BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ
  • ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ
  • ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ
  • ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್
  • ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು
  • ತುಮಕೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ ಬೃಹತ್ ತಿರಂಗಾ ಯಾತ್ರೆ
  • ಜಿಲ್ಲಾಡಳಿತದಿಂದ ಸ್ವಾತಂತ್ರ ದಿನಾಚರಣೆ
  • ಡಿಸಿಎಂಯಿ0ದ ಭಾರತ್ ಜೋಡೋ ಯುವ ಮಿಷನ್ ನೋಂದಣಿ ದೃಢೀಕರಣ ಪತ್ರ ವಿತರಣೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ರಸ್ತೆ ದುರಸ್ಥಿ ಕಾರ್ಯಕ್ಕೆ ಶಾಸಕ ಚಾಲನೆ
ಇತರೆ ಸುದ್ಧಿಗಳು

ರಸ್ತೆ ದುರಸ್ಥಿ ಕಾರ್ಯಕ್ಕೆ ಶಾಸಕ ಚಾಲನೆ

By News Desk BenkiyabaleUpdated:September 26, 2022 5:45 pm

 ತುಮಕೂರು


ನಗರದ ಕುಣಿಗಲ್ ರಸ್ತೆಯಲ್ಲಿ ಗುಂಡಿ ಬಿದ್ದು ತೀವ್ರ ಹದಗೆಟ್ಟು ವಾಹನಗಳು ಸಂಚರಿಸಲು ಹರಸಾಹಸಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದನ್ನು ಮನಗಂಡಿರುವ ಶಾಸಕ ಜ್ಯೋತಿಗಣೇಶ್ ಅವರು ಈ ರಸ್ತೆ ದುರಸ್ಥಿ ಕಾರ್ಯಕ್ಕೆ ಚಾಲನೆ ನೀಡಿದರು.
ನಗರದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮುಂಭಾಗ ಕುಣಿಗಲ್ ರಸ್ತೆಯ ದುರಸ್ಥಿ ಮತ್ತು ಅಭಿವೃದ್ಧಿ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಕೆಶಿಪ್ ಮತ್ತು ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ವಿಭಾಗದಿಂದ ಶಾಸಕರ ನಿಧಿಗೆ ಮುಖ್ಯಮಂತ್ರಿ 12 ಕೋಟಿ ರೂ. ನೀಡಿದ್ದು, ಈ ಪೈಕಿ ಎರಡೂವರೆ ಕೋಟಿ ರೂ. ಹಣವನ್ನು ಕುಣಿಗಲ್ ರಸ್ತೆಯ ನಾಲ್ಕು ಜಂಕ್ಷನ್‍ಗಳಲ್ಲಿ ಕಾಂಕ್ರೀಟ್ ಹಾಕಲು ನೀಡಲಾಗಿದೆ ಎಂದರು.
ಕುಣಿಗಲ್ ರಸ್ತೆಯ ಎಸ್‍ಎಸ್‍ಐ ಕಾಲೇಜು ಮುಂಭಾಗ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಂಭಾಗ, ಕೃಷ್ಣ ಬೇಕರಿ ಮುಂಭಾಗ ಹಾಗೂ ಹೇಮಾವತಿ ಕಚೇರಿ ಮುಂಭಾಗದ ಜಂಕ್ಷನ್‍ಗಳು ರಸ್ತೆ ತುಂಬಾ ಹಾಳಾಗಿದೆ. ಇದರಿಂದಾಗಿ ನಾಗರಿಕರು ಸುಗಮವಾಗಿ ಸಂಚರಿಸಲಾಗದೆ ತೀವ್ರ ಪ್ರಯಾಸಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆ ದುರಸ್ಥಿಗೊಳಿಸುವಂತೆ ಪ್ರತಿಭಟನೆಗಳು ಸಹ ನಡೆದಿವೆ ಎಂದ ಅವರು, ಈ ಕುಣಿಗಲ್ ರಸ್ತೆ ಪ್ರಸ್ತುತ ಜನಸಂಚಾರ, ವಾಹನಗಳ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿದ್ದು, ಅಲ್ಲಲ್ಲಿ ಗುಂಡಿ ಗುದ್ದರಗಳು ಬಿದ್ದಿವೆ. ಇದನ್ನು ಮನಗಂಡು ಮೊದಲ ಹಂತವಾಗಿ ನನಗೆ ಬಂದಿರುವ ಅನುದಾನದ ಪೈಕಿ ಎರಡೂವರೆ ಕೋಟಿ ರೂ.ಗಳನ್ನು ಈ ಜಂಕ್ಷನ್‍ಗಳಲ್ಲಿ ಕಾಂಕ್ರೀಟ್ ಹಾಕಲು ನೀಡಿದ್ದೇನೆ ಎಂದರು.
ಕೆಶಿಪ್‍ನಿಂದ ನಿರ್ಮಾಣವಾಗಿರುವ ಈ ರಸ್ತೆ ಸದ್ಯ ತುಂಬಾ ಹಾಳಾಗಿದೆ. ವಾಹನ ಸವಾರರು ಸುಗಮವಾಗಿ ಸಂಚರಿಸಲಾಗದೆ ಪ್ರತಿನಿತ್ಯವೂ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹಾಗಾಗಿ ವಾಲ್ಮೀಕಿ ವೃತ್ತದಿಂದ ಕಾಲ್ಟ್ಯಾಕ್ಸ್ ವೃತ್ತದವರೆಗೆ ಈ ರಸ್ತೆ ಡಾಂಬರೀಕರಣ ಮಾಡಬೇಕಾಗಿದೆ. ಹಾಗಾಗಿ ಇನ್ನು ಐದಾರು ಕೋಟಿ ಹಣದ ಅವಶ್ಯಕತೆ ಇದೆ. ಈ ಬಗ್ಗೆಯೂ ಚಿಂತನೆ ನಡೆಸಿದ್ದು, ಬೇರೆ ಯಾವುದಾದರೂ ಯೋಜನೆಯಿಂದ ಇದಕ್ಕೆ ಅಗತ್ಯ ಇರುವ ಹಣವನ್ನು ಒದಗಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ಹಾಗೆಯೇ ಇಸ್ರಾ ಶಾದಿಮಹಲ್ ರಸ್ತೆಗೂ ಸಹ ಅಗತ್ಯ ಇರುವ ಆರು ಮುಕ್ಕಾಲು ಕೋಟಿ ರೂ. ಹಣ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಸಹ ಪೂರ್ಣಗೊಂಡಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಈ ಕಾಮಗಾರಿಗಳು ಆರಂಭವಾಗಿ ಪೂರ್ಣಗೊಳ್ಳುವವರೆಗೂ ನಗರದ ಜನರು ತಾಳ್ಮೆಯಿಂದ ವರ್ತಿಸಬೇಕು. ಕಾಮಗಾರಿ ಮಾಡುವವರೊಂದಿಗೆ ತಗಾದೆ ತೆಗೆಯದೆ ಸಹಕರಿಸುತ್ತಾ ಕಾಮಗಾರಿ ಗುಣಮಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹದಗೆಟ್ಟಿರುವ ಕುಣಿಗಲ್ ರಸ್ತೆಯನ್ನು ಸರಿಪಡಿಸಿ ಪಾದಚಾರಿ, ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ಸೇರಿದಂತೆ ಸಾರ್ವಜನಿಕರು, ಪಾದಚಾರಿಗಳು ಸುರಕ್ಷತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ಶಾಸಕರು ಕುಣಿಗಲ್ ರಸ್ತೆ ಹದಗೆಟ್ಟಿರುವ ಬಗ್ಗೆ ಅರಿತು ಸದ್ಯ ಎರಡೂವರೆ ಕೋಟಿ ಹಣ ನೀಡಿದ್ದಾರೆ. ಇನ್ನು ಹೆಚ್ಚಿನ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದು ತುಂಬಾ ಸಂತೋಷಕರ ವಿಚಾರ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಉಪಮೇಯರ್ ನರಸಿಂಹಮೂರ್ತಿ, ಮಾಜಿ ಮೇಯರ್ ಹಾಗೂ ಸದಸ್ಯರಾದ ಫರೀದಾಬೇಗಂ, ಮಂಜುನಾಥ್, ಧರಣೇಂದ್ರಕುಮಾರ್, ಶಕೀಲ್, ಆಯುಕ್ತೆ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.

(Visited 4 times, 1 visits today)
tumkur
Previous Articleಕಾಡುಗೊಲ್ಲ ಜನಾಂಗವನ್ನು ಎಸ್‍ಟಿಗೆ ಸೇರಿಸಿ:ಶಾಸಕ ಮಸಾಲಾ ಜಯರಾಮ್
Next Article ಗ್ರಾಮದ ಅಭಿವೃದ್ಧಿಗೆ ಶಿಕ್ಷಣ ಮುಖ್ಯ
News Desk Benkiyabale

Related Posts

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

August 14, 2026 5:46 pm news

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm news

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm news
ತಾಜಾ ಸುದ್ಧಿಗಳು
news

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

August 14, 2026 5:46 pm
news

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm
news

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm
news

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

August 14, 2026 5:41 pm
news

ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು

August 14, 2026 5:40 pm
news

ತುಮಕೂರಿನಲ್ಲಿ ಅದ್ಧೂರಿಯಾಗಿ ನೆರವೇರಿದ ಬೃಹತ್ ತಿರಂಗಾ ಯಾತ್ರೆ

August 14, 2026 5:39 pm
Our Youtube Channel
Our Picks

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

August 14, 2026 5:46 pm

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

August 14, 2026 5:41 pm

ಗಿರಿನಗರ ಶಾಲೆ ಅಭಿವೃದ್ಧಿಗೆ ೧ ಲಕ್ಷ ರೂ ನೆರವು

August 14, 2026 5:40 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ

By News Desk BenkiyabaleAugust 14, 2026 5:46 pm

ತುಮಕೂರು: ಭಾರತದ ೮೦ನೇ ಸ್ವಾತಂತ್ರ ದಿನದ ಅಂಗವಾಗಿ ಭಾರತ್ ಸಂಚಾರ್ ನಿಗಮ ನಿಯಮಿತ ಗ್ರಾಹಕರಿಗೆ ಹೊಸ ಪ್ಯೂಚರ್ ಒಳಗೊಂಡಿರುವ ಡಿಜಿಟಲ್…

ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ

August 14, 2026 5:45 pm

ಧರ್ಮದ ಜೀವಂತಿಕೆಗೆ ಧಾರ್ಮಿಕ ಆಚರಣೆಗಳೇ ಆಧಾರ: ಶ್ರೀ ಡಾ.ಹನುಮಂತನಾಥ ಸ್ವಾಮೀಜಿ

August 14, 2026 5:42 pm

ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದಿರಿ: ಪ್ರಸಾದ್

August 14, 2026 5:41 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.