BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ
  • ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣವಾದ ನೀಟ್
  • ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಕೊರಿಯಾ ನಿಯೋಗದ ಭೇಟಿ ವೀಕ್ಷಣೆ
  • ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ 
  • ಹುಳಿಯಾರು ಹೆದ್ದಾರಿಯಲ್ಲಿ ಧೂಳಿನ ಕಣ್ಣಾಮುಚ್ಚಾಲೆ
  • ನಿದ್ದೆಗೆ ಜಾರಿದ ಕಂದಾಯ ಇಲಾಖೆ
  • ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಳ್ಳತನ: ವೃದ್ಧೆ ಸಾವು
  • ವಿದ್ಯಾರ್ಥಿ ನಿಲಯದ ಅವ್ಯವಸ್ಥೆ ವಿರುದ್ಧ ಎಬಿವಿಪಿ ಆಕ್ರೋಶ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಆ.16, 17: ಅಂತಾರಾಷ್ಟ್ರೀಯ ಯುವ ಸಮ್ಮೇಳನ
ಇತರೆ ಸುದ್ಧಿಗಳು

ಆ.16, 17: ಅಂತಾರಾಷ್ಟ್ರೀಯ ಯುವ ಸಮ್ಮೇಳನ

By News Desk BenkiyabaleUpdated:August 12, 2022 6:43 pm

ತುಮಕೂರು:


ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರ ಮತ್ತು ಆಂತರಿಕ ಗುಣಮಟ್ಟದ ಭದ್ರತಾ ಘಟಕವು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಂಯುಕ್ತಾಶ್ರಯದಲ್ಲಿ ಆ. 16 ಮತ್ತು 17 ರಂದು ‘ಆರೋಹ’ ಎಂಬ ಶೀರ್ಷಿಕೆಯಡಿಯಲ್ಲಿ ‘ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ಎರಡು ದಿನಗಳ ಅಂತಾರಾಷ್ಟ್ರೀಯ ಯುವ ಸಮ್ಮೇಳನವನ್ನು ಗಂಗಸಂದ್ರ ರಸ್ತೆಯ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀ ಅವರು ತಿಳಿಸಿದರು.
ರಾಮಕೃಷ್ಣ ಮಠ ಮತ್ತು ಮಿಷನ್‍ನ ಉಪಾಧ್ಯಕ್ಷರಾದ ಸ್ವಾಮಿ ಗೌತಮಾನಂದಜೀ ಮಹಾರಾಜ್ ರವರು ಯುವ ಸಮ್ಮೇಳನವನ್ನು ಉದ್ಘಾಟಿಸುವರು. ಕರ್ನಾಟಕ-ಕೇರಳ ವಿಭಾಗದ ಸಿಬ್ಬಂದಿ ನೇಮಕಾತಿ ಆಯೋಗದ ಪ್ರಾದೇಶಿಕ ನಿರ್ದೇಶಕರಾದ ಎಸ್.ಎನ್. ಗಿರೀಶ್, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೆ ಪಿ. ಕೃಷ್ಣ, ತುಮಕೂರು ವಿಭಾಗದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಡಬ್ಲ್ಯೂ.ಡಿ. ಅಶೋಕ್ ಅಂತಾರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮವು ಒಟ್ಟು ಐದು ಗೋಷ್ಠಿಗಳಲ್ಲಿ ಜರುಗಲಿದ್ದು, ಉಪನ್ಯಾಸಕರೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಲಿದೆ. ಎಲ್ಲ ಉಪನ್ಯಾಸಗಳೂ ಆಂಗ್ಲ ಭಾಷೆಯಲ್ಲಿ ಮೂಡಿ ಬರಲಿವೆ. ರಾಮಕೃಷ್ಣ ಪರಂಪರೆಯ ಯತಿಗಳು, ಮಾತಾಜಿಗಳು ಮತ್ತು ಅಂತಾ ರಾಷ್ಟ್ರೀಯ ಖ್ಯಾತಿಯ ಚಿಂತಕರು ಹಲವಾರು ವಿಷಯಗಳ ಕುರಿತು ಬೆಳಕು ಚೆಲ್ಲಲಿದ್ದಾರೆ ಎಂದರು. ಯುವ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತೀರವರು ಮತ್ತು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಉಪನ್ಯಾಸ ನೀಡುವರು.
ಗೋಷ್ಠಿ ಎರಡರಲ್ಲಿ ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ ಮಾತಾ ವಿವೇಕಮಯಿ ಮತ್ತು ಮುಂಬೈನ ಆತ್ಮದರ್ಶನ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ ನಿರ್ದೇಶಕ ಡಾ. ರಾಧಾಕೃಷ್ಣನ್ ಪಿಳೈ ತಮ್ಮ ವಿಚಾರಗಳನ್ನು ಮಂಡಿಸುವರು ಎಂದು ಶ್ರೀಗಳು ವಿವರಿಸಿದರು.
ಮೂರನೇ ಗೋಷ್ಠಿಯಲ್ಲಿ ಲಂಡನ್‍ನ ರಾಮಕೃಷ್ಣ ವೇದಾಂತ ಕೇಂದ್ರದ ಮುಖ್ಯಸ್ಥರಾದ ಸ್ವಾಮಿ ಸರ್ವಸ್ಥಾನಂದಜೀ ಮಹಾರಾಜ್, ಹೈದರಾಬಾದ್‍ನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಬೋಧಮಯಾನಂದಜೀ ಮಹಾರಾಜ್, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತೀರವರು ಉಪನ್ಯಾಸ ನೀಡಲಿದ್ದಾರೆ. ನಾಲ್ಕನೇ ಗೋಷ್ಠಿಯಲ್ಲಿ ನವದೆಹಲಿ ರಾಮಕೃಷ್ಣ ಮಿಷನ್‍ನ ಕಾರ್ಯದರ್ಶಿ ಸ್ವಾಮಿ ಶಾಂತಾತ್ಮಾನಂದಜೀ ಮಹಾರಾಜ್, ಬೆಂಗಳೂರಿನ ನ್ಯಾಷನಲ್ ಡಿಸೈನ್ ಅಂಡ್ ರಿಸರ್ಚ್ ಫೆÇೀರಂನ ಅಧ್ಯಕ್ಷರಾದ ಡಾ. ಪಿ ರಘೋತ್ತಮರಾವ್ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಐದನೇ ಗೋಷ್ಠಿಯಲ್ಲಿ ನವದೆಹಲಿ ರಾಮಕೃಷ್ಣ ಶಾರದಾ ಮಿಷನ್‍ನ ಪ್ರವ್ರಾಜಿಕ ದಿವ್ಯಾನಂದಪ್ರಾಣಾ ಮತ್ತು ಕೊಚ್ಚಿಯ ಅಂತಾರಾಷ್ಟ್ರೀಯ ಖ್ಯಾತಿಯ ಕಾಪೆರ್Çರೇಟ್ ತರಬೇತುದಾರ ವಿಜಯ್ ಮೆನನ್ ಉಪನ್ಯಾಸ ನೀಡುವರು ಎಂದು ಅವರು ವಿವರಿಸಿದರು.

(Visited 1 times, 1 visits today)
tumkur
Previous Articleಮಾರ್ಕೋನಹಳ್ಳಿ ಜಲಾಶಯಕ್ಕೆ ಸಚಿವ ಕಾರಜೋಳ ಭೇಟಿ
Next Article ನೈಲಾನ್, ಪಾಲಿಸ್ಟರ್ ಧ್ವಜಕ್ಕೆ ಅವಕಾಶ: ನೇಕಾರರ ಹೊಟ್ಟೆ ಪಾಡಿಗೆ ತೊಂದರೆ
News Desk Benkiyabale

Related Posts

ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ

June 19, 2026 4:59 pm news

ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣವಾದ ನೀಟ್

June 19, 2026 4:51 pm news

ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಕೊರಿಯಾ ನಿಯೋಗದ ಭೇಟಿ ವೀಕ್ಷಣೆ

June 19, 2026 4:47 pm news
ತಾಜಾ ಸುದ್ಧಿಗಳು

ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ

June 19, 2026 4:59 pm

ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣವಾದ ನೀಟ್

June 19, 2026 4:51 pm

ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಕೊರಿಯಾ ನಿಯೋಗದ ಭೇಟಿ ವೀಕ್ಷಣೆ

June 19, 2026 4:47 pm

ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ 

June 19, 2026 4:45 pm

ಹುಳಿಯಾರು ಹೆದ್ದಾರಿಯಲ್ಲಿ ಧೂಳಿನ ಕಣ್ಣಾಮುಚ್ಚಾಲೆ

June 19, 2026 4:44 pm

ನಿದ್ದೆಗೆ ಜಾರಿದ ಕಂದಾಯ ಇಲಾಖೆ

June 18, 2026 4:44 pm
Our Youtube Channel
Our Picks

ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ

June 19, 2026 4:59 pm

ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣವಾದ ನೀಟ್

June 19, 2026 4:51 pm

ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಕೊರಿಯಾ ನಿಯೋಗದ ಭೇಟಿ ವೀಕ್ಷಣೆ

June 19, 2026 4:47 pm

ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ 

June 19, 2026 4:45 pm

ಹುಳಿಯಾರು ಹೆದ್ದಾರಿಯಲ್ಲಿ ಧೂಳಿನ ಕಣ್ಣಾಮುಚ್ಚಾಲೆ

June 19, 2026 4:44 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest R. Rajendra tumakur tumkur Tumkur dc yspatil Tumkur mahanagara palike tumkur news tumur turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಅಪ್ರತಿಮ ಧೈರ್ಯ, ಶೌರ್ಯದ ವನಿತೆ ರಾಣಿ ಲಕ್ಷಿ÷್ಮÃಭಾಯಿ

By News Desk BenkiyabaleJune 19, 2026 4:59 pm

ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಇಂದು…

ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಕಾರಣವಾದ ನೀಟ್

June 19, 2026 4:51 pm

ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಕೊರಿಯಾ ನಿಯೋಗದ ಭೇಟಿ ವೀಕ್ಷಣೆ

June 19, 2026 4:47 pm

ಅರ್ಹ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಣೆ 

June 19, 2026 4:45 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.