BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ
  • ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ
  • ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ
  • ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ
  • ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ
  • ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ
  • ವಿದ್ಯುತ್ ಬೆಳಕನ್ನು ಕಾಣದೆ ಬದುಕುತ್ತಿರುವ ಅಲೆಮಾರಿ ದಕ್ಕಲಿಗ ಸಮುದಾಯ
  • ಅ.೨೩ರಂದು ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಲಿ : ಬರಗೂರು ರಾಮಚಂದ್ರಪ್ಪ
ಇತರೆ ಸುದ್ಧಿಗಳು

ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಲಿ : ಬರಗೂರು ರಾಮಚಂದ್ರಪ್ಪ

By News Desk BenkiyabaleUpdated:December 28, 2022 4:27 pm

ತುಮಕೂರು


ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು ಎಂದು ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದ್ದಾರೆ.
ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅತಿ ಹೆಚ್ಚು ವಿದ್ಯಾವಂತರೇ ಮೂಢನಂಬಿಕೆಗಳನ್ನು ಪ್ರತಿಪಾದಿಸುತಿದ್ದು, ಹಾಗಾಗಿಯೇ ವಿದ್ಯಾವಂತರೆಲ್ಲಾ ವಿವೇಕವಂತರಲ್ಲ. ಅವಿದ್ಯಾವಂತರಲ್ಲ, ಅವಿವೇಕಿಗಳಲ್ಲ ಎಂಬ ಮಾತು ಪ್ರಚಲಿತದಲ್ಲಿದೆ ಎಂದರು.
ವೈಜ್ಞಾನಿಕ ಮನೋಧರ್ಮವೆಂಬುದು ಮನುಷ್ಯನಲ್ಲಿ ಮಾನವೀಯತೆ, ಆಂತಃಕರಣ, ಸಮಾನತೆ, ಸಹಬಾಳ್ವೆಯನ್ನು ಪ್ರತಿನಿಧಿಸುತ್ತದೆ. ಅದು ಎಕಮುಖಿಯಲ್ಲ.ಅದಕ್ಕೆ ಬಹುಮುಖಿ ಆಯಾಮವಿದೆ.ಆಸ್ಥಿಕನಾಗಿದ್ದು,ನಾಸ್ಥಿಕನ ಅಭಿಪ್ರಾಯವನ್ನು ಗೌರವಿಸುವ, ನಾಸ್ಥಿಕನಾಗಿದ್ದು ಅಸ್ಥಿಕನ ಅಭಿಪ್ರಾಯವನ್ನು ಕೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.ಇದನ್ನ ಬುದ್ದ,ಬಸವ,ಅಂಬೇಡ್ಕರ್, ಕುವೆಂಪು, ಗಾಂಧಿ,ಸ್ವಾಮಿ ವಿವೇಕಾನಂದ ಮಾಡಿ ತೋರಿಸಿದ್ದಾರೆ.ಆದರೆ ಇಂದು ಅಸಮಾನತೆ,ಅಮಾನಿಯತೆ, ಅವಾಸ್ತವ ಅಂಶಗಳೇ ಹೆಚ್ಚು ಪ್ರಜ್ವಲಿಸುತ್ತಿವೆ.ಸ್ವಾತಂತ್ರ ಆಲೋಚನೆಯನ್ನು ಜನರು ಮರೆತಿರುವಂತೆ ಕಂಡು ಬರುತ್ತಿದೆ.ಇವುಗಳ ಕುರಿತು ಪೂರ್ವಗ್ರಹ ರಹಿತ ಸಂವಾದ ಅಗತ್ಯವಿದೆ ಎಂದು ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಇಂದು ದೇವರು, ಧರ್ಮದ ಹೆಸರಿನಲ್ಲಿ ಹೆಚ್ಚು ಜನರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ.ಇಂದು ಮನುಷ್ಯನಿಗಿಂತ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ದೇವರುಗಳು.ಸಾಮಾಜಿಕ ಕೇಡು ಮತ್ತು ಮೌಢ್ಯ ವಿರೋಧಿಸುವ ಕೆಲಸವನ್ನು,ವೈಜ್ಞಾನಿಕ ಮನೋಧರ್ಮ ಉಳ್ಳವರು ಮಾಡಬೇಕಿದೆ.ಮನಃಸಾಕ್ಷಿ,ಆತ್ಮಸಾಕ್ಷಿಗೆ ವಿರುದ್ದವಾಗಿ ನಡೆದುಕೊಳ್ಳದಿರುವುದೇ ನಿಜವಾದ ವೈಜಾನಿಕ ಮನೋಧರ್ಮ ಎಂದು ಬರಗೂರು ರಾಮಚಂದ್ರಪ್ಪ ನುಡಿದರು.
ಶಿವಮೊಗ್ಗದಲ್ಲಿ ನಡೆದ 1ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರಾದ ಕೆ.ಎಸ್.ಕಿರಣ್ ಕುಮಾರ್,2ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರಾಗಿರುವ ಜಸ್ಟಿಸ್ ಹೆಚ್.ಎನ್.ನಾಗಮೋಹನ್ ದಾಸ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು,ವೈಜ್ಞಾನಿಕ ಮನೋಧರ್ಮವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ.ಇದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳೆವಣಿಗೆಯ ದುಷ್ಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಂಡು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ.ಕೃತಕ ಬುದ್ದಿಮತ್ತೆಯಿಂದ ಇಂದು ನಮ್ಮ ಕೈಯಲ್ಲಿರುವ ಮೊಬೈಲ್ ಉತ್ಪಾಧಕ ಕಂಪನಿಗಳಿಗೆ ಗ್ರಾಹಕರನ್ನು ಹುಡುಕಿಕೊಡುವ ಸಾಧನಗಳಾಗಿ ಪರಿವರ್ತನೆಯಾಗಿವೆ.ನಮಗೆ ಗೊತ್ತಿಲ್ಲದೆ ನಮ್ಮ ಮಾಹಿತಿ ಕಳುವಾಗುತ್ತಿದೆ.ಈ ಬಗ್ಗೆ ನಾವುಗಳು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀರಾಮಕೃಷ್ಣ ಮಠದ ಶ್ರೀವೀರೇಶಾನಂದಸರಸ್ವತಿ ಸ್ವಾಮೀಜಿ ಮಾತನಾಡಿ,ಯಶಸ್ಸನ್ನು ಗಳಿಸಲು ಅನ್ಯ ಮಾರ್ಗಗಳಿವೆ.ಆದರೆ ಬದುಕನ್ನು ಮೌಲ್ಯಯುತಗೊಳಿಸಿಕೊಳ್ಳಲು ಕಳ್ಳದಾರಿಗಳಿಲ್ಲ. ಕೇವಲ ಫಲಿತಾಂಶದ ಆಧಾರ ಮೇಲಿರುವ ಇಂದಿನ ಶಿಕ್ಷಣ ಪದ್ದತಿಯಿಂದ ಮಕ್ಕಳಲ್ಲಿ ಮಾನವೀಯತೆ, ಅಂತಃಕರಣ ಕಡಿಮೆಯಾಗುತ್ತಿದು. ನೈತಿಕ ಪ್ರಜ್ಞೆ ಮರೆಯಾಗುತ್ತಿದೆ.ಮೂರ್ತಿ ಪೂಜೆ ಆದ್ಯಾತ್ಮಿಕತೆಯ ಆರಂಭವೇ ಹೊರತು ಅದೇ ಅಂತಿಮವಲ್ಲ.ಹಾಗಾಗಿ ಪ್ರತಿಯೊಬ್ಬರಲ್ಲಿಯೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದೇ ಇರುತ್ತೇವೆ.ಒಳ್ಳೆಯ ಗುಣಗಳನ್ನು ಉದ್ದೀಪನಗೊಳಿಸುವ ಕೆಲಸ ಆಗಬೇಕೆಂದರು.
ಕಲ್ಪಸಿರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತ ಎಸ್.ನಾಗಣ್ಣ, ವೈಜ್ಞಾನಿಕ ಮನೋಧರ್ಮ ಎಂಬುದು ಇಂದು ಅತ್ಯಂತ ಪ್ರಸ್ತುತವಾಗಿದ್ದು, ಮೋಸ ಹೋಗುವವರನ್ನು ರಕ್ಷಿಸಲು ಇದೊಂದು ಆಸ್ತ್ರವಾಗಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜಿ.ಎಸ್.ಶ್ರೀಧರ್, ವೈಜ್ಞಾನಿಕ ಮನೋಧರ್ಮ ಎಂಬುದು ದೇಶ ಭಕ್ತಿಯ ಒಂದು ಅಂಗ.ದೇಶವೆಂದರೆ ಕೇವಲ ಕಟ್ಟಡಗಳು, ರಸ್ತೆಗಳಲ್ಲ.ಅದಕ್ಕೂ ಮೀಗಿಲಾದ ಮಾನವೀಯ,ಸಮಸಮಾಜದ ಕನಸು. ಮೂಢನಂಬಿಕೆಯ ಹೆಸರಿನಲ್ಲಿ ಜನರ ಅಲೋಚನೆಗಳಿಗೆ ವಿಷ ತುಂಬು ಕೆಲಸ ನಡೆಯುತ್ತಿದೆ.ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವಿಜ್ಞಾನ ಗ್ರಾಮದ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಹುಟ್ಟು ಹಾಕುವ ಪ್ರಕ್ರಿಯೆ ನಡೆಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ರಾ.ವೈ.ಸಂ.ಪರಿಷತ್ತಿನ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ವಹಿಸಿದ್ದರು.ವೇದಿಕೆಯಲ್ಲಿ ಚಿಂತಕ ಕೆ.ದೊರೈರಾಜು, ರಾ.ವೈ.ಸಂ.ಪರಿಷತ್ತಿನ ತುಮಕೂರು ಜಿಲ್ಲಾಧ್ಯಕ್ಷ ಡಾ.ಸಿ.ಎಸ್.ಮೋಹನ್‍ಕುಮಾರ್,ಡಾ.ಕೆ.ಜಿ.ರಾವ್, ಹಂಪಿನಕೆರೆ ರಾಜೇಂದ್ರ, ಎಸ್.ರೇಣುಕಾ ಪ್ರಸಾದ್ ಉಪಸ್ಥಿತರಿದ್ದರು.

(Visited 1 times, 1 visits today)
tumkur
Previous Articleಜ.1 : ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ
Next Article ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ : ಬಾ.ಹಾ. ರಮಾಕುಮಾರಿ
News Desk Benkiyabale

Related Posts

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm news

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm news

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm news
ತಾಜಾ ಸುದ್ಧಿಗಳು

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm
news

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm
news

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm
news

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ

September 25, 2026 6:00 pm
news

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm
news

ವಿಹೆಚ್‌ಪಿ, ಭಜರಂಗದಳ ಹಿಂದೂಗಣಪತಿ ಶೋಭಾಯಾತ್ರೆ

September 24, 2026 6:20 pm
Our Youtube Channel
Our Picks

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

September 25, 2026 6:07 pm

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ

September 25, 2026 6:00 pm

ನಾಗರಕಟ್ಟೆ ಗಣಪತಿ: ಅ. ೩ರಂದು ವಿಸರ್ಜನಾ ಮಹೋತ್ಸವ

September 24, 2026 6:21 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss

ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕೃತಿಯ ಲೋಕಾರ್ಪಣೆ

By News Desk BenkiyabaleSeptember 25, 2026 6:07 pm

ತುಮಕೂರು: ಲೇಖಕಿ ವಿವೇಕ ಕೆ.ವಿ. ಅವರು ರಚಿಸಿರುವ ಬಿಸಿರೊಟ್ಟಿ ಮತ್ತು ಇತರ ಕಥೆಗಳು ಕಥಾ ಸಂಕಲನವು ಸೆಪ್ಟೆಂಬರ್ ೨೭ರಂದು ಬೆಳಿಗ್ಗೆ…

ಸೋರುತ್ತಿರುವ ಪೊಲೀಸ್ ಠಾಣೆ: ಜೀವಭಯದಲ್ಲೇ ಸಿಬ್ಬಂದಿ

September 25, 2026 6:04 pm

ಮಾವತ್ತೂರು ಸೊಸೈಟಿಯ ಕಾರ್ಯದರ್ಶಿ ಮೋಸದ ಆರೋಪ

September 25, 2026 6:02 pm

ಜಿಲ್ಲಾಧಿಕಾರಿಗಳ ಸೂಚನೆಯಂತೆ ಹೊಸ ಕೊಳವೆಬಾವಿ

September 25, 2026 6:00 pm
News by Date
September 2026
M T W T F S S
 123456
78910111213
14151617181920
21222324252627
282930  
« Aug    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.