BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ
  • ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ
  • ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್
  • ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ
  • ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್
  • ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ
  • ಪಂಚಾಯತಿ ಅಧಿಕಾರಿಗಳು ದಲಿತ ವಿರೋಧಿಗಳು: ಸಿದ್ದು ಸೂರನಹಳ್ಳಿ
  • ಶಿರಾ ತಾಲ್ಲೂಕಿಗೆ ಜಿಪಂ ಸಿಇಒ ಭೇಟಿ: ಕಾಮಗಾರಿಗಳ ಪರಿಶೀಲನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ನ.1 ರಿಂದ ಹಾಲಿನ ವಿಶೇಷ ಪ್ರೋತ್ಸಾಹ ಧನ ಹೆಚ್ಚಳ
ಇತರೆ ಸುದ್ಧಿಗಳು

ನ.1 ರಿಂದ ಹಾಲಿನ ವಿಶೇಷ ಪ್ರೋತ್ಸಾಹ ಧನ ಹೆಚ್ಚಳ

By News Desk BenkiyabaleUpdated:October 28, 2022 3:40 pm

ತುಮಕೂರು


ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ರೈತರ ಬೇಡಿಕೆಗೆ ಸ್ಪಂದಿಸಿ ನವೆಂಬರ್ 1 ರಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ವಿಶೇಷ ಪ್ರೋತ್ಸಾಹ ಧನವಾಗಿ 2.50 ರೂ.ಗಳನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ.
ನಗರದ ಹೊರವಲಯದ ಮಲ್ಲಸಂದ್ರದಲ್ಲಿರುವ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಕಚೇರಿಯಲ್ಲಿ ತುಮುಲ್ ನಿರ್ದೇಶಕರುಗಳಾದ ಎಂ.ಕೆ. ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್. ಹೆಚ್.ಬಿ. ಶಿವನಂಜಪ್ಪ, ಜಿ. ಚಂದ್ರಶೇಖರ್, ಹೆಚ್.ಕೆ. ರೇಣುಕಪ್ರಸಾದ್, ಎಸ್.ಆರ್. ಗೌಡ, ಚನ್ನಮಲ್ಲಪ್ಪ, ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ರಜನಿ ಬಿ ತ್ರಿಪಾಠಿ, ಹೆಚ್.ಕೆ. ರಾಘವೇಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಪಿ. ಸುರೇಶ್ ಅವರೊಂದಿಗೆ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.
ಸಭೆಯ ನಂತರ ಪತ್ರಿಕಾ ಹೇಳಿಕೆ ನೀಡಿರುವ ತುಮುಲ್ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ಅವರು, ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚುವರಿ ಇರುವುದಿಲ್ಲ. 3.5 ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ 30 ರೂ., ಸಂಘಗಳಿಗೆ 30.93 ರೂ. ಹಾಗೂ 41 ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ 31.54 ರೂ., ಸಂಘಗಳಿಗೆ 32.47 ರೂ.ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ತುಮಕೂರು ಸಹಕಾರಿ ಹಾಲು ಒಕ್ಕೂಟವು 1299 ಸಂಘಗಳಿಂದ 2022-23ನೇ ಸಾಲಿನಲ್ಲಿ ದಿನವಹಿ ಸರಾಸರಿ (26ನೇ ಅಕ್ಟೋಬರ್-2022ರ ಅಂತ್ಯಕ್ಕೆ) 8,15,568 ಕೆ.ಜಿ. ಹಾಲನ್ನು ಶೇಖರಣೆ ಮಾಡಲಾಗಿದ್ದು, 2022ರ ಜೂನ್ 29ರಂದು 9,31,684 ಕೆ.ಜಿ. ಹಾಲು ಶೇಖರಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಈಗಾಗಲೇ ಹಾಲು ಶೇಖರಣೆ ದಿನೇ ದಿನೇ ಕುಂಠಿತವಾಗುತ್ತಿದ್ದು, 26ನೇ ಅಕ್ಟೋಬರ್ 2022ರ ಅಂತ್ಯಕ್ಕೆ ಸರಾಸರಿ 7,41,435 ಕೆ.ಜಿ ಹಾಲು ಶೇಖರಣೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1299 ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ವ್ಯಾಪ್ತಿಯ ಸಂಘಗಳಲ್ಲಿ ಒಟ್ಟು 2,86,712 ಜನ ಸದಸ್ಯರಿರುತ್ತಾರೆ. ಇದರಲ್ಲಿ ಪ್ರತಿದಿನ 71,703 ಸಕ್ರಿಯ ಸದಸ್ಯರು ಹಾಲು ಸರಬರಾಜು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಒಕ್ಕೂಟದಲ್ಲಿ 2022 ಅಕ್ಟೋಬರ್ 26ರ ಅಂತ್ಯಕ್ಕೆ 167.42 ಮೆಟ್ರಿಕ್ ಟನ್ ಬೆಣ್ಣೆ, 243 ಮೆಟ್ರಿಕ್ ಟನ್ ಕೆನೆ ರಹಿತ ಹಾಲಿನ ಪುಡಿ ಹಾಗೂ 72.40 ಮೆಟ್ರಿಕ್ ಟನ್‍ಗಳಷ್ಟು ಕೆನೆಭರಿತ ಹಾಲಿನ ಪುಡಿ ದಾಸ್ತಾನು ಇದ್ದು, ಇದರ ಅಂದಾಜು ದಾಸ್ತಾನು ಮೌಲ್ಯ 13.69 ಕೋಟಿ ರೂ.ಗಳμÁ್ಟಗಲಿದೆ ಎಂದರು.
2021-22ನೇ ಸಾಲಿನಲ್ಲಿ μÉೀರು ಡಿವಿಡೆಂಟ್ ಮೊತ್ತ 2,01,59,357.89 ರೂ.ಮತ್ತು ಬೋನಸ್ ಮೊತ್ತ 36,65,338 ರೂ. ಸೇರಿದಂತೆ ಒಟ್ಟು 2,38,24,695,89 ರೂ. ಮೊತ್ತವನ್ನು ಸಂಘಗಳಿಗೆ ಪಾವತಿಸಲಾಗುವುದು. ಕೇಂದ್ರ ಸರ್ಕಾರದ ದುಡಿಯುವ ಬಂಡವಾಳ ಯೋಜನೆಯಡಿ ಒಕ್ಕೂಟವು 90 ಕೋಟಿ ರೂ. ಮೊತ್ತವನ್ನು ಶೇ.5.7ರ ಬಡ್ಡಿದರದಲ್ಲಿ ಸಾಲ ಪಡೆದಿದ್ದು, ರೈತರಿಗೆ ಕಾಲಕಾಲಕ್ಕೆ ಬಟವಾಡೆ ಪಾವತಿಸಲಾಗುತ್ತಿದೆ. ಏಪ್ರಿಲ್ 2021ರ ಪ್ರಾರಂಭಿಕ ಸಾಲ 5.85 ಕೋಟಿ ರೂ. ಇದ್ದು, 2021-22ನೇ ಸಾಲಿನಲ್ಲಿ 143.55 ಕೋಟಿ ರೂ. ಸಾಲ ಪಡೆಯಲಾಗಿದ್ದು, 2021-22 ಮತ್ತು 2022-23ನೇ ಸಾಲಿನಲ್ಲಿ ಸಂಪೂರ್ಣ ಸಾಲವನ್ನು ತೀರುವಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಒಕ್ಕೂಟದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಿಕೊಂಡಿರುವುದರಿಂದ ಮತ್ತು ಮಾರುಕಟ್ಟೆ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಅಧಿಕ ಹಾಲು ಶೇಖರಣೆಯಾದರೂ ಸಹ ಡೇರಿಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ. ಹಾಲು ಉತ್ಪಾದಕರಿಗೆ ಕಾಲಕಾಲಕ್ಕೆ ಬಟವಾಡೆ, ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಹಾಲು ಉತ್ಪಾದಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾವು ಸಹ ಆರ್ಥಿಕವಾಗಿ ಸದೃಢವಾಗುವುದಲ್ಲದೇ ಒಕ್ಕೂಟದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವಿವರಿಸಿದ್ದಾರೆ.
ಒಕ್ಕೂಟವು ನೀಡುತ್ತಿರುವ ಹಾಲಿನ ದರದ ಜತೆಗೆ ಸರ್ಕಾರದ 5 ರೂ.ಗಳ ಪ್ರೋತ್ಸಾಹ ಧನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಹಾಲು ಉತ್ಪಾದನೆ ಮಾಡಲು ಮತ್ತು ಖಾಸಗಿಯವರಿಗೆ ಸರಬರಾಜು ಮಾಡುತ್ತಿರುವ ಹಾಲನ್ನು ನಿಲ್ಲಿಸಿ, ಸಂಘಗಳಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಲು ಜಿಲ್ಲೆಯ ರೈತರಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ.
ಒಕ್ಕೂಟದಲ್ಲಿ ಮಾರಾಟದ ಜಾಲವನ್ನು ವಿಸ್ತರಿಸಲಾಗಿದ್ದು, ತುಮಕೂರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ 2022-23ನೇ ಸಾಲಿನ ಅಕ್ಟೋಬರ್ 26ರ ಅಂತ್ಯಕ್ಕೆ 286812 ಲೀ. ಮತ್ತು ಆಗಸ್ಟ್ 4ರಂದು 313861 ಲೀ. ಹಾಲನ್ನು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಅದೇ ರೀತಿ ಮುಂಬೈ ಮಹಾನಗರದಲ್ಲಿ ಪ್ರಸ್ತುತ ದಿನವಹಿ ಸರಾಸರಿ 200800 ಲೀ. ಹಾಲು ಮಾರಾಟವಾಗುತ್ತಿದ್ದು, ಆಗಸ್ಟ್ 8ರಂದು ಅತಿ ಹೆಚ್ಚು ಅಂದರೆ 239020 ಲೀ.ಹಾಲು ಮಾರಾಟವಾಗಿದೆ. 2022ರ ಸೆಪ್ಟೆಂಬರ್ ಮಾಹೆಯಲ್ಲಿ ಲಾಭ-ನಷ್ಟದ ತಃಖ್ತೆ ಪ್ರಕಾರ 2.20ಕೋಟಿ ರೂ. ಲಾಭವನ್ನು ಹೊಂದಿದ್ದು, 2022-23ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ 3.48 ಕೋಟಿ ರೂ. ಗಳ ಕ್ರೋಢೀಕೃತ ನಿವ್ವಳ ಲಾಭವನ್ನು ಒಕ್ಕೂಟ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

(Visited 6 times, 1 visits today)
tumkur
Previous Articleಶಾಸಕರಿಂದ ಕೋ ಆಪರೇಟಿವ್ ಕಟ್ಟಡದ ಶಂಕುಸ್ಥಾಪನೆ
Next Article ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಲಾಮಂಟಪ ಲೋಕಾರ್ಪಣೆ
News Desk Benkiyabale

Related Posts

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm news
ತಾಜಾ ಸುದ್ಧಿಗಳು
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm
news

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm
news

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm
news

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
news

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm
news

ಭೂಸ್ವಾಧೀನಕ್ಕೆ ಹಣದ ಬದಲು ಬದಲಿ ಭೂಮಿ ನೀಡಿ

October 15, 2026 6:02 pm
Our Youtube Channel
Our Picks

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

October 16, 2026 5:16 pm

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm

ರೈತರ ಜೀವನ ಸುಧಾರಣೆಗೆ ಹವಮಾನ ಕ್ರಿಯಾ ಸಮಿತಿಯ ಒಕ್ಕೂಟ ಅಡಿಪಾಯ: ಸುದೀಪ್

October 15, 2026 6:04 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಅಸ್ಮಿತೆಯ ಅನಾವರಣಕ್ಕೆ ರಂಗಭೂಮಿಯೇ ಪ್ರಬಲ ವೇದಿಕೆ

By News Desk BenkiyabaleOctober 16, 2026 5:16 pm

ತುಮಕೂರು: ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಅಸ್ಮಿತೆಗಳು ಅಳಿಸಿಹೋಗುವ ಆತಂಕ ಎದುರಾಗಿರುವ ಇಂದಿನ ಸಂದರ್ಭದಲ್ಲಿ ನಾಟಕಗಳು, ವಿವಿಧ ರಂಗರೂಪಗಳು ನಮ್ಮ ಮೂಲ…

ಮೊಬೈಲ್ ಬಳಕೆಯಿಂದ ದೂರವಿರಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕರೆ

October 16, 2026 4:55 pm

ಜಿಲ್ಲಾ ಮಟ್ಟದ ಯುವ ಸಂಸತ್ತು ಆಯೋಜನೆಗೆ ಸಿದ್ಧತೆ: ಚಂದ್ರಕುಮಾರ್

October 16, 2026 4:54 pm

ಕ್ರಷರ್ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರಿಂದ ಪ್ರತಿಭಟನೆ

October 16, 2026 4:52 pm
News by Date
October 2026
M T W T F S S
 1234
567891011
12131415161718
19202122232425
262728293031  
« Sep    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.