡಿಕೊಂಡು ಓಡಾಡುವ ದಾರಿಗೆ ಸಮಸ್ಯೆಯಾಗಿದೆ. ಕೆರೆಗೆ ನೀರು ಬರುವ ಮಾರ್ಗ ಮಧ್ಯೆ ಜಮೀನು ಅಭಿವೃದ್ಧಿ ಪಡಿಸಿ ನೀರು ಹೋಗದಂತೆ ತಡೆಹಿಡಿಯಲಾಗಿದೆ ಎಂಬುದು ಸೇರಿದಂತೆ
ಬೆಸ್ಕಾಂಗೆ ಸಂಬಂಧಿಸಿದ ದೂರುಗಳು ಬಂದಿವೆ. ಈ ದೂರುಗಳನ್ನು ಪರಶೀಲಿಸಿ ತುರ್ತಾಗಿ ಇತ್ಯರ್ಥಪಡಿಸುವ ಕ್ರಮಕೈಗೊಳ್ಳಲಾಗುವುದು ಎಂದರು.

      ತಾಲೂಕಿನ ಉಪನೋ ಂದಣಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆಯೂ ದೂರು ಬಂದಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವುದು ಮತ್ತು ಗ್ರಾಮದ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಗ್ರಾಮದ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರಗೊಳ್ಳುವ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗಿದೆ. ಉಳಿದ ಸಮಸ್ಯೆಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿವಿಧ ಇಲಾಖೆಗಳು ತಮ್ಮದೇ ಯೋಜನೆಗಳ ಸೌಲಭ್ಯ ಕುರಿತು ಮಳಿಗೆ ಪ್ರದರ್ಶನದ ಮೂಲಕ ಅರಿವು ಮೂಡಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಸ್ಥಳದಲ್ಲಿಯೇ ದೃಷ್ಠಿದೋಷವುಳ್ಳವರಿಗೆ ಕನ್ನಡಕ ವಿತರಿಸಲಾಗಿದೆ ಎಂದರು.

     ಎಸ್‍ಪಿ ಡಾ.ಕೆ. ವಂಶಿಕೃಷ್ಣ ಮಾತ ನಾಡಿ, ಪೊಲೀಸ್ ಇಲಾಖೆಯೂ ಜನಸ್ನೇ ಹಿಯುತವಾಗಿ ಕೆಲಸ ಮಾಡುತ್ತಿದೆ. ಜನರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಸಲುವಾಗಿ 112 ಸೇವೆ ಪ್ರಾರಂಭಿಸಲಾಗಿದೆ. ಸಮಸ್ಯೆ ಇದ್ದವರು 112ಗೆ ಕರೆ ಮಾಡಿ ಮಾಹಿತಿ ನೀಡಿದರೆ 15 ನಿಮಿಷದಲ್ಲಿ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

(Visited 63 times, 1 visits today)
Previous Articleಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪ : 4 ವರ್ಷ ಸಜೆ
Next Article ಪೌಷ್ಟಿಕ ಪುನರ್‍ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ
News Desk Benkiyabale

Related Posts

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

October 23, 2026 6:10 pm news

ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್

October 23, 2026 6:08 pm news

ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ

October 23, 2026 6:06 pm news
ತಾಜಾ ಸುದ್ಧಿಗಳು
news

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

October 23, 2026 6:10 pm
news

ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್

October 23, 2026 6:08 pm
news

ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ

October 23, 2026 6:06 pm
news

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

October 22, 2026 5:22 pm
news

ಕನ್ನಡ ನಾಡಿನ ಗತವೈಭವ ದರ್ಶನ

October 22, 2026 5:21 pm
news

ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಸಂಭ್ರಮ

October 22, 2026 5:19 pm
Our Youtube Channel
Our Picks

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

October 23, 2026 6:10 pm

ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್

October 23, 2026 6:08 pm

ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ

October 23, 2026 6:06 pm

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

October 22, 2026 5:22 pm

ಕನ್ನಡ ನಾಡಿನ ಗತವೈಭವ ದರ್ಶನ

October 22, 2026 5:21 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ವೈಭವದಿಂದ ಹತ್ತನೇ ಉತ್ಸವ ಆಚರಿಸಲು ತೀರ್ಮಾನ

By News Desk BenkiyabaleOctober 23, 2026 6:10 pm

ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆಯ ಈ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಹೋತ್ಸವ ವೈಭವದಿಂದ…

ವ್ಯರ್ಥವಾಗಬೇಕಾದ ಕುಂಬಳಕಾಯಿಯನ್ನು ಪ್ರಸಾದವನ್ನಾಗಿಸಿದ ಪ್ರಸಾದ್

October 23, 2026 6:08 pm

ಚನ್ನಮ್ಮ ಇಂದಿನ ಭಾರತದ ಮಹಿಳೆಯರಿಗೆ ಮಾದರಿ

October 23, 2026 6:06 pm

ಬಟ್ಟೆ ಸುತ್ತಿಕೊಂಡ0ತೆ ಸುಕ್ಕುಗಟ್ಟಿದ ರಸ್ತೆ

October 22, 2026 5:22 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.