BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ
  • ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ
  • ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ
  • ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ
  • ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ
  • ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ
  • ಉಪ ಮುಖ್ಯಮಂತ್ರಿಗಳಿ0ದ ತುಮಕೂರು ದಸರಾ-೨೦೨೬ ಲಾಂಛನ ಬಿಡುಗಡೆ
  • ಶಾಲಾ ಸಾಮಗ್ರಿಗಳಿಂದ ಅರಳಿದ ವಿದ್ಯಾ ಗಣಪತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವಿವಿಯಲ್ಲಿ ಅಂಬೇಡ್ಕರ್ ಪಠ್ಯ ಕಡಿತ: ಕುಲಪತಿ ಕಚೇರಿ ಬಳಿ ಪ್ರತಿಭಟನೆ
ಇತರೆ ಸುದ್ಧಿಗಳು

ವಿವಿಯಲ್ಲಿ ಅಂಬೇಡ್ಕರ್ ಪಠ್ಯ ಕಡಿತ: ಕುಲಪತಿ ಕಚೇರಿ ಬಳಿ ಪ್ರತಿಭಟನೆ

By News Desk BenkiyabaleUpdated:June 04, 2022 5:12 pm

ತುಮಕೂರು:


ತುಮಕೂರು ವಿವಿಯ ಬಿ.ಎ., ಬಿಎಸ್ಸಿ, ಬಿ.ಕಾಮ್‍ನ 2ನೇ ಸೆಮಿಸ್ಟರ್ ಪಠ್ಯದಲ್ಲಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಜಾತಿ ವಿನಾಶ ಲೇಖನವನ್ನು ಪಠ್ಯದಿಂದ ಕೈಬಿಟ್ಟು, ಅಸ್ಪøಷ್ಯತೆ ನಿವಾರಣೆ ಕುರಿತಂತೆ ಅರ್ಟಿಕಲ್ 17ರ ಮೇಲಿನ ಚರ್ಚೆಯಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರಾದ ಬ್ಯಾನರ್ಜಿ ಮತ್ತು ಠಾಕೂರ್ ಅವರುಗಳು ಮಾಡಿರುವ ಭಾಷಣವನ್ನು ಸೇರಿಸಿ, ಅಂಬೇಡ್ಕರ್ ಅವರನ್ನು ಪಠ್ಯದಿಂದ ಹೊರಗಿಡುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿ, ಅಂಬೇಡ್ಕರ್ ಅನುಯಾಯಿಗಳು ವಿವಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಾಲಿಕೆಯ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಅತಿಥಿ ಉಪನ್ಯಾಸಕ ಹೆತ್ತೇನಹಳ್ಳಿ ಮಂಜು, ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್, ಬೆಳ್ಳಿ ಲೋಕೇಶ್ ಸೇರಿದಂತೆ ಹಲವಾರು ಯುವಜನರು ತುಮಕೂರು ವಿವಿಗೆ ಮುತ್ತಿಗೆ ಹಾಕಿ, ಪಠ್ಯದಿಂದ ತೆಗೆದಿರುವ ಜಾತಿ ವಿನಾಶ ಚಾಪ್ಟರ್ ಸೇರಿಸಬೇಕು ಹಾಗೂ ಪಠ್ಯ ಪರಿಷ್ಕರಣಾ ಸಮಿತಿಯಲ್ಲಿದ್ದ ಸದಸ್ಯರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಇಂದು ಇಡೀ ವಿಶ್ವವೇ ಭಾರತದ ಸಂವಿಧಾನವನ್ನು ಶ್ರೇಷ್ಠ ಸಂವಿಧಾನ ಎಂದು ಹೆಸರಿಸಿದೆ. ಅಲ್ಲದೆ ಅಂಬೇಡ್ಕರ್ ಅವರನ್ನು e್ಞÁನದ ಸಂಕೇತ ಎಂದು ಬಣ್ಣಿಸಿ, ಅವರ ಹುಟ್ಟು ಹಬ್ಬವನ್ನು ವಿಶ್ವದ e್ಞÁನದ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂತಹ ವೇಳೆಯಲ್ಲಿ ತುಮಕೂರು ವಿವಿ ಪಠ್ಯಪರಿಷ್ಕರಣಾ ಸಮಿತಿ ಜಾತಿ ವಿನಾಶ ಎಂಬ ಪಾಠವನ್ನು ಕೈಬಿಟ್ಟು, ಅದರ ಬದಲಿಗೆ ಅಸ್ಪøಷ್ಯತೆ ಕುರಿತ ಪಠ್ಯದಲ್ಲಿಯೇ ಅಂಬೇಡ್ಕರ್ ಅವರ ಭಾಷಣವನ್ನು ಬಿಟ್ಟು, ಬ್ಯಾನರ್ಜಿ ಮತ್ತು ಠಾಕೂರ್ ಎಂಬುವವರ ಭಾಷಣವನ್ನು ಸೇರಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆ. ಹಾಗಾಗಿ ತುಮಕೂರು ವಿವಿಯವರು ಪಠ್ಯದಿಂದ ಅಂಬೇಡ್ಕರ್ ಅವರ ಜಾತಿ ವಿನಾಶ ಚಾಪ್ಟರ್ ಕೈಬಿಡಲು ಕಾರಣ ಎನು ಎಂಬುದನ್ನು ಸ್ಪಷ್ಟಪಡಿಸಬೇಕು ಹಾಗೂ ಪರಿಷ್ಕರಣೆ ವೇಳೆ ಇದ್ದ ಬಿಓಎಸ್ ಕಮಿಟಿಯ ಸದಸ್ಯರನ್ನು ವಜಾಗೊಳಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಅಂಬೇಡ್ಕರ್ ಅನುಯಾಯಿಗಳು ಸೇರಿ ಉಗ್ರ ಹೋರಾಟ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.
ಅತಿಥಿ ಉಪನ್ಯಾಸಕ ಹೆತ್ತೇನಹಳ್ಳಿ ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಅವರನ್ನು ಯುವಜನತೆಯಿಂದ ಮರೆ ಮಾಚುವ ಉದ್ದೇಶದಿಂದ ತುಮಕೂರು ವಿವಿಯ ಸಿಂಡಿಕೇಟ್ ಮತ್ತು ಆಕಾಡೆಮಿಕ್ ಕೌನ್ಸಿಲ್ ಇಂತಹ ದುಷ್ಕøತ್ಯವನ್ನು ಎಸಗಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಕೂಡಲೇ ಬಿಓಎಸ್ ಕಮಿಟಿಯ ಸದಸ್ಯರನ್ನು ವಜಾಗೊಳಿಸಬೇಕು ಹಾಗೂ ಪಠ್ಯದಲ್ಲಿ ಅಂಬೇಡ್ಕರ್ ಅವರ ಜಾತಿವಿನಾಶ ವಿಷಯ ಸೇರಿಸುವುದರ ಜೊತೆಗೆ,ಬದಲಿ ಪಠ್ಯದಲ್ಲಿರುವ ಅಸ್ಪøಷ್ಯತೆ ವಿಷಯದಲ್ಲಿ ಅಂಬೇಡ್ಕರ್ ಮಂಡಿಸಿರುವ ವಾದವನ್ನು ಮಕ್ಕಳು ಓದಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಈ ದೇಶ ಕಂಡ ಮಹಾe್ಞÁನಿ. ಜಾತಿ ಹೇಗೆ ತಳಸಮುದಾಯಗಳನ್ನು ಹಾಳು ಮಾಡುತ್ತಿದೆ. ಜಾತಿಯತೆ ತೊಲಗದೆ ಈ ದೇಶದಲ್ಲಿ ಸಮಾನತೆ ಸಾಧ್ಯವಿಲ್ಲ ಎಂಬುದನ್ನು ಯುವಜನತೆಗೆ ತಿಳಿಸುವ ಕೆಲಸವನ್ನು ಜಾತಿ ವಿನಾಶ ಪ್ರಬಂಧದ ಮೂಲಕ ಮಾಡಿದ್ದರು.ಇಂದಿನ ಯುವಜನತೆಗೆ ಅದು ಅತ್ಯಂತ ಅಗತ್ಯವಾದ ಪಠ್ಯವಾಗಿದೆ. ಆದರೆ ತುಮಕೂರು ವಿವಿಯವರು ಉದ್ದೇಶ ಪೂರ್ವಕವಾಗಿಯೇ ಪಠ್ಯವನ್ನು ಬಿಟ್ಟು, ಅಂಬೇಡ್ಕರ್ ಅವರನ್ನು ಯುವಜನರಿಂದ ದೂರ ಇಡುವ ಪ್ರಯತ್ನ ನಡಸಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಅಂಬೇಡ್ಕರ್ ಅನುಯಾಯಿಗಳ ಈ ಹೋರಾಟಕ್ಕೆ ಹಿಂದುಳಿದ ವರ್ಗಗಳ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಯುವ ಮುಖಂಡ ಬೆಳ್ಳಿ ಲೋಕೇಶ್ ಮಾತನಾಡಿ,ಭಾರತ ಒಂದು ಜಾತ್ಯಾತೀತ ರಾಷ್ಟ್ರ. ನೂರಾರು ಜಾತಿ, ಭಾಷೆ, ಸಂಸ್ಕøತಿ ಹೊಂದಿರುವ ಭಾರತಕ್ಕೆ ಸಂವಿಧಾನ ನೀಡುವ ಮೂಲಕ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಬರೆದ ಪಠ್ಯವನ್ನು ತೆಗೆಯುವ ಮೂಲಕ ಅಪಮಾನ ವೆಸಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಹಾಗೂ ಇದನ್ನು ಮಾಡಿದ ಬಿಓಎಸ್ ಕಮಿಟಿಯ ಸದಸ್ಯರನ್ನು ವಜಾಗೊಳಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿವಿಯ ಎಲ್ಲಾ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಿದ ತುಮಕೂರು ವಿವಿ ಪ್ರಭಾರ ಕುಲಪತಿ ಪ್ರೊ.ಕೇಶವ್, ಹೊಸ ಶಿಕ್ಷಣ ನೀತಿ-2020 ಅನ್ವಯ ರಾಜ್ಯಮಟ್ಟದಲ್ಲಿರುವ ವಿವಿ ಪಠ್ಯ ಪರೀಷ್ಕರಣಾ ಸಮಿತಿ ನೀಡಿದ ಶಿಫಾರಸ್ಸಿನ ಮೇರೆಗೆ ತುಮಕೂರು ವಿವಿಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸದಸ್ಯರು ಈ ಬದಲಾವಣೆ ಮಾಡಿದ್ದಾರೆ. ಮಕ್ಕಳಿಗೆ ಜಾತಿವಿನಾಶ ಪಠ್ಯ ತೆಗೆದಿದ್ದು ನಿಜಕ್ಕೂ ಅಕ್ಷಮ್ಯ. ನಮಗೆ ಒಂದು ತಿಂಗಳ ಕಾಲಾವಕಾಶ ನೀಡಿದರೆ ಆಗಿರುವ ಪ್ರಮಾದವನ್ನು ಸರಿಪಡಿಸಿ, ಈ ಹಿಂದಿನ ರೀತಿಯಲ್ಲಿಯೇ 2ನೇ ಸೆಮಿಸ್ಟರ್ ಮಕ್ಕಳಿಗೆ ಪಠ್ಯಗಳನ್ನು ಒದಗಿಸಲಾಗುವುದು ಎಂದು ಲಿಖಿತ ರೂಪದಲ್ಲಿ ಭರವಸೆ ನೀಡಿದರು.
ಕುಲಪತಿಗಳ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದ ಅಂಬೇಡ್ಕರ್ ಅನುಯಾಯಿಗಳು, ಮುಂದಿನ ಒಂದು ತಿಂಗಳಲ್ಲಿ ಕುಲಪತಿಗಳು ಒಪ್ಪಿರುವ ನಡೆದುಕೊಳ್ಳದಿದ್ದರೆ ವಿವಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಪ್ರತಿಭಟನಾ ನಿರತರ ತಿಳಿಸಿದರು.
ಈ ವೇಳೆ ದಲಿತ ಮುಖಂಡರಾದ ಕೊಟ್ಟ ಶಂಕರ್, ಬಂಡೆಕುಮಾರ್, ಮರಳೂರು ರಾಮಣ್ಣ, ಶ್ರೀನಿವಾಸ್, ರಮೇಶ್ ಇನ್ನಿತರರು ಭಾಗವಹಿಸಿದ್ದರು.

(Visited 11 times, 1 visits today)
tumkur University
Previous Articleತೃತೀಯ ರಂಗದ ಸುಳಿವು ನೀಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ
Next Article ಅನೈತಿಕ ಸಂಬಂಧಕ್ಕಾಗಿ ಅಮಾನತ್ತಾದ ಇಂಜಿನಿಯರ್ ಶಂಭುಕುಮಾರ್!
News Desk Benkiyabale

Related Posts

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm news
ತಾಜಾ ಸುದ್ಧಿಗಳು
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm
news

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm
news

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm
news

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
news

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
news

ಸರ್ಕಾರದಿಂದ ಇಂಜಿನಿಯರ್ಸ್ ದಿನ ಆಚರಣೆ

September 16, 2026 5:32 pm
Our Youtube Channel
Our Picks

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

September 17, 2026 5:39 pm

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm

ವಿಶ್ವಕರ್ಮ ಜನಾಂಗ ಕಾಯಕ, ಶ್ರಮ ಸಂಸ್ಕತಿಯ ಸಂಕೇತ

September 17, 2026 5:31 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಕೂಲಿಕಾರರು ಸರಿಯಾಗಿ ಕೆಲಸ ಮಾಡಿದರೆ ನಿರಂತರ ಕೆಲಸ

By News Desk BenkiyabaleSeptember 17, 2026 5:39 pm

ಹುಳಿಯಾರು “ಗ್ರಾಮೀಣ ಪ್ರದೇಶದ ಕೂಲಿಕಾರರ ಗುಳೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ೧೨೫…

ಕೆರೆಯ ನೀರನ್ನ ಅಕ್ರಮವಾಗಿ ತೋಟಕ್ಕೆ ಹರಿಸಿಕೊಂಡ ಆರೋಪ: ಆಕ್ರೋಶ

September 17, 2026 5:38 pm

ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯ

September 17, 2026 5:35 pm

ಶಾಸಕರೇ ವಿಶ್ವಕರ್ಮ ಸಮುದಾಯದವರಿಗೂ ಅನುದಾನ ನೀಡಿ

September 17, 2026 5:33 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.