BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ
  • ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ
  • ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ
  • ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು
  • ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ
  • ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ
  • ಗೃಹಬಳಕೆ ಸಿಲಿಂಡರ್‌ಗಳ ವಾಣಿಜ್ಯ ಬಳಕೆಗೆ ಕಾನೂನು ಕ್ರಮ
  • ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಎಡಿಸಿ ಸೂಚನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದೊಡ್ಡ ಖಾತೆಗೆ ಮಂತ್ರಿಯಾದರೆ ಮಾತ್ರ ಪವರ್ ಪುಲ್ ಅಲ್ಲ: ಯಾವುದೇ ಖಾತೆಗೆ ಗೌರವ ತಂದುಕೊಡುವವನೇ ನಿಜವಾದ ಮಂತ್ರಿ!
ತುಮಕೂರು

ದೊಡ್ಡ ಖಾತೆಗೆ ಮಂತ್ರಿಯಾದರೆ ಮಾತ್ರ ಪವರ್ ಪುಲ್ ಅಲ್ಲ: ಯಾವುದೇ ಖಾತೆಗೆ ಗೌರವ ತಂದುಕೊಡುವವನೇ ನಿಜವಾದ ಮಂತ್ರಿ!

By News Desk BenkiyabaleUpdated:April 26, 2022 5:52 pm

ತುಮಕೂರು:
ನಗರದ ಕನ್ನಡ ಭವನದಲ್ಲಿ ತುಮಕೂರು ಜಿಲ್ಲಾ ವೈ.ಎ.ಎನ್.ಅಭಿಮಾನಿ ಬಳಗ ಹಾಗೂ ಶಿಕ್ಷಕರು ಮತ್ತು ಉಪನ್ಯಾಸಕರ ಸಂಘಟನೆಗಳ ವತಿಯಿಂದ ವಿಧಾನಪರಿಷತ್ ಸದಸ್ಯ ಹಾಗೂ ಸರಕಾರದ ಮುಖ್ಯ ಸಚೇತಕ ಡಾ.ವೈ.ಎ. ನಾರಾಯಣಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಮಾತನಾಡಿ, ವಿಧಾನಪರಿಷತ್ ಸದಸ್ಯರಿಗು ವಿಧಾನಸಭೆಗೆ ಇರುವಷ್ಟೇ ಜವಾಬ್ದಾರಿ ಇರುತ್ತೆ.ಕೆಳಮನೆಯ ತೀರ್ಮಾನಗಳು, ಮೇಲ್ಮೆನೆಯಲ್ಲಿ ವಿಸ್ಕøತ ಚರ್ಚೆಗಳಾಗಿ, ನಂತರ ಕಾಯ್ದೆಗಳಾಗಿ ಜಾರಿ ಬರುತ್ತದೆ.ಹಾಗಾಗಿ ವಿಧಾನಪರಿಷತ್ತಿನ ಚರ್ಚೆಗಳನ್ನು ಸರಕಾರ ಬಹಳ ಗಂಭೀರವಾಗಿ ಪರಿಗಣಿಸುತ್ತದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕ ಮಾಡುವ ಕೆಲ ತಪ್ಪುಗಳು, ಇಡೀ ಇಲಾಖೆಯನ್ನೇ ಗೊಂದಲದ ಗುಡಾಗಿದೆ. ಶಿಕ್ಷಣ ಇಲಾಖೆ ಮತ್ತು ಕಾನೂನು ಇಲಾಖೆಯ ಮಂತ್ರಿಗಳ ಸಹಕಾರ ಪಡೆದು, ಈ ಗೊಂದಲಗಳಿಗೆ ಪರಿಹಾರ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಹಳೆ ಪಿಂಚಿಣಿ ವ್ಯವಸ್ಥೆ ಜಾರಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಡಾ.ವೈ.ಎ.ಎನ್.ಮುಖ್ಯಸಚೇತಕರಾಗಿರುವ ಕಾಲದಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಸದಾ ನಗುಮುಖದ ವೈ.ಎ.ಎನ್.ಅವರು ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ, ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಮುಖ್ಯಸಚೇತಕರಾಗಿ ನೇಮಕಗೊಂಡಿದ್ದಾರೆ. ಆ ಹುದ್ದೆಗೆ ಗೌರವ ತಂದುಕೊಡಲಿದ್ದಾರೆ ಎಂಬುದು ನಮ್ಮ ಅಭಿಮತ. ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಎನ್.ಇ.ಪಿ.ನಲ್ಲಿ ಅವಕಾಶವಿದೆ. ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಭಾರತ ಇಡೀ ವಿಶ್ವದಲ್ಲಿಯೇ ಅತ್ಯನ್ನತ ಗೌರವ ಪಡೆದಿದೆ.ಶಿಕ್ಷಕರು ಸಹ ತಮ್ಮ ಕ್ಷೇತ್ರದಲ್ಲಿ ವೈ.ಎ.ಎನ್.ಅವರನ್ನು ಆಯ್ಕೆ ಮಾಡಿಕೊಂಡು ತಮ್ಮ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವಲ್ಲಿ ಯಶಸ್ವಿ ಯಾಗುತ್ತಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸರಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಶಿಕ್ಷಕರು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸಬೇಕೆಂಬುದು ನನ್ನ ಮನದ ಇಂಗಿತವಾಗಿದೆ. ನನ್ನಿಂದ ಯಾರಿಗೂ ಅನ್ಯಾಯವಾಗಬಾರದು.ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕೆಂಬ ಅಬ್ದುಲ್ ಕಲಾಂ ಅವರ ಮಾತು ಸದಾ ನನ್ನ ಮನಸ್ಸಿನಲ್ಲಿದೆ.
ಯುವಕರಿಗೆ ಹೆಚ್ಚು ಅಧಿಕಾರ ಸಿಗಬೇಕೆಂಬುದು ನಮ್ಮ ಆಶಯ. ನಿಮ್ಮೆಲ್ಲರ ಸೇವೆಗೆ ನಾವೆಲ್ಲರೂ ಟೊಂಕ ಕಟ್ಟಿ ನಿಂತಿದ್ದೇವೆ. ನನ್ನ ಉಸಿರಿರವರೆಗೂ ಶಿಕ್ಷಕರನ್ನು ಮರೆಯಲ ಸಾಧ್ಯವೇ ಇಲ್ಲ.ಅನುದಾನ ದೊಡ್ಡದಿರುವ ಇಲಾಖೆ ಮಂತ್ರಿಯಾದರೆ ಮಾತ್ರ ಪವರ್‍ಪುಲ್ ಅಲ್ಲ. ಯಾವುದೇ ಇಲಾಖೆ ನೀಡಿದರೂ ಆ ಇಲಾಖೆಗೆ ಗೌರವ ತಂದುಕೊಡುವವನೇ ನಿಜವಾಗಿಯೂ ಪವರಪುಲ್ ಮಂತ್ರಿ. ಹಾಗಾಗಿ ಸಿಕ್ಕಿರುವ ಅವಕಾಶದಲ್ಲಿಯೇ ನಿಮ್ಮಗಳ ಸೇವೆಯನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಶಿಕ್ಷಕರು ಮೊದಲು ಸಂವಿಧಾನವನ್ನು ಓದಬೇಕು. ಹೊಸ ಶಿಕ್ಷಣ ಕಾಯ್ದೆಯ ಬಗ್ಗೆ ನಿಮ್ಮಗೆ ಎಷ್ಟು ಗೊತ್ತು ಎಂದು ಪ್ರಶ್ನಿಸಿದ ವೈ.ಎ.ಎನ್.ಅವರು, ಈ ನೆಲದ ಕಾನೂನು ಎಲ್ಲರಿಗೂ ಗೊತ್ತಿದ್ದರೆ, ಯಾರು ನಿಮ್ಮನ್ನು ಭಯಪಡಿಸಲು ಸಾಧ್ಯವಿಲ್ಲ.ಹಾಗಾಗಿ ಶಿಕ್ಷಕರು ಸಂವಿಧಾನದ ರಥಕ್ಕೆ ಸಾರಥಿಗಳಾಗಬೇಕು.
ಇನ್ನು ಮುಂದೆ ಯಾವ ಶಾಲೆಯ ಶಿಕ್ಷಕರು ವೇತನವಿಲ್ಲದೆ ಪರದಾಡುವಂತಹ ಸ್ಥಿತಿಗೆ ಅವಕಾಶ ನೀಡಲ್ಲ.ಆದರೆ ನೀವುಗಳು ಸಹ ನಿಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದು ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ವೈ.ಎ.ಎನ್.ಅಭಿಮಾನಿ ಬಳಗದ ಸಂಚಾಲಕ ಶ್ರೀನಿವಾಸರೆಡ್ಡಿ ವೈ.ಎ.ಎನ್.ಅವರದ್ದು ವಿಶೇಷ ವ್ಯಕ್ತಿತ್ವ ಹೊಂದಿದವರು.ಕ್ಷೇತ್ರದ ಜನರ ಸಮಸ್ಯೆಗಳನ್ನು ಅರಿತು, ಅವುಗಳ ಪರಿಹಾರಕ್ಕೆ ನಿರಂತರ ಕೆಲಸ ಮಾಡುತಿದ್ದಾರೆ.ಅತ್ಯುನ್ನತ ಪದವಿ ಪಡೆದು, ಶಿಕ್ಷಣ ಕ್ಷೇತ್ರದ ಆಳ,ಅಗಲಗಳನ್ನು ಅರಿತಿದ್ದು,ಅವರು ವಿಧಾನಪರಿಷತ್ತಿನಲ್ಲಿ ಕೇಳಿರುವ ಪ್ರಶ್ನೆಗಳು ಮತ್ತು ಅದಕ್ಕೆ ಬಂದಿರುವ ಉತ್ತರಗಳೇ ಉದಾಹರಣೆ.
ಇಂತಹ ವ್ಯಕ್ತಿಯ ಹೆಸರಿನಲ್ಲಿ ಬಳಗ ರಚಿಸಿಕೊಂಡು, ಕೋರೋನ ಸಂದರ್ಭದಲ್ಲಿ ಸುಮಾರು 3 ಲಕ್ಷ ರೂಗಳನ್ನು ಸಂಗ್ರಹಿಸಿ, 700 ಪುಡ್‍ಕಿಟ್‍ಗಳನ್ನು ಸಂಕಷ್ಟದಲ್ಲಿದ್ದ ಶಿಕ್ಷಕರಿಗೆ ವಿತರಿಸಲಾಯಿತು. ಇದನ್ನು ಮಾದರಿಯಾಗಿ ತೆಗೆದುಕೊಂಡ ನಮ್ಮ ನಾಯಕರಾದ ವೈ.ಎ.ನಾರಾಯಣಸ್ವಾಮಿ ಮತ್ತು ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ ಅವರು ಆಗ್ನೇಯ ಶಿಕ್ಷಕರ ಕ್ಷೇತ್ರದ ಅಷ್ಟೂ ಜಿಲ್ಲೆಗಳ ಸುಮಾರು 10 ಸಾವಿರ ಜನ ಶಿಕ್ಷಕರಿಗೆ ಪುಡ್‍ಕಿಟ್ ವಿತರಿಸಿ, ನೆರವು ನೀಡಿದ್ದಾರೆ. ಇಂತಹ ಜನನಾಯಕರನ್ನು ಪಡೆದಿರುವುದೇ ನಮ್ಮ ಭಾಗ್ಯ ಎಂದರು.ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ವೈ.ಎ.ಎನ್.ಅಭಿಮಾನಿ ಬಳಗದ ಸಂಚಾಲಕ ಶ್ರೀನಿವಾಸರೆಡ್ಡಿ , ಡಿಡಿಪಿಐ ನಂಜಯ್ಯ, ಬಿಇಓ ಹನುಮಾನಾಯ್ಕ್, ರಂಗಪ್ಪ, ಅಕ್ಕಮ್ಮ, ಲಿಂಗದೇವರು, ಕಮಲಾಕ್ಷಿ, ಉಮಮಹೇಶ, ಸಿದ್ದೇಶ್, ನಾರಾಯಣಪ್ಪ, ರಾಜಕುಮಾರ್, ಅಭಿಮಾನಿ ಬಳಗದ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

(Visited 12 times, 1 visits today)
tumkur
Previous Articleದಲಿತ ಯುವಕರ ಕೊಲೆಗೆ ಸಿಪಿಐಎಂ ಖಂಡನೆ
Next Article ಗ್ರಾಮ ಒನ್ ಗಳಲ್ಲಿ ಆರೋಗ್ಯ ಕಾರ್ಡ್ ವಿತರಿಸಲು ಜಿಲ್ಲಾಧಿಕಾರಿ ಸೂಚನೆ
News Desk Benkiyabale

Related Posts

ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ

August 06, 2026 6:24 pm news

ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ

August 06, 2026 6:22 pm news

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm news
ತಾಜಾ ಸುದ್ಧಿಗಳು
news

ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ

August 06, 2026 6:24 pm
news

ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ

August 06, 2026 6:22 pm
news

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm
news

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

August 06, 2026 6:15 pm
news

ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ

August 06, 2026 6:14 pm
news

ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಮನವಿ

August 06, 2026 6:12 pm
Our Youtube Channel
Our Picks

ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ

August 06, 2026 6:24 pm

ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ

August 06, 2026 6:22 pm

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

August 06, 2026 6:15 pm

ಪರಿಶಿಷ್ಟ ಪಂಗಡದ ಮೀಸಲಾತಿ ಕೈಬಿಟ್ಟಿರುವುದನ್ನ ಖಂಡಿಸಿದ ಗ್ರಾಮಸ್ಥರು ಮತದಾನದಿಂದ ದೂರವಿರುವುದಾಗಿ ಎಚ್ಚರಿಕೆ

August 06, 2026 6:14 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ

By News Desk BenkiyabaleAugust 06, 2026 6:24 pm

ಕೊರಟಗೆರೆ: ತಾಲೂಕಿನ ಸಿದ್ದರ ಬೆಟ್ಟದ ಅರಣ್ಯ ಇಲಾಖೆ ನರ್ಸರಿ ತಿರುವಿನಲ್ಲಿ ಭೀಕರ ಅಪಘಾತದಲ್ಲಿ ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯ ಕಾಲೇಜು…

ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ

August 06, 2026 6:22 pm

ಉಪಮುಖ್ಯಮ0ತ್ರಿಗಳ ಹುಟ್ಟು ಹಬ್ಬದ ಅಂಗವಾಗಿ ಹಣ್ಣು, ಹಂಪಲು ವಿತರಣೆ

August 06, 2026 6:19 pm

ಸಕಾಲಕ್ಕೆ ಮಳೆ ಇಲ್ಲದೇ ರೈತರು ಕಂಗಾಲು

August 06, 2026 6:15 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.