BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಸಾಧನೆ
  • ಕನಸು ಸಂಘಟನೆಯಿ0ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
  • ೧೪ನೇ ಶತಮಾನದ ‘ಜಾತ್ರೆ ವೀರಗಲ್ಲು’ ಶಾಸನ ಪತ್ತೆ
  • ಸ್ವಯಂ ಗಣತಿಯ ಅಭಿವೃದ್ಧಿಗೆ ಕೈಜೋಡಿಸಿ
  • ಏ.೮ ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಜಿಲ್ಲಾಧಿಕಾರಿ ವಿಶ್ವಾಸ
  • ಗುಣಮಟ್ಟದ ಹಾಲು ಶೇಖರಣೆ: ಜಿಲ್ಲೆ ರಾಜ್ಯದಲ್ಲೇ ಪ್ರಥಮ
  • ಸಿದ್ಧಗಂಗಾ ಶ್ರೀಗಳ ಜನ್ಮದಿನೋತ್ಸವ ಆಚರಣೆ
  • ವಿಷ ಕುಡಿಯಲು ಯತ್ನಿಸಿದವರ ರಕ್ಷಿಸಿದ ಶಾಸಕ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಗುರುಭವನದಲ್ಲಿ ಹಣಕಾಸಿನ ಅವ್ಯವಹಾರ ಖಂಡಿಸಿ ಶಿಕ್ಷಕರ ಧರಣಿ
ತುಮಕೂರು ಜಿಲ್ಲಾ ಸುದ್ಧಿಗಳು

ಗುರುಭವನದಲ್ಲಿ ಹಣಕಾಸಿನ ಅವ್ಯವಹಾರ ಖಂಡಿಸಿ ಶಿಕ್ಷಕರ ಧರಣಿ

By News Desk BenkiyabaleUpdated:November 28, 2018 4:37 pm

ಮಧುಗಿರಿ :

      ಪಟ್ಟಣದಲ್ಲಿರುವ ಗುರುಭವನದ ತಾಲ್ಲೂಕು ಸಮಿತಿಯಲ್ಲಿನ ಹಣಕಾಸಿನ ಅವ್ಯವಹಾರಗಳನ್ನು ಖಂಡಿಸಿ ಡಿ.1 ರಂದು ಮಧ್ಯಾಹ್ನ 12.30 ಕ್ಕೆ ಬಿ.ಇ.ಒ ಕಚೇರಿ ಎದುರು ಶಾಂತಿಯುತ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು 9 ಶಿಕ್ಷಕರ ಸಂಘಗಳು ಪ್ರಕಟಣೆಯಲ್ಲಿ ತಿಳಿಸಿದೆ.

      ಗುರುಭವನದ ವಾಣಿಜ್ಯ ಮಳಿಗೆಗಳ ಸಂಪೂರ್ಣ ಕಾಮಗಾರಿಯ ಖರ್ಚು, ವೆಚ್ಚಗಳನ್ನು ಪಾಸ್ ಬುಕ್ ಸಹಿತ ನೀಡಬೇಕು, 31 ಅಂಗಡಿ ಮಳಿಗೆಗಳಿಂದ ವಸೂಲಾಗಿರುವ 12 ತಿಂಗಳ ಬಾಡಿಗೆ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮ ಮಾಡಿಬೇಕು, ಸರಕಾರದ ಸುತ್ತೋಲೆಯಂತೆ ಗುರುಭವನ ಸಮಿತಿಯ ಅಧ್ಯಕ್ಷರು ಮತ್ತು ಖಜಾಂಚಿಗಳು ಜಂಟಿಯಾಗಿ ಖಾತೆಯನ್ನು ನಿರ್ವಹಿಸಬೇಕು, 31 ಅಂಗಡಿ ಮಳಿಗೆಯವರಿಂದ ಬಾಡಿಗೆಯನ್ನು ನಗದು ರೂಪದಲ್ಲಿ ವಸೂಲು ಮಾಡದೆ ನೇರವಾಗಿ ಗುರುಭವನ ಸಮಿತಿಯ ಜಂಟಿ ಖಾತೆಗೆ ಅಂಗಡಿಯವರೆ ಬಾಡಿಗೆಯನ್ನು ಸಂದಾಯ ಮಾಡಿ ಹಣವನ್ನು ಕಟ್ಟಿದ ರಶೀದಿಯನ್ನು ನಿರ್ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಒಬ್ಬ ಗುಮಾಸ್ತರನ್ನು ನೇಮಿಸಬೇಕು, ಸರಕಾರದ ಸುತ್ತೋಲೆಯಂತೆ ಗುರುಭವನ ಸಮಿತಿಯು ಪುನರ್ ರಚನೆಯಾಗಬೇಕು. ಗುರುಭವನ ಸಮಿತಿಯಲ್ಲಿ ಆಗಿದೆ ಎನ್ನಲಾದ ಹಣಕಾಸಿನ ಅವ್ಯವಹಾರವನ್ನು ಕೂಲಂಕುಶವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಆದ್ದರಿಂದ ಶಿಕ್ಷಕ ಬಂಧು ಗಳು ಗುರುಭವನದ ಸಮಿತಿಯಲ್ಲಿ ನಡೆದಿರುವ ಹಗರಣಗಳ ಸ್ಪೋಟಕ ಸತ್ಯಗಳನ್ನು ದಾಖಲೆ ಸಹಿತ ಬಿಡುಗಡೆ ಮಾಡಲಾಗುವುದು ಎಂದು ಸಂಘಟನೆಗಳು ಕರ ಪತ್ರಗಳನ್ನು ಶಿಕ್ಷಕ ಸಮುದಾಯಕ್ಕೆ ಹಂಚಲಾಗುತ್ತಿದೆ.

ಆರೋಪ :

      ಗುರುಭವನದ ಮುಂದೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿರುವುದು ಸಂತೋಷದ ವಿಚಾರ ಆದರೆ ಅಂಗಡಿಗಳು ನಿರ್ಮಾಣವಾಗಿ ವರ್ಷ ಕಳೆದರೂ ಗುರುಭವನ ಸಮಿತಿಯವರು ಲೆಕ್ಕ ಪತ್ರಗಳನ್ನು ನೀಡದೆ ಮಳಿಗೆಗಳು ತಮ್ಮ ಸ್ವಂತ ಆಸ್ತಿಯಂತೆ ವರ್ತಿಸುತ್ತಿರುವುದು ಅತ್ಯಂತ ದುರಂತ. ಒಂದೊಂದು ಅಂಗಡಿ ಮಳಿಗೆಗಳಿಂದಲೂ 3 ಲಕ್ಷ ರೂ. ಮುಂಗಡ ಪಡೆಯುವುದರ ಜೊತೆಗೆ ಮುಂಭಾಗದ ಕೆಲವು ಅಂಗಡಿಗಳಿಗೆ ಗುಡ್‍ವಿಲ್ ಸಹ ಪಡೆದಿರುತ್ತಾರೆ. ಈ ಎಲ್ಲಾ ಹಣವನ್ನು ನಿಯಮಾನುಸಾರ ಗುರುಭವನದ ಸಮಿತಿಯ ಜಂಟಿ ಖಾತೆಗೆ ಕಟ್ಟಿ ನಂತರ ಸಮಿತಿಯ ನಡಾವಳಿಯಂತೆ ಖರ್ಚು ಮಾಡಬೇಕಾಗಿರುತ್ತದೆ. ಈ ನಿಯಮಾವಳಿಯನ್ನು ಗಾಳಿಗೆ ತೂರಿದ್ದಾರೆ. 2017 ರ ಡಿ.10 ರಂದು ಸಿ.ಎಂ.ಸಿದ್ದರಾಮಯ್ಯರವರಿಂದ ಅಧಿಕೃತವಾಗಿ ಈ ಅಂಗಡಿ ಮಳಿಗೆ ಉದ್ಘಾಟನೆಗೊಂಡು ಅಂದಿನಿಂದ ಇಲ್ಲಿಯ ವರೆಗೂ ಬಾಡಿಗೆ ವಸೂಲಿ ಮಾಡಲಾಗಿದ್ದು ಅಂದಾಜು 9 ಲಕ್ಷ ರೂ. ಬಾಡಿಗೆ ವಸೂಲಾಗಿದೆ. ಆದರೆ ಈ ಹಣ ಇಲ್ಲಿಯ ವರೆವಿಗೂ ಗುರುಭವನ ಸಮಿತಿಗೆ ಜಮೆಯಾಗಿರುವುದಿಲ್ಲ. ಹಳೇ ಗುರುಭವನದ ಹಿಂಭಾಗದಲ್ಲಿ ಶಿಕ್ಷಣ ಇಲಾಖಾ ವತಿಯಿಂದ ಇಲಾಖಾಧಿಕಾರಿಗಳು ವಸತಿ ಗೃಹಕ್ಕಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಕಟ್ಟಡ ನಿರ್ಮಿಸಿದ್ದು. ಈ ಕಟ್ಟಡವನ್ನು ಖಾಸಗಿ ವ್ಯಕ್ತಿಗೆ ಬಾಡಿಗೆ ನೀಡಿರುವುದು ಹಣಕಾಸಿನ ದುರುಪಯೋಗಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಬೆಂಬಲ :

      ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮಧುಗಿರಿ ಘಟಕ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಜಿಲ್ಲಾ ಮತ್ತು ತಾಲೂಕು ಶಾಖೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಧುಗಿರಿ ಘಟಕದ ನಿರ್ದೇಶಕರು, ಬಡ್ತಿ ಮುಖ್ಯ ಶಿಕ್ಷಕರ ಸಂಘ, ಉಪನ್ಯಾಸಕರ ಸಂಘ, ಕರ್ನಾಟಕ ರಾಜ್ಯ ಎಸ್‍ಸಿ, ಎಸ್‍ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಮಧುಗಿರಿ ಶೈಕ್ಷಣಿಕ ಜಿಲ್ಲೆ ಮತ್ತು ತಾಲ್ಲೂಕು ಶಾಖೆ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘ ಜಿಲ್ಲಾ ಮತ್ತು ತಾಲ್ಲೂಕು ಶಾಖೆ, ಪದವೀಧರರ ಶಿಕ್ಷಕರ ವೇದಿಕೆ, ಎನ್.ಪಿ.ಎಸ್ ಶಿಕ್ಷಕರು ಬೆಂಬಲ ಸೂಚಿಸಿದ್ದಾರೆ.

ಶಿಕ್ಷಣಾಧಿಕಾರಿಯ ದ್ವಿಪಾತ್ರಭಿನಯ :

      ಮಧುಗಿರಿಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಎಂ.ವಿ.ರಾಜಣ್ಣ ಗುರುಭವನ ಸಮಿತಿಯ ಅಧ್ಯಕ್ಷರಾಗಿದ್ದು ಇವರು 2017 ರ ಆಗಸ್ಟ್ 24 ರಂದು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಬಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯೇ ತಾವೆ ಅಧ್ಯಕ್ಷರೆಂದು ಬಾಡಿಗೆದಾರರ ಕರಾರು ಪತ್ರದಲ್ಲಿ ಸಹಿ ಮಾಡಿರುವುದು ಭಾರಿ ಭ್ರಷ್ಟಚಾರಕ್ಕೆ ಪ್ರಚೋದನೆ ನೀಡಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

ಕತ್ತಲಿನಲ್ಲಿ ಗುರುಭವನದ ವಾಣಿಜ್ಯ ಮಳಿಗೆಗಳು :

      ಬೆಸ್ಕಾಂ ನವರು ಕಳೆದ 1 ವಾರದಿಂದ ಈ ವಾಣಿಜ್ಯ ಮಳಿಗೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಕತ್ತಲಿನಲ್ಲಿ ಮುಳುಗಿಸಿದ್ದಾರೆ. ಇದಕ್ಕೆ ಕಾರಣ ವಾಣಿಜ್ಯ ಸಂಕೀರ್ಣ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಪುರಸಭೆಗೆ ಸುಳ್ಳು ಪ್ರಮಾಣ ಪತ್ರನೀಡಿ ವಸತಿ ಉದ್ದೇಶಕ್ಕೆಂದು ಪುರಸಭೆಯವರಿಗೆ ಮಾಹಿತಿ ನೀಡಿ ತಾತ್ಕಲಿಕ ವಿದ್ಯುತ್ ಸಂಪರ್ಕ ಪಡೆದಿದ್ದರು. ಒಂದು ಕೆವಿ ಯಷ್ಟು ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಆದರೆ 7 ರಿಂದ 8 ಕೆವಿಯಷ್ಟು ವಿದ್ಯುತ್‍ನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದರಿಂದ ಬೆಸ್ಕಾಂ ವಿಚಕ್ಷಣ ದಳದವರು ದಾಳಿ ಮಾಡಿ ದಂಡ ವಸೂಲಿ ಮಾಡಿದ್ದರು. ಆದರೆ ಅಧಿಕೃತ ವಿದ್ಯುತ್ ಸಂಪರ್ಕಕ್ಕೆ ಪುರಸಭೆಯವರು ನೀಡಿರುವ ಎನ್‍ಒಸಿ ಪತ್ರ ಸರಿಯಿಲ್ಲದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.

      ಈ ಎಲ್ಲಾ ಹಗರಣಗಳ ಬಗ್ಗೆ 2018 ಆಗಸ್ಟ್ 12 ರಂದು ರಾಜ್ಯ ಮುಖ್ಯಮಂತ್ರಿಗಳು, ರಾಜ್ಯಪಾಲರು, ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾ ಪಂಚಾಯಿತ್ ಸಿಇಒ, ಭ್ರಷ್ಟಚಾರ ನಿಗ್ರಹದಳದ ಡಿವೈಎಸ್‍ಪಿ, ಬೆಂಗಳೂರಿನ ಶಿಕ್ಷಕರ ಸದನದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ದೂರನ್ನು ಹಲವು ಶಿಕ್ಷಣ ಸಂಘಟನೆಗಳಿಂದ ಸಲ್ಲಿಸಲಾಗಿದೆ.

(Visited 41 times, 1 visits today)
Previous Article ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸಿ ನಾಡಿನ ಹಿರಿಮೆ ಹೆಚ್ಚಿಸಿ
Next Article ದೌರ್ಜನ್ಯ ಮುಕ್ತ ಬಾಲ್ಯ: ಮಕ್ಕಳ ಭವಿಷ್ಯ ಉಜ್ವಲ
News Desk Benkiyabale

Related Posts

ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಸಾಧನೆ

April 03, 2026 4:46 pm ತುಮಕೂರು ಜಿಲ್ಲಾ ಸುದ್ಧಿಗಳು

ಕನಸು ಸಂಘಟನೆಯಿ0ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

April 03, 2026 4:44 pm ತುಮಕೂರು ಜಿಲ್ಲಾ ಸುದ್ಧಿಗಳು

೧೪ನೇ ಶತಮಾನದ ‘ಜಾತ್ರೆ ವೀರಗಲ್ಲು’ ಶಾಸನ ಪತ್ತೆ

April 03, 2026 4:42 pm ತುಮಕೂರು ಜಿಲ್ಲಾ ಸುದ್ಧಿಗಳು
ತಾಜಾ ಸುದ್ಧಿಗಳು
ತುಮಕೂರು ಜಿಲ್ಲಾ ಸುದ್ಧಿಗಳು

ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಸಾಧನೆ

April 03, 2026 4:46 pm
ತುಮಕೂರು ಜಿಲ್ಲಾ ಸುದ್ಧಿಗಳು

ಕನಸು ಸಂಘಟನೆಯಿ0ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

April 03, 2026 4:44 pm
ತುಮಕೂರು ಜಿಲ್ಲಾ ಸುದ್ಧಿಗಳು

೧೪ನೇ ಶತಮಾನದ ‘ಜಾತ್ರೆ ವೀರಗಲ್ಲು’ ಶಾಸನ ಪತ್ತೆ

April 03, 2026 4:42 pm
ತುಮಕೂರು ಜಿಲ್ಲಾ ಸುದ್ಧಿಗಳು

ಸ್ವಯಂ ಗಣತಿಯ ಅಭಿವೃದ್ಧಿಗೆ ಕೈಜೋಡಿಸಿ

April 03, 2026 4:39 pm
ತುಮಕೂರು ಜಿಲ್ಲಾ ಸುದ್ಧಿಗಳು

ಏ.೮ ರ ಜನಸ್ಪಂದನ ಸಭೆಯಲ್ಲಿ ಗರಿಷ್ಠ ಪರಿಹಾರಗಳು: ಜಿಲ್ಲಾಧಿಕಾರಿ ವಿಶ್ವಾಸ

April 03, 2026 4:37 pm
ತುಮಕೂರು ಜಿಲ್ಲಾ ಸುದ್ಧಿಗಳು

ಗುಣಮಟ್ಟದ ಹಾಲು ಶೇಖರಣೆ: ಜಿಲ್ಲೆ ರಾಜ್ಯದಲ್ಲೇ ಪ್ರಥಮ

April 02, 2026 4:11 pm
Our Youtube Channel
Our Picks

ವಿಷ ಕುಡಿಯಲು ಯತ್ನಿಸಿದವರ ರಕ್ಷಿಸಿದ ಶಾಸಕ

April 02, 2026 3:56 pm

ಸಂಪನ್ನಗೊ0ಡ ವಿಶ್ವ ರಂಗಭೂಮಿ ಸಂಭ್ರಮಾಚರಣೆ

March 28, 2026 4:00 pm

ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ

March 28, 2026 3:41 pm

ಗುಬ್ಬಚ್ಚಿಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ : ಜಿ.ವಿ. ರಘು

March 28, 2026 3:35 pm

ಏ.1 ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ

March 27, 2026 5:01 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಪಟೂರು ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm

ಭಾಷೆ ಮನುಷ್ಯನಿಗೆ ಉಸಿರಿನಷ್ಟೇ ಅನಿವಾರ್ಯ

November 04, 2022 4:36 pm
Don't Miss
ತುಮಕೂರು ಜಿಲ್ಲಾ ಸುದ್ಧಿಗಳು

ರಾಷ್ಟ್ರೀಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಸಾಧನೆ

By News Desk BenkiyabaleApril 03, 2026 4:46 pm

ಬೆಂಗಳೂರು: ಕರ್ನಾಟಕ ರಾಜ್ಯ ವೈದ್ಯಕೀಯ ಲ್ಯಾಬ್ ತಂತ್ರಜ್ಞರ ಸಂಘದ ವತಿಯಿಂದ ಆಯೋ ಜಿಸಲಾದ ವೈದ್ಯಕೀಯ ಲ್ಯಾಬ್ ತಂತ್ರಜ್ಞರ ಸಮ್ಮೇಳನ ಹಾಗೂ…

ಕನಸು ಸಂಘಟನೆಯಿ0ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

April 03, 2026 4:44 pm

೧೪ನೇ ಶತಮಾನದ ‘ಜಾತ್ರೆ ವೀರಗಲ್ಲು’ ಶಾಸನ ಪತ್ತೆ

April 03, 2026 4:42 pm

ಸ್ವಯಂ ಗಣತಿಯ ಅಭಿವೃದ್ಧಿಗೆ ಕೈಜೋಡಿಸಿ

April 03, 2026 4:39 pm
News by Date
April 2026
M T W T F S S
 12345
6789101112
13141516171819
20212223242526
27282930  
« Mar    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.