BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು
  • ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ
  • ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ
  • ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ
  • ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ
  • ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ
  • ೮೦ನೇ ಸ್ವಾತಂತ್ರ ದಿನದ ಅಂಗವಾಗಿ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌ನ ಕೊಡುಗೆ
  • ಮೂಲಭೂತ ಸೌಕರ್ಯಗಳಿಲ್ಲದೆ ಜನರ ಪರದಾಟ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿತ್ತಿದವರು ಬಸವಣ್ಣ
ಇತರೆ ಸುದ್ಧಿಗಳು

ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿತ್ತಿದವರು ಬಸವಣ್ಣ

By News Desk BenkiyabaleUpdated:November 12, 2022 4:31 pm

ತುಮಕೂರು


ಕಾರ್ಲ್ ಮಾಕ್ಸ್ ಅವರಿಗಿಂತ ಮೊದಲೇ 12ನೇ ಶತಮಾನದಲ್ಲಿಯೇ ವರ್ಗ,ವರ್ಣ,ಲಿಂಗಭೇಧ ರಹಿತ ಸಮ ಸಮಾಜದ ಕನಸಿನೊಂದಿಗೆ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿತ್ತಿದವರು ಅಣ್ಣ ಬಸವಣ್ಣ ಅವರು, ವೀರಶೈವ,ಲಿಂಗಾಯಿತರು ಇಂತಹ ಸಮುದಾಯದಲ್ಲಿ ಹುಟ್ಟಿದವರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಶಾಸಕ ಹಾಗೂ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಸಿದ್ದಗಂಗಾ ಮಠದ ವಸ್ತುಪ್ರದರ್ಶನದ ಆವರಣದಲ್ಲಿ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾವತಿಯಿಂದ ಆಯೋಜಿಸಿದ್ದ ಬೆಂಗಳೂರು ವಿಭಾಗೀಯ ಮಟ್ಟದ ಮಹಿಳಾ ಮತ್ತು ಯುವ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಎಲ್ಲಾ ಧರ್ಮ, ಜಾತಿಗಳಿಗೂ ಪ್ರಪಂಚದ ಮೊದಲ ಸಂಸತ್ತು ಎನಿಸಿಕೊಂಡಿರುವ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದವರು ಬಸವೇಶ್ವರರು.ಮೌಡ್ಯದಿಂದ ಸಮಾಜವನ್ನು ಹೊರತರಬೇಕೆಂಬುದು ಅವರ ಕನಸಾಗಿತ್ತು. ಇಂತಹ ಕನಸನ್ನು ನನಸು ಮಾಡಲು ನಾವೆಲ್ಲರೂ ಕಟಿಬದ್ದರಾಗಬೇಕಿದೆ ಎಂದರು.
ಹಾಗನಲ್ ಕುಮಾರಸ್ವಾಮಿಗಳಿಂದ ಸಮಾಜದ ಐಕ್ಯತೆ ಮತ್ತು ಅಭಿವೃದ್ದಿಯ ಮಂತ್ರದೊಂದಿಗೆ ಆರಂಭವಾದ ಅಖಿಲ ಭಾರತ ಲಿಂಗಾಯಿತ ಮಹಾಸಭಾ ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಎಲ್ಲಾ ಧರ್ಮಿಯರಿಗೂ ಮಾರ್ಗದರ್ಶನ ಮಾಡುತ್ತಾ ಬಂದಿದೆ.ಶೈಕ್ಷಣಿಕವಾಗಿ,ಅರ್ಥಿಕವಾಗಿ ಮುಂದುವರೆದ ಸಮಾಜ ಒಂದು ರೀತಿಯಲ್ಲಿ ನಿಂತ ನೀರಾಗಿದೆ.ಇದನ್ನು ಮತ್ತೆ ಪುನಶ್ಚೇತನಗೊಳಿಸಿ,ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಗೆ ತರುವುದು ಮಹಾಸಭಾದ ಉದ್ದೇಶವಾಗಿದೆ.ಪಾಶ್ಚಾತ್ಯ ಸಂಸ್ಕøತಿ ಅನುಸರಿಸುತ್ತಿರುವ ನಮ್ಮ ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನ ಮಾಡಿ ಅವರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಆಗಬೇಕಿದೆ.ಇದರ ಜೊತೆಗೆ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಲ್ಲದ ಶೇ90ರಷ್ಟು ವೀರಶೈವ,ಲಿಂಗಾಯಿತ ಒಳಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಿ, ಉನ್ನತ ಹುದ್ದೆಗಳಲ್ಲಿ ನಮ್ಮ ಮಕ್ಕಳಿಗೂ ಅವಕಾಶ ದೊರೆಯುವಂತೆ ಮಾಡುವುದು ಮಹಾಸಭಾದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಈಶ್ವರ ಖಂಡ್ರೆ ನುಡಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಉಪಾಧ್ಯಕ್ಷ ವೀರಣ್ಣ ಮಾತನಾಡಿ,ಪ್ರಸ್ತುತ 2.50ಲಕ್ಷದಷ್ಟಿರುವ ಸದಸ್ಯರನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಸದಸ್ಯತ್ವದ ಅರ್ಜಿಗಳ ವಿತರಣೆ ಆರಂಭವಾಗಿದೆ. ಎಲ್ಲರೂ ಸದಸ್ಯತ್ವ ಪಡೆದುಕೊಳ್ಳಬೇಕಿದೆ.ಮಹಾಸಭಾದ 23ನೇ ಅಧಿವೇಶನದ ಮುಂದಿನ ಡಿಸೆಂಬರ್ 24-25 ಮತ್ತು 26 ರಂದು ದಾವಣಗೆರೆಯಲ್ಲಿ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಅಶೀರ್ವಚನ ನೀಡಿ, ವೀರಶೈವ, ಲಿಂಗಾಯಿತ ಸಮುದಾಯದ ಭವಿಷ್ಯದ ಚಿಂತನೆಯೊಂದಿಗೆ ಆರಂಭಗೊಂಡ ಈ ಸಂಸ್ಥೆಗೆ ಒಂದು ಶತಮಾನ ಕಳೆದಿದೆ. ಅರ್ಥಿಕ,ಸಾಮಾಜಿಕ,ಶೈಕ್ಷಣಿಕ,ಕೈಗಾರಿಕಾ ಕ್ಷೇತ್ರ ವೀರಶೈವ, ಲಿಂಗಾಯಿತ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ. ಆದರೂ ಇನ್ನು ಬಲಗೊಳ್ಳುವ ಅಗತ್ಯವಿದೆ.ಹೆಸರಿಗೆ ಮಾತ್ರ ಲಿಂಗಾಯಿತರಾದರೆ ಸಾಲದು,ಆಚರಣೆಯಲ್ಲಿಯೂ ಲಿಂಗಾಯಿತರಾಗ ಬೇಕು. ಸಂಸ್ಕಾರಯುತ ಬದುಕು ನಮ್ಮದಾಗಬೇಕು.ಸ್ವಧರ್ಮ ನಿಷ್ಠೆ,ಪರಧರ್ಮ ಸಹಿಷ್ಠತೆ ನಮ್ಮ ಮಂತ್ರವಾಗಬೇಕು, ಐಕ್ಯತೆ ಮಂತ್ರ ನಮ್ಮದಾಗಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಬೆಂಗಳೂರು ವಿಭಾಗೀಯ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ ನಟರಾಜು ಸಾಗರನಹಳ್ಳಿ, ಮಹಿಳೆಯರು ಮತ್ತು ಯುವಕರಿಗೆ ನಮ್ಮ ಸಂಸ್ಕøತಿ, ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇದರಲ್ಲಿ ಕೃಷಿ, ಕೈಗಾರಿಕೆ, ಸಂಸ್ಕøತಿ, ಪರಂಪರೆಗಳ ಕುರಿತು ಗೋಷ್ಠಿಗಳು ನಡೆಯಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಿರಿಯ ಉಪಾಧ್ಯಕ್ಷ ಡಾ.ಎನ್.ತಿಪ್ಪಣ್ಣ ವಹಿಸಿದ್ದರು.ಕಾರ್ಯಾಗಾರ ಸಮಿತಿಯ ಅಧ್ಯಕ್ಷ ಎಸ್.ಕೆ.ರಾಜಶೇಖರ್,ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ,ಮಹಿಳಾ ಘಟಕದ ರಾಜ್ಯಾಧ್ಯಕ್ಷ ಬಿ.ವೈ.ಅರುಣಾದೇವಿ,ಟಿ.ಬಿ.ಶೇಖರ್,ಎಂ.ಎನ್.ಶಶಿಧರ್, ಗೋವರ್ಧನ್, ಲೋಕೇಶ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯಿಂದ ವಸ್ತುಪ್ರದರ್ಶನದ ಆವರಣದವರೆಗೂ ಬೆಳ್ಳಿ ರಥದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಿರಿಯ ಉಪಾಧ್ಯಕ್ಷ ಡಾ.ಎನ್.ತಿಪ್ಪಣ ರವರನ್ನು ್ಣ ಮತ್ತು ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮುಖೇನ ಕರೆದೊಯ್ಯಲಾಯಿತು.

(Visited 4 times, 1 visits today)
tumkur
Previous Articleಅಧಿಕಾರಿಯ ಮೇಲೆ 18 ಕೋಮಿನ ಮುಖಂಡರ ಆಕ್ರೋಶ
Next Article ಸರ್ವಕಡೆಯಲ್ಲೂ ದಾಸ ಸಾಹಿತ್ಯ ಸ್ವೀಕಾರ
News Desk Benkiyabale

Related Posts

ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು

August 15, 2026 5:56 pm news

ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ

August 15, 2026 5:33 pm news

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

August 15, 2026 5:32 pm news
ತಾಜಾ ಸುದ್ಧಿಗಳು
news

ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು

August 15, 2026 5:56 pm
news

ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ

August 15, 2026 5:33 pm
news

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

August 15, 2026 5:32 pm
news

ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ

August 15, 2026 5:30 pm
news

ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ

August 15, 2026 5:28 pm
news

ವಿಕಸಿತ ಭಾರತ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ನಿರ್ಣಾಯಕ

August 15, 2026 5:26 pm
Our Youtube Channel
Our Picks

ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು

August 15, 2026 5:56 pm

ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ

August 15, 2026 5:33 pm

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

August 15, 2026 5:32 pm

ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ

August 15, 2026 5:30 pm

ಭಗತ್‌ಕ್ರಾಂತಿ ಸೇನೆಯಿಂದ ಭಕ್ತಿಯ ಪಂಜಿನ ಮೆರವಣಿಗೆ

August 15, 2026 5:28 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು

By News Desk BenkiyabaleAugust 15, 2026 5:56 pm

ತುಮಕೂರು: ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು, ದೇಶಪ್ರೇಮಿಗಳು. ಕೊಟ್ಟ ಮಾತಿನಂತೆ ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ…

ಬರ ಪರಿಸ್ಥಿತಿ: ಪರ್ಯಾಯ ಬೆಳೆಗಳನ್ನು ಬೆಳೆಯಲು ಸಲಹೆ

August 15, 2026 5:33 pm

ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ನೊಂದಣಿಗೆ ಆಗ್ರಹಿಸಿ ಪ್ರತಿಭಟನೆ

August 15, 2026 5:32 pm

ಮಕ್ಕಳ ಉತ್ತಮ ಭವಿಷ್ಯವೇ ದೇಶದ ನಿಜವಾದ ಸ್ವಾತಂತ್ರ: ಕೃಷ್ಣಪ್ಪ

August 15, 2026 5:30 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.