BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಇ-ಪೌತಿ ಖಾತಾ ಆಂದೋಲನ-೨ ಜಿಲ್ಲಾಧಿಕಾರಿಗಳಿಂದ ಅರ್ಜಿ ಸ್ವೀಕಾರ
  • ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ: ಪಿ.ರಘು
  • ಹುಳಿಯಾರಿನ ಏಕೈಕ ಶತಮಾನದ ಇತಿಹಾಸದ ಹೆಮ್ಮೆಯ ಕುರುಹು
  • ಜನರಿಗೆ ಜಮೀನುಗಳ ಬಗ್ಗೆ ಕಾನೂನು ಅರಿವು ಅತ್ಯವಶ್ಯಕ
  • ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯಕ್ಕೆ ಖಂಡನೆ
  • ಇದು ಸಂವಿಧಾನದತ್ತವಾಗಿ ಪಡೆವ ಹಕ್ಕನ್ನು ಕಸಿಯುವ ಬಿಜೆಪಿಯ ಕುತಂತ್ರ
  • ಬಾಹ್ಯ ಯಶಸ್ಸಿನ ಆತುರದಲ್ಲಿ ಅಂತರ್ಯದ ಯಶಸ್ಸು ಮರೆಯದಿರಿ
  • ಯುವಜನತೆ ಕೆಂಪೇಗೌಡರ ಆದರ್ಶಗಳನ್ನು ಅಳವಡಿಸಿಕೊಳ್ಳಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ದಲಿತ ಬಾಲಕನ ಮೇಲೆ ಹಲ್ಲೆಗೈದು ಕೊಲೆ: ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದಿಂದ ರಾಜಸ್ಥಾನ ಸರ್ಕಾರದ ವಜಾಕ್ಕೆ ಆಗ್ರಹ
ಇತರೆ ಸುದ್ಧಿಗಳು

ದಲಿತ ಬಾಲಕನ ಮೇಲೆ ಹಲ್ಲೆಗೈದು ಕೊಲೆ: ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದಿಂದ ರಾಜಸ್ಥಾನ ಸರ್ಕಾರದ ವಜಾಕ್ಕೆ ಆಗ್ರಹ

By News Desk BenkiyabaleUpdated:August 19, 2022 6:07 pm

ತುಮಕೂರು:


ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯೊಂದರಲ್ಲಿ ದಲಿತ ಸಮುದಾಯದಕ್ಕೆ ಸೇರಿದ ಬಾಲಕ ಕುಡಿಯುವ ನೀರಿನ ಮಡಿಕೆ ಮುಟ್ಟಿನೆಂಬ ಕಾರಣಕ್ಕೆ ಶಾಲೆಯ ಶಿಕ್ಷಕನೇ ಹಲ್ಲೆ ನಡೆಸಿ, ಕೊಂದಿರುವ ಘಟನೆಯನ್ನು ಖಂಡಿಸಿ, ತುಮಕೂರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಶುಕ್ರವಾರ ಟೌನ್‍ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಎಸ್ಸಿ ಮೋರ್ಚಾ ಪದಾಧಿಕಾರಿಗಳು, ಸದಸ್ಯರುಗಳು ಭಾಗವಹಿಸಿ, ಮಾನವ ಸರಪಳಿ ನಿರ್ಮಿಸಿ, ದಲಿತ ಬಾಲಕನ ಮೇಲೆ ಹಲ್ಲೆ ನಡೆಸಿಕೊಲೆ ಮಾಡಿರುವ ರಾಜಸ್ಥಾನ ಸರಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರ, ರಾಜ್ಯಸ್ಥಾನದ ಸುರಾನ ಗ್ರಾಮದ ಶಾಲೆಯಲ್ಲಿ ಓದುತ್ತಿದ್ದ ದಲಿತ ಬಾಲಕ ನೀರು ಕುಡಿಯುವ ನೀರಿನ ಮಡಿಕೆ ಮುಟ್ಟಿದನೆಂಬ ಕಾರಣಕ್ಕೆ ಶಿಕ್ಷಕ ಚಹೀಲ್ ಸಿಂಗ್ ಹಲ್ಲೆ ನಡೆಸಿದ್ದು, ಸಾವು ಬದುಕಿನ ನಡುವೆ 23 ದಿನಗಳ ಕಾಲ ಹೋರಾಟ ನಡೆಸಿದ ಬಾಲಕ ಸಾವನ್ನಪ್ಪಿದ್ದಾನೆ. ಇದನ್ನು ಖಂಡಿಸಿ, ಅಲ್ಲಿನ ಕಾಂಗ್ರೆಸ್ ಪಕ್ಷದ ಶಾಸಕರು, ಸ್ಥಳೀಯ ಕಾರ್ಪೋರೇಟ್‍ಗಳು ಸಹ ರಾಜೀನಾಮೆ ನೀಡಿದ್ದಾರೆ. ಆದರೆ ಇದುವರೆಗೂ ಕಾಂಗ್ರೆಸ್ ಪಕ್ಷದ ಅಧಿನಾಯಕರು ಈ ಬಗ್ಗೆ ಚಕಾರವೆತ್ತಿಲ್ಲ. ಅಲ್ಲದೆ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ ಅವರಾಗಲಿ ಕನಿಷ್ಠ ಖಂಡನೀಯ ಹೇಳಿಕೆ ನೀಡಿಲ್ಲ. ಬೇರೆ ಪಕ್ಷದ ಸಣ್ಣ ಪ್ರಕರಣವನ್ನೇ ದೊಡ್ಡದು ಮಾಡಿ ಮಾತನಾಡುವ ಕಾಂಗ್ರೆಸ್ ನಾಯಕರು, ತಮ್ಮದೇ ಪಕ್ಷವಿರುವ ರಾಜಸ್ಥಾನದಲ್ಲಿ ನಡೆದ ದಲಿತ ಬಾಲಕನ ಹತ್ಯೆಯ ಬಗ್ಗೆ ತುಟಿ ಬಿಚ್ಚದಿರುವುದು ಇವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ.ಇದು ಕೇವಲ ದಲಿತರಿಗೆ ಆಗಿರುವ ಅವಮಾನವಲ್ಲ. ಇಡೀ ಮನುಕುಲವೇ ತಲೆತಗ್ಗಿಸುವ ವಿಚಾರ ಎಂದು ಕಿಡಿಕಾರಿದರು.

ದಲಿತ ಬಾಲಕನ ಹತ್ಯೆಯ ಬೆನ್ನೇಲ್ಲೆ, ತಾನು ನೀಡಿದ್ದ ಸಾಲವನ್ನು ಕೇಳಲು ಹೋದ ದಲಿತ ಸಮುದಾಯದ ಮಹಿಳೆಯನ್ನು ಅಲ್ಲಿನ ಸವರ್ಣಿಯರು ಬೆಂಕಿ ಹಚ್ಚಿ ಸಜೀವವಾಗಿ ದಹಿಸಿದ್ದಾರೆ. ಇದೇ ರೀತಿಯ ಘಟನೆಗಳು ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜಸ್ಥಾನದಲ್ಲಿ ಆಗಿಂದಾಗ್ಗೆ ನಡೆಯುತ್ತಿದೆ.ಹಾಗಾಗಿ ಕೂಡಲೇ ರಾಜ್ಯಪಾಲರು ಅಲ್ಲಿನ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ವಜಾ ಮಾಡಬೇಕು ಹಾಗೂ ಈ ಕುರಿತು ಕೂಡಲೇ ರಾಷ್ಟ್ರಪತಿಯವರಿಗೆ ರಾಜಸ್ಥಾನದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ವರದಿ ನೀಡಿ, ಸರಕಾರವನ್ನು ವಜಾ ಮಾಡಲು ಶಿಫಾರಸ್ಸು ಮಾಡಬೇಕೆಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಆಗ್ರಹಿಸುತ್ತದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ,ರಾಜಸ್ಥಾನದಲ್ಲಿ ನಡೆದಿರುವ ಘಟನೆ ಮನುಷ್ಯನ ಅಸ್ಪøಷ್ಯತೆ ಎಷ್ಟು ಅಡಗಿದೆ ಎಂಬುದು ತೋರಿಸುತ್ತದೆ.ಧರ್ಮಗುರುಗಳು ಮತ್ತು ಮಠಾಧೀಶರು ಈ ಘಟನೆಯ ಬಗ್ಗೆ ಕನಿಷ್ಠ ಚಕಾರವೆತ್ತಬೇಕಿತ್ತು. ಇದುವರೆಗೂ ಆ ಕೆಲಸ ಆಗಿಲ್ಲ. ಈಗಲಾದರೂ ಸದರಿ ಘಟನೆ ಕುರಿತು ದ್ವನಿ ಎತ್ತಬೇಕಿದೆ.ಅಸ್ಪøಷ್ಯತೆ ನಿವಾರಣೆಗೆ ಎಲ್ಲರೂ ಕೈಜೋಡಿಸಬೇಕಿದೆ.ಅಂಬೇಡ್ಕರ್ ಹಿಂದೆ ಚೌದರ್ ಕೆರೆಯ ನೀರು ಮುಟ್ಟಿದಾಗ ಅವರ ತಲೆಯನ್ನು ಒಡೆಯಲಾಗಿತ್ತು. ಇಂದಿಗೂ ಅದು ಮುಂದುವರೆದಿದೆ ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮಾತನಾಡಿ,ರಾಜಸ್ಥಾನ ಸರಕಾರ ದಲಿತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ದಲಿತ ಬಾಲಕನ ಹತ್ಯೆ ಮತ್ತು ದಲಿತ ಸ್ತ್ರೀಯ ಸಜೀವ ದಹನ ಸಾಕ್ಷಿಯಾಗಿದೆ.ಈ ಘಟನೆ ದೇಶದ ಸಂವಿಧಾನಕ್ಕೆ ಅದ ಅಪಮಾನ. ಒಂದು ಸಮುದಾಯಕ್ಕೆ ಆದ ಅಪಮಾನವಲ್ಲ. ಬದುಕುವ ಹಕ್ಕೆ ಇಲ್ಲವೆಂದ ಮೇಲೆ ಇನ್ನೂ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು ಯಾವ ಮಟ್ಟದಲ್ಲಿವೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ.ಆದ್ದರಿಂದ ಕೇಂದ್ರ ಸರಕಾರ ಕೂಡಲೇ ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಕೂಡಲೇ ವಜಾ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಪದಾಧಿಕಾರಿಗಳಾದ ನವೀನ್, ವರದರಾಜು, ಟೂಡಾ ಸದಸ್ಯ ಸತ್ಯಮಂಗಲ ಜಗದೀಶ್, ಮಾಜಿ ಸದಸ್ಯ ಪ್ರತಾಪ್,ಮುಖಂಡರಾದ ಕೊಪ್ಪಲ್ ನಾಗರಾಜು, ಶಂಕರ್, ಅಂಜನಮೂರ್ತಿ,ಮನೋಹರಗೌಡ, ಶಬ್ಬೀರ್, ಯುವಮೋರ್ಚಾ ಅಧ್ಯಕ್ಷ ನಾಗೇಂದ್ರ, ರಾಜಣ್ಣ,ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್, ರಕ್ಷಿತ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

(Visited 1 times, 1 visits today)
Protest tumkur
Previous Articleಪ್ರಿಯಾಂಕ್ ಖರ್ಗೆಯ ಅಸಭ್ಯ ಹೇಳಿಕೆಗೆ ಖಂಡನೆ
Next Article ಆ.26: ತಿಗಳರ ಜಾಗೃತಿ ಸಮಾವೇಶ, ಗುರುವಂದನೆ
News Desk Benkiyabale

Related Posts

ಇ-ಪೌತಿ ಖಾತಾ ಆಂದೋಲನ-೨ ಜಿಲ್ಲಾಧಿಕಾರಿಗಳಿಂದ ಅರ್ಜಿ ಸ್ವೀಕಾರ

June 30, 2026 5:10 pm news

ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ: ಪಿ.ರಘು

June 30, 2026 5:00 pm news

ಹುಳಿಯಾರಿನ ಏಕೈಕ ಶತಮಾನದ ಇತಿಹಾಸದ ಹೆಮ್ಮೆಯ ಕುರುಹು

June 30, 2026 4:58 pm news
ತಾಜಾ ಸುದ್ಧಿಗಳು

ಇ-ಪೌತಿ ಖಾತಾ ಆಂದೋಲನ-೨ ಜಿಲ್ಲಾಧಿಕಾರಿಗಳಿಂದ ಅರ್ಜಿ ಸ್ವೀಕಾರ

June 30, 2026 5:10 pm

ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ: ಪಿ.ರಘು

June 30, 2026 5:00 pm

ಹುಳಿಯಾರಿನ ಏಕೈಕ ಶತಮಾನದ ಇತಿಹಾಸದ ಹೆಮ್ಮೆಯ ಕುರುಹು

June 30, 2026 4:58 pm

ಜನರಿಗೆ ಜಮೀನುಗಳ ಬಗ್ಗೆ ಕಾನೂನು ಅರಿವು ಅತ್ಯವಶ್ಯಕ

June 29, 2026 5:35 pm

ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯಕ್ಕೆ ಖಂಡನೆ

June 29, 2026 5:32 pm

ಇದು ಸಂವಿಧಾನದತ್ತವಾಗಿ ಪಡೆವ ಹಕ್ಕನ್ನು ಕಸಿಯುವ ಬಿಜೆಪಿಯ ಕುತಂತ್ರ

June 29, 2026 5:30 pm
Our Youtube Channel
Our Picks

ಇ-ಪೌತಿ ಖಾತಾ ಆಂದೋಲನ-೨ ಜಿಲ್ಲಾಧಿಕಾರಿಗಳಿಂದ ಅರ್ಜಿ ಸ್ವೀಕಾರ

June 30, 2026 5:10 pm

ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ: ಪಿ.ರಘು

June 30, 2026 5:00 pm

ಹುಳಿಯಾರಿನ ಏಕೈಕ ಶತಮಾನದ ಇತಿಹಾಸದ ಹೆಮ್ಮೆಯ ಕುರುಹು

June 30, 2026 4:58 pm

ಜನರಿಗೆ ಜಮೀನುಗಳ ಬಗ್ಗೆ ಕಾನೂನು ಅರಿವು ಅತ್ಯವಶ್ಯಕ

June 29, 2026 5:35 pm

ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯಕ್ಕೆ ಖಂಡನೆ

June 29, 2026 5:32 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಇ-ಪೌತಿ ಖಾತಾ ಆಂದೋಲನ-೨ ಜಿಲ್ಲಾಧಿಕಾರಿಗಳಿಂದ ಅರ್ಜಿ ಸ್ವೀಕಾರ

By News Desk BenkiyabaleJune 30, 2026 5:10 pm

ತುಮಕೂರು: ಪೌತಿ ಖಾತಾ ಆಂದೋಲನ-೨ರ ಅಂಗವಾಗಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸೋಮವಾರ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ವ್ಯಾಪ್ತಿಯ…

ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ: ಪಿ.ರಘು

June 30, 2026 5:00 pm

ಹುಳಿಯಾರಿನ ಏಕೈಕ ಶತಮಾನದ ಇತಿಹಾಸದ ಹೆಮ್ಮೆಯ ಕುರುಹು

June 30, 2026 4:58 pm

ಜನರಿಗೆ ಜಮೀನುಗಳ ಬಗ್ಗೆ ಕಾನೂನು ಅರಿವು ಅತ್ಯವಶ್ಯಕ

June 29, 2026 5:35 pm
News by Date
June 2026
M T W T F S S
1234567
891011121314
15161718192021
22232425262728
2930  
« Apr    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.