BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ
  • ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ
  • ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ
  • ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ: ಜಿಲ್ಲಾಧಿಕಾರಿ
  • ಕೊರಟಗೆರೆ ತಾಲ್ಲೂಕಿಗೆ ಜಿ.ಪಂ ಸಿಇಓ ದಿಢೀರ್ ಭೇಟಿ
  • ಮತಗಟ್ಟೆ ಏಜೆಂಟರುಗಳನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಡಿಸಿ ಕರೆ
  • ಮತದಾರರ ಗಣಕೀಯ ನಮೂನೆ ಶೇ.೧೦೦ರಷ್ಟು ಪ್ರಗತಿ
  • ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಪ್ರತಿಭಟನೆ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಕಲ್ಪತರುನಾಡಿಗೆ ನರೇಂದ್ರಮೋದಿ ಆಗಮನ : ಫೆ.6 ಎಚ್‍ಎಎಲ್ ಕಾರ್ಖಾನೆ ಉದ್ಘಾಟನೆ
ಇತರೆ ಸುದ್ಧಿಗಳು

ಕಲ್ಪತರುನಾಡಿಗೆ ನರೇಂದ್ರಮೋದಿ ಆಗಮನ : ಫೆ.6 ಎಚ್‍ಎಎಲ್ ಕಾರ್ಖಾನೆ ಉದ್ಘಾಟನೆ

By News Desk BenkiyabaleUpdated:February 03, 2023 5:49 pm

ತುಮಕೂರು

ಪ್ರಧಾನಿ ನರೇಂದ್ರಮೋದಿರವರು ಗುಬ್ಬಿಯ ಬಿದರೆಹಳ್ಳಿ ಕಾವಲ್‍ನಲ್ಲಿ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‍ನ ಲಘು ಹೆಲಿಕ್ಯಾಪ್ಟರ್ ಕಾರ್ಖಾನೆ ಉದ್ಘಾಟನೆ ಮತ್ತು ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ತಾಲ್ಲೂಕಿನ ವ್ಯಾಪ್ತಿಯ ಮನೆ ಮನೆಗೆ ಗಂಗೆ ಹರಿಸುವ “ಜಲ್ ಜೀವನ್ ಮಿಷನ್ ಯೋಜನೆ”ಗೆ ಶಂಕುಸ್ಥಾಪನೆಯ ಸಂಬಂಧ ಸರ್ಕಾರಿ ಪ್ರಯೋಜಿತ ಕಾರ್ಯಕ್ರಮ ನಡೆಸಲು ಇದೇ ಫೆಬ್ರವರಿ 6ರ ಸೋಮವಾರ ಪ್ರಧಾನಿ ನರೇಂದ್ರಮೋದಿರವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 80 ಸಾವಿರ ಜನರು ಸೇರುವ ಸಂಭವವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದರು.
ಇವರು ಇಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿರವರು ಗುಬ್ಬಿಗೆ ಮಧ್ಯಾಹ್ನ 3.30ಕ್ಕೆ ಆಗಮಿಸಿ, ಮಧ್ಯಾಹ್ನ 4.30ರವರೆಗೆ ಸುಮಾರು 60 ನಿಮಿಷಗಳ ಕಾÀರ್ಯಕ್ರಮದಲ್ಲಿ ಭಾಗವಹಿಸಿ, ದೇಶಕ್ಕೆ ಮಹತ್ತರ ಸಂದೇಶ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಇಲಾಖೆಯ ಕೇಂದ್ರ ಮಂತ್ರಿಗಳಾದ ರಾಜನಾಥ್‍ಸಿಂಗ್ ಹಾಗೂ ರಾಜ್ಯ ಸಚಿವ ಅಜಯ್‍ಭಟ್, ರಕ್ಷಣಾ ಇಲಾಖೆ ಹಾಗೂ ಊಂಐ ಪ್ರಮುಖ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯದ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರಮೋದಿರವರು ತಾವೇ ಶಂಕುಸ್ಥಾಪನೆ ಮಾಡಿ, ತಾವೇ ಉದ್ಘಾಟನೆ ಮಾಡುವ ಮೂಲಕ ಚಾಲನೆ ಮಾಡುವಲ್ಲಿ ಸಿದ್ದಹಸ್ತರಾಗಿದ್ದಾರೆ. ದೇಶದ ಪ್ರಧಾನಿಯಾಗಿ 8 ವರ್ಷಗಳ ಅವಧಿಯಲ್ಲಿ ಹಲವಾರು ಜನಹಿತ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ನುಡಿದಂತೆ ನಡೆಯುವ, ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ತುಮಕೂರು ಜಿಲ್ಲೆ ಇಂದು ಜಗತ್ತಿನ ಭೂಪಟದಲ್ಲಿ ಗುರುತಿಸುವ ಸ್ಥಳವಾಗಿ ಮಾರ್ಪಟಾಗಿದ್ದು, ಲಘು ಹೆಲಿಕ್ಯಾಪ್ಟರ್ ನಿರ್ಮಾಣದ ಗುಬ್ಬಿಯ ಊಂಐ ಕಾರ್ಖಾನೆ 2ನೇ ಅತೀ ದೊಡ್ಡ ಪ್ರಾಜೆಕ್ಟ್ ಆಗಿದ್ದು, ಆತ್ಮನಿರ್ಭರ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಬಹುದೊಡ್ಡ ಯೋಜನೆ ಇದಾಗಿದೆ ಎಂದು ಹೆಚ್.ಎಸ್.ರವಿಶಂಕರ್ ಹೆಬ್ಬಾಕ ತಿಳಿಸಿದರು.
ಬಿಜೆಪಿಯಿಂದ ಶೋಭಾಯಾತ್ರೆ ಹಾಗೂ ಬೈಕ್ ರ್ಯಾಲಿ
ತುಮಕೂರು ಸಂಘಟನಾತ್ಮಕ ಜಿಲ್ಲೆಯ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ಚಿಕ್ಕನಾಯನಹಳ್ಳಿ, ಕುಣಿಗಲ್, ತಿಪಟೂರು ಮಂಡಲಗಳ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು, ಸಾರ್ವಜನಿಕರು ಪಕ್ಷದ ಹಿತೈಷಿಗಳು ತಮ್ಮಗಳ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಭ್ರಮದ ಶೋಭಾಯಾತ್ರೆ ಹಾಗೂ ಬೃಹತ್ ಬೈಕ್ ರ್ಯಾಲಿಗಳ ಮೂಲಕ ಗುಬ್ಬಿಯ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ಹೆಚ್.ಎಸ್.ರವಿಶಂಕರ್‍ಹೆಬ್ಬಾಕ ಮಾಹಿತಿ ನೀಡಿದರು.
ಗುಬ್ಬಿ ಊಂಐ ಹೆಲಿಕ್ಯಾಪ್ಟರ್ ಘಟಕದ ನಿರ್ಮಾಣಕ್ಕೆ ಹಲವಾರು ದಶಕಗಳಿಂದ ಪ್ರಕ್ರಿಯೆ ನಡೆದಿದ್ದರೂ, ಬಿಜೆಪಿ ನೇತೃತ್ವದ ಓಆಂ ಸರ್ಕಾರ 610 ಎಕರೆ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಹೆಲಿಕ್ಯಾಪ್ಟರ್ ತಯಾರಿಕಾ ಘಟಕದ ಶಂಕುಸ್ಥಾಪನೆಯ ಭೂಮಿ ಪೂಜೆಯನ್ನು 2016ರಂದು ಪ್ರಧಾನಿ ನರೇಂದ್ರಮೋದಿರವರು ಮಾಡಿದ್ದರು. ಈ ಘಟಕದಲ್ಲಿ ಇಂಡೋ-ರಷ್ಯನ್ ಜಂಟಿ ಯೋಜನೆಯಾಗಿರುವ ಏಂ 226ಖಿ ಅವಳಿ ಇಂಜಿನ್ ಹೆಲಿಕ್ಯಾಪ್ಟರ್ ಮತ್ತು 3 ಟನ್ ಸಾಮಥ್ಯದ ಹೊಸ ಪೀಳಿಗೆ ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್ (ಐUಊ)ಗಳನ್ನು “ಮೇಕ್ ಇನ್ ಇಂಡಿಯಾ” ಮತ್ತು “ವೋಕಲ್ ಫಾರ್ ಲೋಕಲ್” ಎಂಬ ಘೋಷಣೆಯ ಅಡಿಯಲ್ಲಿ ತಯಾರಿಸುವ ಯೋಜನೆ ಇದಾಗಿದೆ. ಇಲ್ಲಿ ಮುಂದಿನ 15 ವರ್ಷಗಳಲ್ಲಿ 600 ಹೆಲಿಕ್ಯಾಪ್ಟರ್ ಉತ್ಪಾದನೆಯ ಗುರಿ ಇದೆ. ಈಗಾಗಲೇ ಊಂಐ ರಕ್ಷಣಾ ಇಲಾಖೆ ಹಾಗೂ ವಿವಿಧ ದೇಶ-ವಿದೇಶಗಳ ಖಾಸಗಿ ಕಂಪನಿಗಳಿಂದ ಮುಂಗಡವಾಗಿ ಆಡರ್Àರ್ ಪಡೆದಿರುವುದು ಸಂತಸದ ವಿಷಯವಾಗಿದೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಹೇಳಿದರು.
ಗುಬ್ಬಿ ಸ್ಥಾವರವು ಜಿಲ್ಲೆ ಮತ್ತು ರಾಜ್ಯಾದ್ಯಾಂತ ಕೈಗಾರಿಕಾ ಬೆಳವಣಿಗೆಯನ್ನು ವಿಕೇಂದ್ರಿಕರಿಸುವ ಗುರಿಯನ್ನು ಹೊಂದಿದ್ದು, ಅಭಿವೃದ್ಧಿ-ಉದ್ಯೋಗ ಸೃಷ್ಟಿಯ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಕೌಶಲ್ಯ ಪೂರ್ಣ ಕಾರ್ಮಿಕ ಹಾಗೂ ತಾಂತ್ರಿಕ ಪರಿಣತಿಯ ಬಳಕೆಯನ್ನು ಉತ್ತೇಜಿಸಿ, ಸ್ಥಳೀಯ ಮತ್ತು ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುತ್ತದೆ. ಸ್ಥಳೀಯ ಪ್ರದೇಶದ ವ್ಯಾಪ್ತಿಯಲ್ಲಿ ಆರ್ಥಿಕತೆಯ ಬೆಳವಣಿಗೆ ಹೊಂದಿ, ಜನ ಸಮಾನ್ಯರಿಗೆ ಅನುಕೂಲಕರ ವಾತಾವರಣ ಸೃಷ್ಠಿಯಾಗುತ್ತದೆ.
ಈ ಹೆಲಿಕ್ಯಾಪ್ಟರ್ ಘಟಕದಿಂದ ಎಂಜಿನಿಯರಿಂಗ್ ಕಾಲೇಜು, ಡಿಪ್ಲೋಮಾ ಶಿಕ್ಷಣ ಅಥವ ಕೋರ್ಸ್‍ನಿಂದ ಹೊರ ಬರುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಪಡೆದ Sಞiಟಟeಜ ವೃತ್ತಿಪರರಿಗೆ ಅನುಕೂಲವಾಗಲಿದೆ. ಹೊಸ ತಂತ್ರಜ್ಞಾನದ ಹರಿವಿನೊಂದಿಗೆ, ನಿರಂತರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ಘಟಕದಲ್ಲಿ ವಿಶೇಷ ತಾಂತ್ರಿಕ ಪರಿಣಿತಿ, ಅರ್ಹತೆ ಇರುವುವವರಿಗೆ ಆದ್ಯತೆ ಸಿಗಲಿದೆ. ಇದಲ್ಲದೆ, ಸ್ಥಳೀಯ, ಜಿಲ್ಲೆ, ರಾಜ್ಯಗಳ ವಿವಿಧ ಭಾಗಗಳಲ್ಲಿ ಪೂರಕ ಘಟಕ (ಂಟಿಛಿiಟಚಿಡಿಥಿ Uಟಿiಣ)ಗಳು ಆರಂಭಗೊಂಡು, ಉದ್ಯಮವು ಬೆಳೆದು ಉದ್ಯೋಗ ಸೃಷ್ಠಿಯಾಗಲಿದೆ. ಈ ಘಟಕವು ಅತ್ಯಂತ ಸುಸಜ್ಜಿತ, ವ್ಯವಸ್ಥಿತವಾದ ಸಮಗ್ರ ಪ್ಯಾಕೇಜ್‍ಗಳಿಂದ ಕೂಡಿದ್ದು, ಮೂಲ ಸೌಕರ್ಯಗಳು ಮತ್ತು ಸಹಾಯಕ ಘಟಕಗಳನ್ನು ಬೆಂಬಲಿಸಲಿದೆ ಎಂದು ಜಿ.ಎಸ್.ಬಸವರಾಜು ಸವಿಸ್ತಾರವಾಗಿ ಮಾಹಿತಿ ನೀಡಿದರು.ಈ ಐತಿಹಾಸಿಕ, ಮಹತ್ವದ ಕಾರ್ಯಕ್ರಮಕ್ಕೆ ಸಾರ್ವಜನಿಕ ಬಂಧುಗಳು, ಹಿತೈಷಿಗಳು, ಅಭಿಮಾನಿಗಳು ಆಗಮಿಸಿ ಯಶಸ್ವಿಗೊಳಿಸಲು ಬಿಜೆಪಿ ತುಮಕೂರು ಜಿಲ್ಲಾ ಅಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಮತ್ತು ಸಂಸದ ಜಿ.ಎಸ್.ಬಸವರಾಜು ವಿನಂತಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಸಹ ವಕ್ತಾರ ಟಿ.ಜೆ.ಸನತ್, ಜಿಲ್ಲಾ ಉಪಾಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ್ ಜೆ.ಜಗದೀಶ್, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗೇಶ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಪ್ರವೀಣ್ ಎಸ್.ಹೊಸಹಳ್ಳಿ, ಜಿಲ್ಲಾ ಸಾಮಾಜಿಕ ಜಾಲತಾಣದ ಸಮಿತಿ ಸದಸ್ಯ ಮಂಜುನಾಥ.ಜಿ.ಹೊಸಹಳ್ಳಿ, ತುಮಕೂರು ನಗರ ಮಾಧ್ಯಮ ಸಹಪ್ರಮುಖ್ ಮರಿತಿಮ್ಮಯ್ಯ ಉಪಸ್ಥಿತರಿದ್ದರು.

(Visited 11 times, 1 visits today)
Gubbi tumkur
Previous Articleಭಾರತವನ್ನು ವಿಶ್ವಗುರುವಾಗಿಸಲು ವಿದ್ಯಾರ್ಥಿಗಳ ಪಾತ್ರ ಮಹತ್ವ
Next Article ಶ್ರೀ ಸಿದ್ದಗಂಗಾ ಮಠದಲ್ಲಿ ಜಾನುವಾರುಗಳ ಜಾತ್ರೆ ರದ್ದು
News Desk Benkiyabale

Related Posts

ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

July 25, 2026 6:11 pm news

ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ

July 25, 2026 6:07 pm news

ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ

July 25, 2026 6:05 pm news
ತಾಜಾ ಸುದ್ಧಿಗಳು
news

ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

July 25, 2026 6:11 pm
news

ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ

July 25, 2026 6:07 pm
news

ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ

July 25, 2026 6:05 pm
news

ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ: ಜಿಲ್ಲಾಧಿಕಾರಿ

July 25, 2026 6:02 pm
news

ಕೊರಟಗೆರೆ ತಾಲ್ಲೂಕಿಗೆ ಜಿ.ಪಂ ಸಿಇಓ ದಿಢೀರ್ ಭೇಟಿ

July 24, 2026 5:20 pm
news

ಮತಗಟ್ಟೆ ಏಜೆಂಟರುಗಳನ್ನು ಚುರುಕುಗೊಳಿಸಲು ರಾಜಕೀಯ ಪಕ್ಷಗಳಿಗೆ ಡಿಸಿ ಕರೆ

July 24, 2026 4:03 pm
Our Youtube Channel
Our Picks

ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

July 25, 2026 6:11 pm

ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ

July 25, 2026 6:07 pm

ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ

July 25, 2026 6:05 pm

ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ: ಜಿಲ್ಲಾಧಿಕಾರಿ

July 25, 2026 6:02 pm

ಕೊರಟಗೆರೆ ತಾಲ್ಲೂಕಿಗೆ ಜಿ.ಪಂ ಸಿಇಓ ದಿಢೀರ್ ಭೇಟಿ

July 24, 2026 5:20 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಜ0ತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ

By News Desk BenkiyabaleJuly 25, 2026 6:11 pm

ತುಮಕೂರು: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ…

ಹುಳಿಯಾರು ಪ.ಪಂ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ಎಸ್‌ಐಆರ್ ಪ್ರಗತಿ ಪರಿಶೀಲನೆ ಸಭೆ

July 25, 2026 6:07 pm

ದೃಢ ಸಂಕಲ್ಪ, ಏಕಾಗ್ರತೆಯಿಂದ ಎಲ್ಲವೂ ಸಾಧ್ಯ

July 25, 2026 6:05 pm

ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ: ಜಿಲ್ಲಾಧಿಕಾರಿ

July 25, 2026 6:02 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.