BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ
  • ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ
  • ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 
  • KUWJ ಅಧ್ಯಕ್ಷ ಯೋಗೇಶ್ ವಿರುದ್ಧ ಎಫ್‌ಐಆರ್
  • ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ
  • ಕ್ವಾರಿ, ಸ್ಟೋನ್ ಕ್ರಷರ್ ಉತ್ಪಾದನೆ, ಪೂರೈಕೆ ಸ್ಥಗಿತ
  • ಜಿಲ್ಲಾ ನಿವೃತ್ತ ನೌಕರರ ಸಂಘದಿAದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಯಶಸ್ವಿ
  • ಪೆರಿಯಾರ್ ಇ.ವಿ ರಾಮಸ್ವಾಮಿ ಅವರ ಜನ್ಮ ದಿನ ಆಚರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಪಠ್ಯಕ್ರಮದಲ್ಲಿ ರಾಮಾಯಣ-ಭಗವದ್ಗೀತೆ ಬದಲು ನೈತಿಕ ಶಿಕ್ಷಣ ಅಳವಡಿಕೆ
Trending

ಪಠ್ಯಕ್ರಮದಲ್ಲಿ ರಾಮಾಯಣ-ಭಗವದ್ಗೀತೆ ಬದಲು ನೈತಿಕ ಶಿಕ್ಷಣ ಅಳವಡಿಕೆ

By News Desk BenkiyabaleUpdated:April 20, 2022 6:09 pm

ತುಮಕೂರು:
ಪಠ್ಯಕ್ರಮದಲ್ಲಿ ರಾಮಾಯಣ-ಭಗವದ್ಗೀತೆ ಅಳವಡಿಸುವ ಮಾತಿಲ್ಲ. ಅದರ ಬದಲಾಗಿ ನೈತಿಕ ಶಿಕ್ಷಣ ತರಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ತಾಲ್ಲೂಕಿನ ಕೋರಾದಲ್ಲಿ ಸರ್ವಮಂಗಳ ನಾಗಯ್ಯರವರ ಸ್ಮರಣಾರ್ಥ ಮಮತಾ ಹರ್ಷ ದಂಪತಿಗಳು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರಕಾರಿ ಮಾದರಿ ಹಿರಿಯ ಪ್ರಾಥ ಮಿಕ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡುತಿದ್ದ ಅವರು, ಭಾರತೀಯ ಸಂಸ್ಕøತಿಯಲ್ಲಿ ಅನ್ನ, ಅಕ್ಷರ ಮತ್ತು ಆರೋಗ್ಯ ದಾನ ಅತ್ಯಂತ ಮುಖ್ಯವಾದುದ್ದು, ಇಂತಹ ಹೊತ್ತಿನಲ್ಲಿ ಹರ್ಷ ದಂಪತಿಗಳು ತಮ್ಮ ತಾಯಿಯ ಹೆಸರಿನಲ್ಲಿ 20 ಸುಸಜ್ಜಿತ ಕೊಠಡಿಗಳನ್ನು ಒಳಗೊಂಡ ಕಟ್ಟಡ ನಿರ್ಮಾನ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಹರ್ಷ ಮತ್ತು ಕುಟುಂಬ ವರ್ಗದವರಿಗೆ ಧನ್ಯವಾದ ಸಲ್ಲಿಸಬೇಕಾಗಿದೆ ಎಂದರು.
ದಾನಿಗಳು ನಿರ್ಮಿಸಿಕೊಟ್ಟಿರುವ ಈ ಶಾಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನ್ಯಾಚುರಲ್ ಗ್ರೋಥ್‍ಗೆ ಹೆಚ್ಚಿನ ಒತ್ತು ನೀಡುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದ್ದೇನೆ. ಇಲ್ಲಿ ಹೈಸ್ಕೂಲ್ ತೆರೆಯಲು ಅಗತ್ಯ ಮಕ್ಕಳ ಸಂಖ್ಯೆ ದೊರೆತರೆ ಕೂಡಲೇ ಅನುಮತ ನೀಡಲಾಗುವುದು ಎಂದರು.
ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್, ಇದೊಂದು ಪುಣ್ಯದ ಕೆಲಸ.ಹರ್ಷ ಅವರು ತಮ್ಮ ತಾಯಿಯ ನೆನಪಿಗಾಗಿ ಇಂತಹದೊಂದು ಶಾಲೆ ಕಟ್ಟಡವನ್ನು ಕಟ್ಟಿಕೊಟ್ಟಿದ್ದಾರೆ. ಶಿಕ್ಷಣವೇ ಮರೀಚಿಕೆಯಾಗಿರುವ ದಿನಗಳಲ್ಲಿ ಮಕ್ಕಳಿಗೆ ಅನುಕೂಲಕ್ಕೆ ದಾನಿಗಳು ಮುಂದೆ ಬಂದಿರುವುದು ಸಂತೋಷದ ವಿಚಾರವಾಗಿದೆ.ಸ್ವಾತಂತ್ರಪೂರ್ವದಲ್ಲಿ ಶೇ18 ರಷ್ಟಿದ್ದ ಸಾಕ್ಷರತೆ ಸಂಖ್ಯೆ ಇಂದು 80ಕ್ಕೆ ತಲುಪಿರುವುದಕ್ಕೆ ಇಂತಹ ದಾನಿಗಳು ಸರಕಾರದೊಂದಿಗೆ ಕೈಜೋಡಿಸಿರುವುದೇ ಕಾರಣ.ಈ ದಾನಿಗಳ ಶ್ರಮ ಸಾರ್ಥಕವಾಗಬೇಕಾದರೆ ಈ ಶಾಲೆಯಲ್ಲಿ ಓದಿದ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಾಗಿ ಬರಬೇಕು ಎಂದು ಸಲಹೆ ನೀಡಿದ ಅವರು, ನಮ್ಮ ಅನುದಾನದಲ್ಲಿ ಶಾಲೆಯ ಕಾಂಪೌಂಡ್ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕೋರ ಗ್ರಾಮಕ್ಕೆ ಸಮೀಪದಲ್ಲಿ ಸುಮಾರು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶ ಇದ್ದು, ಇಲ್ಲಿ ಕೆಲಸ ಮಾಡಲು ಅನುಕೂಲವಾಗುವಂತೆ ಕೌಶಲ್ಯ ಭರಿತ ಕಾರ್ಮಿಕರನ್ನು ಸೃಷ್ಟಿಸಲು ಕೋರದಲ್ಲಿ ಐಟಿಐ ಕಾಲೇಜು ಶೀಘ್ರದಲ್ಲಿಯೇ ಮಂಜೂರು ಮಾಡಿಕೊಡಲಾಗುವುದು.ಇದರಿಂದ ಸಾವಿರಾರು ಮಕ್ಕಳಿಗೆ ಉದ್ಯೋಗ ದೊರಕಿಸಿ ಕೊಟ್ಟಂತಾಗುತ್ತದೆ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಪ್ರಧಾನಿ ನರೇಂದ್ರಮೋದಿ, ದೇಶದ ಎಲ್ಲಾ ಹಳ್ಳಿಗಳ ಮಕ್ಕಳು ಶಿಕ್ಷಣ ಕಲಿಯಬೇಕು ಎಂಬ ಸದುದ್ದೇಶದಿಂದ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಇದರ ಪರಿಣಾಮ ಗ್ರಾಮೀಣ ಭಾಗದ ಮಕ್ಕಳು ಸಹ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿ ಬರುತ್ತಿರುವುದು ಸಂತೋಷದ ವಿಚಾರವಾಗಿದೆ. ನಾನು ನನ್ನ ಎಂ.ಪಿಲ್ಯಾಡ್‍ನಿಂದ ಶಾಲೆಯ ಅಭಿವೃದ್ದಿಗೆ 10 ಲಕ್ಷ ರೂಗಳನ್ನು ನೀಡಲಾಗುವುದು.ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ಮಕ್ಕಳಲ್ಲಿ ತುಂಬಿ, ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕೆಂದು ಕರೆ ನೀಡಿದರು.
ದಾನಿಗಳಾದ ಹರ್ಷ ಮಾತನಾಡಿ, ನಮ್ಮ ತಾಯಿಯವರು ಹುಟ್ಟಿ ಬೆಳೆದ ಊರು ಇದು. ನಮ್ಮ ತಾಯಿಯ ನೆನಪಿನಲ್ಲಿ ಏನಾದರೂ ಒಂದು ಶಾಶ್ವತ ಕಾರ್ಯ ಮಾಡಬೇಕೆಂಬ ಇಚ್ಚೆಯಂತೆ ಇಲ್ಲಿನ ಗ್ರಾಮಪಂಚಾಯಿತಿಯನ್ನು ಭೇಟಿ ಮಾಡಿದಾಗ, ಅಧ್ಯಕ್ಷರಾಗಿದ್ದ ನಜೀರ್ ಅಹಮದ್ ಅವರು, ಎರಡು ಎಕರೆ ಸರಕಾರಿ ಜಾಗವಿದ್ದು, ಶಾಲಾ ಕಟ್ಟಡ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಅವರ ಮನವಿಯನ್ನು ಪುರಷ್ಕರಿಸಿ ಈ ಕೆಲಸ ಮಾಡಲಾಗಿದೆ. ಇಲ್ಲಿ ಒದಿದ ಮಕ್ಕಳು ಸಹ ನಮ್ಮಂತೆಯೇ ಇತರರಿಗೆ ಸಹಾಯ ಮಾಡಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಇದೇ ವೇಳೆ ಊರಿನ ಮುಂಭಾಗದಿಂದ ಶಾಲೆಯವರೆಗೆ ದಾನಿಗಳಾದ ಮಮತಾ ಹರ್ಷ ದಂಪತಿಗಳನ್ನು ಬೆಳ್ಳಿರಥದಲ್ಲಿ ಕುಳ್ಳರಿಸಿ, ಪೂರ್ಣಕುಂಬ ಸ್ವಾಗತ ಹಾಗೂ ವಿವಿಧ ಕಲಾ ತಂಡಗಳ ಮೂಲಕ ಶಾಲಾ ಆವರಣಕ್ಕೆ ತರಲಾಯಿತು.ಕಾರ್ಯಕ್ರಮದಲ್ಲಿ ಶ್ರೀಮತಿ ಮಮತ, ಡಿಡಿಪಿಐ ಸಿ.ನಂಜಯ್ಯ, ಬಿಇಓ ಹನುಮಾನಾಯ್ಕ್, ಕೋರಾ ಗ್ರಾಮಪಂಚಾಯಿತಿ ಅಧ್ಯಕ್ಷೆ ಎಲ್.ನಾಗರತ್ನ ಸೋಮಶೇಖರ್, ಉಪಾಧ್ಯಕ್ಷ ಬಿ.ಮಧು ನಂದೀಶ್,ಎಡಿಎಂಸಿ ಅಧ್ಯಕ್ಷ ಶರತ್‍ಕುಮಾರ್,ಉಪಾಧ್ಯಕ್ಷ ಯಶೋಧ ಗಂಗಯ್ಯ, ಹಳೆಯ ವಿದ್ಯಾರ್ಥಿಗಳ ಗೌರವಾಧ್ಯಕ್ಷ ಎಲ್.ಕಾಮಯ್ಯ, ಉಪಾಧ್ಯಕ್ಷ ರವಿಶಂಕರ್, ಮುಖ್ಯ ಶಿಕ್ಷಕ ಕೆ.ವೆಂಕಟರಾಮಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಜಿ.ತಿಮ್ಮೇಗೌಡ, ಆರ್.ಮಂಜಣ್ಣ, ಡಮರುಗ ಉಮೇಶ್, ನಜೀರ್ ಅಹಮದ್, ನರಸಿಂಹಮೂರ್ತಿ, ಶಿವರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)
BC Nagesh Education tumkur
Previous Articleಮಾಜಿ ಸಚಿವ ಟಿ.ಬಿ ಜಯಚಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ: ಆಸ್ಪತ್ರೆಗೆ ದಾಖಲು
Next Article ಗುತ್ತಿಗೆ ಪದ್ದತಿ ರದ್ದು ಪಡಿಸುವಂತೆ ಒತ್ತಾಯಿಸಿ ನೀರು ಸರಬರಾಜು ನೌಕರರ ಪ್ರತಿಭಟನೆ
News Desk Benkiyabale

Related Posts

ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ

September 19, 2026 6:07 pm news

ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ

September 19, 2026 6:06 pm news

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 

September 19, 2026 6:04 pm news
ತಾಜಾ ಸುದ್ಧಿಗಳು
news

ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ

September 19, 2026 6:07 pm
news

ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ

September 19, 2026 6:06 pm
news

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 

September 19, 2026 6:04 pm
news

KUWJ ಅಧ್ಯಕ್ಷ ಯೋಗೇಶ್ ವಿರುದ್ಧ ಎಫ್‌ಐಆರ್

September 19, 2026 5:39 pm
news

ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ

September 18, 2026 5:39 pm
news

ಕ್ವಾರಿ, ಸ್ಟೋನ್ ಕ್ರಷರ್ ಉತ್ಪಾದನೆ, ಪೂರೈಕೆ ಸ್ಥಗಿತ

September 18, 2026 5:37 pm
Our Youtube Channel
Our Picks

ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ

September 19, 2026 6:07 pm

ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ

September 19, 2026 6:06 pm

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 

September 19, 2026 6:04 pm

KUWJ ಅಧ್ಯಕ್ಷ ಯೋಗೇಶ್ ವಿರುದ್ಧ ಎಫ್‌ಐಆರ್

September 19, 2026 5:39 pm

ಸೆ.೨೦ರಂದು ಪೊಲೀಸ್ ಲಿಖಿತ ಪರೀಕ್ಷೆ: ಲೋಪದೋಷವಿಲ್ಲದೆ ನಡೆಸಲು ಡಿಸಿ ಸೂಚನೆ

September 18, 2026 5:39 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ನೈಸ್ ವಿಷಯದಲ್ಲಿ ಹೈಕೋರ್ಟ್ ತೀರ್ಪು ಜಾರಿಗೆ ಒತ್ತಾಯಿಸಿದ ಮುಖಂಡರ ಬಂಧನ

By News Desk BenkiyabaleSeptember 19, 2026 6:07 pm

ತುಮಕೂರು: ರಾಜ್ಯ ಹೈಕೋರ್ಟ್ ನೈಸ್ ಭೂಮಿಯನ್ನುರೈತರಿಗೆ ವಾಪಸು ನೀಡಬೇಕೆಂದು ಮತ್ತುಅಕ್ರಮವಾಗಿ ಸಂಗ್ರಹಿಸುತ್ತಿರುವಟೋಲ್ ಸಂಗ್ರಹ ನಿಲ್ಲಿಸಬೇಕೆಂದು ತೀರ್ಪು ನೀಡಿದ್ದರೂ ಅದನ್ನು ಜಾರಿಗೆ…

ಸ್ಪರ್ಧಾತ್ಮಕ ಯುಗದಲ್ಲಿ ತರಬೇತಿಗಳು ಅನಿವಾರ್ಯವಾಗಿವೆ

September 19, 2026 6:06 pm

ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಅಧಿಕಾರಿಗಳಿಗೆ ಡಿಸಿಎಂ ಸೂಚನೆ 

September 19, 2026 6:04 pm

KUWJ ಅಧ್ಯಕ್ಷ ಯೋಗೇಶ್ ವಿರುದ್ಧ ಎಫ್‌ಐಆರ್

September 19, 2026 5:39 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.