BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ
  • ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ
  • ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ
  • ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ
  • ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ
  • ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ
  • ಮನುಷ್ಯ ತನ್ನನ್ನು ತಾನು ತಿಳಿಯುವ ಪ್ರಯತ್ನ ಮಾಡಬೇಕು
  • ರಸ್ತೆ ತಡೆಗೋಡೆಗೆ ಆಟೋ ಡಿಕ್ಕಿ, 3 ಮಕ್ಕಳು ಸೇರಿ ದಂಪತಿ ಸಾವು
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕಷ್ಟಕ್ಕೆ ದೇವರು ಪರಿಹಾರವಲ್ಲ ದುಡಿಮೆಯೇ ಪರಿಹಾರ!
ತುಮಕೂರು

ಕಷ್ಟಕ್ಕೆ ದೇವರು ಪರಿಹಾರವಲ್ಲ ದುಡಿಮೆಯೇ ಪರಿಹಾರ!

By News Desk BenkiyabaleUpdated:May 02, 2022 7:49 pm

ತುಮಕೂರು:
ಕಷ್ಟಕ್ಕೆ ದೇವರು ಪೂಜೆ ಪರಿಹಾರವಲ್ಲ. ದುಡಿಮೆಯೇ ಪರಿಹಾರ ಎಂದು ಶ್ರೀ ನಿಜಗುಣಾನಂದ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಶಾಲೆಯ ಸಭಾಂಗಣದಲ್ಲಿ ವಿವಿಧ ಪ್ರಗತಿಪರ, ದಲಿತ ಪರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಬುದ್ದ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕಷ್ಟಗಳಿಗೆ ದೇವರು ಪರಿಹಾರ ನೀಡುತ್ತಾನೆ ಎಂಬುದಾಗಿದ್ದರೆ, ಸಾಲ ಮಾಡಿಕೊಂಡ ರೈತರು, ಸಾಲ ಮನ್ನಾಕ್ಕಾಗಿ ದೇವರ ಮುಂದೆ ಬೇಡುವ ಬದಲು ಸರಕಾರಗಳಿಗೆ ಮನವಿ ಸಲ್ಲಿಸುವ ಅಗತ್ಯವೆನ್ನಿತ್ತು ಎಂದು ಪ್ರಶ್ನಿಸಿದರು.
ಇಂದು ದೇವರು ಎಂಬುದು ಒಂದು ಉದ್ಯೋಗವಾಗಿದೆ.ಜನತೆಗೆ ಇನ್ನಿಲ್ಲದ ಭಯ ಹುಟ್ಟಿಸಿ, ಅವರಿಂದು ಒಂದಿಲೊಂದು ಪೂಜೆ ಮಾಡಿಸಿ, ತಾವು ಹೊಟ್ಟೆ ಹೊರೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇದನ್ನು ಅರಿಯದೆ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜೆ, ಪುನಸ್ಕಾರಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.ಮೈಮೇಲೆ ಬರುವ ದೇವರುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ.ಅದರಲ್ಲಿಯೂ ಕೆಳವರ್ಗದವರ ಮೇಲೆ ದೇವರುಗಳ ಬರುತ್ತಿರುವುದು ದುರದೃಷ್ಟಕರ ಎಂದರು.
ತಂದೆ, ತಾಯಿ, ಗುರು, ಹಿರಿಯರು ದೇವರು ಎಂದು ಹಿರಿಯರು ಹೇಳಿದ್ದಾರೆ.ಆದರೆ ನಮ್ಮ ಜನರು ಎಂದಿಗೂ ತಂದೆ, ತಾಯಿಯಲ್ಲಿ, ಗುರುಗಳಲ್ಲಿ ದೇವರನ್ನು ಕಾಣಲಿಲ್ಲ.ಒಂದು ವೇಳೆ ಹಾಗೇ ದೇವರನ್ನು ಕಂಡಿದ್ದರೆ, ಇಂದು ದೇಶದಲ್ಲಿ ವೃದ್ದಾಶ್ರಮಗಳೇ ಇರುತ್ತಿರಲಿಲ್ಲ. ಬುದ್ದ, ಬಸವಣ್ಣ, ಅಂಬೇಡ್ಕರ್ ಅವರನ್ನು ಮರೆತಿದ್ದೇ ಇಂದಿನ ದುಸ್ಥಿತಿಗೆ ಕಾರಣ ಎಂದ ಶ್ರೀನಿಜಗುಣಾನಂದಶ್ರೀಗಳು, ಈ ದೇಶದ ಭವಿಷ್ಯವಿರುವುದೇ ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ತತ್ವಗಳ ಮೇಲೆ ನಿಂತಿದೆ. ಆ ದಿಕ್ಕಿನತ್ತ ನಾವೆಲ್ಲರೂ ಸಾಗೋಣ, ಸ್ವಾತಂತ್ರ ತಲೆಗಳಾಗಿ ಬದುಕೋಣ ಎಂದು ಕಿವಿ ಮಾತು ಹೇಳಿದರು.
ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಅಂಬೇಡ್ಕರ್ ಅವರ ಕಾಲದಲ್ಲಿ ಅನುಭವಿಸಿದ ಶೋಷಣೆಗಳು ಇಂದಿಗೂ ಮುಂದುವರೆದಿವೆ. ಸ್ವಾತಂತ್ರ ಬಂದು 75 ವರ್ಷ ಕಳೆದರೂ ಇಂದಿಗೂ ಶೋಷಣೆ ಅನುಭವಿಸುತ್ತಿದ್ದೇವೆ. ಇದು ಅಂತ್ಯ ಕಾಣಬೇಕಾದರೆ ನಾವೆಲ್ಲರೂ ರಾಜಕೀಯ ಅಧಿಕಾರ ಪಡೆದಾಗ ಮಾತ್ರ ಸಾಧ್ಯ. ಸಿದ್ದಾಂತಗಳನ್ನು ನಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಅದನ್ನು ಸಮಾಜದ ಒಳಿತಿಗೆ ಬಳಕೆ ಮಾಡಿಕೊಳ್ಳಬೇಕಿದೆ. ದಲಿತರಲ್ಲಿ ಜಾಗೃತಿ ಮೂಡದ ಹೊರತು ಶೋಷಣೆಯಿಂದ ಹೊರಬರಲು ಸಾಧ್ಯವಿಲ್ಲ.ನಮ್ಮ ಹಕ್ಕು,ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿ ಬದುಕನ್ನು ಕಂಡುಕೊಳ್ಳಲು ನಾವೆಲ್ಲರೂ ಬದ್ದರಾಗಬೇಕು ಎಂದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಇದೊಂದು ಆರೋಗ್ಯ ಪೂರ್ಣ ಬೆಳವಣಿಗೆ, ಬುದ್ದ, ಬಸವ, ಅಂಬೇಡ್ಕರ್ ಜಯಂತಿಗೆ ಎಲ್ಲಾ ಸಮಾಜದ ಯುವಜನತೆ ಪಾಲ್ಗೊಂಡಿರುವುದು ಸಂತೋಷ ತಂದಿದೆ.ಈ ರೀತಿಯ ಬೆಳವಣಿಗೆ ರಾಜ್ಯದ ಎಲ್ಲೆಡೆ ಆಗಬೇಕಿದೆ. ಎಲ್ಲಾ ಕಾಲದಲ್ಲಿ ಸಮಾಜದ ಒಳಿತಿಗಾಗಿ ದುಡಿದ ಅನೇಕ ಬುದ್ದಿ ಜೀವಿಗಳ ನಮ್ಮಲ್ಲಿದ್ದರು. ಜೈನ ಮತ್ತು ಬೌದ್ದ ಧರ್ಮದ ಉದಯಕ್ಕೆ ಇಂತಹ ಚಿಂತನೆಗಳೇ ಕಾರಣ.ಬುದ್ದ ಅಹಿಂಸೆಯನ್ನು ಆಸ್ತ್ರವಾಗಿ ಬಳಸಲು ಆಗಿನ ಕಾಲದ ಸಾಮಾಜಿಕ ಸ್ಥಿತಿ.ವೈದಿಕ ಧರ್ಮವೇ ಪ್ರಧಾನ ಧರ್ಮವೆಂದು ಹೇಳುವವರು ನಮ್ಮ ನಡುವೆ ಇದ್ದಾರೆ. ಬಂಡಾಯ ಸಾಹಿತ್ಯದ ಉದಯದ ಕಾಲದಲ್ಲಿ ದೇವರಿಲ್ಲ ಎಂದು ಹೇಳುತಿದ್ದವರು. ಇಂದು ಇದ್ದರೂ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಬುದ್ದನ ದಿಕ್ಕಿನ ವಿರುದ್ದ ಪಯಣವಾಗಿದೆ. ಮನುಷ್ಯ ವಿರೋಧಿ ಧರ್ಮವೊಂದು, ಮುನ್ನೆಲೆಗೆ ಬಂದಿರುವುದು ನಮ್ಮೆಲ್ಲರ ದುರದೃಷ್ಟಕರ. ದೇಶಭಕ್ತಿಯ ಹೆಸರಿನಲ್ಲಿ ಇನ್ನಿಲ್ಲದ ಕೆಟ್ಟ ಕಾರ್ಯ ನಡೆಯುತ್ತಿದೆ. ಬಹುಸಂಖ್ಯಾತರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಶ್ರಮಜೀವಿಗಳಿಗೆ, ಹೊಟ್ಟೆಗೆ ಅನ್ನ ನೀಡುವ ರೈತರು ದೇಶಭಕ್ತತರಲ್ಲವೇ ಎಂದು ಪ್ರಶ್ನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ದೊರೆರಾಜು ವಹಿಸಿದ್ದರು.ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರರರ ಶಿವಶಂಕರ್, ಇಕ್ಬಾಲ್ ಅಹಮದ್, ನರಸೀಯಪ್ಪ, ಪ್ರಭಾವತಿ ಸುಧೀರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

(Visited 1 times, 1 visits today)
tumkur
Previous Articleಹಿಂದುಳಿದ ವರ್ಗಕ್ಕೆ ಪ್ರಬಲ ಜಾತಿಗಳ ಸೇರ್ಪಡೆಯಿಂದ ಅನ್ಯಾಯ
Next Article ರಂಜಾನ್ ಉಪವಾಸ ಸೌಹಾರ್ದತೆಯ ಬದುಕಿನ ಸಂದೇಶ
News Desk Benkiyabale

Related Posts

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm news

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm news

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm news
ತಾಜಾ ಸುದ್ಧಿಗಳು
news

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm
news

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm
news

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm
news

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm
news

ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ

August 03, 2026 4:48 pm
news

ಆದೇಶ ಧಿಕ್ಕರಿಸಿ ರಾಜ್ಯದ ಪರ ನಿಲ್ಲಲು ಸರ್ಕಾರಕ್ಕೆ ಒತ್ತಾಯ

August 01, 2026 2:41 pm
Our Youtube Channel
Our Picks

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

August 03, 2026 4:58 pm

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm

ಸಹಕಾರ ಸಂಘದ ಸುವರ್ಣ ಮಹೋತ್ಸವ: ಹಿರಿಯರಿಗೆ ಗೌರವಾರ್ಪಣೆ

August 03, 2026 4:48 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೨ಎ ಮೀಸಲಾತಿ ದೊರೆಯಬೇಕೆಂಬ ಒತ್ತಾಯ

By News Desk BenkiyabaleAugust 03, 2026 4:58 pm

ತುಮಕೂರು: ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ ೨ಎ ಮೀಸಲಾತಿ ದೊರೆಯುತ್ತಿದ್ದು, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ ೨ಎ ಮೀಸಲಾತಿ ದೊರೆಯು ಬೇಕೆಂಬುದು…

ವಿವೇಕಾನ0ದರ ಸಾಧನೆಯ ಹಾದಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿಯಾಗಲಿ

August 03, 2026 5:00 pm

ನೀಲಕಂಠೇಶ್ವರ ಸ್ವಾಮಿ ಪತ್ತಿನ ಸಹಕಾರ ಸಂಘಕ್ಕೆ ಬೆಳ್ಳಿಹಬ್ಬ ಸಂಭ್ರಮ

August 03, 2026 4:53 pm

ಬಂದ್‌ಗೆ ಕನ್ನಡ ಪರ, ಇತರೆ ಸಂಘಗಳ ಒಕ್ಕೂಟ ಬೆಂಬಲ

August 03, 2026 4:50 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.